300 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಸ್ವೀಡನ್‌ನಲ್ಲಿ ತುರ್ತು ಭೂಸ್ಪರ್ಶ

By BK Ashwin  |  First Published Feb 22, 2023, 10:46 AM IST

ಬೋಯಿಂಗ್ 777-300ER ವಿಮಾನದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ AI106 ವಿಮಾನವು ಇಂಜಿನ್ ಒಂದರಲ್ಲಿ ತೈಲ ಸೋರಿಕೆಯಾದ ಕಾರಣದಿಂದ ಆ ವಿಮಾನವನ್ನು ಡೈವರ್ಟ್‌ ಮಾಡಿ ಸ್ವೀಡನ್‌ನ ಸ್ಟಾಕ್‌ಹೋಮ್ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲಾಗಿದೆ.


ದೆಹಲಿ (ಫೆಬ್ರವರಿ 22, 2023): ಸುಮಾರು 300 ಪ್ರಯಾಣಿಕರಿದ್ದ ಏರ್‌ ಇಂಡಿಯಾ ವಿಮಾನ ಸ್ವೀಡನ್‌ನ ಸ್ಟಾಕ್‌ಹೋಮ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಅಮೆರಿಕದ ನೆವಾರ್ಕ್‌ನಿಂದ ರಾಷ್ಟ್ರ ರಾಜಧಾನಿ ನವದೆಹಲಿಗೆ ಬರುತ್ತಿದ್ದ ವಿಮಾನ   ಬುಧವಾರ ತಾಂತ್ರಿಕ ದೋಷವನ್ನು ಅಭಿವೃದ್ಧಿಪಡಿಸಿದ ನಂತರ ಸ್ವೀಡನ್‌ನ ಸ್ಟಾಕ್‌ಹೋಮ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. 

ಬೋಯಿಂಗ್ 777-300ER ವಿಮಾನದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ AI106 ವಿಮಾನವು ಇಂಜಿನ್ ಒಂದರಲ್ಲಿ ತೈಲ ಸೋರಿಕೆಯಾದ ಕಾರಣದಿಂದ ಆ ವಿಮಾನವನ್ನು ಡೈವರ್ಟ್‌ ಮಾಡಿ ಸ್ವೀಡನ್‌ನ ಸ್ಟಾಕ್‌ಹೋಮ್ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲಾಗಿದೆ. ಅದೃಷ್ಟವಶಾತ್‌, ಈ ವಿಮಾನದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದರಿಂದ ಹೆಚ್ಚಿನ ಸಂಖ್ಯೆಯ ಅಗ್ನಿಶಾಮಕ ವಾಹನಗಳನ್ನು ವಿಮಾನ ನಿಲ್ದಾಣದಲ್ಲಿ ಇರಿಸಲಾಗಿತ್ತು ಎಂದು ಎಎನ್‌ಐ ವರದಿ ಮಾಡಿದೆ.

Air India Newark (US)-Delhi flight (AI106) with nearly 300 passengers made an emergency landing at Sweden's Stockholm airport after it developed a technical snag. All passengers safe. A large no.of fire engines were deployed at the airport as the flight made an emergency landing pic.twitter.com/Rdwfg9VOgx

— ANI (@ANI)

Tap to resize

Latest Videos

ಇದನ್ನು ಓದಿ: Air India ಮೆಗಾ ಡೀಲ್‌: ಏರ್‌ಬಸ್‌ನಿಂದ 250 ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡ ಟಾಟಾ ಗ್ರೂಪ್‌

ತೈಲ ಸೋರಿಕೆಯ ನಂತರ, ಎಂಜಿನ್ ಅನ್ನು ಸ್ಥಗಿತಗೊಳಿಸಲಾಯಿತು ಮತ್ತು ನಂತರ ವಿಮಾನವನ್ನು ಸುರಕ್ಷಿತವಾಗಿ ಸ್ಟಾಕ್‌ಹೋಮ್‌ನಲ್ಲಿ ಇಳಿಸಲಾಯಿತು ಎಂದು ಹಿರಿಯ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಳಿಕ, ವಿಮಾನ ತಪಾಸಣೆಯ ಸಮಯದಲ್ಲಿ, ಎಂಜಿನ್ ಎರಡರ ಡ್ರೈನ್ ಮಾಸ್ಟ್‌ನಿಂದ ತೈಲ ಹೊರಬರುತ್ತಿರುವುದು ಕಂಡುಬಂದಿದ್ದು, ಬಳಿಕ ಈ ಸಂಬಂಧ ಪರಿಶೀಲನೆ ಪ್ರಗತಿಯಲ್ಲಿದೆ ಎಂದು ಅಧಿಕಾರಿ ಹೇಳಿದರು.

ಸೋಮವಾರವೂ ಇಂತಹದ್ದೇ ಘಟನೆ ನಡೆದಿತ್ತು
ಇನ್ನೊಂದೆಡೆ, ಸೋಮವಾರ ಸಹ ಅಮೆರಿಕದ ನ್ಯೂಯಾರ್ಕ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ವೈದ್ಯಕೀಯ ತುರ್ತುಸ್ಥಿತಿಯ ಕಾರಣ ಲಂಡನ್‌ಗೆ ಡೈವರ್ಟ್‌ ಮಾಡಲಾಗಿತ್ತು. ಈಗ ಮತ್ತೊಂದು ಇಂತಹದ್ದೇ ಘಟನೆ ನಡೆದಿದೆ. 

ಇದನ್ನೂ ಓದಿ: ವಿಶ್ವದ ಅತಿದೊಡ್ಡ ವಿಮಾನ ಖರೀದಿ ಒಪ್ಪಂದ: 470 ವಿಮಾನಗಳಿಗೆ ಟಾಟಾ ಬಿಗ್‌ಡೀಲ್‌

ಫೆಬ್ರವರಿ 20 ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ವೈದ್ಯಕೀಯ ಸಮಸ್ಯೆಗೆ ಕಾರಣವಾದ ನಂತರ  (AI-102) ಏರ್ ಇಂಡಿಯಾ ವಿಮಾನವನ್ನು ಲಂಡನ್‌ಗೆ ಡೈವರ್ಟ್‌ ಮಾಡಲಾಯ್ತು. ಏರ್ ಇಂಡಿಯಾ AI-102 ಜಾನ್ ಎಫ್. ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಯ ವಿಮಾನವನ್ನು ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣ ಲಂಡನ್‌ಗೆ ಡೈವರ್ಟ್‌ ಮಾಡಲಾಯ್ತು’’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಮಾನವು ನಾಲ್ಕು ಗಂಟೆಗಳಿಗೂ ಹೆಚ್ಚು ವಿಳಂಬವಾದ ನಂತರ, ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಪ್ರಯಾಣಿಕರು ಮತ್ತು ಏರ್‌ಲೈನ್ ಕಾರ್ಮಿಕರು ಫೆಬ್ರವರಿ 21 ರಂದು ತಡರಾತ್ರಿ ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರಿ ವಾಗ್ವಾದ ನಡೆಸಿದ್ದರು. ಈ ವೇಳೆ ಕೈ - ಕೈ ಮಿಲಾಯಿಸಲಾಯ್ತು.

ಇದನ್ನೂ ಓದಿ; ವಿಮಾನಯಾನದಲ್ಲಿ ಭಾರತ ಶೀಘ್ರ 3ನೇ ದೊಡ್ಡ ಮಾರುಕಟ್ಟೆ: ಮೋದಿ

ದೆಹಲಿ-ಮುಂಬೈ ಮಾರ್ಗದ ಪ್ರಯಾಣಿಕರೊಬ್ಬರ ಪ್ರಕಾರ ಫ್ಲೈಟ್ AI-805, ಅದರ ಯೋಜಿತ ನಿರ್ಗಮನ ಸಮಯವಾದ ರಾತ್ರಿ 8 ಗಂಟೆಯ ಬದಲಾಗಿ ರಾತ್ರಿ 10:40 ಕ್ಕೆ, ನಂತರ 11:35 PM, ನಂತರ 12:30 AM (ಫೆಬ್ರವರಿ 22) ಮತ್ತು ಅಂತಿಮವಾಗಿ ದೆಹಲಿಯ ಟರ್ಮಿನಲ್ 3 ವಿಮಾನ ನಿಲ್ದಾಣದಿಂದ 1:48 ಕ್ಕೆ ತಡವಾಗಿ ಹಾರಿದೆ.

ಸಿಬ್ಬಂದಿ ಪ್ರಯಾಣಕ್ಕೆ ತಡವಾಗಿ ಬಂದಿದ್ದಾರೆ ಮತ್ತು ಅವರು ಪ್ರಯಾಣಿಕರನ್ನು ಮೂರ್ಖರನ್ನಾಗಿಸಲು ಮ್ಯಾನೇಜರ್‌ಗಳು ಕಥೆಗಳನ್ನು ಹೇಳಿದ್ದಾರೆ ಎಂದು ಪ್ರಯಾಣಿಕರು ಸುದ್ದಿಸಂಸ್ಥೆ ಎಎನ್‌ಐಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಆ ವಿಮಾನಕ್ಕೆ ನಿಗದಿಯಾಗಿದ್ದ ಪೈಲಟ್ ಅನಿರೀಕ್ಷಿತವಾಗಿ ಅನಾರೋಗ್ಯಕ್ಕೆ ಒಳಗಾದ ಕಾರಣ ಇದು ಸಂಭವಿಸಿದೆ ಎಂದು ಇನ್ನೊಬ್ಬ ಉದ್ಯೋಗಿ ಸಮರ್ಥಿಸಿಕೊಂಡಿದ್ದಾರೆ. 

ಇದನ್ನೂ ಓದಿ: ಟಾಟಾ ಏರ್‌ಬಸ್‌ ಖರೀದಿಗೆ ಲಂಡನ್‌ನಲ್ಲಿ ನಡೆದಿತ್ತು ತೆರೆಮರೆ ಡೀಲ್‌!

click me!