Health Tips : ವಾಕಿಂಗ್ ಬೋರ್ ಆಗಿದ್ರೆ ಹಿಮ್ಮುಖ ನಡಿಗೆ ಶುರು ಮಾಡಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಿ

By Contributor AsianetFirst Published Feb 19, 2022, 4:23 PM IST
Highlights

ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ವಾಕಿಂಗ್ ನಿಂದ ಸಾಕಷ್ಟು ಪ್ರಯೋಜನವಿದೆ. ಪ್ರತಿಯೊಬ್ಬರು ದಿನದಲ್ಲಿ ಸಾವಿರ ಹೆಜ್ಜೆಯಾದ್ರೂ ವಾಕ್ ಮಾಡ್ಲೇಬೇಕು. ವಾಕಿಂಗ್ ನಲ್ಲಿ ಸ್ವಲ್ಪ ಚೇಂಜ್ ಬೇಕು,ಆರೋಗ್ಯ ಮತ್ತಷ್ಟು ವೃದ್ಧಿಯಾಗ್ಬೇಕೆಂದ್ರೆ ಹೀಗೆ ಮಾಡಿ.
 

ಪ್ರತಿಯೊಬ್ಬರೂ ಫಿಟ್ (Fit) ಆಗಿರಲು ವಾಕಿಂಗ್ (Walking ) ಬಹಳ ಮುಖ್ಯ. ವೈದ್ಯ (Doctor) ರು ಕೂಡ ಬೆಳಿಗ್ಗೆ ವಾಕಿಂಗ್ ಮಾಡುವಂತೆ ಸಲಹೆ ನೀಡ್ತಾರೆ. ಮಾರ್ನಿಂಗ್ ವಾಕ್ (Morning walk )ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬೆಳಗಿನ ಜಾವ 3 ರಿಂದ 4 ಕಿಲೋಮೀಟರ್ ವಾಕಿಂಗ್  ಮಾಡುವುದರಿಂದ ನಿಮ್ಮ ಬೊಜ್ಜು ಕಡಿಮೆಯಾಗುವುದಲ್ಲದೆ ಇಡೀ ದೇಹ ಆರೋಗ್ಯವಾಗಿರುತ್ತದೆ. ಪ್ರತಿ ದಿನ ವಾಕಿಂಗ್ ಮಾಡಿ ನಿಮಗೆ ಬೋರ್ ಆಗಿದ್ದರೆ,ಬದಲಾವಣೆ ಬಯಸಿದ್ದರೆ ನೀವು ಇನ್ನೊಂದು ವಿಧಾನದ ಮೂಲಕ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. ನಿಮ್ಮ ಬೆಳಗಿನ ನಡಿಗೆಯನ್ನು ರಿವರ್ಸ್ ವಾಕ್ ಆಗಿ ಪರಿವರ್ತಿಸಬಹುದು. ಇದು ನಿಮ್ಮ ಆರೋಗ್ಯಕ್ಕೆ ಅನೇಕ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಇಂದು ರಿವರ್ಸ್ ವಾಕಿಂಗ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡ್ತೇವೆ. 

ರಿವರ್ಸ್ ವಾಕಿಂಗ್ ಎಂದರೇನು?
ನಾವು ಮುಂದೆ ಹೆಜ್ಜೆ ಹಾಕುತ್ತ ನಡೆಯುತ್ತೇವೆ. ಸಾಮಾನ್ಯವಾಗಿ ನಡೆಯುವ ಈ ವಿಧಾನವನ್ನು ವಾಕ್ ಎಂದು ಕರೆಯಲಾಗುತ್ತದೆ. ಆದರೆ, ಹೆಜ್ಜೆಯನ್ನು ಹಿಂದೆ ಹಾಕ್ತಾ ನಡೆಯುವುದನ್ನು ಹಿಮ್ಮುಖ ನಡಿಗೆ ಅಂದ್ರೆ ರಿವರ್ಸ್ ವಾಕ್ ಎಂದು ಕರೆಯಲಾಗುತ್ತದೆ. ಇದು ಸ್ವಲ್ಪ ವಿಚಿತ್ರವಾಗಿದೆ. ಹಿಮ್ಮುಖ ನಡಿಗೆ ನಡೆಯುವುದು ವಾಕಿಂಗ್ ಮಾಡಿದಷ್ಟು ಸುಲಭವಲ್ಲ. ಒಮ್ಮೆ ಅಭ್ಯಾಸವಾದಲ್ಲಿ ನೀವು ಆರಾಮವಾಗಿ ಇದನ್ನು ಮಾಡಬಹುದು. 

