
ನಮ್ಮ ದೇಹದಲ್ಲಿ ವಾತ, ಪಿತ್ತ ಮತ್ತು ಕಫ ಸಮತೋಲನದಲ್ಲಿದ್ದರೆ ಆರೋಗ್ಯವಾಗಿರಲು ಸಾಧ್ಯ. ಇವುಗಳಲ್ಲಿ ಯಾವುದೇ ಒಂದು ಹೆಚ್ಚು, ಕಡಿಮೆಯಾದ್ರೂ ಅನೇಕ ಆರೋಗ್ಯ ಸಮಸ್ಯೆ ಕಾಡುತ್ತದೆ. ವಾಯು ದೋಷ ಗಾಳಿಯಿಂದ, ಕಫ ದೋಷ ನೀರಿನಿಂದ ಮತ್ತು ಪಿತ್ತ ದೋಷ ಅಗ್ನಿಯಿಂದ ಉಂಟಾಗುತ್ತದೆ. ಪಿತ್ತ ದೋಷದಿಂದ 40 ಬಗೆಯ ರೋಗಗಳು ನಮ್ಮ ದೇಹವನ್ನು ಕಾಡುತ್ತವೆ. ಈ ರೋಗಗಳು ನಮ್ಮನ್ನು ಕಾಡಬಾರದು ಅಂದ್ರೆ ನಾವು ಇವುಗಳನ್ನು ಶೀಘ್ರ ಸಮತೋಲನಗೊಳಿಸಬೇಕು.
ದೇಹದಲ್ಲಿ ಪಿತ್ತ (Pitta) ಹೆಚ್ಚಾದ್ರೆ ಕೆಂಪು ದದ್ದುಗಳು ಕಾಣಿಸಿಕೊಳ್ಳುತ್ತವೆ. ಸಿಟ್ಟು ಹೆಚ್ಚಾಗಿ ಬರುತ್ತದೆ. ಆಮ್ಲೀಯತೆ, ಅಜೀರ್ಣ ಮತ್ತು ಮಲಬದ್ಧತೆ ಕೂಡ ಪಿತ್ತ ದೋಷದಿಂದ ನಮ್ಮನ್ನು ಕಾಡುತ್ತದೆ. ಪಿತ್ತ ಕಡಿಮೆ ಮಾಡಲು ನಾವು ಆಹಾರ (Food) ಕ್ಕೆ ಹೆಚ್ಚಿನ ಗಮನ ನೀಡಬೇಕು. ಪಿತ್ತ ದೋಷ ಕಡಿಮೆಯಾಗಬೇಕು ಎನ್ನುವವರು ಶೀತ ಮತ್ತು ಸಿಹಿ ಪದಾರ್ಥಗಳನ್ನು ಸೇವಿಸಬೇಕು. ಇದಲ್ಲದೆ ಕೆಲ ಯೋಗ (Yoga) ಗಳು ಕೂಡ ಪಿತ್ತ ದೋಷವನ್ನು ಶಾಂತಗೊಳಿಸುತ್ತದೆ. ನಾವಿಂದು ಪಿತ್ತದೋಷ ಕಡಿಮೆ ಮಾಡುವ ಯೋಗಗಳ ಬಗ್ಗೆ ಮಾಹಿತಿ ನೀಡ್ತೇವೆ.
Health Tips : ವ್ಯಾಯಾಮ ಮಾಡುವಾಗ ಆಕಳಿಕೆ ಬಂದ್ರೆ ಅದು ಆಲಸ್ಯವಲ್ಲ.. ಕಾರಣ ಇಲ್ಲಿದೆ
ಪಿತ್ತ ದೋಷ ಕಡಿಮೆ ಮಾಡುತ್ತೆ ಈ ಯೋಗಾಸನ :
ಶಶಾಂಕಾಸನ (Shashankasana) : ಯಾವುದೇ ಯೋಗವನ್ನಾದ್ರೂ ನಿಯಮಿತವಾಗಿ ಮಾಡ್ಬೇಕು. ಶಶಾಂಕಾಸನವನ್ನು ಕೂಡ ನೀವು ನಿಯಮಿತವಾಗಿ ಅಭ್ಯಾಸ ಮಾಡಬೇಕು. ಇದನ್ನು ಮನೆಯಲ್ಲಿ ಸುಲಭವಾಗಿ ನೀವು ಮಾಡಬಹುದು. ಈ ಆಸನ ಮಾಡಲು ನಿಮಗೆ ಹೆಚ್ಚು ಸಮಯದ ಅಗತ್ಯವಿಲ್ಲ. ಆದ್ರೆ ಇದ್ರಿಂದ ಹೆಚ್ಚು ಪ್ರಯೋಜನ ಸಿಗುತ್ತದೆ.
• ಒತ್ತಡ (Stress) ಮತ್ತು ಆತಂಕ ಕಡಿಮೆ ಮಾಡಲು ನೀವು ಶಶಾಂಕಾಸನ ಮಾಡಬೇಕು.
• ಸಣ್ಣ ಸಣ್ಣ ವಿಷ್ಯಕ್ಕೆ ಕೋಪಗೊಳ್ಳುವ ವ್ಯಕ್ತಿಗಳು ಕೂಡ ಶಶಾಂಕಾಸನ ಮಾಡ್ಬೇಕು.
