
ನವದೆಹಲಿ (ನ.21) : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ರೋಜಗಾರ್ ಮೇಳದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ಹೊಸದಾಗಿ ನೇಮಕಗೊಂಡ ನೌಕರರಿಗೆ 71 ಸಾವಿರ ಮಂಗಳವಾರ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಅಲ್ಲದೇ ನೇಮಕಗೊಂಡ ನೌಕರರಿಗೆ ಆನ್‌ಲೈನ್‌ನಲ್ಲಿ ತರಬೇತಿ ನೀಡುವ ‘ಕರ್ಮಯೋಗಿ ಪ್ರಾರಂಭ’ ಹೊಸ ಪ್ರಕ್ರಿಯೆಗೂ ಮೋದಿ ಚಾಲನೆ ನೀಡಲಿದ್ದಾರೆ.
ಕೇಂದ್ರ ಸರ್ಕಾರ ಇನ್ನು 1 ವರ್ಷದಲ್ಲಿ 10 ಲಕ್ಷ ಉದ್ಯೋಗಿಗಳ ನೇಮಕ ಗುರಿ ಹೊಂದಿದೆ. ಈ ನಿಮಿತ್ತ ಕಳೆದ ಅಕ್ಟೋಬರ್‌ನಲ್ಲಿ ಸಹ ಮೋದಿ ನೇಮಕಗೊಂಡ 75 ಸಾವಿರ ಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದ್ದರು. ಇದರ 2ನೇ ಭಾಗವಾಗಿ ಮಂಗಳವಾರ 71 ಸಾವಿರ ಜನರ ನೇಮಕ ಪತ್ರವನ್ನು ಆನ್‌ಲೈನ್‌ನಲ್ಲಿ ಮೋದಿ ಸಾಂಕೇತಿಕವಾಗಿ ವಿತರಿಸಲಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುವ ಸಮಾರಂಭದಲ್ಲಿ ವ್ಯಕ್ತಿಗತವಾಗಿ ನೇಮಕ ಪತ್ರ ನೀಡಲಾಗುತ್ತದೆ. ಶಿಕ್ಷಕ, ಅಧ್ಯಾಪಕ, ವೈದ್ಯ, ನರ್ಸ್ ಹಾಗೂ ವೈದ್ಯಕೀಯ ಸಂಬಂಧಿಸಿದ ಕ್ಷೇತ್ರಗಳಲ್ಲಿ ನೇಮಕಾತಿ ನಡೆಯುತ್ತಿದೆ.
ಸೋಮನಾಥ ಸನ್ನಿಧಿಯಲ್ಲಿ ಮೋದಿ: ಮೂರು ದಿನಗಳಲ್ಲಿ 25 ರ‍್ಯಾಲಿ
ಕರ್ಮಯೋಗಿ ತರಬೇತಿ:
ಈ ನಡುವೆ, ನೇಮಕಗೊಂಡ ನೌಕರರಿಗೆ, ಜ್ಞಾನ, ಸಾಮರ್ಥ್ಯ ಹಾಗೂ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ‘ಕರ್ಮಯೋಗಿ ಪ್ರಾರಂಭ್’ ಎಂಬ ಆನ್‌ಲೈನ್ ತರಬೇತಿ ಕಾರ್ಯಕ್ರಮವೂ ಆರಂಭವಾಗಲಿದೆ. ಇವರು ಜಿಜಟಠಿka್ಟಞayಟಜಜಿ.ಜಟv ವೆಬ್‌ಸೈಟ್ ಸಹಾಯವನ್ನು ಪಡೆದು ಕೌಶಲ್ಯ ವೃದ್ಧಿಸಿಕೊಳ್ಳಬಹುದು ಎಂದು ಸರ್ಕಾರ ಹೇಳಿದೆ.
ಬಿಜೆಪಿ ಮೋದಿ ಹೆಸರಲ್ಲಿ ವೋಟು ಕೇಳೋದೇಕೆ?: ಅಮಿತ್ ಶಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