Kharge: ಭಾರತಕ್ಕೆ ಬ್ರಿಟಿಷರಿಂದ ಮುಕ್ತಿ ಸಿಕ್ಕಿದ್ದಷ್ಟೇ, ನಿಜವಾದ ಸ್ವಾತಂತ್ರ್ಯವಲ್ಲ: ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ!

Published : Aug 15, 2026, 09:54 AM IST
AICC Chief Kharge Defines true freedom criticizes Modi Govt on Independence day delhi

ಸಾರಾಂಶ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸ್ವಾತಂತ್ರ್ಯ ದಿನದಂದು ದೇಶವಾಸಿಗಳಿಗೆ ಶುಭ ಕೋರಿದ್ದಾರೆ. ನಿಜವಾದ ಸ್ವಾತಂತ್ರ್ಯವೆಂದರೆ ಸಂವಿಧಾನಬದ್ಧ ಸಮಾನತೆ, ನ್ಯಾಯ, ಘನತೆ ಎಂದು ಪ್ರತಿಪಾದಿಸಿದ ಅವರು ಇಂದು ಸಾಂವಿಧಾನಿಕ ಮೌಲ್ಯಗಳಿಗೆ ಸವಾಲು ಎದುರಾಗಿದೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲಾ ದೇಶವಾಸಿಗಳಿಗೆ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟರ್ ಎಕ್ಸ್(x) ಪೋಸ್ತ್ ಮಾಡಿರುವ ಅವರು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹೋರಾಟಗಾರರಿಗೆ ಗೌರವ ಸಲ್ಲಿಸಿದ್ದಾರೆ.

ಭಾರತಕ್ಕೆ ಬ್ರಿಟಿಷರಿಂದ ಮುಕ್ತಿ ಸಿಕ್ಕಿದ್ದಷ್ಟೇ, ನಿಜವಾದ ಸ್ವಾತಂತ್ರ್ಯವಲ್ಲ

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸರ್ವಸ್ವವನ್ನೂ ತ್ಯಾಗ ಮಾಡಿದ ಅಸಂಖ್ಯಾತ ಹೋರಾಟಗಾರರಿಗೆ ನಾವು ವಿನಮ್ರ ನಮನ ಸಲ್ಲಿಸುತ್ತೇವೆ. ಅವರ ಧೈರ್ಯ, ತ್ಯಾಗ ಮತ್ತು ನಮ್ಮ ರಾಷ್ಟ್ರದ ಮೇಲಿನ ಅಚಲ ನಂಬಿಕೆ ನಮಗೆ ಸದಾ ಸ್ಫೂರ್ತಿ ನೀಡುತ್ತದೆ. ಕಳೆದ 79 ವರ್ಷಗಳಲ್ಲಿ ಭಾರತದ ಪಯಣವು ಗಮನಾರ್ಹ ಸಾಧನೆ, ಹೋರಾಟ ಮತ್ತು ಸಾಮೂಹಿಕ ಸಂಕಲ್ಪದಿಂದ ಕೂಡಿದೆ. ನಾವು ಬಹಳ ದೂರ ಸಾಗಿ ಬಂದಿದ್ದೇವೆ, ಆದರೆ ಒಂದು ರಾಷ್ಟ್ರವಾಗಿ ಅನೇಕ ಆಕಾಂಕ್ಷೆಗಳು ಇನ್ನೂ ಈಡೇರಿಲ್ಲ. ನಮಗೆ ಸ್ವಾತಂತ್ರ್ಯವೆಂದರೆ ಕೇವಲ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಹೊಂದುವುದು ಮಾತ್ರವಲ್ಲ. ಪ್ರತಿಯೊಬ್ಬ ಭಾರತೀಯನಿಗೆ ನಮ್ಮ ಸಂವಿಧಾನವು ನೀಡಿದ ಸಮಾನತೆ, ಘನತೆ, ನ್ಯಾಯ ಮತ್ತು ಭಯವಿಲ್ಲದೆ ಮಾತನಾಡುವ ಸ್ವಾತಂತ್ರ್ಯದ ಭರವಸೆಯೇ ನಿಜವಾದ ಸ್ವಾತಂತ್ರ್ಯ. ಈ ಮೌಲ್ಯಗಳೇ ನಮ್ಮ ಪ್ರಜಾಪ್ರಭುತ್ವದ ದೊಡ್ಡ ಶಕ್ತಿ ಮತ್ತು ಪ್ರತಿಯೊಬ್ಬ ನಾಗರಿಕನ ಪ್ರಬಲ ರಕ್ಷಾಕವಚ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:Independence Day 2026: ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ದೆಹಲಿಯಲ್ಲಿ ನೋಡಲೇಬೇಕಾದ ಈ 5 ಸ್ಥಳಗಳಿವು!

ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ

ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಕಳೆದ ಹತ್ತು ವರ್ಷಗಳಲ್ಲಿ ದೇಶದ ಸಾಂವಿಧಾನಿಕ ಮೌಲ್ಯಗಳು, ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಗಂಭೀರ ಸವಾಲುಗಳು ಎದುರಾಗಿವೆ. ನಮ್ಮ ಯುವಕರು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಅವಕಾಶಗಳಿಗೆ ಅರ್ಹರು. ನಮ್ಮ ರೈತರು ತಮ್ಮ ಶ್ರಮಕ್ಕೆ ಘನತೆ ಮತ್ತು ನ್ಯಾಯವನ್ನು ಪಡೆಯಬೇಕು. ನಮ್ಮ ಮಹಿಳೆಯರು ಸಮಾನತೆ, ಸಬಲೀಕರಣ ಮತ್ತು ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಸಮಾನ ಧ್ವನಿಯನ್ನು ಹೊಂದಿರಬೇಕು ಎಂದು ಹೇಳಿದರು.

ಇದೇ ವೇಳೆ, ದಲಿತರು, ಆದಿವಾಸಿಗಳು, ಒಬಿಸಿಗಳು, ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸಂವಿಧಾನವು ವಾಗ್ದಾನ ಮಾಡಿದ ಸಂಪೂರ್ಣ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಸಿಗಬೇಕು ಎಂದು ಅವರು ಒತ್ತಿ ಹೇಳಿದ್ದಾರೆ. 'ದಲಿತರು, ಆದಿವಾಸಿಗಳು, ಒಬಿಸಿಗಳು, ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರು ನಮ್ಮ ಸಂವಿಧಾನವು ವಾಗ್ದಾನ ಮಾಡಿದ ಸಮಾನತೆ ಮತ್ತು ನ್ಯಾಯವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಬೇಕು. ಈ ಸ್ವಾತಂತ್ರ್ಯ ದಿನದಂದು, ನಮ್ಮ ದೊಡ್ಡ ಸಂಕಲ್ಪವೇ ಭರವಸೆಯಾಗಿರಬೇಕು. ಜೈ ಹಿಂದ್' ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Vande mataram: ಗುಂಡಿಟ್ಟು ಕೊಂದ್ರೂ ಸರಿ, ವಂದೇ ಮಾತರಂ ಪೂರ್ಣ ಹಾಡಲ್ಲ: ಕೇರಳ ಸಚಿವ, ಸಂಸದ ಶಾಕಿಂಗ್ ಹೇಳಿಕೆ!

ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ

ಇದಕ್ಕೂ ಮುನ್ನ, 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು. ಧ್ವಜಾರೋಹಣದ ವೇಳೆ 1721 ಫೀಲ್ಡ್ ಬ್ಯಾಟರಿಯ (ಸೆರೆಮೋನಿಯಲ್) ಗನ್ನರ್‌ಗಳು 21 ಗನ್‌ಗಳ ಸೆಲ್ಯೂಟ್ ನೀಡಿದರು. ದೇಶೀಯ 105 ಎಂಎಂ ಲೈಟ್ ಫೀಲ್ಡ್ ಗನ್‌ಗಳನ್ನು ಬಳಸುವ ಈ ಸೆರೆಮೋನಿಯಲ್ ಬ್ಯಾಟರಿಯ ನೇತೃತ್ವವನ್ನು ಮೇಜರ್ ಪವನ್ ಸಿಂಗ್ ಶೇಖಾವತ್ ವಹಿಸಿದ್ದರೆ, ಗನ್ ಪೊಸಿಷನ್ ಅಧಿಕಾರಿಯಾಗಿ ನಾಯಬ್ ಸುಬೇದಾರ್ (ಅಸಿಸ್ಟೆಂಟ್ ಇನ್‌ಸ್ಟ್ರಕ್ಟರ್ ಇನ್ ಗನ್ನರಿ) ಅನುತೋಷ್ ಸರ್ಕಾರ್ ಕಾರ್ಯನಿರ್ವಹಿಸಿದರು.

(ಈ ಸುದ್ದಿಯ ಹೆಡ್‌ಲೈನ್‌ ಹೊರತುಪಡಿಸಿ, ಉಳಿದಂತೆ ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಯಾವುದೇ ಬದಲಾವಣೆ ಮಾಡಿಲ್ಲ ಮತ್ತು ಇದನ್ನು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯಂತ ಕಡಿಮೆ ಅವಧಿಯ ಕೆಂಪುಕೋಟೆ ಭಾಷಣ ಮಾಡಿದ ಪ್ರಧಾನಿ ಮೋದಿ
ಬಸ್‌ನಲ್ಲೂ ವಂದೇ ಭಾರತ್ ವೈಭೋಗ: ಶೌಚಾಲಯ, ಪ್ಯಾಂಟ್ರಿ ಹೊಂದಿರುವ ಎಕ್ಸಿಕ್ಯೂಟಿವ್ ಬಸ್ ಆರಂಭಿಸಿದ KSRTC!