ಯೋಗದ ಮೂಲಕ ವಿಶ್ವಕಪ್ ಟ್ರೋಫಿ ಅನಾವರಣ-ವಿದ್ಯಾರ್ಥಿಗಳಿಗೆ ICC ಸಲಾಂ!

By Web DeskFirst Published Jun 21, 2019, 6:33 PM IST
Highlights

ಅಂತಾರಾಷ್ಟ್ರೀಯ ಯೋಗದಿನವನ್ನು ವಿಶೇಷವಾಗಿ ಆಚರಿಸಿದ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಐಸಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ಶಾಲಾ ಮಕ್ಕಳ ವಿಶ್ವಕಪ್ ಯೋಗ ಹೇಗಿದೆ? ಇಲ್ಲಿದೆ ವಿವರ.

ಚೆನ್ನೈ(ಜೂ.21): ಅಂತಾರಾಷ್ಟ್ರೀಯ ಯೋಗ ದಿನವನ್ನು ಭಾರತದೆಲ್ಲೆಡೆ ಯೋಗ ಮಾಡೋ ಮೂಲಕ ಆಚರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ  ಗಣ್ಯರು, ಸೆಲೆಬ್ರೆಟಿಗಳು ಯೋಗ ದಿನದಲ್ಲಿ ಪಾಲ್ಗೊಂಡಿದ್ದಾರೆ. ಯೋಗದ ಮೂಲಕ ವಿಶ್ವಕಪ್ ಟ್ರೋಫಿ ಅನಾವರಣ ಮಾಡೋ ಮೂಲಕ ವಿದ್ಯಾರ್ಥಿಗಳು ಟೀಂ ಇಂಡಿಯಾಗೆ ಶುಭಹಾರೈಸಿದ್ದಾರೆ.

ಇದನ್ನೂ ಓದಿ: ಆಸೀಸ್ ವಿರುದ್ದ ಸೋತರೂ ಎಲ್ಲರ ಮನ ಗೆದ್ದ ಬಾಂಗ್ಲಾದೇಶ!

ಚೆನ್ನೈನ ವೇಲಮ್ಮಾಲ್ ಶಾಲಾ ವಿದ್ಯಾರ್ಥಿಗಳು ಯೋಗ ಮೂಲಕ ವಿಶ್ವಕಪ್ ಟ್ರೋಫಿ ಅನಾವರಣ ಮಾಡಿದ್ದಾರೆ. ವಿಶ್ವಕಪ್ ಟ್ರೋಫಿ ಆಕಾರದಲ್ಲಿ ನಿಂತು ಯೋಗ ಮಾಡೋ ಮೂಲಕ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿದ್ದಾರೆ. ಇಷ್ಟೇ ಅಲ್ಲ ಟೀಂ ಇಂಡಿಯಾಗೆ ಶುಭ ಹಾರೈಸಿದ್ದಾರೆ.

 

Incredible commitment levels to and International Yoga Day from these school children in Chennai, India 🧘 pic.twitter.com/D7BCfKk6JT

— Cricket World Cup (@cricketworldcup)

ಇದನ್ನೂ ಓದಿ: ಶಿಖರ್ ಧವನ್ ಇಂಜುರಿ- ಪ್ರಧಾನಿ ನರೇಂದ್ರ ಮೋದಿ ಟ್ವೀಟ್!

ಚೆನ್ನೈ ಶಾಲಾ ಮಕ್ಕಳ ವಿಶೇಷ  ಯೋಗ ದಿನಾಚರಣೆಯ ಕುರಿತು ಐಸಿಸಿ ತನ್ನ ವಿಶ್ವಕಪ್ ಟೂರ್ನಿ ಅಧೀಕೃತ ಟ್ವಿಟರ್ ಖಾತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ. ಶಾಲಾ ಮಕ್ಕಳ ಯೋಗಾಭ್ಯಾಸದ ಫೋಟೋವನ್ನು ಐಸಿಸಿ ಪೋಸ್ಟ್ ಮಾಡಿದೆ. ವಿಶೇಷವಾಗಿ ಯೋಗ ದಿನ ಆಚರಿಸಿದ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಎಲ್ಲಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. 

click me!