ಬೇರ್ಪಟ್ಟ ಚಿರತೆ ಮರಿಯನ್ನು ತಾಯಿಯೊಂದಿಗೆ ಸೇರಿಸಿದ ಅರಣ್ಯ ಸಿಬ್ಬಂದಿ

Published : Mar 30, 2022, 10:41 AM IST
ಬೇರ್ಪಟ್ಟ ಚಿರತೆ ಮರಿಯನ್ನು ತಾಯಿಯೊಂದಿಗೆ ಸೇರಿಸಿದ ಅರಣ್ಯ ಸಿಬ್ಬಂದಿ

ಸಾರಾಂಶ

ಕಬ್ಬಿನ ಗದ್ದೆಯಲ್ಲಿದ್ದ ಚಿರತೆ ಮರಿ ತಾಯಿಯೊಂದಿಗೆ ಸೇರಿಸಿದ ಅರಣ್ಯ ಸಿಬ್ಬಂದಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಘಟನೆ  

ಮಹಾರಾಷ್ಟ್ರ(ಮಾ.30): ತಾಯಿಯಿಂದ ಬೇರ್ಪಟ್ಟಿದ್ದ 10 ದಿನಗಳ ಪ್ರಾಯದ ಚಿರತೆ ಮರಿಯನ್ನು ಅರಣ್ಯ ಇಲಾಖೆ (Forest department) ಸಿಬ್ಬಂದಿ ಮತ್ತೆ ತಾಯಿಯೊಂದಿಗೆ ಸೇರಿಸಿದ್ದಾರೆ. ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ(Maharashtra) ನಾಸಿಕ್‌ನ (Nashik) ಸಮೀಪದ ಕಬ್ಬಿನ ಗದ್ದೆಯಲ್ಲಿ 10 ದಿನದ ಚಿರತೆ ಮರಿ ಕಾಣಿಸಿಕೊಂಡಿತ್ತು.

ಸೋಮವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂಬೈ (Mumbai) ಮೂಲದ ಎನ್‌ಜಿಒ ಸಹಾಯದಿಂದ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿ ತಾಯಿ ಹಾಗೂ ಮಗುವಿನ ಪುನರ್ಮಿಲನವನ್ನು ಖಚಿತಪಡಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಮರಾಠಿ ಮಾಧ್ಯಮವಾದ ದೇಶ್‌ದೂತ್ ಹಂಚಿಕೊಂಡ ವೀಡಿಯೊದಲ್ಲಿ ತಾಯಿ ಬುಟ್ಟಿಯನ್ನು ತೆರೆದು ಅದರೊಳಗಿದ್ದ ಮರಿಯನ್ನು ನೋಡಿದ್ದಾಳೆ. ಕೂಡಲೇ ತಾಯಿ ಮರಿಯನ್ನು ತನ್ನ ಬಾಯಿಯಿಂದ ಕಚ್ಚಿ ಹಿಡಿದು ಬೇರೆ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಾಳೆ. ಚಿರತೆ ಮರಿಯೊಂದು ನಿರ್ಜನ ಪ್ರದೇಶದಲ್ಲಿ ಕ್ಯಾಮರಾ ನೋಡುತ್ತಿರುವುದನ್ನು ಮತ್ತು ತಾಯಿ ಒಂಟಿಯಾಗಿ ಕುಳಿತಿರುವ ಫೋಟೋಗಳನ್ನು ಎಎನ್‌ಐ ಟ್ವೀಟ್ ಮಾಡಿದೆ.

 

