6 ತಿಂಗಳ ಗುರುದ್ವಾರದ ಆಹಾರ ಶೇಖರಣೆ, ರೈತ ಪ್ರತಿಭಟನೆ ಅಪಾಯ ಎಚ್ಚರಿಸಿದ ಗುಪ್ತಚರ ಇಲಾಖೆ!

Published : Feb 13, 2024, 11:47 AM IST
6 ತಿಂಗಳ ಗುರುದ್ವಾರದ ಆಹಾರ ಶೇಖರಣೆ, ರೈತ ಪ್ರತಿಭಟನೆ ಅಪಾಯ ಎಚ್ಚರಿಸಿದ ಗುಪ್ತಚರ ಇಲಾಖೆ!

ಸಾರಾಂಶ

ಕಳೆದ ಬಾರಿ ನಡೆಸಿರುವ ರೈತ ಪ್ರತಿಭಟನೆಗಿಂತ ಈ ಬಾರಿಯ ಪ್ರತಿಭಟನೆ ಅಪಾಯ ಹೆಚ್ಚು ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಸಿದೆ. 6 ತಿಂಗಳಿನಿಂದ ಗುರುದ್ವಾರ, ಆಶ್ರಮಗಳ ಆಹಾರವನ್ನು ಪ್ರತಿಭಟನೆಗಾಗಿ ಶೇಖರಿಸಿಡಲಾಗಿದೆ. ಇದರ ಜೊತೆಗೆ ತಡೆಗೋಡಿ ಮುರಿದು ದೆಹಲಿ ಪ್ರವೇಶಿಸಲು ಎಲ್ಲಾ ತಯಾರಿ ಮಾಡಿದ್ದಾರೆ ಎಂದು ಇಲಾಖೆ ಎಚ್ಚರಿಸಿದೆ.

ದೆಹಲಿ(ಫೆ.13) ದಿಲ್ಲಿ ಚಲೋ ರೈತರ ಪ್ರತಿಭಟನೆ ಹಕ್ಕುಗಳ ಬೇಡಿಕೆಗಿಂತ ಶಕ್ತಿ ಪ್ರದರ್ಶನ ಹಾಗೂ ಭಾರತವನ್ನು ಜಾಗತಿಕ ಮಟ್ಟದಲ್ಲಿ ರೈತ ವಿರೋಧಿ ಎಂದು ತೋರಿಸುವ ಪ್ರಯತ್ನವೂ ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಲೋಕಸಭಾ ಚುನಾವಣ ಸಮೀಪದಲ್ಲಿ ಆರಂಭಗೊಂಡಿರುವ ಎರಡನೇ ಬಾರಿಯ ರೈತ ಪ್ರತಭಟನೆಯ ಅಪಾಯನ್ನು ಗುಪ್ತಚರ ಇಲಾಖೆ ಎಚ್ಚರಿಸಿದೆ. ಈ ಬಾರಿಯ ರೈತ ಪ್ರತಿಭಟನೆಗೆ ಕಳೆದೊಂದು ವರ್ಷಕ್ಕಿಂತ ಹೆಚ್ಚಿನ ಸಮಯ ತಯಾರಿಗಳು ನಡೆದಿದೆ. ಕಳೆದ 6 ತಿಂಗಳಿಂದ ಗುರುದ್ವಾರ, ಆಶ್ರಮದ ಆಹಾರವನ್ನು ಶೇಖರಿಸಿಟ್ಟು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಬ್ಯಾರಿಕೇಡ್, ತಡೆಗೋಡೆ ಮುರಿದು ದೆಹಲಿ ಒಳ ನುಗ್ಗಿ ಅವಾಂತರ ಸೃಷ್ಟಿಸಲು ರೈತ ಪ್ರತಿಭಟನಾಕಾರರು ಮಾಡುತ್ತಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.

200ಕ್ಕೂ ಹೆಚ್ಚು ರೈತ ಸಂಘಟನೆಗಳು ಹೋರಾಟಲ್ಲಿ ಪಾಲ್ಗೊಂಡಿದೆ. ಒಂದು ವರ್ಷದಿಂದ ತಮ್ಮ ಟ್ರಾಕ್ಟರ್ ಸೇರಿದಂತೆ ಇತರ ವಾಹನಗಳನ್ನು ಪ್ರತಿಭಟನೆ ತಕ್ಕಂತೆ ಮಾಡಿಫಿಕೇಶನ್ ಮಾಡಲಾಗಿದೆ. ಪೊಲೀಸರು ದಾಳಿ ಮಾಡಿದರೆ ಟ್ರಾಕ್ಟರ್ ಚಲಾಯಿಸುವ ಪ್ರತಿಭಟನಾ ನಿರತ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಕಬ್ಬಿಣದ ಗ್ರಿಲ್ ಅಳವಡಿಸಿದ್ದಾರೆ. ರೈತರು ಪ್ರತಿಭಟನೆ ಹೆಸರಿನಲ್ಲಿ ಸಂಘರ್ಷಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಇದು ಅತ್ಯಂತ ಅಪಾಯಕಾರಿ ಪ್ರತಿಭಟನೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.

