
ನವದೆಹಲಿ(ಡಿ.31): ಹೊಸ ವರ್ಷ ಸಂಭ್ರಮ ಜೋರಾಗಿದೆ. ಪಾರ್ಟಿ, ಡ್ಯಾನ್ಸ್ ಸದ್ದು ಮಾಡುತ್ತಿದೆ. ಇದರ ನಡುವೆ ಕೋವಿಡ್ ಆತಂಕವೂ ಹೆಚ್ಚಾಗಿದೆ. ಚೀನಾ ಸೇರಿದಂತೆ ವಿದೇಶದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಗಂಭೀರವಾಗಿದೆ. ಇದರ ಪರಿಣಾಮ ಭಾರತದಲ್ಲಿ ಈಗಾಗಲೇ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆ ಕಾಣತ್ತಿರುವುದರಿಂದ ಇದೀಗ ಪ್ರಧಾನಿ ನರೇಂದ್ರ ಮೋದಿ ಎರಡನೇ ಕೋವಿಡ್ ಸ್ಥಿತಿಗತಿ ಸಭೆ ನಡೆಸಿದ್ದಾರೆ. ಸರ್ಕಾರದ ಮುಖ್ಯ ಕಾರ್ದರ್ಶಿ ಸೇರಿ ಹಲವು ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ, ಭಾರತದಲ್ಲಿ ಪ್ರಕರಣಗಳು, ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದಿದ್ದಾರೆ.
ತಜ್ಞರು, ವೈದ್ಯರು ಸೇರಿದಂತೆ ಹಲವು ಅಧಿಕಾರಿಗಳ ಜೊತೆ ಮೋದಿ ಸಭೆ ನಡೆಸಿದ್ದಾರೆ. ಆಸ್ಪತ್ರೆಗಳಲ್ಲಿನ ಮೂಲಭೂತ ಸೌಕರ್ಯ, ಸೋಂಕಿತರ ಚಿಕಿತ್ಸೆಗೆ ತಯಾರಿ, ಆಕ್ಸಿಜನ್ ಪೂರೈಕೆ, ವೈದ್ಯರು, ನಿರ್ಸ್ ಸೇರಿ ಕೋವಿಡ್ ವಾರಿಯರ್ ಲಭ್ಯತೆ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿದ ಮೋದಿ ತಜ್ಞರ ಮಹತ್ವದ ಚರ್ಚೆ ನಡೆಸಿದ್ದಾರೆ.
ಹೊಸ ವರ್ಷಾಚರಣೆಯಲ್ಲಿ ಎಚ್ಚರಿಕೆ ಇರಲಿ, ಮೆಟ್ರೋ ಸಿಟಿ ಪೈಕಿ ಬೆಂಗ್ಳೂರಲ್ಲಿ ಗರಿಷ್ಠ ಕೋವಿಡ್ ಕೇಸ್!
ಚೀನಾ, ಬ್ರೆಜಿಲ್, ಜಪಾನ್, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಸೃಷ್ಟಿಯಾಗಿರುವ ಕೋವಿಡ್ ಅಲೆಯಿಂದ ಭಾರತಕ್ಕಿರುವ ಅಪಾಯ, ಭಾರತದಲ್ಲಿ ಸೃಷ್ಟಿಯಾಗಬಲ್ಲ ಕೋವಿಡ್ ಅಲೆ, ಪ್ರಕರಣ ಸಂಖ್ಯೆ, ಗಂಭೀರತೆ ಕುರಿತು ಮೋದಿ ಮಾಹಿತಿ ಪಡೆದಿದ್ದಾರೆ. ವಿದೇಶದಲ್ಲಿ ಎದ್ದಿರುವ ಅಲೆ ಭಾರತದಲ್ಲಿ ಯಾವೆಲ್ಲಾ ಪರಿಣಾಮ ಸೃಷ್ಟಿಸಲು ಸಾಧ್ಯವಿದೆ ಅನ್ನೋ ಕುರಿತು ತಜ್ಞ ವೈದ್ಯರೊಂದಿಗೆ ಮೋದಿ ಚರ್ಚಿಸಿದ್ದಾರೆ.
ಅಂತಾರಾಷ್ಟ್ರೀಯ ಪ್ರಯಾಣಿಕರ ಪೈಕಿ 53 ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟೀವ್ ಕಾಣಿಸಿಕೊಂಡಿದೆ. ಈ ಕುರಿತು ಮಾಹಿತಿ ಪಡೆದಿದ್ದಾರೆ. ಇಷ್ಟೇ ಅಲ್ಲ ಜಿನೋಮ್ ಸೀಕ್ವೆನ್ಸ್ ಟೆಸ್ಟಿಂಗ್ ಕುರಿತು ಚರ್ಚಿಸಲಾಗಿದೆ. ಪ್ರಕರಣಗಳನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಮೋದಿ ಸೂಚಿಸಿದ್ದಾರೆ. ಟೆಸ್ಟಿಂಗ್ ಸಂಖ್ಯೆ ಹೆಚ್ಚಿಸಲು ನಿರ್ದೇಶ ನೀಡಲಾಗಿದೆ.
ಮಾಸ್ಕ್, ಸಾಮಾಜಿಕ ಅಂತರ, ಕೋವಿಡ್ ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸಲು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಇದರ ಜೊತೆಗೆ ಬೂಸ್ಟರ್ ಡೋಸ್ ಲಸಿಕೆ ಕುರಿತು ಜಾಗೃತಿ ಮೂಡಿಸಲು ಸೂಚಿಸಲಾಗಿದೆ. ಇಷ್ಟೇ ಅಲ್ಲ ಬೂಸ್ಟರ್ ಡೋಸ್ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಸೂಚಿಸಿದ್ದಾರೆ.
Covid-19 Cases: ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಳ, ಮಹಾರಾಷ್ಟ್ರದಲ್ಲಿ ವ್ಯಕ್ತಿ ಸಾವು
ಮೊದಲ ಎರಡು ಅಲೆಗಳ ವೇಳೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಆಕ್ಸಿಜನ್ ಸಿಗದೆ ಜನರು ನೋವು ಅನುಭವಿಸಿದ್ದನ್ನು ನೋಡಿದ್ದ ಕೇಂದ್ರ ಸರ್ಕಾರ, ಈ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆ ವಹಿಸಿದೆ. ಕೋವಿಡ್ 3ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೂ ಲಸಿಕಾಕಾರಣ ಹೆಚ್ಚಿರುವ ಕಾರಣ, ಆಸ್ಪತ್ರೆ ದಾಖಲಾತಿ ಮತ್ತು ಸಾವಿನ ಪ್ರಮಾಣ ಕಡಿಮೆಯಾಗಿತ್ತು. ಹೀಗಾಗಿ ದೇಶದಲ್ಲಿ ಮೂರನೇ ಅಲೆ ಯಾವುದೇ ಅಪಾಯ ಸೃಷ್ಟಿಸಿಲ್ಲ. ಇದೀಗ ನಾಲ್ಕನೇ ಅಲೆಯನ್ನೂ ಇದೇ ರೀತಿ ಸಮರ್ಥವಾಗಿ ಎದುರಿಸಲು ಮೋದಿ ಸರ್ಕಾರ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