ಧೋನಿ ಪದೇ ಪದೇ ಏಕೆ ಬ್ಯಾಟ್ ಲೋಗೋ ಬದಲಿಸುತ್ತಿದ್ದಾರೆ..?

By Web Desk  |  First Published Jul 5, 2019, 12:43 PM IST

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಪದೇ-ಪದೇ ಬೇರೆ-ಬೇರೆ ಸ್ಟಿಕ್ಕರ್ ಇರುವ ಬ್ಯಾಟ್‌ ಬದಲಾಯಿಸುತ್ತಿರುವುದನ್ನು ನೀವು ನೋಡಿರಬಹುದು. ಅಷ್ಟಕ್ಕೂ ಯಾಕೆ ಹೀಗೆ ಮಾಡುತ್ತಿರಬಹುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...


ವಿಶ್ವಕಪ್ ಟೂರ್ನಿಯ ಕ್ಷಣ ಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಲೀಡ್ಸ್(ಜು.05): ಏಕದಿನ ವಿಶ್ವಕಪ್‌ನಲ್ಲಿ ಭಾರತದ ಎಂ.ಎಸ್.ಧೋನಿ ಅಸಾಮಾನ್ಯ ಕಾರ್ಯವೊಂದನ್ನು ನಡೆಸುತ್ತಿದ್ದಾರೆ. ಧೋನಿ ವಿವಿಧ ಬ್ಯಾಟ್ ತಯಾರಕ ಸಂಸ್ಥೆಗಳ ಸ್ಟಿಕ್ಕರ್‌ಗಳ್ಳುಳ್ಳ ಬ್ಯಾಟ್‌ಗಳನ್ನು ಬಳಸುತ್ತಿದ್ದಾರೆ. 

Latest Videos

undefined

ಪಂದ್ಯದ ನಡುವೆ ರಕ್ತ ಉಗುಳಿದ ಧೋನಿ; ಭಾವುಕರಾದ ಫ್ಯಾನ್ಸ್!

ಪ್ರಸಕ್ತ ಟೂರ್ನಿಯಲ್ಲಿ ಕನಿಷ್ಠ 3 ವಿವಿಧ ಸಂಸ್ಥೆಗಳ ಲೋಗೋಗಳು ಇರುವ ಬ್ಯಾಟ್‌ನೊಂದಿಗೆ ಧೋನಿ ಆಡಿದ್ದಾರೆ. ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧದ ಪಂದ್ಯಗಳಲ್ಲಿ ಧೋನಿ ಎಸ್‌ಜಿ ಚಿಹ್ನೆಯಿರುವ ಬ್ಯಾಟ್‌ನೊಂದಿಗೆ ಮೈದಾನಕ್ಕಿಳಿದರು. ಇನ್ನಿಂಗ್ಸ್ ಸಾಗಿದಂತೆ ಬಿಎಎಸ್ ಚಿಹ್ನೆ ಇರುವ ವ್ಯಾಂಪೈರ್ ಸಂಸ್ಥೆಯ ಬ್ಯಾಟ್ ಬಳಸಿದರು. 

ವಿಶ್ವಕಪ್ ಟೂರ್ನಿ ಬಳಿಕ ಎಂ.ಎಸ್. ಧೋನಿ ನಿವೃತ್ತಿ ಘೋಷಣೆ?

ಈ ಬಗ್ಗೆ ಧೋನಿಯ ವ್ಯವಸ್ಥಾಪಕ ಅರುಣ್ ಪಾಂಡೆ ಗುಟ್ಟು ಬಿಚ್ಚಿಟ್ಟಿದ್ದಾರೆ. ‘ಧೋನಿ ವಿವಿಧ ಲೋಗೋಗಳಿರುವ ಬ್ಯಾಟ್‌ಗಳನ್ನು ಬಳಸುತ್ತಿರುವುದು ನಿಜ. ಆದರೆ ಅದಕ್ಕೆ ಅವರು ಹಣ ಪಡೆಯುತ್ತಿಲ್ಲ. ತಮ್ಮ ವೃತ್ತಿ ಬದುಕಿನ ವಿವಿಧ ಹಂತಗಳಲ್ಲಿ ತಮಗೆ ಸಹಾಯ ಮಾಡಿದ ಬ್ಯಾಟ್ ಸಂಸ್ಥೆಗಳಿಗೆ ಧನ್ಯವಾದ ಹೇಳಲು ಅವರು ಈ ರೀತಿ ಮಾಡುತ್ತಿದ್ದಾರೆ’ ಎಂದು ಪಾಂಡೆ ಹೇಳಿದ್ದಾರೆ. 

ಸಾಮಾನ್ಯವಾಗಿ ಧೋನಿಯಂತಹ ಜನಪ್ರಿಯ ಕ್ರಿಕೆಟಿಗರು ತಮ್ಮ ಬ್ಯಾಟ್ ಮೇಲೆ ಸಂಸ್ಥೆಯ ಸ್ಟಿಕ್ಕರ್ ಅಂಟಿಸಿಕೊಳ್ಳಲು ವಾರ್ಷಿಕ ₹4 ಕೋಟಿಯಿಂದ ₹5 ಕೋಟಿ ಸಂಭಾವನೆ ಪಡೆಯುತ್ತಾರೆ. ಧೋನಿ ಬಳಸುತ್ತಿದ್ದ ಆಸ್ಟ್ರೇಲಿಯಾ ಮೂಲದ ಸ್ಪಾರ್ಟನ್ ಸಂಸ್ಥೆ ಕಾನೂನು ಸಮಸ್ಯೆಯಲ್ಲಿ ಸಿಲುಕಿರುವ ಕಾರಣ ಸದ್ಯ ಅವರು ಬ್ಯಾಟ್ ಪ್ರಾಯೋಜಕತ್ವ ಹೊಂದಿಲ್ಲ.

click me!