ಟೆಲಿಗ್ರಾಂನಲ್ಲೊಂದು '350 ಸೀಕ್ರೆಟ್ ವಿಡಿಯೋ' ಜಾಲ: ಬಯಲಾಯ್ತು ಟೆಕ್ಕಿ ಕರಾಳ ದಂಧೆ

Published : May 20, 2026, 06:41 PM IST
Telegram

ಸಾರಾಂಶ

ಉತ್ತರ ಪ್ರದೇಶದಲ್ಲಿ, ಟೆಲಿಗ್ರಾಂ ಮೂಲಕ ಅಪ್ರಾಪ್ತರನ್ನು ಗುರಿಯಾಗಿಸಿ ಅಶ್ಲೀಲ ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದ ಟೆಕ್ಕಿಯನ್ನು ಬಂಧಿಸಲಾಗಿದೆ. AI-ರಚಿತ ವಿಡಿಯೋವೊಂದರ ಬಗ್ಗೆ ದೂರು ಬಂದಾಗ ಈ ಜಾಲ ಬೆಳಕಿಗೆ ಬಂದಿದ್ದು, ಆರೋಪಿಯ ಖಾತೆಯಲ್ಲಿ ಕೋಟ್ಯಂತರ ರೂಪಾಯಿ ಪತ್ತೆಯಾಗಿದೆ.

ಲಕ್ನೋ: ಉತ್ತರ ಪ್ರದೇಶದಿಂದ ಅಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಟೆಲಿಗ್ರಾಂ ಮೂಲಕ ಅಶ್ಲೀಲ ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದ ಟೆಕ್ಕಿಯೋರ್ವನನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಹರ್ದೋಯಿ ಪಟ್ಟಣದಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಇಂಜಿನೀಯರ್ ವಿಡಿಯೋ ಮಾರಾಟ ನೆಟ್‌ವರ್ಕ್ ರಚನೆ ಮಾಡಿದ್ದನು. 350 ರೂಪಾಯಿ ಪಡೆದುಕೊಂಡು ವಿಡಿಯೋ ಮಾರಾಟ ಮಾಡುತ್ತಿದ್ದನು. ಆರೋಪಿಯ ಟೆಲಿಗ್ರಾಂ ಚಾನೆಲ್‌ನನ್ನು ಅತ್ಯಧಿಕ ಅಪ್ರಾಪ್ತರು ಫಾಲೋ ಮಾಡುತ್ತಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಓರ್ವ ಯುವಕ ಈ ಚಾನೆಲ್‌ನಲ್ಲಿ ತನ್ನದೇ AI ರಚಿತ ಆಶ್ಲೀಲ ವಿಡಿಯೋ ನೋಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಯನ್ನು ಪ್ರಯಾಗರಾಜ್ ನಿವಾಸಿ ಬಿಟೆಕ್ ಪದವೀಧರ ವಿಕಾಸ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿ ಸೋಶಿಯಲ್ ಮೀಡಿಯಾದಲ್ಲಿ ಲಭ್ಯವಿರೋ ಅಶ್ಲೀಲ ವಿಡಿಯೋಗಳ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುತ್ತಿದ್ದನು. ನಂತರ ಗೂಗಲ್ ಲೆನ್ಸ್ ಮೂಲಕ ವಿಡಿಯೋಗಳ ಮೂಲ ಪತ್ತೆ ಮಾಡುತ್ತಿದ್ದನು. ನಂತರ ಈ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಂಡು ತನ್ನ ಟೆಲಿಗ್ರಾಂ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದನು. ತನ್ನ ಚಾನೆಲ್ ಸಬ್‌ಸ್ಕ್ರೈಬ್ ಮಾಡಿಕೊಂಡವರಿಗೆ ಅಶ್ಲೀಲ ವಿಡಿಯೋ ನೋಡುವ ಅವಕಾಶ ನೀಡುತ್ತಿದ್ದನು.

ಅಪ್ರಾಪ್ತರೇ ಆರೋಪಿಯ ಟಾರ್ಗೆಟ್!

ಆರೋಪಿ 12 ರಿಂದ 17 ವರ್ಷದ ಅಪ್ರಾಪ್ರರನ್ನೇ ಟಾರ್ಗೆಟ್ ಮಾಡುತ್ತಿದ್ದನು. ಕೆಲ ಮಕ್ಕಳು ನಿರಂತರವಾಗಿ ಆರೋಪಿಯ ಟೆಲಿಗ್ರಾಂ ಚಾನೆಲ್ ಜೊತೆ ಸಕ್ರಿಯರಾಗಿದ್ದು, ಹಣ ಪಾವತಿಸಿ ಅಶ್ಲೀಲ ವಿಡಿಯೋಗಳನ್ನು ವೀಕ್ಷಣೆ ಮಾಡುತ್ತಿದ್ರು ಎಂಬ ಮಾಹಿತಿ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