ನಾವು 10 ದಿನದ ಚಿರತೆ ಮರಿಯನ್ನು ಅದರ ತಾಯಿಯೊಂದಿಗೆ ಸುರಕ್ಷಿತವಾಗಿ ಮತ್ತೆ ಸೇರಿಸಿದ್ದೇವೆ. ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿ ಪತ್ತೆಯಾಗಿತ್ತು. ನಾವು ಇಕೋ-ಎಕೋ ಫೌಂಡೇಶನ್‌ನ ಸಹಾಯದಿಂದ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿದ್ದೆವು ಮತ್ತು ಮರಿಯನ್ನು ಯಶಸ್ವಿಯಾಗಿ ಮತ್ತೆ ಒಂದಾಗಿಸಲಾಗಿದೆ ಎಂದು ನಾಸಿಕ್‌ನ ಉಪ ಅರಣ್ಯ ಸಂರಕ್ಷಣಾಧಿಕಾರಿ ಉಮೇಶ್ ವಾವೇರ್ (Umesh Waware) ಅವರು ಹೇಳಿದ್ದನ್ನು ಟ್ವೀಟ್‌ನಲ್ಲಿ ಎಎನ್‌ಐ ಉಲ್ಲೇಖಿಸಿದೆ. ಈ ಕಾರ್ಯಾಚರಣೆಯಲ್ಲಿ ತೊಡಗಿದ ಅರಣ್ಯ ಇಲಾಖೆಯ ತಂಡದ ಪ್ರಯತ್ನಕ್ಕೆ ನೆಟಿಜನ್‌ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಎಲ್ಲಾ ಚೆನ್ನಾಗಿದೆ, ಆದರೆ ಸರ್ ದಯವಿಟ್ಟು ಮಗುವನ್ನು ತಾಯಿ ಚಿರತೆಯೊಂದಿಗೆ ಇರಿಸಿ'ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಮರ್ಸಿಡಿಸ್ ಬೆನ್ಜ್ ಕಾರ್ಖಾನೆಗೆ ನುಗ್ಗಿ 6 ಗಂಟೆ ಕೆಲಸ ಸ್ಥಗಿತಗೊಳಿಸಿದ ಚಿರತೆ

ಇದಕ್ಕೂ ಮೊದಲು, ಚಿರತೆ ಮರಿಗಳು (leopard cubs) ತಮ್ಮ ತಾಯಿಯೊಂದಿಗೆ ಮತ್ತೆ ಒಂದಾಗುತ್ತಿರುವ ವೀಡಿಯೊಗಳು ಮತ್ತು ಫೋಟೋಗಳು ಆನ್‌ಲೈನ್‌ನಲ್ಲಿ ಜನರ ಹೃದಯ ಗೆದ್ದಿತ್ತು. 2020ರಲ್ಲಿ ಮಹಾರಾಷ್ಟ್ರದ ನಾಂದೇಡ್(Nanded)  ಜಿಲ್ಲೆಯಲ್ಲಿ ಜೋಳ ಕೊಯ್ಲು ಮಾಡುತ್ತಿದ್ದ ರೈತರಿಗೆ ಚಿರತೆ ಮರಿಗಳು ಕಾಣಿಸಿಕೊಂಡಿದ್ದವು. ಎರಡು ದಿನಗಳ ನಂತರ, ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಲಿ ಮಲ್ಟಿ ಟ್ರಾಪ್‌ ಕ್ಯಾಮರಾ ಅಳವಡಿಸಿದ್ದರಿಂದ ಮರಿಗಳು ತಾಯಿ ಚಿರತೆಯನ್ನು ಮತ್ತೆ ಸೇರಿದ್ದು ಖಚಿತವಾಗಿದ್ದವು.

ಕಾದಾಡಿ ಪ್ರಾಣ ಉಳಿಸಿಕೊಂಡ ಸಾಕು ನಾಯಿ, ಬೇಟೆಯಾಡಲು ಬಂದ ಚಿರತೆ ಬರಿಗೈಲಿ ವಾಪಸ್

ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ 50 ಅಡಿ ಆಳದ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ ವಿಡಿಯೋ ವೈರಲ್‌ ಆಗಿತ್ತು. ಚಿರತೆ ಬಾವಿಗೆ ಬಿದ್ದಿರುವುದನ್ನು ಗಮನಿಸಿದ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅರಣ್ಯಾಧಿಕಾರಿಗಳು ಮತ್ತು ವನ್ಯಜೀವಿ ಎಸ್‌ಒಎಸ್‌ ತಂಡ ಸಕಾಲದಲ್ಲಿ ಸ್ಥಳಕ್ಕೆ ಬಂದು ಈ ಚಿರತೆಯನ್ನು ರಕ್ಷಿಸಿದ್ದಾರೆ. ವೈಲ್ಡ್‌ಲೈಫ್ ಎಸ್‌ಒಎಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಚಿರತೆಯ ರಕ್ಷಣಾ ಕಾರ್ಯಾಚರಣೆಯ ದೃಶ್ಯಗಳನ್ನು ತೋರಿಸುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
India Latest News Live: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್