Latest Videos

 ತಜ್ಞರು ಹೇಳೋದೇನು? : 
ತಜ್ಞರ ಪ್ರಕಾರ ಹಿಮ್ಮುಖ ನಡಿಗೆ ಮಾಡುವುದರಿಂದ ವ್ಯಕ್ತಿಯ ಹೃದಯ, ಮನಸ್ಸು ಮತ್ತು ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ. ರಿವರ್ಸ್ ವಾಕಿಂಗ್ ನಿಮ್ಮ ಕ್ಯಾಲೊರಿಗಳನ್ನು ಸಾಮಾನ್ಯ ವಾಕಿಂಗ್‌ಗಿಂತ ಹೆಚ್ಚು ಬರ್ನ್ ಮಾಡುತ್ತದೆ. 
ಹಿಮ್ಮುಖ ನಡಿಗೆಯ 100 ಹೆಜ್ಜೆ ಸಾವಿರ ಹೆಜ್ಜೆಗೆ ಸಮ :   ಆರೋಗ್ಯ ತಜ್ಞ ಲೋರಿ ಶೆಮಾಕ್ ಪ್ರಕಾರ, ರಿವರ್ಸ್ ವಾಕಿಂಗ್‌ನ 100 ಹೆಜ್ಜೆಗಳು  ಸಾಮಾನ್ಯ ನಡಿಗೆಯ ಸಾವಿರ ಹೆಜ್ಜೆಗಳಿಗೆ ಸಮವಂತ. ರೆಟ್ರೊ ವಾಕಿಂಗ್‌ನಲ್ಲಿ  ವ್ಯಕ್ತಿಯ ಹೃದಯವು ವೇಗವಾಗಿ ಪಂಪ್ ಆಗುತ್ತದೆ. ಹೆಚ್ಚು ರಕ್ತ ಮತ್ತು ಆಮ್ಲಜನಕವು ದೇಹ, ಸ್ನಾಯುಗಳು ಮತ್ತು ಮೆದುಳಿನ ವಿವಿಧ ಭಾಗಗಳಿಗೆ ಪರಿಚಲನೆಯಾಗುತ್ತದೆ. ರೆಟ್ರೊ ವಾಕಿಂಗ್ ಸ್ನಾಯುಗಳು, ಗ್ಲುಟ್ಸ್ ಮತ್ತು ಕ್ವಾಡ್ರೈಸ್ಪ್ ಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮೆದುಳಿನ ಆರೋಗ್ಯಕ್ಕೆ ಇದು ಒಳ್ಳೆಯದು. 

ರಿವರ್ಸ್ ವಾಕಿಂಗ್ ನ ಪ್ರಯೋಜನಗಳು : 

ಹೃದಯಕ್ಕೆ ಒಳ್ಳೆಯದು : ರಿವರ್ಸ್ ವಾಕಿಂಗ್,  ಹೃದಯ ಮತ್ತು ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ. ನೀವು ಹೆಚ್ಚು ನಡೆದಂತೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.  

Health Tips : ಪ್ರಾಣಕ್ಕೆ ಕುತ್ತು ತರಬಹುದು ನಿದ್ರೆಯ ಈ ಸಮಸ್ಯೆ

ರಕ್ತದೊತ್ತಡ ನಿಯಂತ್ರಣ : ರಿವರ್ಸ್ ವಾಕಿಂಗ್ ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇನ್ಸುಲಿನ್ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮೂಳೆಗಳಿಗೆ ಬಲ : ರಿವರ್ಸ್ ವಾಕಿಂಗ್ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ಇದರೊಂದಿಗೆ ನಿಮ್ಮ ಶಕ್ತಿಯ ಮಟ್ಟವೂ ಹೆಚ್ಚುತ್ತದೆ.

ಕಣ್ಣಿಗೆ ಮದ್ದು : ಕಣ್ಣಿಗೆ ಇದು ಪ್ರಯೋಜನಕಾರಿ. ದೃಷ್ಟಿಯನ್ನು ಇದು ಸುಧಾರಿಸುತ್ತದೆ. ಹಿಮ್ಮುಖ ವಾಕಿಂಗ್ ನಿಂದ ಮಾನಸಿಕವಾಗಿಯೂ ನೀವು ಸದೃಢರಾಗುತ್ತೀರಿ. ಸಾಧ್ಯವಾದರೆ ರಿವರ್ಸ್ ವಾಕಿಂಗನ್ನು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ಮಾಡಬೇಕು. ಅದು ಕಣ್ಣಿಗೆ ಒಳ್ಳೆಯದು ಎನ್ನುತ್ತಾರೆ ತಜ್ಞರು.

No Plastic Please: ಬಿದಿರಿನ ಬ್ರಷ್ ಬಳಸಿ, ಪರಿಸರ ಉಳಿಸಿ

ತೂಕ ಇಳಿಕೆ : ರಿವರ್ಸ್ ವಾಕಿಂಗ್ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಕಡಿಮೆ ಸಮಯದಲ್ಲಿ ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ. ದೇಹದ ಸಮತೋಲನಕ್ಕೆ ಇದೊಂದು ಉತ್ತಮ ವ್ಯಾಯಾಮವೂ ಹೌದು.
ನಡಿಗೆಯಲ್ಲಿ ಸುಧಾರಣೆ : ಹಿಮ್ಮುಖ ನಡಿಗೆಯಿಂದ ನಮ್ಮ ನಡಿಗೆ ಶೈಲಿಯಲ್ಲಿ ಸುಧಾರಣೆಯಾಗುತ್ತದೆ. ಇದು ದೇಹದ ಸಮತೋಲನವು ಉತ್ತಮವಾಗಿಡಲು ನೆರವಾಗುತ್ತದೆ.

click me!