ಈ ಪ್ರಕರಣ ತನಿಖೆ ಆರಂಭದಲ್ಲಿ ಪೊಲೀಸರು ಆರೋಪಿಯ ಟೆಲಿಗ್ರಾಂ ಚಾನೆಲ್‌ ಸಬ್‌ಸ್ಕ್ರೈಬ್ ಮಾಡಿ, ಅಲ್ಲಿರುವ ವಿಡಿಯೋ ಡೌನ್‌ಲೋಡ್ ಮಾಡಲು ಪ್ರಯತ್ನಿಸಿದಾಗ ಅಡ್ಮಿನ್ ಮೂಲಕ 350 ರೂಪಾಯಿ ಪಾವತಿಸಬೇಕು ಎಂಬ ಮೆಸೇಜ್ ಬಂದಿದೆ. ಈ ವೇಳೆ ಆರೋಪಿ ತನ್ನದೇ ಹೆಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯ ಮಾಹಿತಿ ಶೇರ್ ಮಾಡಿಕೊಂಡಿದ್ದಾನೆ. ನಂತರ ಪೊಲೀಸರು ಸೈಬರ್ ವಿಭಾಗದ ಸಹಾಯದಿಂದ ಆರೋಪಿ ವಿಕಾಸ್ ಸಿಂಗ್‌ನನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂರು ಬ್ಯಾಂಕ್ ಖಾತೆ- ಎರಡೂವರೆ ಕೋಟಿ ಹಣ ಪತ್ತೆ

ಪೊಲೀಸರ ತನಿಖೆಯಲ್ಲಿ ಆರೋಪಿ ಮೂರು ಬ್ಯಾಂಕ್ ಖಾತೆಗಳ ಮೂಲಕ ವ್ಯವಹರಿಸುತ್ತಿದ್ದನು. ಈ ಮೂರು ಖಾತೆಗಳಲ್ಲಿ ಒಟ್ಟು 2.5 ಕೋಟಿಯಷ್ಟು ಹಣ ಪತ್ತೆಯಾಗಿದೆ. ಟೆಲಿಗ್ರಾಂ ಮೂಲಕ ಅಶ್ಲೀಲ ವಿಡಿಯೋಗಳನ್ನು ಮಾರಾಟ ಮಾಡಿ ಇಷ್ಟೊಂದು ಹಣ ಸಂಪಾದನೆ ಮಾಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆರೋಪಿ Ddose007.netoffitial” ಮತ್ತು “Ddose007.netALL” ಸೇರಿದಂತೆ ಹಲವು ಟೆಲಿಗ್ರಾಂ ಚಾನೆಲ್‌ಗಳನ್ನು ಹೊಂದಿದ್ದು, ಲ್ಯಾಪ್‌ಟಾಪ್ ಮತ್ತು ಮೊಬೈಲ್ ಮೂಲಕ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದನು. ಪೊಲೀಸರು ಆರೋಪಿ ಬಳಸುತ್ತಿದ್ದ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಲಕ್ಕುಂಡಿ ರಹಸ್ಯ ಭೇದಿಸಲು ಇಸ್ರೋ ಎಂಟ್ರಿ: ಸ್ಯಾಟಲೈಟ್ ಕಣ್ಣಲ್ಲಿ ನೂರೊಂದು ದೇಗುಲಗಳ ಹುಡುಕಾಟ!

ಇಡೀ ಪ್ರಕರಣ AI ಆಧಾರಿತ ಆಶ್ಲೀಲ ವಿಡಿಯೋಗಳಿಂದ ಬೆಳಕಿಗೆ ಬಂದಿದೆ. ಯುವಕನೋರ್ವ ಈ ಚಾನೆಲ್‌ನಲ್ಲಿ ತನ್ನ ಮಾರ್ಫ್ ವಿಡಿಯೋ ನೋಡಿದ್ದಾನೆ. ಕೂಡಲೇ ಈ ಯುವಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ತನಿಖೆ ಆರಂಭಿಸಿದ ಪೊಲೀಸರು ವಿಡಿಯೋ ಮೂಲ ಪತ್ತೆ ಮಾಡಿದಾಗ ವಿಕಾಸ್ ಸಿಂಗ್ ಸಿಕ್ಕಿದ್ದಾನೆ. ಸದ್ಯ ಆರೋಪಿಯ ಬ್ಯಾಂಕ್ ವ್ಯವಹಾರಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: AI ಫೋಟೋ ಬಳಸಿ 1 ಕೋಟಿ ಬಿಲ್ ಕ್ಲಿಯರ್ ಮಾಡಿಕೊಂಡ ಗುತ್ತಿಗೆದಾರ; ಅಪಾಯದಲ್ಲಿ 12 ಗ್ರಾಮ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಹದಲ್ಲಿ 51 ಗಾಯ, ಸಿಗರೇಟ್‌ನಿಂದ ಸುಟ್ಟ ಗುರುತು: ಕೇರಳದಲ್ಲಿ ಮಲತಂದೆಯ ಕ್ರೌರ್ಯಕ್ಕೆ ಸಾವು ಕಂಡ ಒಂದೂವರೆ ವರ್ಷದ ಮಗು!
ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚಾರಕ್ಕೂ ಮುನ್ನ ಗಮನಿಸಿ: ಜೂನ್ 15 ರಿಂದ ಜಾರಿಯಾಗಲಿದೆ ಮಾನ್ಸೂನ್‌ ವೇಳಾಪಟ್ಟಿ