ಅಯೋಧ್ಯೆಗೆ ತೆರಳುತ್ತಿದ್ದ ವಿಶೇಷ ರೈಲಿನ ಮೇಲೆ ಕಲ್ಲು ತೂರಾಟ

By Anusha KbFirst Published Feb 13, 2024, 12:24 PM IST
Highlights

ಗುಜರಾತ್‌ನ ಸೂರತ್‌ನಿಂದ ಅಯೋಧ್ಯೆಗೆ ತೆರಳುತ್ತಿದ್ದ ಅಸ್ತಾ ವಿಶೇಷ ರೈಲಿನ ಮೇಲೆ ಮಹಾರಾಷ್ಟ್ರದಲ್ಲಿ ಕಲ್ಲು ತೂರಾಟ ನಡೆದಿದೆ. ಮಹಾರಾಷ್ಟ್ರದ ನಂದೂರ್‌ಬರ್‌ ರೈಲು ನಿಲ್ದಾಣದಲ್ಲಿ ರೈಲು ನಿಂತಿದ್ದ ವೇಳೆ ಈ ಅನಾಹುತ ನಡೆದಿದೆ. 

ಸೂರತ್: ಗುಜರಾತ್‌ನ ಸೂರತ್‌ನಿಂದ ಅಯೋಧ್ಯೆಗೆ ತೆರಳುತ್ತಿದ್ದ ಅಸ್ತಾ ವಿಶೇಷ ರೈಲಿನ ಮೇಲೆ ಮಹಾರಾಷ್ಟ್ರದಲ್ಲಿ ಕಲ್ಲು ತೂರಾಟ ನಡೆದಿದೆ. ಮಹಾರಾಷ್ಟ್ರದ ನಂದೂರ್‌ಬರ್‌ ರೈಲು ನಿಲ್ದಾಣದಲ್ಲಿ ರೈಲು ನಿಂತಿದ್ದ ವೇಳೆ ಈ ಅನಾಹುತ ನಡೆದಿದೆ.  ಕಲ್ಲು ತೂರಾಟದಿಂದ ಯಾರಿಗೂ ಗಾಯಗಳಾಗಿಲ್ಲ, ಈ ಬಗ್ಗೆ ರೈಲ್ವೆ ಪೊಲೀಸರು ಪ್ರಯಾಣಿಕರಿಂದ ಮಾಹಿತಿ ಕಲೆ ಹಾಕಿದ್ದು, ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. 

ಅಯೋಧ್ಯೆಗೆ ಯಾತ್ರಿಕರನ್ನು ಕರೆದುಕೊಂಡು ಹೊರಟ ಈ ವಿಶೇಷ ರೈಲಿಗೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ಹಾಗೂ ಸೂರತ್ ಸಂಸದ ದರ್ಶನಾ ಜರ್ದೊಶ್ ಅವರು ಸೂರತ್‌ನಲ್ಲಿ ಭಾನುವಾರವಷ್ಟೇ ಚಾಲನೆ ನೀಡಿದ್ದರು. 22 ಬೋಗಿಗಳಿದ್ದ ಈ ರೈಲಿನಲ್ಲಿ 1,344 ಪ್ರಯಾಣಿಕರಿದ್ದರು. ಈ ಬಗ್ಗೆ ಅಂಗ್ಲ ಮಾಧ್ಯಮಗಳೊಂದಿಗೆ ಮಾತನಾಡಿದ  ಸಚಿವ ಜರ್ದೋಶ್ ಅವರು, ಅಯೋಧ್ಯೆಗೆ ಹೊರಟ ಅಸ್ತಾ ವಿಶೇಷ ರೈಲಿನ ಮೇಲೆ ಕಲ್ಲು ತೂರಾಟದ ಘಟನೆ ಗಮನಕ್ಕೆ ಬಂದಿದ್ದು,  ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ರೈಲನ್ನು ಸೂರತ್‌ನ ವಿಎಚ್‌ಪಿ ಕಾರ್ಯಕರ್ತರು ತೆರಳುವುದಕ್ಕಾಗಿ ಕಾಯ್ದಿರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. 

ಭಾನುವಾರ ರಾತ್ರಿ ಈ ರೈಲು ಸೂರತ್ ರೈಲು ನಿಲ್ದಾಣದಿಂದ ಹೊರಟಿತ್ತು,  ಈ ರೈಲು ರಾತ್ರಿ 10.45ಕ್ಕೆ ಮಹಾರಾಷ್ಟ್ರದ ನಂದೂರ್ಬರ್ ರೈಲು ನಿಲ್ದಾಣಕ್ಕೆ ತಲುಪಿದಾಗ ಅಲ್ಲಿ ದುಷ್ಕರ್ಮಿಗಳು ರೈಲಿನ ಮೇಲೆ ಕಲ್ಲು ತೂರಿದ್ದಾರೆ. ಕೂಡಲೇ ರೈಲಿನಲ್ಲಿದ್ದ ಪ್ರಯಾಣಿಕರು ರೈಲ್ವೆ ಪೊಲೀಸ್ ಪೋರ್ಸ್‌ಗೆ ಮಾಹಿತಿ ನೀಡಿದ್ದಾರೆ. ನಂತರ ನಂದೂರ್ಬರ್ ರೈಲು ನಿಲ್ದಾಣದಲ್ಲಿ ರೈಲನ್ನು ಕೆಲ ಕಾಲ ನಿಲ್ಲಿಸಿ ಪ್ರಯಾಣಿಕರಿಂದ ಮಾಹಿತಿ ಕಲೆ ಹಾಕಲಾಗಿದೆ. ನಂತರ ರೈಲು ಪ್ರಯಾಣ ಮುಂದುವರೆಸಿದೆ. 

ಅಕ್ರಮ ಮದರಸಾ ಧ್ವಂಸ ಮಾಡಿದ ಬೆನ್ನಲ್ಲೇ ಪೊಲೀಸ್‌ ಪಡೆ ಮೇಲೆ ಕಲ್ಲು ತೂರಿದ ಮುಸ್ಲಿಮರು!

ಸೂರತ್ ಸಹಾಯಕ ಭದ್ರತಾ ಕಮೀಷನರ್ ಟಿ. ಎಸ್. ಬ್ಯಾನರ್ಜಿ, ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸೂರತ್‌ನಿಂದ ಹೊರಟ ರೈಲಿನ ಮೇಲೆ ಕಲ್ಲು ತೂರಾಟ ನಡೆದ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಈ ಬಗ್ಗೆ ನಂದೂರ್ಬರ್‌ ಆರ್‌ಪಿಎಫ್ ಪೊಲೀಸರು ತನಿಖೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಲಿದ್ದಾರೆ ಎಂದಿದ್ದಾರೆ. 

ಮದರಸಾ ಧ್ವಂಸ: ಹಿಂಸೆಗೆ 6 ಬಲಿ: ಮೊದಲೇ ಯೋಜನೆ ರೂಪಿಸಿ ಮನೆಗಳಲ್ಲಿ ಕಲ್ಲು ಸಂಗ್ರಹಿಸಿಟ್ಟಿದ್ದ ಗಲಭೆಕೋರರು

click me!