Easy Exercise: ಬಾತ್ ಟವೆಲ್ ಬಳಸಿಯೂ ವ್ಯಾಯಾಮ ಮಾಡ್ಬೋದು

By Suvarna News  |  First Published Feb 16, 2022, 3:14 PM IST

ತೂಕ (Weight) ಇಳಿಸ್ಕೊಂಡು ಸಣ್ಣಗಾಗ್ಬೇಕು ಅಂತ ಪ್ರತಿಯೊಬ್ಬರಿಗೂ ಇರುತ್ತೆ. ಆದ್ರೆ ಡೈಲಿ ವರ್ಕೌಟ್‌, ಯೋಗ ಮಾಡ್ಬೇಕು ಅಂದ್ರೆ ಮಾತ್ರ ಸೋಮಾರಿತನ. ನೀವು ಆ ಪೈಕಿನಾ ? ಹಾಗಿದ್ರೆ ಇಲ್ ಕೇಳಿ. ಬಾತ್ ಟವೆಲ್ (Bath Towel) ಬಳಸಿ ಕೂಡಾ ಸುಲಭವಾಗಿ ಎಕ್ಸರ್‌ಸೈಸ್ (Exercise) ಮಾಡ್ಬೋದು ನೋಡಿ.


ಕೊರೋನಾ (Corona) ಸೋಂಕು ಹರಡಲು ಆರಂಭವಾದಾಗಿನಿಂದಲೂ ಎಲ್ಲರೂ ಹೊರಾಂಗಣ ಚಟುವಟಿಕೆಗಳನ್ನು ಬಿಟ್ಟು ಒಳಾಂಗಣ ಚಟುವಟಿಕೆಗಳಿಗೆ ಹೆಚ್ಚು ಮಹತ್ವ ಕೊಡುತ್ತಿದ್ದಾರೆ. ಜಿಮ್, ಯೋಗ ಕ್ಲಾಸ್‌ಗಳಿಗೆ ಲಾಕ್‌ಡೌನ್, ಕರ್ಫ್ಯೂ ಸಮಯದಲ್ಲಿ ನಿರ್ಬಂಧ ಹೇರಿದ್ದ ಕಾರಣ ಹಲವರು ಮನೆಯಲ್ಲೇ ಯೋಗಾಭ್ಯಾಸ, ವ್ಯಾಯಾಮಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹಲವರು ಈ ರೀತಿ ವ್ಯಾಯಾಮ (Exercise) ಮಾಡಲು ಮನೆಯಲ್ಲಿರುವ ವಸ್ತುಗಳನ್ನೇ ಬಳಸಿಕೊಳ್ಳುತ್ತಿದ್ದಾರೆ. ನೀವು ಸಹ ಹೀಗೆಯೇ ಸೋಂಕಿನ ಭಯದಿಂದ ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದರೆ, ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ಎಕ್ಸರ್ಸೈಸ್ ಮಾಡೋಣ ಎಂದು ನೋಡುತ್ತಿದ್ದರೆ ಇಲ್ಲಿದೆ ಕೆಲವೊಂದು ಸಲಹೆಗಳು.

ಫಿಟ್ನೆಸ್ ತಜ್ಞ ಮೀನಾಕ್ಷಿ ಮೊಹಾಂತಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ಪೂರ್ಣ ದೇಹದ ತಾಲೀಮು ಅಥವಾ ಸ್ಪಾಟ್ ವ್ಯಾಯಾಮಗಳಿಗೆ ಬಾತ್ ಟವೆಲ್‌ನ್ನು ಪರಿಣಾಮಕಾರಿಯಾಗಿ ಬಳಸಬಹುದು ಎಂದು ಅವರು ತಿಳಿಸಿದ್ದಾರೆ. 'ಮಡೋನಾ, ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಅವರಂತಹ ಸೆಲೆಬ್ರಿಟಿಗಳು ಸಹ ವರ್ಕ್ ಔಟ್ (Workout) ಮಾಡಲು ಬಾತ್ ಟವೆಲ್‌ (Bath Towel)ನ್ನು ಬಳಸುತ್ತಾರೆ’ ಎಂದು ಮೀನಾಕ್ಷಿ ಮೊಹಾಂತಿ ಹೇಳಿದ್ದಾರೆ.

