Yoga Health : ದೇಹದ ಈ ಮೂರು ಅಂಗಕ್ಕೆ ನಿಯಮಿತವಾಗಿ ಬೇಕು ಯೋಗಾಸನ

Published : Jun 03, 2022, 04:06 PM IST
Yoga Health : ದೇಹದ ಈ ಮೂರು ಅಂಗಕ್ಕೆ ನಿಯಮಿತವಾಗಿ ಬೇಕು ಯೋಗಾಸನ

ಸಾರಾಂಶ

ಬೆನ್ನು ನೋವು, ಸೊಂಟ ನೋವು ಈಗ ಕಾಮನ್. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇದನ್ನೇ ಹೇಳ್ತಾರೆ. ಆದ್ರೆ ನಮ್ಮ ಜೀವನ ಶೈಲಿ ಈ ನೋವಿಗೆ ಕಾರಣ ಎಂಬುದು ಅನೇಕರಿಗೆ ತಿಳಿದಿಲ್ಲ. ಹಾಗೆ ಅದಕ್ಕೆ ಮದ್ದೇನು ಎಂಬುದೂ ಗೊತ್ತಿಲ್ಲ.   

ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿ (Lifestyle) ಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಜನರು ಜಡ ಜೀವನ ಶೈಲಿಗೆ ಹೊಂದಿಕೊಂಡಿದ್ದಾರೆ. ಕುಳಿತು ಕೆಲಸ (Work) ಮಾಡುವವರಿಗೆ ಇದು ಅನಿವಾರ್ಯ ಕೂಡ. ಸತತ 8 ಗಂಟೆಗಳ ಕಾಲ ಕುಳಿತಲ್ಲೇ ಕುಳಿತು ಕೆಲಸ ಮಾಡುವವರಿದ್ದಾರೆ. ಇನ್ನು ಕೆಲವರು ಯಾವುದೇ ದೈಹಿಕ (Physical) ಕೆಲಸ ಮಾಡುವುದಿಲ್ಲ. ಟಿವಿ (TV ) ವೀಕ್ಷಣೆ, ನಿದ್ರೆ (Sleep) ಯನ್ನೇ ದಿನಚರಿ ಮಾಡಿಕೊಂಡಿರುತ್ತಾರೆ. ದೇಹದ ಯಾವುದೇ ಭಾಗಕ್ಕೆ ಸರಿಯಾದ ಚಲನೆ ಇರದ ಕಾರಣ ಅನೇಕ ಸಮಸ್ಯೆಗಳನ್ನು ಅವರು ಎದುರಿಸಬೇಕಾಗುತ್ತದೆ. ಜಡ ಜೀವನ ಶೈಲಿ ಅಳವಡಿಸಿಕೊಂಡಿರುವ ಜನರಲ್ಲಿ, ಸ್ನಾಯು ದೌರ್ಬಲ್ಯದ ಸಮಸ್ಯೆ ಹೆಚ್ಚು ಗೋಚರಿಸುತ್ತದೆ. ಅದರಲ್ಲೂ ವಿಶೇಷವಾಗಿ ಭುಜ, ಸೊಂಟ ಮತ್ತು ಕೋರ್ ಸ್ನಾಯುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಕುಳಿತಲ್ಲಿಯೇ ಕುಳಿತು ಕೆಲಸ ಮಾಡುವುದು ಅನಿವಾರ್ಯ ಎನ್ನುವವರು, ದಿನಚರಿಯಲ್ಲಿ ಯೋಗ ಆಸನಗಳನ್ನು ಸೇರಿಸುವ ಮೂಲಕ ಸಮಸ್ಯೆಯನ್ನು ಕಡಿಮೆ ಮಾಡಬಹುದು. ನಿಮ್ಮ ಬಿಡುವಿನ ಸಮಯದಲ್ಲಿ ಬೆಳಿಗ್ಗೆ ಅಥವಾ ಸಂಜೆ ನೀವು ಯೋಗ ಆಸನಗಳನ್ನು ಅಭ್ಯಾಸ ಮಾಡಬಹುದು.  
ನಿಯಮಿತವಾಗಿ ಯೋಗಾಸನಗಳನ್ನು ಅಭ್ಯಾಸ ಮಾಡುವ ಜನರು ಜಡ ಜೀವನಶೈಲಿಯಿಂದ ಉಂಟಾಗುವ ಸಮಸ್ಯೆಗಳಿಂದ ಪಾರಾಗ್ತಾರೆ ಎಂದು ಯೋಗ ತಜ್ಞರು ಹೇಳುತ್ತಾರೆ. ಜಡ ಜೀವನ ಶೈಲಿಯಿಂದ ಕಾಡುವ ಸೊಂಟ, ಸ್ನಾಯು ಹಾಗೂ ಭುಜದ ನೋವನ್ನು ಹೋಗಲಾಡಿಸಲು ಕೆಲ ಯೋಗಾಭ್ಯಾಸವನ್ನು ಪ್ರತಿ ದಿನ ಮಾಡಬೇಕು.  ಆ ಯೋಗಗಳು ಯಾವುವು ಎಂಬುದನ್ನು ನಾವಿಂದು ಹೇಳ್ತೇವೆ.

ಬೆನ್ನಿನ ಸಮಸ್ಯೆಗೆ ಯೋಗಾಸನಗಳು : ಜಡ ಜೀವನಶೈಲಿಯಿಂದಾಗಿ ಯುವಜನರಲ್ಲಿಯೂ ಬೆನ್ನುನೋವಿನ ಸಮಸ್ಯೆ ಹೆಚ್ಚುತ್ತಿದೆ. ಬೆನ್ನು ನೋವಿನಿಂದಾಗಿ ದಿನನಿತ್ಯದ ಕೆಲಸ ಮಾಡುವುದು ಕಷ್ಟವಾಗುತ್ತದೆ.  ಬೆನ್ನು ನೋವಿನ ಸಮಸ್ಯೆ ನಿವಾರಿಸಲು, ಬೆಕ್ಕು-ಹಸುವಿನ ಭಂಗಿ ( ಕ್ಯಾಟ್ – ಕೌ ಭಂಗಿ) ಆಸನವನ್ನು ನೀವು ಪ್ರತಿನಿತ್ಯ ಮಾಡಬೇಕು. ನಿಯಮಿತವಾಗಿ ಅಭ್ಯಾಸ ಮಾಡ್ತಾ ಬಂದಲ್ಲಿ, ಕ್ರಮೇಣ ನಿಮ್ಮ ಬೆನ್ನು ನೋವು ನಿಯಂತ್ರಣಕ್ಕೆ ಬರುತ್ತದೆ. ಇದಲ್ಲದೆ ಬೆನ್ನು ನೋವಿನ ಸಮಸ್ಯೆಯಿರುವವರು, ಸೇತುಬಂಧಾಸನ ಯೋಗವನ್ನು ಅಭ್ಯಾಸ ಮಾಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ಈ ಯೋಗಾಸನಗಳು ಸ್ನಾಯುಗಳಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಬೆನ್ನಿನ ಭಾಗವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.   

ತೆಳ್ಳಗೆ ಅಂತ ಬೇಜಾರಾ? ದಪ್ಪ ಆಗಬೇಕು ಅಂದ್ರೆ ಹೀಗ್ ಮಾಡಿ

ಕೋರ್ ಸ್ನಾಯುಗಳಿಗೆ ಯೋಗ : ಇಡೀ ದೇಹ ಸರಿಯಾದ ಕಾರ್ಯನಿರ್ವಹಣೆಗೆ ಕೋರ್ ಸ್ನಾಯುಗಳು ಅವಶ್ಯಕ. ಈ ಸ್ನಾಯುಗಳನ್ನು ಬಲಪಡಿಸಲು ಹಾಗೂ ಅದರ ಸಮಸ್ಯೆಯಿಂದ ದೂರವಿರಲು ನೌಕಾಸನ ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡಬಹುದು. ನೌಕಾಸನ ಯೋಗವು ಕಿಬ್ಬೊಟ್ಟೆಯ ಅಂಗಗಳನ್ನು ಉತ್ತಮವಾಗಿ ಇಡಲು ಸಹಾಯ ಮಾಡುತ್ತದೆ. ಜೊತೆಗೆ ಮಂಡಿರಜ್ಜುಗಳಲ್ಲಿನ ಬಿಗಿತವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದ ನಮ್ಯತೆಯನ್ನು ಸುಧಾರಿಸುತ್ತದೆ.

ಪ್ರೆಗ್ನೆನ್ಸಿಯಲ್ಲಿ ಮಧುಮೇಹ, ಹುಷಾರಾಗಿದ್ದರೆ ನಿಯಂತ್ರಣ ಸುಲಭ

ಭುಜದ ಸಮಸ್ಯೆಗೆ ಯೋಗ : ಕಂಪ್ಯೂಟರ್ ಮುಂದೆ ಜನರು ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತಿರುತ್ತಾರೆ. ಕುಳಿತಲ್ಲಿಯೇ ಕೈಗಳಿಗೆ ವ್ಯಾಯಾಮ ನೀಡುವುದಿಲ್ಲ. ಸದಾ ಒಂದೇ ಭಂಗಿಯಲ್ಲಿ ಕುಳಿತು ಕೆಲಸ ಮಾಡುವುದ್ರಿಂದ ಹಾಗೂ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಮಾಡಿಕೊಳ್ಳದ ಕಾರಂ ಭುಜ ನೋವಿನ ಸಮಸ್ಯೆ ಕಾಡುತ್ತದೆ. ಹೆಪ್ಪುಗಟ್ಟಿದ ಭುಜಗಳ ಸಮಸ್ಯೆ ಜನರಲ್ಲಿ ಸಾಕಷ್ಟು ಹೆಚ್ಚಾಗಿದೆ. ಪಶ್ಚಿಮೋತ್ಥಾನಾಸನ ಯೋಗದ ನಿಯಮಿತ ಅಭ್ಯಾಸವು ಭುಜದ ಸಮಸ್ಯೆಗಳನ್ನು ಕಡಿಮೆ ಮಾಡಲು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಈ ಯೋಗಾಸನವು ಭುಜಗಳು ಮತ್ತು ಬೆನ್ನುಮೂಳೆಯನ್ನು ಉತ್ತಮವಾಗಿ ಹಿಗ್ಗಿಸುವ ಜೊತೆಗೆ ಸ್ನಾಯುಗಳ ಮೇಲೆ ಬಿದ್ದ ಹೆಚ್ಚುವರಿ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಯೋಗದ ನಿಯಮಿತ ಅಭ್ಯಾಸವು ಭುಜಗಳ ಜೊತೆಗೆ ಬೆನ್ನು ಮತ್ತು ಬೆನ್ನುಮೂಳೆಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

 


 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?