ವಿಶ್ವಕಪ್ ಟೂರ್ನಿ ಆಡುತ್ತಿರುವ ಟೀಂ ಇಂಡಿಯಾ WWE ಸೂಪರ್ ಸ್ಟಾರ್ ಶುಭಕೋರಿದ್ದಾರೆ. ಈ ಬಾರಿ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲಲಿ ಎಂದು ಹಾರೈಸಿದ್ದಾರೆ.
ನ್ಯೂಯಾರ್ಕ್(ಜೂ.06): ವಿಶ್ವಕಪ್ ಟೂರ್ನಿ ಆಡುತ್ತಿರುವ ಟೀಂ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭಕೋರಿದ್ದಾರೆ. ಇದೀಗ ನಾಯಕ ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಹಾಗೂ ಟೀಂ ಇಂಡಿಯಾಗೆ WWE ಸೂಪರ್ ಸ್ಟಾರ್ ಕೋಫಿ ಕಿಂಗ್ಸ್‌ಸ್ಟನ್ ಶುಭಕೋರಿದ್ದಾರೆ.
ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಮಲಿಕ್ ಬ್ಯುಸಿ, ಮಗನೊಂದಿಗೆ ಈದ್ ಆಚರಿಸಿದ ಸಾನಿಯಾ
ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಹಾಗೂ ಸಂಪೂರ್ಣ ಭಾರತ ತಂಡಕ್ಕೆ ಆಲ್ ದಿ ಬೆಸ್ಟ್. ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಸನ ನೀಡಿ ಪ್ರಶಸ್ತಿ ಗೆಲ್ಲಿ. ನಿಮಗೆ ಅದು ಸಾಧ್ಯವಿದೆ ಎಂದು ಕೋಫಿ ಕಿಂಗ್ಸ್‌ಸ್ಟನ್ ವೀಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ.
YOU CAN DO IT! wishes , and the entire all the luck and positivity! pic.twitter.com/ASGVgGYsqF
— WWE (@WWEIndia)
ಇದನ್ನೂ ಓದಿ: ಜಸ್ಪ್ರೀತ್ ಬುಮ್ರಾ ಎದುರಿಸಲು ಬ್ಯಾಟ್ಸ್‌ಮನ್‌ಗೆ ಪೀಟರ್ಸನ್ ಟಿಪ್ಸ್
ಸದ್ಯ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಸೌತ್ಆಫ್ರಿಕಾ ವಿರುದ್ಧ ಹೋರಾಡಿದ ಟೀಂ ಇಂಡಿಯಾ 6 ವಿಕೆಟ್ ಗೆಲುವು ಸಾಧಿಸಿತು. ಇದೀಗ ಜೂನ್ 9 ರಂದು ಆಸ್ಟ್ರೇಲಿಯಾ ವಿರುದ್ಧ ಹೋರಾಟ ನಡೆಸಲಿದೆ.