ಗ್ಯಾಸ್ ಸಿಲಿಂಡರ್ ಸ್ಫೋಟ : ನಾಲ್ವರು ಮಕ್ಕಳ ಸೇರಿ ಆರು ಜನ ಬಲಿ

By Anusha KbFirst Published Jan 12, 2023, 3:30 PM IST
Highlights

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು  ನಾಲ್ವರು ಮಕ್ಕಳು ಸೇರಿ ಒಂದೇ ಕುಟುಂಬದ ಆರು ಜನ ಬಲಿಯಾದ ಘಟನೆ ಹರ್ಯಾಣದ ಪಾಣಿಪತ್‌ನಲ್ಲಿ ನಡೆದಿದೆ.

ನವದೆಹಲಿ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು  ನಾಲ್ವರು ಮಕ್ಕಳು ಸೇರಿ ಒಂದೇ ಕುಟುಂಬದ ಆರು ಜನ ಬಲಿಯಾದ ಘಟನೆ ಹರ್ಯಾಣದ ಪಾಣಿಪತ್‌ನಲ್ಲಿ ನಡೆದಿದೆ. ಪಾಣಿಪತ್ ಜಿಲ್ಲೆಯ ಬಿಚ್ಪರಿ ಗ್ರಾಮದ ತೆಹ್ಸಿಲ್ ಕ್ಯಾಂಪ್‌ನ ಮನೆಯೊಂದರಲ್ಲಿ ಈ ಅವಘಡ ನಡೆದಿದೆ. ಪೊಲೀಸರ ಪ್ರಕಾರ ಸಿಲಿಂಡರ್‌ನಲ್ಲಿ ಕಾಣಿಸಿಕೊಂಡ ಸೋರಿಕೆಯಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಕುಟುಂಬವೇ ಬೆಂಕಿಗಾಹುತಿಯಾಗಿದೆ.  ಈ ಕುಟುಂಬವೂ ಪಶ್ಚಿಮ ಬಂಗಾಳದಿಂದ ವಲಸೆ ಬಂದು ಇಲ್ಲಿ ನೆಲೆಸಿತ್ತು. 

ಮನೆಯಲ್ಲಿ ವಾಸವಿದ್ದ ದಂಪತಿ ಹಾಗೂ ಅವರ ನಾಲ್ವರು ಮಕ್ಕಳು ಈ ದುರಂತದಲ್ಲಿ ಸಜೀವ ದಹನವಾಗಿದ್ದಾರೆ. 45 ವರ್ಷದ ಅಬ್ದುಲ್(Abdul), 40 ವರ್ಷ ಆತನ ಪತ್ನಿ ಹಾಗೂ ಅವರ 18 ಹಾಗೂ 16 ವರ್ಷದ ಇಬ್ಬರು ಹೆಣ್ಣು ಮಕ್ಕಳು ಹಾಗೂ 12 ಹಾಗೂ 10 ವರ್ಷದ ಇಬ್ಬರು ಗಂಡು ಮಕ್ಕಳು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ.  ಈ ದುರಂತದಲ್ಲಿ ಒಟ್ಟು ಆರು ಜನ ಮೃತಪಟ್ಟಿದ್ದಾರೆ. ದಂಪತಿ ಹಾಗೂ ಅವರ ನಾಲ್ವರು ಮಕ್ಕಳು ಮೃತರಾಗಿದ್ದಾರೆ ಎಂದು ತೆಹ್ಸಿಲ್ ಕ್ಯಾಂಪ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಫೂಲ್ ಕುಮಾರ್ (Phool Kumar) ಮಾಹಿತಿ ನೀಡಿದ್ದಾರೆ. ಈ ದಂಪತಿ ಪಾಣಿಪತ್‌ನಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 

ಯಾದಗಿರಿ: ದೋರನಹಳ್ಳಿ ಸಿಲಿಂಡರ್‌ ಸ್ಫೋಟ ಪ್ರಕರಣ, ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಸಿಎಂಗೆ ಮನವಿ

ಮನೆಯಿಂದ ತೀವ್ರವಾಗಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಕ್ಕಪಕ್ಕದ ನಿವಾಸಿಗಳು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸುವಷ್ಟರಲ್ಲಿ ಇವರೆಲ್ಲರೂ ಸುಟ್ಟು ಕರಕಲಾಗಿದ್ದರು.  ಕೆಲ ಪ್ರಾಥಮಿಕ ಮಾಹಿತಿ ಪ್ರಕಾರ, ಗ್ಯಾಸ್ ಸಿಲಿಂಡರ್‌ನಲ್ಲಿ ಮೊದಲು ಸೋರಿಕೆ (cylinder leakage) ಕಾಣಿಸಿಕೊಂಡಿದ್ದು, ನಂತರ ಸ್ಫೋಟ ಸಂಭವಿಸಿದೆ.  ಕುಟುಂಬದ ಸದಸ್ಯರು ಟೀ ಮಾಡಲು ಗ್ಯಾಸ್ ಹೊತ್ತಿಸಿದಾಗ ಈ ದುರಂತ ಸಂಭವಿಸಿದ್ದು,  ಈ ವೇಳೆ ಹೊಗೆಯಿಂದ ಉಸಿರುಕಟ್ಟಿಯೇ ಆರು ಜನ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ  ಎಂದು ಪಾಣಿಪತ್ (Panipat) ಡಿಎಸ್‌ಪಿ ಡಿ ಖರಾಬ್ (D Kharab) ಅವರು ಹೇಳಿದ್ದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. 

Udupi: ಗುಜರಿ ಅಂಗಡಿಯಲ್ಲಿ ಸಿಲಿಂಡರ್‌ ಸ್ಫೋಟಕ್ಕೆ ಕಾರಣವೇನು?

Haryana | As per the initial investigation an explosion happened due to a gas cylinder leakage. When a family member lit fire to make tea, an explosion took place. Six members died due to suffocation. Post-mortem report will clarify the cause of death: DSP D Kharab, Panipat pic.twitter.com/h3DodHSsO8

— ANI (@ANI)

 

click me!