ಮೋದಿ ಕೊಟ್ಟ ಗಿಫ್ಟ್‌ನಿಂದ ಭಾರತದಲ್ಲಿ ಬದಲಾಯ್ತು ಪಾರ್ಲೆ ಲಕ್, ಮೆಲೋಡಿ ಔಟ್ ಆಫ್ ಸ್ಟಾಕ್

Published : May 20, 2026, 03:44 PM IST
Melody Toffee Shortage

ಸಾರಾಂಶ

ಪ್ರಧಾನಿ ಮೋದಿ ಇಟಲಿ ಪ್ರಧಾನಿ ಮೆಲೋನಿಗೆ ಮೆಲೋಡಿ ಚಾಕೋಲೇಟ್ ಗಿಫ್ಟ್ ನೀಡಿದ ಬೆನ್ನಲ್ಲೇ ಭಾರತದಲ್ಲಿ ಮಹತ್ವದ ಬದಲಾವಣೆಗಳಾಗಿದೆ. ಪ್ರಮುಖವಾಗಿ ಪಾರ್ಲೆ ಜಿ ಕಂಪನಿಯ ಮೆಲೋಡಿ ಚಾಕೋಲೇಟ್ ಬ್ಲಿಂಕಿಟ್ ಸೇರಿದಂತೆ ಹಲವು ಇ ಕಾಮರ್ಸ್ ತಾಣದಲ್ಲಿ ಖಾಲಿಯಾಗಿದೆ.

ನವದೆಹಲಿ (ಮೇ.20) ಪ್ರಧಾನಿ ನರೇಂದ್ರ ಮೋದಿಯ ವಿದೇಶಿ ಪ್ರವಾಸದಲ್ಲಿ ಇಟಲಿ ಭೇಟಿ ಭಾರಿ ಸಂಚಲನ ಸೃಷ್ಟಿಸಿದೆ. ಪ್ರಧಾನಿ ಜಾರ್ಜಿಯಾ ಮೆಲೋನಿ ಭೇಟಿ, ದ್ವಿಪಕ್ಷೀಯ ಮಾತುಕತೆಗಳ ಫೋಟೋಗಳು ಭಾರಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಮೋದಿ ಹಾಗೂ ಮೆಲೋನಿ ಭೇಟಿಯ ವಿಡಿಯೋ ಒಂದು ಭಾರಿ ಸದ್ದು ಮಾಡಿತ್ತು. ಮೋದಿ ಇಟಲಿ ಪ್ರಧಾನಿ ಮೆಲೋನಿಗೆ ಪಾರ್ಲೆಜಿ ಅವರ ಮೆಲೋಡಿ ಚಾಕಲೋಟ್ ಉಡುಗೊರೆ ನೀಡಿದ್ದರು. ಮೋದಿ ಹಾಗೂ ಮೆಲೋನಿ ಭೇಟಿಯನ್ನು ಮೊದಲು ಮೆಲೋಡಿ ಎಂದು ಕರೆದಿದ್ದೆ ಇದೇ ಜಾರ್ಜಿಯಾ ಮೆಲೋನಿ. ಹೀಗಾಗಿ ಮೆಲೋಡಿ ಚಾಕೋಲೇಟ್ ಉಡುಗೊರೆ ಭಾರಿ ವಿಶೇಷ ಎಂದು ಮೆಲೋನಿ ಬಣ್ಣಿಸಿದ್ದರು. ಮೋದಿಯ ಉಡುಗೊರೆ ಬೆನ್ನಲ್ಲೇ ಪಾರ್ಲೆ ಕಂಪನಿ ಲಕ್ ಬದಲಾಗಿದೆ. ಪಾರ್ಲೆ ಸ್ಟಾಕ್ ರಾಕೆಟ್ ವೇಗದಲ್ಲಿ ಏರಿಕೆಯಾಗಿದೆ. ಇತ್ತ ಬ್ಲಿಂಕಿಟ್ ಸೇರಿದಂತೆ ಇತರ ಇ ಕಾಮರ್ಸ್ ಪ್ಲಾಟ್‌‌ಫಾರ್ಮ್‌ಗಳಲ್ಲಿ ಮೆಲೋಡಿ ಚಾಕೋಲೆಟ್ ಔಟ್ ಆಫ್ ಸ್ಟಾಕ್ ಆಗಿದೆ.