ದೆಹಲಿಯಲ್ಲಿ ಇಂದಿನಿಂದ ರೈತರ ಪ್ರತಿಭಟನೆ: 1 ತಿಂಗಳ ಕಾಲ ಸೆಕ್ಷನ್ 144 ಜಾರಿ, ಮೆರವಣಿಗೆ, ರಾಲಿಗೆ ನಿಷೇಧ

ಈಗಾಗಲೇ ಪ್ರತಿಭಟನಾ ನಿರತ ರೈತರು ದೆಹಲಿ ಹೊರವರ್ತಲು ತಲುಪಿದ್ದಾರೆ. ಸಿಂಘೂರು ಗಡಿ ಬಳಿ ಪೊಲೀಸರು ಬ್ಯಾರಿಕೇಟ್, ಕಾಂಕ್ರೀಟ್ ತಡೆಗೋಡೆಗಳ ಮೂಲಕ ತಡೆದಿದ್ದಾರೆ. ಇದೀಗ ಪ್ರತಿಭಟನಾ ನಿರತ ರೈತರು ಕಣಿವೆ, ಸೇರಿದಂತೆ ಇತರ ಸ್ಥಳಗಳ ಮೂಲಕ ದೆಹಲಿ ಒಳ ಪ್ರವೇಶಿಸಲು ತಯಾರಿ ನಡೆಸಿದ್ದಾರೆ. ತಡೆಗೋಡೆಯಾಗಿ ಹಾಕಿರುವ ದೊಡ್ಡ ಗಾತ್ರದ ಕಾಂಕ್ರೀಟ್ ತೆರವುಗೊಳಿಸಲು ಬುಲ್ಡೋಜರ್ ಜೊತೆ ಆಗಮಿಸಿದ್ದಾರೆ.

1,500ಕ್ಕೂ ಹೆಟ್ಟು ಟ್ರಾಕ್ಟರ್, 500ಕ್ಕೂ ಹೆಟ್ಟು ವಾಹನಗಳನ್ನು ರೈತರ ಪ್ರತಿಭಟನೆಗೆ ಮಾಡಿಫಿಕೇಶನ್ ಮಾಡಿದ್ದಾರೆ. ಈ ವಾಹನಗಳಲ್ಲಿ ಗುರುದ್ವಾರ, ಆಶ್ರಮಗಳಿಂದ ಸಂಗ್ರಹಿಸಿರುವ ಆಹಾರ ಧಾನ್ಯಗಳನ್ನು ಇಡಲಾಗಿದೆ. ರೈತ ಪ್ರತಿಭಟನೆಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ. ಇದಕ್ಗಾಗಿ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಕಳೆದ ಬಾರಿಯಿಂದ ಈ ಬಾರಿಯೂ ವ್ಯವಸ್ಥಿತವಾಗಿ ವಿದೇಶಗಳಿಂದ ಹಣ ಸಂದಾಯವಾಗಿದೆ ಎಂದು ಗುಪ್ತಚರ ಇಲಾಖೆ ಸೂಚಿಸಿದೆ.

ಅನ್ನದಾತರ ಬೃಹತ್‌ ಪ್ರತಿಭಟನೆ: ಕರ್ನಾಟಕದ 70 ರೈತರು ಮಧ್ಯಪ್ರದೇಶದಲ್ಲಿ ವಶ

ರೈತ ಪ್ರತಿಭಟನೆ  ಬ್ಯಾರಿಕೇಡ್ ಒಡೆದೆ ದೆಹಲಿ ಒಳಪ್ರವೇಶಿಸಿದರೆ ಅತೀ ದೊಡ್ಡ ಸಂಗ್ರಾಮಕ್ಕೆ ಕಾರಣವಾಗಲಿದೆ. ಹೀಗಾಗಿ ಅತೀವ ಎಚ್ಚರಿಕೆವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಗುಪ್ತಚರ ಇಲಾಖೆ ಸೂಚನೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತ ಎಂದಿಗೂ ಶಾಂತಿ ಪರ : ಪುಟಿನ್‌ಗೆ ಮೋದಿ
ಇಂಡಿಗೋ ಸಮಸ್ಯೆ : ಏರ್‌ಲೈನ್‌ಗಳಿಗೆ ವಿಧಿಸಿದ್ದ ಕಠಿಣ ಆದೇಶ ರದ್ದು