ಉತ್ತರ ಪ್ರದೇಶದ ಮಿರಗಪುರ ಗ್ರಾಮವು 500 ವರ್ಷಗಳಿಂದ ಮದ್ಯ-ಮಾಂಸ ಸೇವಿಸದೆ, ಬೆಳ್ಳುಳ್ಳಿ-ಈರುಳ್ಳಿ ಬಳಸದೆ ಪವಿತ್ರ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದೆ. ಈ ಗ್ರಾಮವು ಭಾರತ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ಗಳಲ್ಲಿ ಸ್ಥಾನ ಪಡೆದಿದೆ.
ನವದೆಹಲಿ: ನಮ್ಮ ದೇಶದ ಹಲವು ಹಳ್ಳಿಗಳು ವಿವಿಧ ಕಾರಣಗಳಿಂದ ಫೇಮಸ್ ಆಗಿವೆ. ಕೆಲ ಹಳ್ಳಿಗಳ ಹೆಸರಿನಲ್ಲಿ ವಿಶೇಷ ದಾಖಲೆಗಳೂ ಸಹ ಸೇರ್ಪಡೆಯಾಗಿವೆ. ಅಂತಹವುದೇ ಒಂದು ಹಳ್ಳಿ ಮಿರಗಪುರ. ಈ ಹಳ್ಳಿಯನ್ನು ಪವಿತ್ರ ಗ್ರಾಮ ಎಂದು ಕರೆಯಲಾಗುತ್ತದೆ. ಈ ಗ್ರಾಮ ಉತ್ತರ ಪ್ರದೇಶದ ಸಹಾರನಪುರ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಮಿರಗಪುರ ಹಳ್ಳಿಯನ್ನು ಪವಿತ್ರ ಗ್ರಾಮ ಎಂದು ಕರೆಯಲು ಹಲವು ಕಾರಣಗಳಿವೆ. ಈ ಪವಿತ್ರ ಗ್ರಾಮದ ಬಗ್ಗೆ ನೀವು ತಿಳಿದುಕೊಂಡ್ರೆ ಹಳ್ಳಿಯಂದ್ರೆ ಈ ರೀತಿಯಲ್ಲಿರುತ್ತೆ ಅಂತ ಅನ್ನಿಸುತ್ತದೆ.
ಸಹಾರನಪುರ ಜಿಲ್ಲೆಯ ಮಿರಗಪುರ ಗ್ರಾಮ ಹಲವು ವಿಶೇಷತೆಗಳನ್ನು ಹೊಂದಿದೆ. ಈ ಗ್ರಾಮದಲ್ಲಿ ಅಂದಾಜು 10 ಸಾವಿರ ಜನರು ವಾಸವಾಗಿದ್ದು, ಇಲ್ಲಿ ಇದುವರೆಗೂ ಯಾರೂ ಮದ್ಯ ಸೇವನೆ ಮಾಡಿಲ್ಲ. ಈ ಗ್ರಾಮದ ಜನರು ಯಾರೂ ಮಾಂಸ, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ತಿನ್ನಲ್ಲ. ಈ ಗ್ರಾಮದ ಯಾವ ಅಂಗಡಿಯಲ್ಲಿಯೂ ನಶೆಯ ಪದಾರ್ಥಗಳನ್ನು ಮಾರಾಟ ಮಾಡಲ್ಲ. ಈ ಗ್ರಾಮಕ್ಕೆ ಬಂದರೆ ನಿಮಗೆ ಬೀಡಿ-ಸಿಗರೇಟ್ ಸಹ ಸಿಗಲ್ಲ.
ಸೈಕಲ್‌ನಲ್ಲಿ ಪಾರ್ಸೆಲ್ ತಂದ ಡೆಲಿವರಿ ಬಾಯ್‌ಗೆ ಗ್ರಾಹಕ ಮಾಡಿದ್ದೇನು? ನೆಟ್ಟಿಗರು ಭಾವುಕ
ಮಿರಗಪುರ ಗ್ರಾಮದಲ್ಲಿ ಬೆಳ್ಳುಳ್ಳಿ-ಈರುಳ್ಳಿ, ಬೀಡಿ-ಸಿಗರೇಟ್, ತಂಬಾಕು, ಮದ್ಯ, ಮಾಂಸಾಹಾರ ಸೇರಿದಂತೆ 26 ಪದಾರ್ಥಗಳನ್ನು ತಿನ್ನುವುದು ಮತ್ತು ಕುಡಿಯುವುದನ್ನು ನಿಷೇಧಿಸಲಾಗಿದೆ. ಈ ವಿಶೇಷತೆಯಿಂದಾಗಿ ಈ ಗ್ರಾಮದ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿತ್ತು. ತು ಇತ್ತೀಚೆಗೆ ಮಿರಗಪುರ ಗ್ರಾಮದ ಹೆಸರು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸಹ ನೋಂದಾಯಿಸಲ್ಪಟ್ಟಿದೆ. ಜಿಲ್ಲಾಡಳಿತವು ಮಿರಗ್‌ಪುರವನ್ನು ಮಾದಕ ದ್ರವ್ಯ ಮುಕ್ತ ಗ್ರಾಮವೆಂದು ಘೋಷಿಸಿದೆ.
ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಮಾದಕ ವ್ಯಸನಕ್ಕೆ ತುತ್ತಾಗುತ್ತಿರುವ ಸಂದರ್ಭದಲ್ಲಿ 10 ಸಾವಿರ ಜನಸಂಖ್ಯೆಯ ಈ ಗ್ರಾಮದ ಮಾದಕ ದ್ರವ್ಯ ಮುಕ್ತವಾಗಿದೆ. ಗ್ರಾಮದ ಹಿರಿಯರು ಹೇಳುವಂತೆ 17ನೇ ಶತಮಾನದಲ್ಲಿ ರಾಜಸ್ಥಾನದ ಪುಷ್ಕರ್‌ನಿಂದ ಮಹಾನ್ ವ್ಯಕ್ತಿ ಬಾಬಾ ಫಕೀರದಾಸ್ ಇಲ್ಲಿಗೆ ಬಂದಿದ್ದರು. ಇಲ್ಲಿ ತಪಸ್ಸು ಮಾಡಿದ ಬಾಬಾ ಫಕೀರದಾಸ್ ಅವರು ಎಂದಿಗೂ ಮಾಂಸ ಅಥವಾ ಮದ್ಯ ಸೇವಿಸುವುದಿಲ್ಲ ಎಂದು ಜನರಿಂದ ಭರವಸೆ ಪಡೆದರು. ಅಂದಿನಿಂದ ಈ ಸಂಪ್ರದಾಯವನ್ನು ಪೀಳಿಗೆಯಿಂದ ಪೀಳಿಗೆಗೆ ಪಾಲಿಸಿಕೊಂಡು ಬರಲಾಗುತ್ತಿದೆ.
ಪ್ರಯಾಣದ ವೇಳೆ ದಿಢೀರ್ ಮಾಯವಾಗಿದ್ದ ಭಾರತೀಯ ರೈಲು, ಮೂರು ವರ್ಷದ ನಂತರ ಸ್ಟೇಶನ್‌ಗೆ ಬಂತು!