
ಬೆಂಗಳೂರು: ‘ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ’ ಎಂದು ಟ್ವೀಟ್ ಮಾಡಿ ಬೆಂಗಳೂರಿನ ಬ್ರಿಟಿಷ್ ಹೈಕಮಿಷನರ್ ಚಂದ್ರು ಅಯ್ಯರ್ ಅವರು ಗಮನ ಸೆಳೆದಿದ್ದಾರೆ. ಜಿ20 ಪ್ರತಿನಿಧಿಸುತ್ತಿರುವ ಬ್ರಿಟಿಷ್ ಪ್ರತಿನಿಧಿಗಳು ಅಂತಾರಾಷ್ಟ್ರೀಯ ಮಾತೃಭಾಷೆ ದಿನದ ಅಂಗವಾಗಿ ಭಾರತದ ವಿವಿಧ ರಾಜ್ಯಗಳ ಪ್ರಾದೇಶಿಕ ಭಾಷೆಗಳಾದ ಕನ್ನಡ ಒಳಗೊಂಡಂತೆ ತಮಿಳು, ಹಿಂದಿ, ಗುಜರಾತಿ, ಮರಾಠಿ ಭಾಷೆಗಳ ಕೆಲವು ಪದಗಳನ್ನು ಕಲಿತು ಚಿತ್ರೀಕರಿಸಿ ಟ್ವೀಟ್ ಮಾಡುವ ಮೂಲಕ ಅಭಿಯಾನವನ್ನೇ ಆರಂಭಿಸಿದ್ದಾರೆ.
ಅಂತೆಯೇ ಚಂದ್ರು ಅಯ್ಯರ್ ಅವರು, ಬೆಂಗಳೂರಿನಲ್ಲಿ ವಿದ್ಯಾರ್ಥಿ ಭವನ ಸೇರಿದಂತೆ ಇತರೆಡೆಗಳಲ್ಲಿ ಇಡ್ಲಿ, ಕಾಫಿ ಸವಿಯಲು ಹೋದಾಗ ಸಾಮಾನ್ಯವಾಗಿ ಕೇಳಿಬಂದ ‘ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ’ ಎಂಬ ಇಂಗ್ಲಿಷ್ ಮಿಶ್ರಿತ ಕನ್ನಡ ಪದದ ಕುರಿತು ಟ್ವೀಟ್ ಮಾಡಿದ್ದಾರೆ. ಹೀಗೆ ಯುಕೆ ಇನ್ ಇಂಡಿಯಾ ಟ್ವೀಟರ್ ಖಾತೆಯಲ್ಲಿ ಪ್ರತಿಯೊಬ್ಬ ಬ್ರಿಟಿಷ್ ಜಿ 20 ಪ್ರತಿನಿಧಿಗಳು ಅವರು ಭೇಟಿ ನೀಡಲಿರುವ ಭಾರತದ ರಾಜ್ಯಗಳ ಭಾಷೆಯ ಪದಗುಚ್ಛವನ್ನು ಕಲಿಯುತ್ತಾರೆ ಮತ್ತು ಇನ್ನೂ ಉತ್ತಮವಾಗಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವಂತೆ ವಿನಂತಿಸಲಾಗಿದೆ. ಅದಕ್ಕೆ ಇನ್‌ಕ್ರೆಡಿಬಲ್ ಇಂಡಿಯಾ ಜಿ20 ಇಂಡಿಯಾ ಎಂದು ಹ್ಯಾಶ್‌ಟ್ಯಾಗ್ ಮಾಡಲಾಗಿದೆ.
ಇದನ್ನು ಓದಿ: ಬೊಂಬಾಟ್ ಮಸಾಲೆ ದೋಸೆ ಎಂದಿದ್ದ ಕಮಿಷನರ್‌ಗೆ ವಡಾಪಾವ್ ಮೋಡಿ!
ಚಂದ್ರು ಅಯ್ಯರ್ ಯಾರು..?
