
ವಾರಂಗಲ್: ನೇಣು ಕುಣಿಕೆ ಹಾಕಿಕೊಂಡು ಸಾವಿಗೆ ಶರಣಾಗುವ ವೀಡಿಯೋ ಮಾಡಲು ಹೋದ ಇನ್ಸ್ಟಾಗ್ರಾಮ್ ಇನ್‌ಪ್ಲುಯೆನ್ಸರ್ ಓರ್ವ ಆಕಸ್ಮಿಕವಾಗಿ ನೇಣು ಕುಣಿಕೆ ಕತ್ತಿಗೆ ಬಿಗಿದು ಹೋಗಿ ಸತ್ತೆ ಹೋದ ಆಘಾತಕಾರಿ ಘಟನೆ ತೆಲಂಗಾಣದ ವಾರಂಗಲ್‌ನಲ್ಲಿ ನಡೆದಿದೆ. ಮೃತ ಯುವಕನನ್ನು ಅಜಯ್ ಎಂದು ಗುರುತಿಸಲಾಗಿದೆ. ಜೂನ್ 18 ರಂದು ಈ ಘಟನೆ ನಡೆದಿದ್ದು, ಮೃತ ಅಜಯ್ ತಾಯಿ ದೇವಮ್ಮ ಈ ಸಾವಿನ ಬಗ್ಗೆ ಸಂಖ್ಯೆ ವ್ಯಕ್ತಪಡಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಎಲ್ಲ ಯುವ ಸಮೂಹದಂತೆ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ 23 ವರ್ಷದ ಕಂಡಕಟ್ಲ ಅಜಯ್ ಸ್ಥಳೀಯ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಬಿಡುವಿನ ಸಮಯದಲ್ಲಿ ರೀಲ್ಸ್ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದ. ಅದರಂತೆ ಅಂದು ಹೊಟೇಲ್‌ನಿಂದ ಕೆಲಸ ಮುಗಿಸಿ ಮಲ್ಲಂಪಲ್ಲಿ ರಸ್ತೆಯಲ್ಲಿರುವ ತನ್ನ ಪುಟ್ಟ ಮನೆಗೆ ಬಂದ ಅಜಯ್ ಮಂಗಳವಾರ ರಾತ್ರಿ ರೀಲ್ಸ್ ಮಾಡಲು ಮುಂದಾಗಿದ್ದಾನೆ. ಆದರೆ ಇದು ಆತನ ಕೊನೆ ವೀಡಿಯೋ ಆಗಿ ಬದಲಾಗಿದೆ.
ವರದಿಗಳ ಪ್ರಕಾರ ಅಜಯ್ ತನ್ನ ಮೊಬೈಲ್ ಫೋನ್ ಅನ್ನು ಫ್ರಿಡ್ಜ್ ಮೇಲೆ ವಿಡಿಯೋ ರೆಕಾರ್ಡ್ ಮಾಡುವುದಕ್ಕಾಗಿ ಇಟ್ಟಿದ್ದಾನೆ. ಬಳಿಕ ಆತ್ಮಹತ್ಯೆ ಮಾಡಿಕೊಳ್ಳುವಂತೆ ನಟನೆ ಮಾಡಲು ಮುಂದಾಗಿದ್ದಾನೆ. ಅದರಂತೆ ಆತ ತನ್ನ ಕತ್ತಿಗೆ ನೇಣು ಕುಣಿಕೆಯನ್ನು ಹಾಕಿಕೊಂಡಿದ್ದು, ವೀಡಿಯೋ ಚಿತ್ರೀಕರಣ ವೇಳೆ ಇದು ಬಿಗಿಯಾಗಿದ್ದರಿಂದ ಆಕಸ್ಮಿಕವಾಗಿ ಆತ ಸಾವನ್ನಪ್ಪಿದ್ದಾನೆ. ರಾತ್ರಿಯ ಸಮಯ ಇದಾಗಿದ್ದರಿಂದ ಯಾರ ಗಮನಕ್ಕೂ ಇದು ಬಂದಿಲ್ಲ, ಮುಂಜಾನೆ ಬೆಳಗ್ಗೆ ಅಜಯ್ ಕುಟುಂಬದವರು ಹೋಗಿ ನೋಡಿದಾಗಲೇ ಪ್ರಕರಣ ಬೆಳಕಿಗೆ ಬಂದಿದೆ.
ಆದರೆ ಅಜಯ್ ತಾಯಿ ಮಗನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಅಜಯ್ ದೇಹವನ್ನು ವಶಕ್ಕೆ ಪಡೆದು, ಆತನ ಮೊಬೈಲ್ ಫೋನ್‌ಅನ್ನು ಸೀಜ್ ಮಾಡಿದ್ದಾರೆ. ಘಟನೆ ಬಗ್ಗೆ ಈಗ ತನಿಖೆ ನಡೆಯುತ್ತಿದೆ. ಅಜಯ್ ಆಕಸ್ಮಿಕವಾಗಿ ಸಾವಿಗೀಡಾಗಿದ್ದಾನೋ ಅಥವಾ ಈ ಸಾವಿನ ಹಿಂದೆ ಏನಾದರೂ ಪಿತೂರಿ ಇದೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