ವಿಶ್ವಕಪ್ 2019: ಕೌಲ್ಟರ್ ನೈಲ್-ಸ್ಮಿತ್ ಅಬ್ಬರ- ವಿಂಡೀಸ್‌ಗೆ 288 ರನ್ ಟಾರ್ಗೆಟ್!

By Web DeskFirst Published Jun 6, 2019, 6:49 PM IST
Highlights

ಸ್ಟೀವ್ ಸ್ಮಿತ್ ಹಾಗೂ ನಥನ್ ಕೌಲ್ಟರ್ ನೈಲ್ ಹೋರಾಟ ವಿಂಡೀಸ್ ಲೆಕ್ಕಾಚಾರವನ್ನೇ ಉಲ್ಟಾ ಮಾಡಿತು. ಅಲ್ಪಮೊತ್ತಕ್ಕೆ ಆಲೌಟ್ ಭೀತಿಯಲ್ಲಿದ್ದ ಆಸಿಸ್ ತಂಡಕ್ಕೆ ಆಸರೆಯಾದ ಈ ಜೋಡಿ ಸ್ಪರ್ಧಾತ್ಮಕ ಮೊತ್ತ ಸಿಡಿಸುವಲ್ಲಿ ನೆರವಾದರು. ಇದೀಗ ವೆಸ್ಟ್ಇಂಡೀಸ್ ತಂಡಕ್ಕೆ 289 ರನ್ ಟಾರ್ಗೆಟ್ ನೀಡಿದೆ. 

ನಾಟಿಂಗ್‌ಹ್ಯಾಮ್(ಜೂ.06): ವೆಸ್ಟ್ ಇಂಡೀಸ್ ದಾಳಿಗೆ ತತ್ತರಿಸಿ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಆಸ್ಟ್ರೇಲಿಯಾ ದಿಟ್ಟ ಹೋರಾಟ ನೀಡಿದೆ. ಸ್ಟೀವ್ ಸ್ಮಿತ್ ಹಾಗೂ ನಥನ್ ಕೌಲ್ಟನ್ ನೈಲ್ ಅದ್ಬುತ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ವಿಶ್ವಕಪ್ 10ನೇ ಲೀಗ್ ಪಂದ್ಯದಲ್ಲಿ 49 ಓವರ್‌ಗಳಲ್ಲಿ 288 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ವಿಂಡೀಸ್‌ಗೆ 289 ರನ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ ಆರಂಭದಲ್ಲೇ ನಾಯಕ ಆ್ಯರೋನ್ ಫಿಂಚ್, ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖವಾಜ ವಿಕೆಟ್ ಕಳೆದುಕೊಂಡಿತು. ಇನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಆಸರೆಯಾಗಲಿಲ್ಲ. ಆದರೆ ಸ್ಟೀವ್ ಸ್ಮಿತ್ ಹಾಗೂ ಮಾರ್ಕಸ್ ಸ್ಟೊಯ್ನಿಸ್ ಹೋರಾಟ ನೀಡಿದರು. ಸ್ಟೊಯ್ನಿಸ್ 19 ರನ್ ಸಿಡಿಸಿ ಔಟಾದರು.

ಅಲೆಕ್ಸ್ ಕ್ಯಾರಿ 45 ರನ್ ಕಾಣಿಕೆ ನೀಡಿದರು. ಈ ಮೂಲಕ ಆಸಿಸ್ ಚೇತರಿಕೆ ಕಂಡಿತು. ಬಳಿಕ ಸ್ಮಿತ್ ಹಾಗೂ ನಥನ್ ಕೌಲ್ಟನ್ ನೈಲ್ ಜೊತೆಯಾಟ ಆಸಿಸ್ ಆತಂಕ ದೂರ ಮಾಡಿತು. ಸ್ಮಿತ್ 73 ರನ್ ಸಿಡಿಸಿ ಔಟಾದರು. ಆದರೆ ಕೌಲ್ಟರ್ ನೈಲ್ ಹೋರಾಟ ಮುಂದುವರಿಸಿದರು. ಕೌಲ್ಟರ್ ನೈಲ್ 92 ರನ್ ಸಿಡಿಸಿ ಔಟಾದರು. ಮಿಚೆಲ್ ಸ್ಟಾರ್ಕ್ ವಿಕೆಟ್ ಪತನದೊಂದಿಗೆ ಆಸ್ಟ್ರೇಲಿಯಾ 49 ಓವರ್‌ಗಳಲ್ಲಿ 288 ರನ್‌ಗೆ ಆಲೌಟ್ ಆಯಿತು. 

click me!