ಚಂದ್ರು ಅಯ್ಯರ್ ಅವರನ್ನು ಕರ್ನಾಟಕ ಮತ್ತು ಕೇರಳಕ್ಕೆ ಯುನೈಟೆಡ್ ಕಿಂಗ್‌ಡಂನ ಹೊಸ ಡೆಪ್ಯುಟಿ ಹೈ ಕಮಿಷನರ್ ಆಗಿ ನೇಮಕ ಮಾಡಲಾಗಿದೆ ಮತ್ತು ಇವರು ಪ್ರಸ್ತುತ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಅವರು ದಕ್ಷಿಣ ಏಷ್ಯಾದ ಡೆಪ್ಯುಟಿ ಟ್ರೇಡ್ ಕಮಿಷನರ್ (ಹೂಡಿಕೆ) ಆಗಿಯೂ ಸೇವೆ ಸಲ್ಲಿಸುತ್ತಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಇವರನ್ನು ನೇಮಕ ಮಾಡಲಾಗಿತ್ತು.
ಕರ್ನಾಟಕ - ಕೇರಳ ಸೇರಿ 2 ರಾಜ್ಯಗಳೊಂದಿಗಿನ ಯುಕೆ ಸಂಬಂಧಗಳನ್ನು ಬಲಪಡಿಸುವುದು, ಸರ್ಕಾರ, ವ್ಯವಹಾರ ಮತ್ತು ಜನರ ಸಂಪರ್ಕಗಳನ್ನು ಬಲಪಡಿಸುವುದು ಅವರ ಕೆಲಸವಾಗಿದೆ ಎಂದು ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನ್ ಮಾಹಿತಿ ನೀಡಿದೆ. ಅವರ ವ್ಯಾಪಾರದ ಜವಾಬ್ದಾರಿಗಳ ಜೊತೆಗೆ, ಅವರು ಭಾರತ ಮತ್ತು ವಿಶಾಲ ಪ್ರದೇಶದಿಂದ ವಿದೇಶಿ ನೇರ ಹೂಡಿಕೆಗೆ ಆದ್ಯತೆಯ ತಾಣವಾಗಿ ಯುಕೆಯನ್ನು ಉತ್ತೇಜಿಸುತ್ತಾರೆ ಎಂದು ಅದು ಹೇಳಿದೆ.
ಇದನ್ನೂ ಓದಿ: ಬೇಗ ಓಡಿ..! ಬ್ರಿಟಿಷ್ ಹೈಕಮಿಷನರ್‌ಗೆ ಕನ್ನಡ ಕಲಿಸಿಕೊಟ್ಟ ಕ್ರಿಕೆಟಿಗ ರಾಹುಲ್ ದ್ರಾವಿಡ್..!
ಚಂದ್ರು ಅಯ್ಯರ್ ಅವರ ಗಡಿಯಾಚೆಯ ಅಂತಾರಾಷ್ಟ್ರೀಯ ವ್ಯಾಪಾರ ಅಭಿವೃದ್ಧಿ ಅನುಭವವು ಯುಕೆ ಮತ್ತು ದಕ್ಷಿಣ ಏಷ್ಯಾದ ನಡುವಿನ ಬಲವಾದ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಡೆಪ್ಯೂಟಿ ಹೈ ಕಮಿಷನ್ ಹೇಳಿದೆ. ನವೆಂಬರ್ 2022 ರಲ್ಲಿ ತಮ್ಮ ಪಾತ್ರವನ್ನು ಪ್ರಾರಂಭಿಸುವ ಮೂಲಕ, ಚಂದ್ರು ಅಯ್ಯರ್ ಅವರು ಸರ್ಕಾರದೊಂದಿಗೆ ಪಾಲುದಾರಿಕೆಯನ್ನು ಬಲಪಡಿಸುವುದು, ವ್ಯಾಪಾರ ಸಂಪರ್ಕಗಳನ್ನು ಉತ್ತೇಜಿಸುವುದು ಮತ್ತು ಕರ್ನಾಟಕ, ಕೇರಳ ಹಾಗೂ ಯುಕೆ ನಡುವೆ ಜನರ ಸಂಬಂಧಗಳನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಾರೆ ಎಂದೂ ಬ್ರಿಟಿಷ್ ಹೈ ಕಮೀಷನರ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