• ಮೊದಲೇ ಹೇಳಿದಂತೆ ಪಿತ್ತ ಹೆಚ್ಚಾದಾಗ ಕೋಪ ಮತ್ತು ಉದ್ವೇಗ ಹೆಚ್ಚಾಗುತ್ತದೆ. ನಿಮಗೆ ಪಿತ್ತ ಹೆಚ್ಚಾಗಿದೆ ಎಂದಾಗ ಶಶಾಂಕಾಸವನ್ನು ಮಾಡಿ. ಇದರಿಂದ ಪಿತ್ತ ದೋಷ ಕಡಿಮೆಯಾಗುತ್ತದೆ.
• ಶಶಾಂಕಾಸನ ಮಾಡುವುದ್ರಿಂದ ಜೀರ್ಣಾಂಗ ವ್ಯವಸ್ಥೆ, ಯಕೃತ್ತು ಮತ್ತು ಮೂತ್ರಪಿಂಡ ಬಲಗೊಳ್ಳುತ್ತದೆ.
• ಬೆನ್ನು, ಕೈ ಕಾಲುಗಳ ಸ್ನಾಯುಗಳು ಇದ್ರಿಂದ ಬಲಗೊಳ್ಳುತ್ತವೆ.
• ಹೃದಯ ರೋಗಕ್ಕೆ ಇದು ಒಳ್ಳೆಯ ಆಸನ.
• ಜ್ಞಾಪಕ ಶಕ್ತಿ ಕಡಿಮೆಯಾಗಿದೆ, ಶ್ವಾಸಕೋಶದ ಶಕ್ತಿ ಕುಗ್ಗುತ್ತಿದೆ ಎನ್ನುವವರು ನೀವಾಗಿದ್ದರೆ ಪ್ರತಿ ನಿತ್ಯ ಶಶಾಂಕಾಸನ ಮಾಡಿ.
ಈ ಯೋಗ ಮಾಡಿದ್ರೆ ವಯಸ್ಸಾದ್ರೂ ನೀವು ಯಂಗ್ ಆಗಿ ಕಾಣ್ತೀರಿ
ಗೋಮುಖಾಸನ (Gomukhasana) : ನೋಡಲು ಕಷ್ಟವೆನ್ನಿಸಿದ್ರೂ ಗೋಮುಖಾಸನ ಮಾಡುವುದು ಬಹಳ ಸರಳ. ಹಾಗೆಯೇ ಇದ್ರಿಂದ ಪ್ರಯೋಜನ ಹೆಚ್ಚು. ಕೈ ಹಾಗೂ ಕಾಲು ಎರಡಕ್ಕೂ ಇದು ವ್ಯಾಯಾಮ ನೀಡುತ್ತದೆ. ಗೋಮುಖಾಸನ ಮಾಡುವುದ್ರಿಂದ ಪಿತ್ತದಿಂದ ಕಾಡುವ ಎಲ್ಲ ಸಮಸ್ಯೆ ಕಡಿಮೆಯಾಗುತ್ತದೆ. ಒತ್ತಡ ಕೂಡ ಶಮನವಾಗುತ್ತದೆ. ಕೈ, ಕಾಲುಗಳ ಸ್ನಾಯು ಬಲಪಡೆಯುತ್ತದೆ. ಭುಜ ಹಾಗೂ ಕುತ್ತಿಗೆಗೂ ಇದು ಒಳ್ಳೆಯದು. ಗರ್ಭಕಂಠದ ಸಮಸ್ಯೆಗೆ ಪರಿಹಾರ ನೀಡುತ್ತದೆ. ಮೂತ್ರಪಿಂಡ ಹಾಗೂ ಜೀರ್ಣಾಕ್ರಿಯೆಯನ್ನು ಸುಧಾರಿಸುವ ಕೆಲಸ ಮಾಡುತ್ತದೆ.
ಯೋಗ ಮುದ್ರಾಸನ (Yoga Mudrasana) : ಪಿತ್ತ ದೋಷವನ್ನು ಶಮನಗೊಳಿಸಲು ಯೋಗಮುದ್ರಾಸನ ಅತ್ಯುತ್ತಮ ಯೋಗಾಸನವಾಗಿದೆ. ಇದು ಮನಸ್ಸು ಶಾಂತಗೊಳಿಸಲು ನೆರವಾಗುತ್ತದೆ. ಕೋಪ, ಒತ್ತಡ, ಆತಂಕ ಮತ್ತು ಖಿನ್ನತೆಯಿಂದ ಮುಕ್ತಿ ಸಿಗುತ್ತದೆ. ಸಣ್ಣ ಕರುಳನ್ನು ಬಲಪಡಿಸುವ ಜೊತೆಗೆ ಮಧುಮೇಹ ರೋಗಿಗಳಿಗೆ ಯೋಗ ಮುದ್ರಾಸನ ಪ್ರಯೋಜನಕಾರಿ. ಪ್ರತಿ ನಿತ್ಯ ನೀವು ಇದನ್ನು ಮಾಡ್ತಾ ಬಂದಲ್ಲಿ ಯಕೃತ್ತಿನ ಆರೋಗ್ಯ ಸುಧಾರಿಸುತ್ತದೆ. ಹೊಟ್ಟೆಯ ಸಮಸ್ಯೆ ಕಡಿಮೆಯಾಗುತ್ತದೆ. ಜೀರ್ಣಕ್ರಿಯೆ ಸಮಸ್ಯೆಯಿರುವವರು ಕೂಡ ಈ ಯೋಗ ಮುದ್ರಾಸನವನ್ನು ನಿಯಮಿತವಾಗಿ ಮಾಡಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.