ಇಂಡೋ-ಅಫ್ಘಾನ್ ಪಂದ್ಯ:ಸಚಿನ್, ಲಾರಾ ದಾಖಲೆ ಮುರಿಯಲು ಸಜ್ಜಾದ ಕೊಹ್ಲಿ!

By Web Desk  |  First Published Jun 21, 2019, 3:24 PM IST

ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಅತೀ ವೇಗದಲ್ಲಿ 11,000 ರನ್ ಪೂರೈಸಿದ ಸಾಧನೆ ಮಾಡಿದ ವಿರಾಟ್ ಕೊಹ್ಲಿ ಇದೀಗ ಅಫ್ಘಾನಿಸ್ತಾನ ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಹಾಗೂ ಬ್ರಿಯಾನ್ ಲಾರಾ ದಾಖಲೆ ಮುರಿಯಲು ರೆಡಿಯಾಗಿದ್ದಾರೆ. 


ಸೌಥಾಂಪ್ಟನ್(ಜೂ.21): ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇದೀಗ ಮತ್ತೊಂದು ಗೆಲುವಿಗೆ ತಯಾರಿ ನಡೆಸುತ್ತಿದೆ. ಪಾಕಿಸ್ತಾನ ವಿರುದ್ಧ ಗೆಲುವಿನ ಬಳಿಕ ರಿಲಾಕ್ಸ್ ಮೂಡ್‌ಗೆ ಜಾರಿದ್ದ ಭಾರತ, ಇದೀಗ ಅಫ್ಘಾನಿಸ್ತಾನ ವಿರುದ್ದದ ಪಂದ್ಯಕ್ಕೆ ತಯಾರಿ ನಡೆಸುತ್ತಿದೆ. ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹಾಗೂ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ದಾಖಲೆ ಬ್ರೇಕ್ ಮಾಡೋ ಅವಕಾಶವಿದೆ. 

ಇದನ್ನೂ ಓದಿ: ಆಸೀಸ್ ವಿರುದ್ದ ಸೋತರೂ ಎಲ್ಲರ ಮನ ಗೆದ್ದ ಬಾಂಗ್ಲಾದೇಶ!

Tap to resize

Latest Videos

ಪಾಕ್ ವಿರುದ್ಧದ ಪಂದ್ಯದಲ್ಲಿ ಅತೀ ವೇಗದಲ್ಲಿ 11,000 ರನ್ ಪೂರೈಸಿದ ಸಾಧನೆ ಮಾಡಿದ ವಿರಾಟ್ ಕೊಹ್ಲಿ ಇದೀಗ ಅತೀ ವೇಗದಲ್ಲಿ 20,000 ರನ್ ಪೂರೈಸಿದ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಈ ಮೂಲಕ ಸಚಿನ್ ಹಾಗೂ ಲಾರಾ ದಾಖಲೆ ಮುರಿಯಲು ತುದಿಗಾಲಲ್ಲಿ ನಿಂತಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್‌ನಿಂದ 19,896 ರನ್ ದಾಖಲಿಸಿದ್ದಾರೆ.

ಇದನ್ನೂ ಓದಿ: ಟಿ20ರಲ್ಲಿ ಬರೋಬ್ಬರಿ 314 ರನ್ ಗಳಿಕೆ, ಯಾರ ವಿರುದ್ಧ? ಯಾವ ದೇಶ?

131 ಟೆಸ್ಟ್,  222 ಏಕದಿನ ಹಾಗೂ 62  ಟಿ20 ಪಂದ್ಯಗಳ 415 ಇನ್ನಿಂಗ್ಸ್‌ಗಳಿಂದ ಕೊಹ್ಲಿ 19,896 ರನ್ ಸಿಡಿಸಿದ್ದಾರೆ. ಅತೀ ವೇಗದಲ್ಲಿ 20,000 ರನ್ ದಾಖಲೆಗೆ 104 ರನ್ ಹಿನ್ನಡೆಯಲ್ಲಿದ್ದಾರೆ. ಸಚಿನ್ ಹಾಗೂ ಲಾರಾ 453 ರನ್ ಇನ್ನಿಂಗ್ಸ್‌ಗಳಲ್ಲಿ 20,000 ಅಂತಾರಾಷ್ಟ್ರೀಯ ರನ್ ಪೂರೈಸಿದ್ದಾರೆ.

click me!