ಉದ್ಘಾಟನೆಗೂ ಮುನ್ನವೇ ವಿಶಾಖಪಟ್ಟಣದಲ್ಲಿ ವಂದೇ ಭಾರತ್ ರೈಲಿಗೆ ಕಲ್ಲೆಸೆದ ಕಿಡಿಗೇಡಿಗಳು..!

By BK Ashwin  |  First Published Jan 12, 2023, 11:47 AM IST

ಪ್ರಧಾನಿ ಮೋದಿ ಈ ರೈಲನ್ನು ಜನವರಿ 19 ರಂದು ಗ್ರೀನ್‌ ಸಿಗ್ನಲ್‌ ನೀಡಬೇಕಿತ್ತು. ಆದರೆ, ಉದ್ಘಾಟನೆಗೂ ಮುನ್ನವೇ ಈ ರೀತಿ ಕಿಡಿಗೇಡಿಗಳು ಕಲ್ಲೆಸೆದಿರುವ ಘಟನೆ ನಡೆದಿದೆ.


ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಮೇಲೆ ಮತ್ತೊಂದು ಕಡೆ ಕಲ್ಲೆಸೆತ ಬಿದ್ದಿದೆ. ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಬುಧವಾರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲೇಟು ಬಿದ್ದಿದ್ದು, ಬೋಗಿಗಳಿಗೆ ಹಾನಿಯಾಗಿದೆ. ಪ್ರಧಾನಿ ಮೋದಿ ಈ ರೈಲನ್ನು ಜನವರಿ 19 ರಂದು ಗ್ರೀನ್‌ ಸಿಗ್ನಲ್‌ ನೀಡಬೇಕಿತ್ತು. ಆದರೆ, ಉದ್ಘಾಟನೆಗೂ ಮುನ್ನವೇ ಈ ರೀತಿ ಕಿಡಿಗೇಡಿಗಳು ಕಲ್ಲೆಸೆದಿರುವ ಘಟನೆ ನಡೆದಿದೆ. ಟ್ರಯಲ್‌ ರನ್‌ ಮುಗಿಸಿ ಮರ್ರಿಪೇಲಂನಿಂದ ವಿಶಾಖಪಟ್ಟಣ ರೈಲ್ವೆ ಸ್ಟೇಷನ್‌ಗೆ ವಂದೇ ಭಾರತ್‌ ಟ್ರೈನ್‌ ಹೋಗುವಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ರೈಲಿನ ಒಂದು ಬೋಗಿಯ ಗಾಜಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಈ ಘಟನೆ ಸಂಬಂಧ ಬುಧವಾರ ಮಾಹಿತಿ ನೀಡಿದ ವಿಭಾಗೀಯ ರೈಲ್ವೆ ಮ್ಯಾನೇಜರ್‌ (Divisional Railway Manager) ಅನೂಪ್‌ ಕುಮಾರ್ ಸೇತುಪತಿ (Anup Kumar Sethupathi), ಇಂದು ಸಂಜೆ 6.30 ರ ವೇಳೆಗೆ ವಿಶಾಖಪಟ್ಟಣ ರೈಲ್ವೆ ಸ್ಟೇಷನ್‌ನಿಂದ (Visakhapatnam Railway Station) ಕೋಚಿಂಗ್ ಕಾಂಪ್ಲೆಕ್ಸ್‌ಗೆ ವಂದೇ ಭಾರತ್‌ ರೈಲು (Vande Bharat Train) ಹೋಗುತ್ತಿದ್ದಾಗ ಅಪರಿಚಿತ ಸಮಾಜ ವಿರೋಧಿ ಕೆಲಸ ಮಾಡುವ ಕಿಡಿಗೇಡಿಗಳು ಕಲ್ಲು ಹೊಡೆಯುವ (Stones Pelting) ಮೂಲಕ ರೈಲಿಗೆ ಹಾನಿ ಮಾಡಿದ್ದಾರೆ. ಈ ಸಂಬಂಧ ರೈಲ್ವೆ ರಕ್ಷಣಾ ದಳ (Railway Protection Force) (ಆರ್‌ಪಿಎಫ್‌) (RPF) ಕೇಸ್‌ ದಾಖಲಿಸಿಕೊಂಡಿದ್ದು, ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ ಹಾಗೂ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದೂ ತಿಳಿಸಿದ್ದಾರೆ. 

Tap to resize

Latest Videos

ಇದನ್ನು ಓದಿ: ವಂದೇ ಭಾರತ್‌ಗೆ ಕಲ್ಲೆಸೆದ ಮೂವರು ಬಾಲಕರ ಬಂಧನ

Andhra Pradesh | Stones pelted on Vande Bharat train in Visakhapatnam which will be flagged off by PM Modi on Jan 19. Incident occurred during maintenance.

