ಇದು ಪ್ರೊಟೆಸ್ಟೋ? ಯುದ್ಧವೋ? ರೈತ ಪ್ರತಿಭಟನೆ ಟೂಲ್ ಕಿಟ್ ಬಯಲು ಮಾಡಿದ ನೆಟಿಜನ್ಸ್!

Published : Feb 13, 2024, 12:22 PM IST
ಇದು ಪ್ರೊಟೆಸ್ಟೋ? ಯುದ್ಧವೋ? ರೈತ ಪ್ರತಿಭಟನೆ ಟೂಲ್ ಕಿಟ್ ಬಯಲು ಮಾಡಿದ ನೆಟಿಜನ್ಸ್!

ಸಾರಾಂಶ

ರೈತ ಪ್ರತಿಭಟನೆ ತೀವ್ರತೆ ಹೆಚ್ಚಾಗುತ್ತಿದೆ. ರೈತರು ಟ್ರಾಕ್ಟರ್, ದುಬಾರಿ ಕಾರುಗಳನ್ನು ಮಾಡಿಫಿಕೇಶನ್ ಮಾಡಿದ್ದಾರೆ. ಬುಲ್ಡೋಜರ್ ಬಳಸಿದ್ದಾರೆ. ರೈತರ ಪ್ರತಿಭಟನೆ ತಯಾರಿ ನೋಡಿದರೆ ಇದು ಪ್ರಜಾಪ್ರಭುತ್ವ ದೇಶದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ರೀತಿ ಕಾಣಿಸುತ್ತಿಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕ ದಾಖಲೆಯನ್ನೂ ನೀಡಿದ್ದಾರೆ.

ದೆಹಲಿ(ಫೆ.13) ರೈತ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. ಪಂಜಾಬ್, ಹರ್ಯಾಣ ಸೇರಿದಂತೆ ಹಲವು ರಾಜ್ಯಗಳಿಂದ ರೈತರು ದೆಹಲಿಯತ್ತ ನುಗ್ಗುತ್ತಿದ್ದಾರೆ. ದೆಹಲಿಯ ಗಡಿಗಳಲ್ಲಿ ಪೊಲೀಸರು ತಡೆಗೋಡೆಗಳನ್ನು ನಿರ್ಮಿಸಿದ್ದಾರೆ. ಕಳೆದ ಬಾರಿ ರೈತರು ನಡೆಸಿದ ಪ್ರತಿಭಟನೆಗಿಂತ ಈ ಬಾರಿಯ ಪ್ರತಿಭಟನೆ ಸ್ವರೂಪ ಬದಲಾಗಿದೆ. ರೈತರು ತಮ್ಮ ಟ್ರಾಕ್ಟರ್ ಸೇರಿದಂತೆ ವಾಹನಗಳನ್ನು ಸಂಘರ್ಷ, ಯುದ್ಧಕ್ಕಾಗಿ ಮಾಡಿಫಿಕೇಶನ್ ಮಾಡಿದ್ದಾರೆ. ಇನ್ನು ರೈತರು BMW ಸೇರಿದಂತೆ ದುಬಾರಿ ಕಾರುಗಳ ಮೂಲಕ ದೆಹಲಿ ಗಡಿ ತಲುಪಿದ್ದಾರೆ. ಈ ಕುರಿತು ನೆಟ್ಟಿಗರು ಹಲವು ಪೂರಕ ದಾಖಲೆ ನೀಡುತ್ತಾ, ಇದು ಪ್ರಜಾಪ್ರಭುತ್ವ ದೇಶದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ರೀತಿ ಕಾಣಿಸುತ್ತಿಲ್ಲ. ಇಲ್ಲಿ ಪ್ರತಿಭಟನೆಗಿಂತ ಹೆಚ್ಚು ಯುದ್ಧಕ್ಕೆ, ಸಂಘರ್ಷಕ್ಕೆ ರೈತರು ನಿಂತಂತಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಕೆಲ ಬೇಡಿಕೆ ಮುಂದಿಟ್ಟು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈ ಪ್ರತಿಭಟನೆ ಸ್ವರೂಪ, ತಯಾರಿ ಕುರಿತು ಕೇಂದ್ರ ಗುಪ್ತಚರ ಇಲಾಖೆ ಕೂಡ ಎಚ್ಚರಿಕೆ ನೀಡಿದೆ. ಅಪಾಯದ ಪ್ರಮಾಣ ಹೆಚ್ಚಿದೆ ಎಂದು ಎಚ್ಚರಿಸಿದೆ. ಇದೀಗ ನೆಟ್ಟಿಗರು ರೈತರು ಪ್ರತಿಭಟನೆಗಾಗಿ ತಮ್ಮ ಟ್ರಾಕ್ಟರ್‌ಗಳಿಗೆ ಗ್ರಿಲ್ ಅಳವಡಿಸಿದ್ದಾರೆ. ಪೊಲೀಸರು ದಾಳಿ ನಡೆಸಿದರೂ, ಕಳೆದ ಪ್ರತಿಭಟನೆ ವೇಳೆ ಟ್ರಾಕ್ಟರ್ ಪಲ್ಟಿಯಾಗಿ ಜೀವಹಾನಿಯಾಗಿರುವುದನ್ನು ತಪ್ಪಿಸಲು ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಇವೆಲ್ಲಾ ನೋಡಿದರೆ ರೈತರು ಶಾಂತಿಯುತ ಪ್ರತಿಭಟನೆಗೆ ತಯಾರಿ ಮಾಡಿಲ್ಲ, ಯುದ್ಧಕ್ಕೆ ರೆಡಿಯಾಗಿದ್ದಾರೆ. ಶಾಂತಿಯುತ ಪ್ರತಿಭಟನೆ ಮಾಡಿ ಮಾತುಕತೆ ಮೂಲಕ ಬೇಡಿಕೆ ಈಡೇರಿಸಿಕೊಳ್ಳುವುದಕ್ಕಿಂತ ಯುದ್ಧಕ್ಕೆ ಇಳಿದಿದ್ದಾರೆ. ರೈತರ ಪ್ರತಿಭಟನೆ, ಬೇಡಿಕೆ ಹೆಸರಿಗೆ ಮಾತ್ರ, ಅಸಲಿಯತ್ತು ಬೇರೆ ಇದೆ ಎಂದು ಟ್ವೀಟ್ ಮೂಲಕ ಹಲವರು ಆಕ್ರೋಶ ಹೊರಹಾಕಿದ್ದಾರೆ. 