ಬ್ಲಿಂಕಿಟ್‌ನಲ್ಲಿ ಮೆಲೋಡಿ ಖಾಲಿ ಖಾಲಿ

ಬ್ಲಿಂಕಿಟ್‌ನಲ್ಲಿ ಮೆಲೋಡಿ ಚಾಕೋಲೇಟ್ ಖಾಲಿಯಾಗಿದೆ. ಮೋದಿ ಮೆಲೋಡಿ ಚಾಕೋಲೇಟ್‌ನ್ನು ಜಾರ್ಜಿಯಾ ಮೆಲೋನಿಗೆ ಗಿಫ್ಟ್ ಕೊಟ್ಟು ವಿಡಿಯೋ ಮಾಡಿದ ಬೆನ್ನಲ್ಲೇ ಭಾರತದಲ್ಲಿ ಮೆಲೋಡಿ ಚಾಕೋಲೇಟ್ ಖರೀದಿ ಭರಾಟೆ ಜೋರಾಗಿದೆ. ಸಣ್ಣ ಸಣ್ಣ ಅಂಗಡಿಗಲ್ಲಿ ಮೆಲೋಡಿ ಚಾಕೋಲೇಟ್ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇತ್ತ ಬ್ಲಿಂಕಿಟ್ ಸೇರಿದಂತೆ ಹಲವು ಆನ್‌ಲೈನ್ ಶಾಪಿಂಗ್‌ಗಳಲ್ಲಿ ಮೆಲೋಡಿ ಚಾಕೋಲೇಟ್ ಖಾಲಿಯಾಗಿದೆ.

50 ರೂಪಾಯಿ ಬೆಲೆಯ 139 ಗ್ರಾಂ ಸಣ್ಣ ಪ್ಯಾಕ್ ಹಾಗೂ 100 ರೂಪಾಯಿ ಬೆಲೆಯ 276 ಗ್ರಾಂ ತೂಕದ ಎರಡೂ ಪ್ಯಾಕೆಟ್‌ಗಳೂ ಆರ್ಡರ್ ಮಾಡಲು ಲಭ್ಯವಿಲ್ಲ. ಎಲ್ಲವೂ ಖಾಲಿಯಾಗಿದೆ. ಅಷ್ಟರ ಮಟ್ಟಿಗೆ ಮೋದಿಯ ಮೆಲೋಡಿ ಚಾಕೋಲೇಟ್ ಭಾರತದಲ್ಲಿ ಬಿರುಗಾಳಿ ಬೀಸಿದೆ.

ಇತ್ತ ಷೇರುಮಾರುಕಟ್ಟೆಯಲ್ಲೂ ಪಾರ್ಲೆ ಷೇರುಗಳ ಮೌಲ್ಯ ಏರಿಕೆ ಕಂಡಿದೆ. ಪಾರ್ಲೆ ಮೆಲೋಡಿ ಮಾತ್ರವಲ್ಲ, ಪಾರ್ಲೆ ಇತರ ಉತ್ಪನ್ನಗಳಿಗೂ ಭಾರಿ ಬೇಡಿಕೆ ಬಂದಿದೆ. ಮೋದಿ ಮೆಲೋಡಿ ವಿಡಿಯೋ ಒಂದೆಡೆ ವೈರಲ್ ಆಗುತ್ತಿದ್ದರೆ, ಇತ್ತ ಮೆಲೋಡಿ ಚಾಕೋಲೇಟ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಮೋದಿ ಮೇನಿಯಾದಲ್ಲಿ ಟ್ರೆಂಡ್ ಸೃಷ್ಟಿ

ಪ್ರಧಾನಿ ಮೋದಿ ಯಾವುದೇ ಉತ್ಪನ್ನ, ಯಾವುದೇ ಪ್ರದೇಶಕ್ಕೆ ಭೇಟಿ ನೀಡಿದರೆ ಸಾಕು ಟ್ರೆಂಡ್ ಸೃಷ್ಟಿಯಾಗುತ್ತದೆ. ಭಾರತದ ಮಾಲ್ಡೀವ್ಸ್ ಜಟಾಪಟಿ ನಡುವೆ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ತೆರಳಿ ಸುಂದರ ಕಡಲ ಕಿನಾರೆಯಲ್ಲಿ ಕುಳಿತು, ವಿಹರಿಸುತ್ತಿರುವ ಫೋಟೋ ಹಂಚಿಕೊಂಡಿದ್ದರು. ಮರು ಕ್ಷಣದಲ್ಲೇ ಲಕ್ಷದ್ವೀಪಕ್ಕೆ ಪ್ರವಾಸಿಗರ ಸಂಖ್ಯೆ ಭಾರಿ ಏರಿಕೆಯಾದರೆ, ಮಾಲ್ಡೀವ್ಸ್ ಪ್ರವಾಸೋದ್ಯಮ ನೆಲಕಚ್ಚಿತ್ತು.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

AI ಫೋಟೋ ಬಳಸಿ 1 ಕೋಟಿ ಬಿಲ್ ಕ್ಲಿಯರ್ ಮಾಡಿಕೊಂಡ ಗುತ್ತಿಗೆದಾರ; ಅಪಾಯದಲ್ಲಿ 12 ಗ್ರಾಮ
ಷೇರುದಾರರಿಗೆ ಬಂಪರ್! ದಾಖಲೆಯ ₹2,998 ಕೋಟಿ ಆದಾಯ, ₹724 ಕೋಟಿ ಲಾಭ ಗಳಿಸಿದ ಬಿಎಲ್‌ಎಸ್‌ ಇಂಟರ್‌ನ್ಯಾಷನಲ್