ದೇಶದ 2023ರ ಪ್ರಮುಖ ರಜಾ ದಿನಗಳ ಪಟ್ಟಿ ಹೀಗಿದೆ ನೋಡಿ..

By BK AshwinFirst Published Nov 21, 2022, 6:27 PM IST
Highlights

2023 ರ ದೇಶದ ಹಲವು ರಾಜ್ಯಗಳಲ್ಲಿ ನೀಡುವ ಪ್ರಮುಖ ಸಾರ್ವತ್ರಿಕ ರಜಾ ದಿನಗಳು ಹಾಗೂ ರಾಷ್ಟ್ರೀಯ ಹಬ್ಬಗಳ ರಜಾ ದಿನಗಳ ವಿವರ ಇಲ್ಲಿದೆ ನೋಡಿ..

ಕರ್ನಾಟಕ (Karnataka) ರಾಜ್ಯ ಸರ್ಕಾರ (State Government) ಇಂದು, ನವೆಂಬರ್ 21, 2022 ರಂದು ಕರ್ನಾಟಕದ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು (Public Holiday List) ಬಿಡುಗಡೆ ಮಾಡಿದೆ. ಆದರೆ, ನಮ್ಮ ರಾಜ್ಯದಲ್ಲಿ ಇರುವ ರಜೆ ಎಲ್ಲ ರಾಜ್ಯಗಳಲ್ಲೂ ನೀಡುವುದಿಲ್ಲ. ಕೆಲವು ಹಬ್ಬಗಳು, ರಾಷ್ಟ್ರೀಯ ಹಬ್ಬಗಳ ದಿನ ದೇಶಾದ್ಯಂತ ಒಂದೇ ದಿನಗಳಲ್ಲೇ ಬರುತ್ತದೆ. ಆದರೆ, ಆಯಾಯ ರಾಜ್ಯಗಳಲ್ಲಿ ಕೆಲ ಹಬ್ಬಗಳಿಗೆ ಸಾರ್ವತ್ರಿಕ ರಜೆ (Public Holiday) ವಿಭಿನ್ನವಾಗಿರಬಹುದು. ನಮ್ಮ ರಾಜ್ಯದಲ್ಲಿ ನೀಡಿದ ಎಲ್ಲ ಹಬ್ಬಗಳಿಗೂ, ಇತರೆ ರಾಜ್ಯಗಳಲ್ಲೂ ರಜೆ ನೀಡುವುದಿಲ್ಲ. ಅಲ್ಲದೆ, ಅಲ್ಲಿನ ಕೆಲ ಪ್ರಮುಖ ಹಬ್ಬಗಳಿಗೆ ಆಯಾಯ ರಾಜ್ಯಗಳಲ್ಲಿ ರಜೆ ನೀಡಲಾಗುತ್ತದೆ. ಇನ್ನು, 2023 ರ ದೇಶದ ಹಲವು ರಾಜ್ಯಗಳಲ್ಲಿ ನೀಡುವ ಪ್ರಮುಖ ಸಾರ್ವತ್ರಿಕ ರಜಾ ದಿನಗಳು ಇಲ್ಲಿದೆ ನೋಡಿ..

  • ಜನವರಿ 1 - ಹೊಸ ವರ್ಷಾಚರಣೆ - ಹಲವು ರಾಜ್ಯಗಳಲ್ಲಿ ಸಾರ್ವತ್ರಿಕ ರಜೆ ನೀಡಲಾಗಿದೆ
  • ಜನವರಿ 14 - ಮಕರ ಸಂಕ್ರಾಂತಿ - ಕರ್ನಾಟಕ, ತೆಲಂಗಾಣ, ಗುಜರಾತ್ ಹಾಗೂ ಸಿಕ್ಕಿಂ
  • ಜನವರಿ 15 - ಪೊಂಗಲ್ - 4 ರಾಜ್ಯಗಳಲ್ಲಿ ರಜೆ
  • ಜನವರಿ 23 - ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜಯಂತಿ - 5 ರಾಜ್ಯಗಳಲ್ಲಿ ರಜೆ
  • ಜನವರಿ 26 - ಗಣರಾಜ್ಯೋತ್ಸವ - ರಾಷ್ಟ್ರೀಯ ರಜಾ ದಿನ
  • ಜನವರಿ 26 - ವಸಂತ ಪಂಚಮಿ - 4 ರಾಜ್ಯಗಳಲ್ಲಿ ರಜೆ
  • ಫೆಬ್ರವರಿ 5 - ಗುರು ರವಿದಾಸ್‌ ಜಯಂತಿ - 4 ರಾಜ್ಯಗಳು

