100 ವರ್ಷ ಬಳಿಕ ರಾಮಮಂದಿರ ಕೆಡವಿ ಮಸೀದಿ ಕಟ್ತೇವೆ: ರಶೀದಿ

Published : Jan 01, 2023, 08:13 AM ISTUpdated : Jan 01, 2023, 08:20 AM IST
100 ವರ್ಷ ಬಳಿಕ ರಾಮಮಂದಿರ ಕೆಡವಿ ಮಸೀದಿ ಕಟ್ತೇವೆ: ರಶೀದಿ

ಸಾರಾಂಶ

100 ವರ್ಷಗಳ ನಂತರ ರಾಮಮಂದಿರವನ್ನು ಕೆಡವಿ ಮಸೀದಿ ನಿರ್ಮಿಸಲಾಗುವುದು. ಭವಿಷ್ಯದಲ್ಲಿ ಮುಸ್ಲಿಮರು ಮೌನವಾಗಿರುವುದಿಲ್ಲ ಎಂದು ಅಖಿಲ ಭಾರತ ಇಮಾಮ್‌ ಸಂಘದ ಅಧ್ಯಕ್ಷ ಮೌಲಾನಾ ಸಾಜಿದ್‌ ರಶೀದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನವದೆಹಲಿ: ‘100 ವರ್ಷಗಳ ನಂತರ ರಾಮಮಂದಿರವನ್ನು ಕೆಡವಿ ಮಸೀದಿ ನಿರ್ಮಿಸಲಾಗುವುದು. ಭವಿಷ್ಯದಲ್ಲಿ ಮುಸ್ಲಿಮರು ಮೌನವಾಗಿರುವುದಿಲ್ಲ ಎಂದು ಅಖಿಲ ಭಾರತ ಇಮಾಮ್‌ ಸಂಘದ ಅಧ್ಯಕ್ಷ ಮೌಲಾನಾ ಸಾಜಿದ್‌ ರಶೀದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಟೈಮ್ಸ್ ನೌ ನವಭಾರತ್‌’ ಚಾನೆಲ್‌ ಜತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದ ಅಡಿಗಲ್ಲು ಹಾಕಿದ್ದು, ಭಾರತೀಯ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ. ಇನ್ನು 100 ವರ್ಷಗಳ ನಂತರ ಭಾರತದಲ್ಲಿ ಮುಸ್ಲಿಮರು ಅಧಿಕಾರಕ್ಕೆ ಬರಲಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ಕೆಡವಲಾಗುತ್ತದೆ ಮತ್ತು ಆ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲಾಗುತ್ತದೆ ಎಂದರು.

ಇಂದು ಮುಸ್ಲಿಮರು ಮೌನವಾಗಿದ್ದಾರೆ. ಆದರೆ ನನ್ನ ಮಕ್ಕಳು  ನನ್ನ ಮಗ, ಅವನ ಮಗ, ಮೊಮ್ಮಗ(grandson) ಇವರೆಲ್ಲ 50-100 ವರ್ಷಗಳ ನಂತರ, ನಮ್ಮ ಮಸೀದಿ (mosque) ಕೆಡವಿ ಮಂದಿರ ಕಟ್ಟಲಾಗಿತ್ತು ಎಂದು ಇತಿಹಾಸದ ಪಾಠದಿಂದ ತಿಳಿಯಲಿದ್ದಾರೆ. ಆ ಸಮಯದಲ್ಲಿ ಮುಸ್ಲಿಂ ನ್ಯಾಯಾಧೀಶರು (Muslim judge), ಮುಸ್ಲಿಂ ಆಡಳಿತಗಾರ ಅಥವಾ ಮುಸ್ಲಿಂ ಸರ್ಕಾರ ಅಧಿಕಾರಕ್ಕೆ ಬರಬಹುದು ಎಂದರು. ರಶೀದಿ ಇಂಥ ಹೇಳಿಕೆ ನೀಡುವುದು ಇದು ಮೊದಲೇನಲ್ಲ. ಕಳೆದ ನವೆಂಬರ್‌ನಲ್ಲಿ ಸರ್ಕಾರವು ಖಾಸಗಿ ಮದರಸಾಗಳನ್ನು ಮುಟ್ಟಲು ಧೈರ್ಯ ಮಾಡಿದರೆ ಭಾರತದ ಧಗಧಗಿಸಲಿದೆ’ ಎಂದಿದ್ದರು.

ಮಕರ ಸಂಕ್ರಾಂತಿ ವೇಳೆಗೆ ಅಯೋಧ್ಯೆ ರಾಮಮಂದಿರ ಪೂರ್ಣ

Ayodhya ರಾಮಮಂದಿರ ಗರ್ಭಗುಡಿ ವಿನ್ಯಾಸ ಅಂತಿಮ: ರಾಮ​ನ​ವಮಿ ದಿನ ರಾಮನ ಮೇಲೆ ಬೀಳ​ಲಿದೆ ಸೂರ್ಯರಶ್ಮಿ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು