ಪಾಕ್ ವಿಶ್ವಕಪ್ ಸೆಮೀಸ್ ಕನಸು ಮತ್ತೆ ಜೀವಂತ..!

By Web DeskFirst Published Jul 5, 2019, 2:42 PM IST
Highlights

ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳು ತಮ್ಮ ಲೀಗ್ ಹಂತದ ಕೊನೆಯ ಪಂದ್ಯಕ್ಕೆ ಸಜ್ಜಾಗಿದ್ದು, ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಇದರೊಂದಿಗೆ ಪಾಕ್ ಸೆಮೀಸ್ ಕನಸಿಗೆ ಮತ್ತೆ ಜೀವ ಬಂದಂತಾಗಿದೆ. 

ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಲಾರ್ಡ್ಸ್[ಜು.05]: ಬಾಂಗ್ಲಾದೇಶ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ದುಕೊಂಡಿದೆ. ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಬೇಕಿದ್ದರೆ ಕನಿಷ್ಠ 308 ರನ್ ಗಳಿಸಬೇಕು, ಹಾಗೆಯೇ ಬಾಂಗ್ಲಾವನ್ನು ಶೂನ್ಯಕ್ಕೆ ರನೌಟ್ ಮಾಡಬೇಕು. ಇದೀಗ ಪಾಕ್ ಬ್ಯಾಟಿಂಗ್ ಆಯ್ದುಕೊಂಡಿರುವುದರಿಂದ ಪವಾಡ ನಡೆದರೆ ಪಾಕ್ ಸೆಮಿಫೈನಲ್‌ಗೇರುವ ಸಾಧ್ಯತೆಯಿದೆ. ಒಂದು ವೇಳೆ ಬಾಂಗ್ಲಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದರೆ, ಮೊದಲ ಎಸೆತ ಹಾಕುವ ಮೊದಲೇ ಪಾಕ್ ಸೆಮೀಸ್ ಕನಸು ನುಚ್ಚುನೂರು ಆಗಲಿದೆ. 

ಕಿವೀಸ್ ಮಣಿಸಿದ ಇಂಗ್ಲೆಂಡ್: ಆದ್ರೆ ಟ್ರೋಲ್ ಆಗಿದ್ದು ಮಾತ್ರ ಪಾಕಿಸ್ತಾನ..!

Pakistan have won the toss and will bat first at Lord's!

Job one done for

Now his team just need a world record win to qualify for the semi-finals 😅 pic.twitter.com/c7IFmUdjlu

— Cricket World Cup (@cricketworldcup)

ಬಾಂಗ್ಲಾ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು ಮೆಹದಿ ಹಸನ್ ಹಾಗೂ ಮೊಹಮ್ಮದುಲ್ಲಾ ತಂಡ ಕೂಡಿಕೊಂಡಿದ್ದು,ರುಬೆಲ್ ಹಾಗೂ ಶಬ್ಬೀರ್’ಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಪಾಕಿಸ್ತಾನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಪಾಕಿಸ್ತಾನ ಸೆಮೀಸ್ ಪ್ರವೇಶಕ್ಕೆ ಇನ್ನೂ ಇದೆ ಚಾನ್ಸ್...! ಇನ್ಷ ಅಲ್ಲ

ಭಾರತ ವಿರುದ್ಧ ಮುಗ್ಗರಿಸುವುದರೊಂದಿಗೆ ಸೆಮಿಫೈನಲ್ ಆಸೆ ಕೈಚೆಲ್ಲಿರುವ ಬಾಂಗ್ಲಾದೇಶ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಲು ಎದುರು ನೋಡುತಿದೆ. ಇನ್ನು 9 ಅಂಕಗಳನ್ನು ಹೊಂದಿರುವ ಪಾಕಿಸ್ತಾನ ಪಾಲಿಗೆ ಪವಾಡ ನಡೆದರಷ್ಟೇ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಬಹುದಾಗಿದೆ. 

ತಂಡಗಳು ಹೀಗಿವೆ:
ಬಾಂಗ್ಲಾದೇಶ:

Match 43. Bangladesh XI: T Iqbal, S Sarkar, S Al Hasan, M Rahim, L Das, Mahmudullah, M Hossain, M Saifuddin, M Hasan, M Mortaza, M Rahman https://t.co/VDnPNPsfeX

— ICC Live Scores (@ICCLive)

ಪಾಕಿಸ್ತಾನ:

Match 43. Pakistan XI: F Zaman, Imam ul-Haq, B Azam, M Hafeez, H Sohail, S Ahmed, I Wasim, S Khan, W Riaz, S Afridi, M Amir https://t.co/VDnPNPsfeX

— ICC Live Scores (@ICCLive)

 

 

click me!