ಆಧಾರ ಅಧಿಕೃತ ವೆಬ್ಸೈಟಿನಲ್ಲಿ ಇರುವ ಅವಕಾಶದ ಮೂಲಕ, ನಮ್ಮ ಆಧಾರ ನಂಬರ್ ಎಲೆಲ್ಲಿ ಯೂಸ್ ಆಗುತ್ತಿದೆ ಎಂಬುದನ್ನು ಕಂಡು ಹಿಡಿಯಬಹುದು.
ಭಾರತೀಯರ ಗುರುತು
ಆಧಾರ್ ಕಾರ್ಡ್ ಭಾರತೀಯ ನಾಗರಿಕರಿಗೆ ಅತ್ಯಂತ ಮುಖ್ಯ ದಾಖಲೆ. ಇದು ಹೆಸರಿನೊಂದಿಗೆ ವಿಳಾಸ, ಫೋನ್ ಮತ್ತು ಬೆರಳಚ್ಚು ಸೇರಿ ಎಲ್ಲಾ ಮಾಹಿತಿ ಒಳಗೊಂಡಿದೆ. ತಪ್ಪಾದ ಕೈಗೆ ಸಿಕ್ಕರೆ, ಇದನ್ನು ದುರುಪಯೋಗಪಡಿಸಿಕೊಳ್ಳಬಹುದು.
ಆಧಾರ್ ಬಳಕೆ ಎಲ್ಲಿ ಮತ್ತು ಹೇಗೆ?
ನೀವು ಅಂತಹ ಯಾವುದೇ ಸಮಸ್ಯೆ ತಡೆಗಟ್ಟಲು ಬಯಸಿದರೆ, ನಿಮ್ಮ ಆಧಾರ್ ಎಲ್ಲಿ ಬಳಕೆಯಾಗುತ್ತಿದೆ ಎಂಬುದನ್ನು ಕಂಡು ಕೊಳ್ಳಬಹುದು. UIDAI ವೆಬ್‌ಸೈಟ್‌ಗೆ ಹೋಗಬೇಕು. ಪ್ರಕ್ರಿಯೆ ಇಲ್ಲಿದೆ…
ಹಂತ-1
ಮೊದಲು ಆಧಾರ್ ವೆಬ್‌ಸೈಟ್ (https://uidai.gov.in/) ಗೆ ಭೇಟಿ ನೀಡಿ.
ಹಂತ-2
ಆಧಾರ್ ಸೇವೆಗಳ ಅಡಿಯಲ್ಲಿ ಆಧಾರ್ ದೃಢೀಕರಣ ಇತಿಹಾಸದ ಆಯ್ಕೆ ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ.
ಹಂತ-3
ನಂತರ ನಿಮ್ಮ ಆಧಾರ್ ಸಂಖ್ಯೆಮತ್ತು ಭದ್ರತಾ ಕೋಡ್ ನಮೂದಿಸಿ. OTP ಕಳುಹಿಸಿ ಕ್ಲಿಕ್ ಮಾಡಿ.
ಹಂತ-4
ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕೋಡ್ ಬರುತ್ತದೆ, ಆ OTP ನಮೂದಿಸಿ, ಸಬ್‌ಮಿಟ್ ಕೊಡಿ.
ಹಂತ-5
ದಿನಾಂಕ ಶ್ರೇಣಿ ಮತ್ತು ದೃಢೀಕರಣ ಪ್ರಕಾರವನ್ನು ನಮೂದಿಸಿದ ನಂತರ ಕೇಳಿದ ವಿವರಗಳೊಂದಿಗೆ OTP ಕೇಳಲಾಗುತ್ತದೆ. ಆಗ 6 ತಿಂಗಳ ಮಾಹಿತಿಯೊಂದಿಗೆ ನಿಮ್ಮ ಕಾರ್ಡನ್ನು ಎಲ್ಲೆಲ್ಲಿ ಬಳಸಲಾಗಿದೆ ಎಂಬುದನ್ನು ಕಂಡು ಕೊಳ್ಳಬಹುದು.
ಆಧಾರ್ ದುರುಪಯೋಗವಾದರೆ ಏನು ಮಾಡಬೇಕು?
ನಿಮ್ಮ ಆಧಾರ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದೆನಿಸಿದರೆ 1947ಕ್ಕೆ ಕರೆ ಮಾಡುವ ಮೂಲಕ ಅಥವಾ help@uifai.gov.in ಗೆ ಇಮೇಲ್ ಮೂಲಕ ದೂರು ದಾಖಲಿಸಬಹುದು.