
ನವದೆಹಲಿ (ಆ.15): ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಐತಿಹಾಸಿಕ ಕೆಂಪುಕೋಟೆಯ ಮೇಲಿಂದ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ('ವಿಕಸಿತ ಭಾರತ') ಮಾಡುವ ನಿಟ್ಟಿನಲ್ಲಿ 'ಶಕ್ತಿಯ ಸಪ್ತಧಾರೆ' (Saptdhara) ಎಂಬ ಏಳು ಪ್ರಮುಖ ಸುಧಾರಣಾ ಕ್ಷೇತ್ರಗಳ ಸಮಗ್ರ ದೃಷ್ಟಿಕೋನವನ್ನು (Vision) ಪ್ರಕಟಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಪ್ರಧಾನಿ ಮೋದಿ ನೀಡಿದ ಆ 7 ಮುಖ್ಯ ಸಪ್ತಧಾರೆಗಳ ವವ
ಗುಣಮಟ್ಟ, ನಿಗದಿಪಡಿಸಿದ ವೆಚ್ಚ ಮತ್ತು ಬೃಹತ್ ಪ್ರಮಾಣದ ಉತ್ಪಾದನೆ (Cost, Quality and Scale) ಮೂಲಕ ಭಾರತೀಯ ಉತ್ಪನ್ನಗಳು ಜಾಗತಿಕ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರಬೇಕು. ಭಾರತವನ್ನು ಜಾಗತಿಕ ಸರಬರಾಜು ಜಾಲದ (Global Supply Chain) ಪ್ರಮುಖ ಕೇಂದ್ರವನ್ನಾಗಿ ಮಾಡುವುದು ಇದರ ಗುರಿ .
ದೇಶದ ಕೃಷಿ ಕ್ಷೇತ್ರ ಮತ್ತು ಆಹಾರ ಸಂಸ್ಕರಣಾ ವಲಯದ ಉತ್ಪನ್ನಗಳನ್ನು ಕೇವಲ ದೇಶೀಯ ಬಳಕೆಗೆ ಸೀಮಿತಗೊಳಿಸದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ಮಾಡುವ ಅಗತ್ಯವಿದೆ.
ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಡಿಜಿಟಲ್ ಹಾಗೂ ಸಂವಹನ ತಂತ್ರಜ್ಞಾನದಲ್ಲಿ (Digital & Communication Technology) ಕ್ರಾಂತಿಕಾರಿ ಆವಿಷ್ಕಾರಗಳಿಗೆ ಹೆಚ್ಚಿನ ಒತ್ತು ನೀಡುವುದು.
ದೇಶಾದ್ಯಂತ ವೇಗದ ಹಾಗೂ ತಡೆರಹಿತ ಸಂಪರ್ಕ ಜಾಲವನ್ನು (Fast & Seamless Connectivity) ವೃದ್ಧಿಸುವುದು, ಹೆದ್ದಾರಿಗಳು ಮತ್ತು ಒಳನಾಡು ಜಲಮಾರ್ಗಗಳನ್ನು ಆಧುನೀಕರಿಸುವುದು.
ರಕ್ಷಣಾ ವಲಯದಲ್ಲಿ ಸಂಪೂರ್ಣ ಆತ್ಮನಿರ್ಭರತೆ ಸಾಧಿಸಲು ಡ್ರೋನ್ ತಂತ್ರಜ್ಞಾನ, ಸೂಪರ್‌ಸಾನಿಕ್ ಟೆಕ್ನಾಲಜಿಯಂತಹ ಮುಂದಿನ ಪೀಳಿಗೆಯ ಆಯುಧ ಮತ್ತು ಸಲಕರಣೆಗಳನ್ನು ದೇಶದಲ್ಲೇ ನಿರ್ಮಿಸುವುದು.
ಭಾರತವು ಪರಿಸರ ಸ್ನೇಹಿ ಇಂಧನ (Green Economy) ಮತ್ತು ಸಮುದ್ರ ಮೂಲಸೌಕರ್ಯ-ಸಾಗರ ಸಂಪನ್ಮೂಲಗಳ (Blue Economy) ಬೃಹತ್ ಸಾಧ್ಯತೆಗಳನ್ನು ಹೊಂದಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಬಳಸುವುದು.
ಭಾರತೀಯ ಪಾರಂಪರಿಕ ಶಕ್ತಿಯಾದ ಯೋಗ, ಆಯುರ್ವೇದ, ಸಮಗ್ರ ಆರೋಗ್ಯ ಪದ್ಧತಿ, ಪ್ರವಾಸೋದ್ಯಮ ಹಾಗೂ ಸೃಜನಶೀಲ ರಂಗಗಳನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