Tap to resize

Latest Videos

undefined

Exercise Tips: ದಿನಕ್ಕೆ ಜಸ್ಟ್ ಮೂರು ಸೆಕೆಂಡ್ ವ್ಯಾಯಾಮ ಮಾಡಿದರೂ ಸಾಕು !

ಫ್ಲೆಚರ್ ಟವೆಲ್ ವ್ಯಾಯಾಮಗಳು
ಇದು ಸ್ನಾಯುಗಳನ್ನು ಹಿಗ್ಗಿಸಲು, ಭಂಗಿಯನ್ನು ಸುಧಾರಿಸಲು ಮತ್ತು ಶಕ್ತಿಯ ಮಟ್ಟವನ್ನು ಸುಧಾರಿಸಲು ಉಸಿರಾಟವನ್ನು ನಿರ್ವಹಿಸಲು ಮಾಡುವ ವ್ಯಾಯಾಮವಾಗಿದೆ. ಇದನ್ನು ಪೂರ್ಣ ದೇಹ (Body)ದ ವ್ಯಾಯಾಮಕ್ಕಾಗಿ ಅಥವಾ ದೇಹ ಯಾವುದೇ ಭಾಗಕ್ಕಾಗಿ ವ್ಯಾಯಾಮವಾಗಿ ಬಳಸಬಹುದು. ಈ ವ್ಯಾಯಾಮವನ್ನು ಮಾಡಲು ಉದ್ದವಾಗಿರುವ ಸ್ನಾನದ ಟವೆಲ್ ಅನ್ನು ರೋಲ್ ಮಾಡಿ ಬಲವಾಗಿ ತಿರುಗಿಸಬೇಕಾಗಿದೆ. 

ನಂತರ ಒಂದು ಕೈಯಿಂದ ಟವೆಲ್‌ನ ಪ್ರತಿಯೊಂದು ತುದಿಯನ್ನು ಹಿಡಿದುಕೊಂಡು ಹಿಗ್ಗಿಸುವಿಕೆಯನ್ನು ನಿರ್ವಹಿಸಬೇಕಾಗುತ್ತದೆ. ಯಾವ ಸ್ನಾಯುವನ್ನು ಹಿಗ್ಗಿಸಬೇಕೆಂಬುದನ್ನು ಅವಲಂಬಿಸಿ ಕೈಗಳನ್ನು ಮೇಲಕ್ಕೆ ಅಥವಾ ಮುಂಭಾಗದಲ್ಲಿ ಇರಿಸಬಹುದು. ತಾಲೀಮು ಭಂಗಿಯನ್ನು ಸುಧಾರಿಸುವುದರಿಂದ, ಭುಜಗಳು ಮತ್ತು ಕೈಗಳು, ತೊಡೆಗಳು ಮತ್ತು ಪಾದಗಳ ಸ್ಥಾನದ ಮೇಲೆ ಕೇಂದ್ರೀಕರಿಸುವುದು ಮುಖ್ಯವಾಗಿದೆ. ಈ ತಾಲೀಮವನ್ನು ನಿಂತು ಅಥವಾ ಕುಳಿತು ಸಹ ಮಾಡಬಹುದು.