ಇದನ್ನು ಓದಿ: 2023ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ: ವಿವರ ಇಲ್ಲಿದೆ..

  • ಫೆಬ್ರವರಿ 18 - ಮಹಾ ಶಿವರಾತ್ರಿ - ಕೆಲ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಡೆ ರಾಷ್ಟ್ರೀಯ ರಜೆ
  • ಮಾರ್ಚ್‌ 8 - ಕರ್ನಾಟಕ ಸೇರಿ ಕೆಲ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಡೆ ರಜೆ
  • ಮಾರ್ಚ್‌ 22 – ಯುಗಾದಿ - ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ರಜೆ
  • ಮಾರ್ಚ್‌ 30 - ರಾಮ ನವಮಿ - ಕರ್ನಾಟಕ ಸೇರಿ ಕೆಲ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಡೆ ರಾಷ್ಟ್ರೀಯ ರಜೆ
  • ಏಪ್ರಿಲ್ 4 - ಮಹಾವೀರ ಜಯಂತಿ -  ಕರ್ನಾಟಕ ಸೇರಿ 18 ರಾಜ್ಯಗಳಲ್ಲಿ ರಜೆ
  • ಏಪ್ರಿಲ್ 5 - ಬಾಬು ಜಗಜೀವನ ರಾಮ್‌ ಜಯಂತಿ - ಆಂಧ್ರ ಪ್ರದೇಶ, ತೆಲಂಗಾಣ
  • ಏಪ್ರಿಲ್ 7 - ಗುಡ್‌ ಫ್ರೈಡೇ - ಹರ್ಯಾಣ, ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಉಳಿದೆಡೆ ರಜೆ
  • ಏಪ್ರಿಲ್ 14 - ಅಂಬೇಡ್ಕರ್ ಜಯಂತಿ - ಕೆಲ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಡೆ ರಾಷ್ಟ್ರೀಯ ರಜೆ
  • ಏಪ್ರಿಲ್ 15 - ವಿಶು - ಕೇರಳ
  • ಏಪ್ರಿಲ್ 22 - ಇದುಲ್‌ ಫಿತರ್ - ರಾಷ್ಟ್ರೀಯ ರಜೆ
  • ಏಪ್ರಿಲ್ 22 - ಮಹರ್ಷಿ ಪರಶುರಾಮ ಜಯಂತಿ - 6 ರಾಜ್ಯಗಳಲ್ಲಿ
  • ಏಪ್ರಿಲ್ 23 - ಬಸವ ಜಯಂತಿ - ಕರ್ನಾಟಕ
  • ಮೇ 1 - ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ರಜೆ
  • ಮೇ 5 - ಬುದ್ಧ ಪೂರ್ಣಿಮಾ - 17 ರಾಜ್ಯಗಳಲ್ಲಿ ರಜೆ
  • ಜೂನ್ 4 - ಕಬೀರ್ ಜಯಂತಿ - 4 ರಾಜ್ಯಗಳಲ್ಲಿ ರಜೆ
  • ಜೂನ್ 29 - ಬಕ್ರೀದ್ - 5 ರಾಜ್ಯಗಳನ್ನು ಹೊರತುಪಡಿಸಿ ಉಳಿದೆಡೆ ರಜೆ
  • ಜುಲೈ 29 - ಮೊಹರಂ - ಕೆಲ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಡೆ ರಜೆ
  • ಆಗಸ್ಟ್‌ 15 - ಸ್ವಾತಂತ್ರ್ಯ ದಿನಾಚರಣೆ - ರಾಷ್ಟ್ರೀಯ ರಜೆ
  • ಆಗಸ್ಟ್‌ 16 - ಪಾರ್ಸಿ ರಾ ದಿನ - 4 ರಾಜ್ಯಗಳಲ್ಲಿ
  • ಆಗಸ್ಟ್ 31 - ರಕ್ಷಾ ಬಂಧನ - 8 ರಾಜ್ಯಗಳಲ್ಲಿ
  • ಸೆಪ್ಟೆಂಬರ್ 7 - ಜನ್ಮಾಷ್ಟಮಿ - ಕರ್ನಾಟಕ ಸೇರಿ ಕೆಲ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಡೆ ರಜೆ
  • ಸೆಪ್ಟೆಂಬರ್ 19 - ಗಣೇಶ ಚತುರ್ಥಿ -  ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ
  • ಸೆಪ್ಟೆಂಬರ್ 28 - ಈದ್‌ ಮಿಲಾದ್‌ - ಕೆಲ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಡೆ ರಜೆ
  • ಅಕ್ಟೋಬರ್ 2 - ಗಾಂಧಿ ಜಯಂತಿ - ರಾಷ್ಟ್ರೀಯ ರಜೆ
  • ಅಕ್ಟೋಬರ್ 14 - ಮಹಾಲಯ ಅಮಾವಾಸ್ಯೆ - ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ

ಇದನ್ನೂ ಓದಿ: Bank Holidays:ನವೆಂಬರ್ ನಲ್ಲಿ 10 ದಿನ ಬ್ಯಾಂಕಿಗೆ ರಜೆ; ಆರ್ ಬಿಐ ರಜಾಪಟ್ಟಿ ಹೀಗಿದೆ ನೋಡಿ

  • ಅಕ್ಟೋಬರ್ 21 - ಮಹಾ ಸಪ್ತಮಿ - 5 ರಾಜ್ಯಗಳಲ್ಲಿ
  • ಅಕ್ಟೋಬರ್ 22 - ಮಹಾ ಅಷ್ಟಮಿ -  11 ರಾಜ್ಯಗಳಲ್ಲಿ 
  • ಅಕ್ಟೋಬರ್ 23 - ಮಹಾ ನವಮಿ - 10 ಕ್ಕೂ ಹೆಚ್ಚು ರಾಜ್ಯಗಳಲ್ಲಿ
  • ಅಕ್ಟೋಬರ್ 24 - ಕೆಲ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಡೆ ರಾಷ್ಟ್ರೀಯ ರಜೆ
  • ಅಕ್ಟೋಬರ್ 28 - ಮಹರ್ಷಿ ವಾಲ್ಮೀಕಿ ಜಯಂತಿ - ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ
  • ನವೆಂಬರ್ 12 - ದೀಪಾವಳಿ - ಬಹುತೇಕ ರಾಜ್ಯಗಳಲ್ಲಿ ರಜೆ
  • ನವೆಂಬರ್ 13 - ದೀಪಾವಳಿ ರಜೆ - 7 ರಾಜ್ಯಗಳಲ್ಲಿ
  • ನವೆಂಬರ್ 15 - ಭಾಯಿ ದೂಜ್ - 5 ರಾಜ್ಯಗಳಲ್ಲಿ
  • ನವೆಂಬರ್ 19 - ಛತ್‌ ಪೂಜಾ - 4 ರಾಜ್ಯಗಳು
  • ನವೆಂಬರ್ 27 - ಗುರುನಾನಕ್‌ ಜಯಂತಿ - ದೇಶದ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ರಜೆ
  • ಡಿಸೆಂಬರ್ 25 - ಕ್ರಿಸ್‌ಮಸ್‌ - ರಾಷ್ಟ್ರೀಯ ರಜೆ
click me!