ವಿಶ್ವಕಪ್ ಟೂರ್ನಿಯಲ್ಲಿ ಎಂ.ಎಸ್.ಧೋನಿ ಬಳಸಿರುವ ವಿಕೆಟ್ ಕೀಪಿಂಗ್ ಗ್ಲೌಸ್ ಇದೀಗ ವಿಶ್ವದಲ್ಲೇ ಸದ್ದು ಮಾಡುತ್ತಿದೆ. ಭಾರತೀಯ ಸೇನೆಯ ಬಲಿದಾನದ ಲೋಗೋ ಇರೋ ಗ್ಲೌಸ್ ಬಳಿಸಿದ ಧೋನಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಐಸಿಸಿ ಈ ಲೋಗೋ ತೆಗೆಯಲು ಸೂಚಿಸಿದೆ.
ಲಂಡನ್(ಜೂ.06): ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದ ಗೆಲುವಿನ ಬಳಿಕ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ವಿಕೆಟ್ ಕೀಪಿಂಗ್ ಗ್ಲೌಸ್ ವಿಶ್ವದ ಗಮನ ಸೆಳೆದಿತ್ತು. ಧೋನಿ ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್‌ನಲ್ಲಿ ಭಾರತೀಯ ಸೇನೆಯ ಬಲಿದಾನ ಚಿಹ್ನೆ ಹಾಕಿದ್ದರು. ಇದು ಸ್ಟಂಪಿಂಗ್ ವೇಳೆ ಬೆಳಕಿಗೆ ಬಂದಿತ್ತು. ಇದೀಗ ಇದೇ ಸೇನೆ ಲೋಗೋ ಧೋನಿಗೆ ಸಂಕಷ್ಠ ತಂದಿದೆ.
ಇದನ್ನೂ ಓದಿ: ಧೋನಿ ಗ್ಲೌಸ್‌ನಲ್ಲಿ ಸೇನೆ ಲಾಂಛನ-ಟ್ವಿಟರಿಗರಿಂದ ಸಲ್ಯೂಟ್!
undefined
ಧೋನಿ ಗ್ಲೌಸ್ ಮೇಲಿನ ಬಲಿದಾನದ ಬ್ಯಾಡ್ಜ್ ಇದೀಗ ಸದ್ದು ಮಾಡುತ್ತಿದೆ. ಆ್ಯಂಡಿಲ್ ಫೆಲುಕ್‌ವಾಯೋ ಸ್ಟಂಪ್ ಮಾಡಿದಾಗ ಧೋನಿ ಗ್ಲೌಸ್ ಮೇಲಿ ಸೇನೆಯ ಚಿಹ್ನೆ ಗೋಚರಿಸಿತ್ತು. ಭಾರತೀಯ ಸೇನೆ ಮೇಲಿರುವ ಗೌರವಕ್ಕೆ ಎಲ್ಲರೂ ಧೋನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಗ್ಲೌಸ್ ಮೇಲಿನ ಚಿಹ್ನೆ ತೆಗೆಯಲು ಐಸಿಸಿ ಸೂಚಿಸಿದೆ.
ಇದನ್ನೂ ಓದಿ: ಕೊಹ್ಲಿ-ಧೋನಿಗೆ ಶುಭಕೋರಿದ WWE ಸೂಪರ್ ಸ್ಟಾರ್ !
ಧೋನಿ ಗ್ಲೌಸ್ ಮೇಲಿನ ಸೇನೆ ಚಿಹ್ನೆ ತೆಗೆಯಲು ಐಸಿಸಿ, ಬಿಸಿಸಿಐಗೆ ಸೂಚಿಸಿದೆ. ಐಸಿಸಿ ಜನರಲ್ ಮ್ಯಾನೇಜರ್ ಕ್ಲಾರಿ ಫರ್ಲಾಂಗ್ ಬಿಸಿಸಿಐಗೆ ಸೂಚನೆ ನೀಡಿದ್ದಾರೆ. ಐಸಿಸಿ ನಿಯಮದ ಪ್ರಕಾರ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಟಗಾರ, ಕೋಚ್ ತಮ್ಮ ಉಡುಪು, ಬ್ಯಾಟ್, ವಿಕೆಟ್ ಅಥವಾ ಯಾವುದೇ ಕ್ರಿಕೆಟ್ ಸಂಬಂಧಿತ ವಸ್ತುಗಳ ಮೇಲೆ ವೈಯುಕ್ತಿ ಸಂದೇಶ, ರಾಜಕೀಯ, ಧಾರ್ಮಿಕ, ಜನಾಂಗೀಯ ಸಂಬಂಧಿಸಿದ ಸಂದೇಶಗಳನ್ನು, ಲೋಗೋ ಅಥವಾ ಚಿತ್ರಗಳನ್ನು ಹಾಕುವಂತಿಲ್ಲ.
ಇದನ್ನೂ ಓದಿ: ಕೊಹ್ಲಿ ಪೋಸ್ಟ್ ಕೆಣಕಿದ ಮೈಕಲ್ ವಾನ್‌ಗೆ ಐಸಿಸಿ ತಿರುಗೇಟು!
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಐಸಿಸಿ ಲೋಗೋ, ಆಯಾ ಕ್ರಿಕೆಟ್ ಸಂಸ್ಥೆ ಲೋಗೋ, ದೇಶದ ಹೆಸರು, ಆಟಗಾರನ ಹೆಸರು ಹಾಗೂ ಐಸಿಸಿ ಪ್ರಾಯೋಜಕತ್ವ ಮಾತ್ರ ನಮೂದಿಸಬೇಕು. ಹೀಗಾಗಿ ಧೋನಿ ವಿಕೆಟ್ ಕೀಪಿಂಗ್ ಗ್ಲೌಸ್ ಮೇಲಿನ ಸೇನೆಯ ಬಲಿದಾನದ ಲೋಗೋ ತೆಗೆಯಲು ಐಸಿಸಿ, ಬಿಸಿಸಿಐ ಬಳಿ ಹೇಳಿದೆ.