Stay Fit: ಜಿಮ್‌ಗೆ ಹೋಗದೆಯೂ ಫಿಟ್ ಆಗಿರ್ಬೋದಾ ? ಏನು ಹೇಳ್ತಾರೆ ಎಕ್ಸ್‌ಪರ್ಟ್ಸ್‌

ರೋಯಿಂಗ್ ವ್ಯಾಯಾಮ
ಬೈಸೆಪ್ಸ್, ಟ್ರೈಸ್ಪ್ಸ್ ಮತ್ತು ಮುಂಗೈ ಸೇರಿದಂತೆ ಮೇಲಿನ ಬೆನ್ನು, ಭುಜ ಮತ್ತು ಪೂರ್ಣ ತೋಳುಗಳಿಗೆ ಇದು ಉತ್ತಮ ವ್ಯಾಯಾಮವಾಗಿದೆ. ಡೋರ್ ಹ್ಯಾಂಡಲ್, ಬಾರ್, ಪಿಲ್ಲರ್ ಅಥವಾ ಕೊಕ್ಕೆಯಂತಹ ಯಾವುದೇ ಗಟ್ಟಿಮುಟ್ಟಾದ ಮೇಲ್ಮೈಯ ಸುತ್ತಲೂ ಟವೆಲ್ ಅನ್ನು ಸುತ್ತಿ ಮತ್ತು ಎರಡೂ ತುದಿಗಳನ್ನು ಹಿಡಿದುಕೊಳ್ಳಿ. ಅನುಕೂಲಕ್ಕೆ ಅನುಗುಣವಾಗಿ ಸ್ಪಲ್ಪ ದೂರದಲ್ಲಿ ನಿಂತುಕೊಳ್ಳಿ. ನಂತರ ಟವೆಲ್ ಹಿಡಿಯಲು ಕೈಗಳನ್ನು ಚಾಚಬೇಕು. ಒಂದು ಕೈಯಿಂದ ಒಂದು ಟವೆಲ್ ಬದಿ, ಇನ್ನೊಂದು ಕೈಯಿಂದ ಇನ್ನೊಂದು ಟವೆಲ್‌ನ ಬದಿಯನ್ನು ಎಳೆಯುವ ಕ್ರಮವನ್ನು ಅನುಸರಿಸಬೇಕು. ಭುಜದ ಹಿಂದಕ್ಕೆ ಮತ್ತು ಮುಂದಕ್ಕೆಹೋಗುವ ಈ ರೋಯಿಂಗ್ ಭಂಗಿಯನ್ನು ಅನುಕರಿಸಿ. ಕ್ರಮೇಣ ಆರಂಭಿಕ ಸ್ಥಾನಕ್ಕೆ ಹಿಂತಿರುಗಿ. ಇದನ್ನು ಸುಮಾರು 10 ಬಾರಿ ಪುನರಾವರ್ತಿಸಿ.

ಲೆಗ್ ವ್ಯಾಯಾಮ
ಈ ವ್ಯಾಯಾಮವು ಕಾಲಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ವಿಶೇಷವಾಗಿ ತೊಡೆಯ ಬಲವನ್ನು ಹೆಚ್ಚಿಸಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಲೆಗ್ ವ್ಯಾಮಾಯವನ್ನು ಮಾಡಲು, ಒಬ್ಬರು ಸಮತಟ್ಟಾದ ಮೇಲ್ಮೈಯಲ್ಲಿ ಮಲಗಬೇಕು. ಪಾರ್ಕ್‌ನ ನೆಲದಲ್ಲಿ ಅಥವಾ ಮನೆಯಲ್ಲಿ ಯೋಗ (Yoga) ಮ್ಯಾಟ್ ಹಾಕಿಕೊಳ್ಳಬಹುದು.

ನೆಲದ ಮೇಲೆ ವಿಶ್ರಮಿಸುವ ನಿಮ್ಮ ಪಾದಗಳಿಗೆ ಟವೆಲ್ ಸುತ್ತಿ. ತೊಡೆಯ ಹಿಂಭಾಗದಲ್ಲಿ ಹಿಗ್ಗಿಸುವಿಕೆಯನ್ನು ಅನುಭವಿಸುವವರೆಗೆ ನಿಮ್ಮ ಕಾಲುಗಳನ್ನು ನಿಧಾನವಾಗಿ ಮೇಲಕ್ಕೆತ್ತಿ. ಸುಮಾರು 30 ಸೆಕೆಂಡುಗಳ ಕಾಲ ಈ ಸ್ಥಾನವನ್ನು ಹಿಡಿದುಕೊಳ್ಳಿ ಮತ್ತು ನಂತರ ನಿಧಾನವಾಗಿ ನಿಮ್ಮ ಕಾಲುಗಳನ್ನು ಕೆಳಕ್ಕೆ ಇಳಿಸಿ. ಎರಡೂ ಕಾಲುಗಳನ್ನು ಒಟ್ಟಿಗೆ ಮೇಲಕ್ಕೆತ್ತಿ ಈ ವ್ಯಾಯಾಮವನ್ನು ಮಾಡುವುದು ಕಷ್ಟವಾಗಿದ್ದರೆ, ನೀವು ಒಂದು ಸಮಯದಲ್ಲಿ ಒಂದು ಕಾಲನ್ನು ಮೇಲಕ್ಕೆತ್ತಿ, ಸ್ಥಾನವನ್ನು ಹಿಡಿದುಕೊಳ್ಳಿ ಮತ್ತು ಅದನ್ನು ಕೆಳಕ್ಕೆ ತರಬಹುದು..

click me!