Glass pane of a coach of Vande Bharat express was damaged near Kancharapalem, Visakhapatnam. Further probe underway: DRM pic.twitter.com/JQLrHbwyJ4

— ANI (@ANI)

ನಿರ್ವಹಣೆ ಹಾಗೂ ಟ್ರಯಲ್‌ ರನ್‌ಗೆಂದು ವಿಶಾಖಪಟ್ಟಣ ರೈಲು ನಿಲ್ದಾಣದಲ್ಲಿದ್ದ ರೈಲಿಗೆ ಯಾರೋ ಕಲ್ಲು ಹೊಡೆದಿರುವ ಘಟನೆ ನಡೆದಿದೆ. ಚೆನ್ನೈನಿಂದ ಹೊಚ್ಚ ಹೊಸ ರೇಕ್‌ ಇಂದು ಆಗಮಿಸಿತ್ತು ಹಾಗೂ ಘಟನೆ ನಡೆದಾಗ ರೈಲಿನ ಟ್ರಯಲ್‌ ರನ್ ನಡೆಸಲಾಗುತ್ತಿತ್ತು. ಕತ್ತಲಾದ ಬಳಿಕ ಈ ಘಟನೆ ನಡೆದಿದೆ. ನಾವು ದುಷ್ಕರ್ಮಿಗಳನ್ನು ಪತ್ತೆಹಚ್ಚಲಾಗಿಲ್ಲ, ಆದರೆ ಈ ಘಟನೆ ಬಗ್ಗೆ ಸಿಸಿ ಕ್ಯಾಮರಾದಲ್ಲಿ ಪರಿಶೀಲಿಸುತ್ತಿದ್ದೇವೆ. ಅವರು ಈ ರೀತಿ ವರ್ತಿಸುತ್ತಿದ್ದರೆ ಇದು ದುರದೃಷ್ಟಕರ ಎಂದೂ ವಿಭಾಗೀಯ ರೈಲ್ವೆ ಮ್ಯಾನೇಜರ್‌ (ಡಿಆರ್‌ಎಂ) ಅನೂಪ್‌ ಕುಮಾರ್ ಸೇತುಪತಿ ಹೇಳಿದ್ದಾರೆ. 

ಪ್ರಧಾನಿ ಮೋದಿ ಈ ರೈಲನ್ನು ಸಿಕಂದರಾಬಾದ್‌ ರೈಲು ನಿಲ್ದಾಣದಿಂದ ಉದ್ಘಾಟನೆ ಮಾಡಬೇಕಿತ್ತು. ಸಿಕಂದರಾಬಾದ್‌ನಿಂದ ವಿಶಾಖಪಟ್ಟಣದವರೆಗೆ ಹೊಸ ವಂದೇ ಭಾರತ್ ರೈಲು ಕಾರ್ಯಾರಂಭ ಮಾಡಲಾಗುತ್ತದೆ. ಈ ಪ್ರಯಾಣಕ್ಕೆ ಸುಮಾರು 8 ಗಂಟೆ ಸಮಯ ತಗುಲುತ್ತದೆ ಎಂದು ತಿಳಿದುಬಂದಿದ್ದು, ವಾರಂಗಲ್‌, ಖಮ್ಮಂ, ವಿಜಯವಾಡ ಹಾಗೂ ರಾಜಮುಂಡ್ರಿ ರೈಲು ನಿಲ್ದಾಣಗಳಲ್ಲಿ ಈ ರೈಲು ಸ್ಟಾಪ್‌ಗಳನ್ನು ನೀಡುತ್ತದೆ. 

ಇದನ್ನೂ ಓದಿ: ಬರಲಿದೆ ಬೈಕ್‌ನಂತೆ ಬಾಗುವ ರೈಲು: 2025ಕ್ಕೆ ಟಿಲ್ಟಿಂಗ್ ರೈಲು ಆಗಮನ

ಕಳೆದ ವಾರ ಪಶ್ಚಿಮ ಬಂಗಾಳದಲ್ಲೂ ವಂದೇ ಭಾರತ್ ರೈಲೊಂದಕ್ಕೆ ಕಲ್ಲುಗಳನ್ನು ಎಸೆಯಲಾಗಿತ್ತು. ಹೌರಾದಿಂದ ನ್ಯೂ ಜಲ್ಪಾಯ್‌ಗುರಿಯನ್ನು ಸಂಪರ್ಕಿಸುವ ಈ ರೈಲು 4 ದಿನಗಳ ಹಿಂದಷ್ಟೇ ಹಸಿರು ನಿಶಾನೆ ಪಡೆದುಕೊಂಡಿತ್ತು.  ಜನವರಿ 2 ರಂದು ಹೌರಾದಿಂದ ನ್ಯೂ ಜಲ್ಪಾಯ್‌ಗುರಿಗೆ ಹೋಗುತ್ತಿದ್ದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಮಾಲ್ಡಾ ಬಳಿ ದುಷ್ಕರ್ಮಿಗಳು ಕಲ್ಲುಗಳನ್ನು ಎಸೆದಿದ್ದು, ಈ ವೇಳೆ ರೈಲಿನ ಗಾಜಿನ ಕಿಟಕಿಗಳು ಮುರಿದುಹೋಗಿದ್ದವು. ಬಿಹಾರದಲ್ಲಿ ವಂದೇ ಭಾರತ್‌ ರೈಲಿಗೆ ಕಲ್ಲೊಡೆದ ಮೂವರು ಬಾಲಕರನ್ನು ಕಳೆದ ವಾರ ಬಂಧಿಸಲಾಗಿತ್ತು. 

ಇದನ್ನೂ ಓದಿ: ವಂದೇ ಭಾರತ್ ರೈಲಿನ ಕಂಟಕ ನಿವಾರಿಸಲು 264 ಕೋಟಿ ರೂಪಾಯಿ ಖರ್ಚು!

click me!