6 ತಿಂಗಳ ಗುರುದ್ವಾರದ ಆಹಾರ ಶೇಖರಣೆ, ರೈತ ಪ್ರತಿಭಟನೆ ಅಪಾಯ ಎಚ್ಚರಿಸಿದ ಗುಪ್ತಚರ ಇಲಾಖೆ!

ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ಟ್ರಾಕ್ಟರ್‌ಗಲಿಗೆ ಟೈಯರ್ ಹಾಕಿದ್ದಾರೆ. ಮಾಡಿಫಿಕೇಶನ್ ಮಾಡಿದ್ದಾರೆ. ತಂತಿ ಬೇಲಿಗಳನ್ನು ದಾಟಿ ಸಾಗಲು, ಬ್ಯಾರಿಕೇಡ್ ಮುರಿದು ಮುಂದೆಕ್ಕೆ ಸಾಗಲು ಟ್ರಾಕ್ಟರ್‌ಗಳನ್ನು ಮಾಡಿಫಿಕೇಶನ್ ಮಾಡಿದ್ದಾರೆ. ಈ ಪ್ರತಿಭಟನೆ ರೈತ ಸಮಸ್ಯೆಗಿಂತ ಸರ್ಕಾರ ಹಾಗೂ ಭಾರತ ವಿರುದ್ದ ವಿದೇಶಿ ಶಕ್ತಿಗಳ ಶಕ್ತಿ ಪ್ರದರ್ಶನವೇ ಹೆಚ್ಚಾಗಿದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. 

 

 

ಕನಿಷ್ಠ ಬೆಂಬಲ ಬೆಲೆ ಪಂಜಾಬ್ ಹಾಗೂ ಹರ್ಯಾಣ ಹೊರಗಿನ ರೈತರಿಗೆ ಹೆಚ್ಚಿನ ಸಹಾಯವಾಗಿಲ್ಲ. ಕನಿಷ್ಠ ಬೆಂಬಲ ಕುರಿತು ಈಗಾಗಲೇ ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆಗಳು ನಡೆಯುತ್ತಿದೆ. ಕೃಷಿ ಸಾಲ ಮನ್ನ, ಕಳೆಗಳನ್ನು ಸುಡಲು ಅನುಮತಿ ಸೇರಿದಂತೆ ಹಲವು ಬೇಡಿಕಗಳನ್ನು ರೈತರು ಮುಂದಿಟ್ಟಿದ್ದಾರೆ.  ಆದರೆ ರೈತರ ಬೇಡಿಕೆ ಕುರಿತು ಚರ್ಚಿಸುವ ಅಥವಾ ಶಾಂತಿಯುತ ಪ್ರತಿಭಟನೆ ಮೂಲಕ ಬೇಡಿಕೆ ಈಡೇರಿಸಿಕೊಳ್ಳುವ ಯಾವುದೇ ಪ್ರಯತ್ನಗಳು ಈ ರೈತ ಪ್ರತಿಭಟನೆಯಿಂದ ನಡೆಯುತ್ತಿಲ್ಲ. ಇದರ ಹಿಂದೆ ಬಹುದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಇಂದಿನಿಂದ ರೈತರ ಪ್ರತಿಭಟನೆ: 1 ತಿಂಗಳ ಕಾಲ ಸೆಕ್ಷನ್ 144 ಜಾರಿ, ಮೆರವಣಿಗೆ, ರಾಲಿಗೆ ನಿಷೇಧ


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು