Hair Health: ನಯಾಪೈಸೆ ಖರ್ಚಿಲ್ಲದೆ ಕೂದಲ ಆರೋಗ್ಯ ಹೀಗೆ ಕಾಪಾಡಿಕೊಳ್ಳಿ

Published : Jul 12, 2022, 12:20 PM IST
Hair Health: ನಯಾಪೈಸೆ ಖರ್ಚಿಲ್ಲದೆ ಕೂದಲ ಆರೋಗ್ಯ ಹೀಗೆ ಕಾಪಾಡಿಕೊಳ್ಳಿ

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಸಾಮಾನ್ಯ ಸಂಗತಿಯಾಗಿದೆ. ಅನೇಕ ಕಾರಣಕ್ಕೆ ಕೂದಲು ಉದುರುತ್ತಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿದ್ರೂ ಕೂದಲ ಬೆಳವಣಿಗೆ ಸಾಧ್ಯವಾಗ್ತಿಲ್ಲ. ಅಂಥವರು ಸರಳ ಯೋಗದ ಮೂಲಕ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು.  

ದಟ್ಟವಾದ, ಉದ್ದನೆಯ, ಕಪ್ಪು ಕೂದಲು (Black Hair) ಈಗ ಕನಸಿನ ಮಾತು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಕೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದಾರೆ. ಕೂದಲು ಸೌಂದರ್ಯ (Beauty) ದ ಪ್ರಮುಖ ಭಾಗವಾಗಿದೆ. ದಟ್ಟ ಕೂದಲು ಎಲ್ಲರನ್ನು ಆಕರ್ಷಿಸುತ್ತದೆ. ಆದ್ರೆ ಈಗಿನ ಜೀವನ ಶೈಲಿ (Lifestyle), ಆಹಾರ, ಒತ್ತಡದ ಬದುಕು ಕೂದಲಿನ ಸೌಂದರ್ಯವನ್ನು ಹಾಳು ಮಾಡಿದೆ. ವಯಸ್ಸಿಗೆ ಮೊದಲೇ ಕೂದಲು ಬೆಳ್ಳಗಾಗ್ತಿದೆ. ಕೂದಲು ಉದುರ್ತಿದ್ದರೆ ನಾವು  ತಾತ್ಕಾಲಿಕ ಪರಿಹಾರಗಳನ್ನು ಹುಡುಕುತ್ತೇವೆ. ಉದಾಹರಣೆಗೆ ಕಾಸ್ಮೆಟಿಕ್ ಉತ್ಪನ್ನಗಳು ಅಥವಾ ಹೇರ್ ಸ್ಟೈಲಿಂಗ್ ಉತ್ಪನ್ನಗಳ ಬಳಕೆ ಮಾಡ್ತೇವೆ. ಆದ್ರೆ ದೀರ್ಘಕಾಲ ಇವುಗಳ ಬಳಕೆ ನಮ್ಮ ಆರೋಗ್ಯಕ್ಕೆ ಹಾನಿಕಾರಕ. ಯೋಗ, ಆರೋಗ್ಯಕರ ಕೂದಲಿಗೆ ಒಳ್ಳೆಯದು. ಯೋಗದ ಮೂಲಕ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳಬಹುದು. ನಯಾಪೈಸೆ ಖರ್ಚಿಲ್ಲದೆ ನಾವು ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು. ಕೂದಲು ಉದುರುವುದನ್ನು ತಡೆಯಲು ಮತ್ತು ಕೂದಲನ್ನು ಆರೋಗ್ಯವಾಗಿಡಲು ಯೋಗ ಉತ್ತಮ ಮಾರ್ಗವಾಗಿದೆ. ನಿಯಮಿತ ಕೂದಲ ಮಸಾಜ್, ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಇದು ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ಬೇರುಗಳನ್ನು ಬಲಪಡಿಸುತ್ತದೆ ಮತ್ತು ಕೂದಲನ್ನು ಪೋಷಿಸುತ್ತದೆ. ಕೂದಲು ಉದುರುವುದನ್ನು ತಡೆಯಲು ಯಾವ ಯೋಗಾಸನ ಬೆಸ್ಟ್ ಎಂಬುದನ್ನು ನಾವಿಂದು ಹೇಳ್ತೇವೆ. 

ಕೂದಲು ಉದುರುವಿಕೆಯನ್ನು ತಡೆಯಲು ಉತ್ತಾನಾಸನ : ಉತ್ತಾನಾಸನ ಯೋಗವು ದೇಹದ ಮೇಲ್ಭಾಗದಲ್ಲಿ ರಕ್ತ ಪರಿಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಕೂದಲು ಉದುರುವಿಕೆಯಿಂದ ಬಳಲುತ್ತಿರುವವರಿಗೆ ಪರಿಹಾರ  ನೀಡುತ್ತದೆ. ಈ ಆಸನವು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಇದು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಕೂದಲಿನ ಗುಣಮಟ್ಟವನ್ನು ಸುಧಾರಿಸುತ್ತದೆ.    

ಇದನ್ನೂ ಓದಿ: ಪ್ರೆಗ್ರೆನ್ಸಿ ಟೆಸ್ಟ್ ಕಿಟ್ ಸರಿಯಾದ ರೀತಿಯಲ್ಲಿ ಬಳಸೋದು ಹೇಗೆ ?

ಕೂದಲು ಬೆಳವಣಿಗೆಗೆ ಯೋಗ ಬಾಲಾಯಾಮ  : ಬಾಲಾಯಾಮ ಯೋಗವು ಪ್ರಾಚೀನ ಪುಸ್ತಕಗಳಲ್ಲಿ ಉಲ್ಲೇಖಿಸಲಾದ ಸರಳ ಮತ್ತು ನೈಸರ್ಗಿಕ ಯೋಗ ವ್ಯಾಯಾಮಗಳಲ್ಲಿ ಒಂದಾಗಿದೆ. ನಮ್ಮ ಉಗುರುಗಳ ಅಡಿಯಲ್ಲಿ ನರ ತುದಿಗಳಿವೆ. ಅದು ಕೂದಲು ಕಿರುಚೀಲಗಳಿಗೆ ರಕ್ತ ಪೂರೈಕೆಯನ್ನು ಉತ್ತೇಜಿಸುತ್ತದೆ. ಬಾಲಾಯಾಮ ಯೋಗವನ್ನು ಮಾಡಲು  ಮೊದಲನೆಯದಾಗಿ ಚಾಪೆಯ ಮೇಲೆ  ಪದ್ಮಾಸನ ಅಥವಾ ಸುಖಾಸನದಲ್ಲಿ ಕುಳಿತುಕೊಳ್ಳಿ. ನಿಮ್ಮ ಎರಡು ಕೈಗಳನ್ನು ಒಟ್ಟಿಗೆ ತಂದು ಎರಡೂ ಕೈಗಳ ಉಗುರುಗಳನ್ನು ಮಾತ್ರ ಉಜ್ಜಿಕೊಳ್ಳಿ. 5 ರಿಂದ 10 ನಿಮಿಷಗಳ ಕಾಲ ಈ ಆಸನವನ್ನು ಮಾಡಿ. ಇದು ಕೂದಲು ಬೆಳವಣಿಗೆಗೆ ಪ್ರಯೋಜನಕಾರಿ.  

ಅಧೋಮುಖ ಶ್ವಾನಾಸನ : ಅಧೋಮುಖ ಶ್ವಾನಾಸನ ಭಂಗಿ ಮಾಡುವಾಗ ತಲೆ ಕೆಳಗೆ ಬರುತ್ತದೆ. ಇದು ತಲೆಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ದೇಹವನ್ನು ವಿಶ್ರಾಂತಿಗೊಳಿಸಲು ಮತ್ತು ಕೂದಲಿನ ಬೆಳವಣಿಗೆಯನ್ನು ಪ್ರಚೋದಿಸಲು ಇದು ಅತ್ಯುತ್ತಮ ಆಸನವಾಗಿದೆ.  

ಕೂದಲುದುರುವ ಸಮಸ್ಯೆಗೆ ಪರಿಹಾರ ವಜ್ರಾಸನ : ಕೂದಲು ಉದುರುವಿಕೆಯನ್ನು ತಡೆಯಲು ವಜ್ರಾಸನ  ಬಹಳ ಒಳ್ಳೆಯದು.  ಜೀರ್ಣಕ್ರಿಯೆ ಸರಿಯಾಗಿ ಆಗದೆ ಹೋದ್ರೆ ಕೂದಲು ಉದುರಲು ಶುರುವಾಗುತ್ತದೆ. ವಜ್ರಾಸನ ಯೋಗದ ನಿಯಮಿತ ಅಭ್ಯಾಸವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ. ಜೀರ್ಣಕ್ರಿಯೆ ಸರಿಯಾದ್ರೆ ಕೂದಲುದುರುವ ಸಮಸ್ಯೆ ಕಡಿಮೆಯಾಗುತ್ತದೆ.  

ಇದನ್ನೂ ಓದಿ: ಆಪ್ತರ ಸಾವಿನ ದುಃಖದಿಂದ ಹಾರ್ಟ್‌ ಫೈಲ್ಯೂರ್‌ ಸಾಧ್ಯತೆ ಹೆಚ್ಚು!

ಕೂದಲಿಗೆ ಬಲ ನೀಡಲು ಶಿರ್ಸಾಸನ : ಶಿರ್ಸಾಸನ ತಲೆ ಮತ್ತು ನೆತ್ತಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಈ ಆಸನವು ಕೂದಲಿನ ಬುಡದ ಆರೋಗ್ಯವನ್ನು ಕಾಪಾಡುತ್ತದೆ. ಇದ್ರ ನಿರಂತರ ಅಭ್ಯಾಸವು ನಿಮಗೆ ಬಲವಾದ ಮತ್ತು ಆರೋಗ್ಯಕರ ಕೂದಲನ್ನು ನೀಡಲು ನೆರವಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ ಒತ್ತಡವನ್ನು ಕಡಿಮೆ ಮಾಡುತ್ತದೆ.  

ಉದ್ದದ ಕೂದಲಿಗೆ ಉಸ್ಟ್ರಾಸನ : ಉಸ್ತ್ರಾಸನ ಯೋಗವು ನಮ್ಮ ಕೂದಲನ್ನು ಬಲಪಡಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಉಸ್ತ್ರಾಸನವು ಮೆದುಳಿಗೆ ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಉಸಿರಾಟವನ್ನು ಸುಧಾರಿಸುತ್ತದೆ. ಕೂದಲಿನ ಬೆಳವಣಿಗೆ, ಆರೋಗ್ಯ ಮತ್ತು ಧನಾತ್ಮಕ ಶಕ್ತಿ ವೃದ್ಧಿಗೆ ಇದು ಪ್ರಯೋಜನಕಾರಿಯಾಗಿದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಿನ ಈ 7 ಅಭ್ಯಾಸಗಳು ವಯಸ್ಸಾಗೋದನ್ನ ನಿಧಾನಗೊಳಿಸುತ್ತೆ!
ಕೆಸಿ ಜನರಲ್ ಆಸ್ಪತ್ರೆಗೆ ಬಂತು CBNAAT ಯಂತ್ರ; 90 ನಿಮಿಷದಲ್ಲಿ ಕ್ಷಯ ರೋಗ ಪತ್ತೆ-ದಿನೇಶ್ ಗುಂಡೂರಾವ್