ಆಫೀಸ್ (Office)ನಲ್ಲಿ ಬಾಸ್ ಬೈಗುಳ, ಮನೆಯಲ್ಲಿ ಹೆಂಡತಿ-ಮಕ್ಕಳ ಕಿರಿಕಿರಿ. ಒಟ್ಟಾರೆ ಫುಲ್ ಟೆನ್ಶನ್ ತಲೆ ಸಿಡಿದು ಹೋಗ್ತಾ ಇದೆ ಅನಿಸ್ತಿದ್ಯಾ. ಸ್ಪಲ್ಪ ರಿಲ್ಯಾಕ್ಸ್ (Relax) ಆಗೋಣ ಅಂತ ತಕ್ಷಣಕ್ಕೆ ಹೋಗಿ ಟೀ (Tea), ಕಾಫಿ ಕುಡಿಬೇಡಿ. ಇದರಿಂದ ಆರೋಗ್ಯ (Health) ಹದಗೆಡುವ ಸಾಧ್ಯತೆಯೂ ಇದೆ.
ಸಾಮಾನ್ಯವಾಗಿ ಟೆನ್ಶನ್ ಆದಾಗ ಎಲ್ಲರೂ ಒಂದು ಕ್ಷಣ ಏನು ಮಾಡಬೇಕು ಎಂದು ತಿಳಿಯದೆ ಕಂಗೆಟ್ಟು ಹೋಗುತ್ತಾರೆ. ಕೆಲವೊಬ್ರು ಇನ್ನೊಬ್ಬರ ಮೇಲೆ ಸಿಟ್ಟು ತೋರಿಸಿಕೊಂಡು ರಿಲೀಫ್ ಆಗಿಬಿಡ್ತಾರೆ. ಇನ್ನು ಕೆಲವರು ಸುಮ್ಮನೆ ಯಾರಲ್ಲೂ ಮಾತನಾಡದೆ ಒಂದೆಡೆ ಕುಳಿತುಬಿಡುತ್ತಾರೆ. ಆದರೆ ಹೆಚ್ಚಿನವರು ಟೆನ್ಶನ್ ಆದಾಗ ಮಾಡೋದು ಥಟ್ಟಂತ ಹೋಗಿ ಸ್ಟ್ರಾಂಗ್ ಟೀ, ಕಾಫಿ ಕುಡಿಯೋದು. ಆದರೆ ನಿಮಗೆ ಗೊತ್ತಾ..? ನೀವು ಒತ್ತಡದಲ್ಲಿದ್ದಾಗ ಸೇವಿಸುವ ಆಹಾರ ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ನೀವು ವಿಪರೀತ ಟೆನ್ಶನ್, ಒತ್ತಡದಲ್ಲಿದ್ದಾಗ ಏನನ್ನು ತಿನ್ನುತ್ತಿದ್ದೀರಿ, ಕುಡಿಯುತ್ತಿದ್ದೀರಿ ಗಮನಿಸಿಕೊಳ್ಳಿ. ಟೆನ್ಶನ್‌ನಲ್ಲಿದ್ದಾಗ ಈ ಕೆಳಗೆ ಸೂಚಿಸಿದ ಆಹಾರಗಳನ್ನು ತಿನ್ನುವ ತಪ್ಪನ್ನು ಮಾಡದಿರಿ.
ಒತ್ತಡದಲ್ಲಿದ್ದಾಗ ಈ ಆಹಾರ ಸೇವಿಸಬೇಡಿ
ನಾವು ಸೇವಿಸುವ ಆಹಾರಗಳು, ಪಾನೀಯಗಳು ನಮ್ಮ ದೇಹಕ್ಕೆ ಚೈತನ್ಯ, ಹೊಸ ಹುರುಪನ್ನು ನೀಡುತ್ತದೆ. ನಮಗಿಷ್ಟವಾದ ತಿಂಡಿಯನ್ನು ತಿಂದಾಗ ನಾವು ಖುಷಿಪಡುತ್ತೇವೆ. ಇಷ್ಟವಿಲ್ಲದ ತಿಂಡಿಯನ್ನು ತಿಂದಾಗ ಮುಖವನ್ನು ಸಿಂಡರಿಸುತ್ತೇವೆ. ಹೀಗಾಗಿಯೇ ಆಹಾರ ಎಂಬುದು ಕೇವಲ ಬಾಯಿರುಚಿ ಮಾತ್ರವಲ್ಲ ದೈಹಿಕ, ಮಾನಸಿಕವಾಗಿಯೂ ಪರಿಣಾಮ ಬೀರುತ್ತದೆ. ಒತ್ತಡದಲ್ಲಿದ್ದಾಗ ನೀವು ಏನು ತಿನ್ನುತ್ತೀರೋ ಅದು ನಿಮ್ಮ ದೈಹಿಕ ಆರೋಗ್ಯದಲ್ಲಿ ಮಾತ್ರವಲ್ಲದೆ ನಿಮ್ಮ ಮಾನಸಿಕ ಆರೋಗ್ಯದಲ್ಲಿಯೂ ಪಾತ್ರ ವಹಿಸುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ಇಷ್ಟದ ಆಹಾರ ಸೇವಿಸಿದಾಗ ನಮ್ಮ ಮನಸ್ಸು ಆಹ್ಲಾದಗೊಳ್ಳುತ್ತದೆ. ಆದರೆ ಕೆಲವೊಂದು ಆಹಾರ, ಪಾನೀಯಗಳು ನಮ್ಮಲ್ಲಿ ಆಲಸ್ಯ, ನೀರಸ ಮತ್ತು ಕೋಪವನ್ನು ಹೆಚ್ಚಿಸುತ್ತದೆ. ಹೀಗಾಗಿಯೇ ಒತ್ತಡದಲ್ಲಿದ್ದಾಗ ಎದ್ದು ಹೋಗಿ ತಿನ್ನುವುದರ ಬದಲು ಏನು ತಿಂದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
Self Care Tips: ಪ್ರತಿನಿತ್ಯ ಸಂಜೆ 6 ಗಂಟೆಯ ನಂತರ ಹೀಗೆ ಮಾಡಿ, ಲೈಫ್ ಫುಲ್ ಹ್ಯಾಪಿ
ಟೀ, ಕಾಫಿ ಕುಡಿಯಬೇಡಿ
ಒತ್ತಡದಲ್ಲಿದ್ದಾಗ ಸ್ಟ್ರಾಂಗ್ ಕಾಫಿ, ಟೀ (Tea) ಮೊರೆ ಹೋಗುವುದು ದೊಡ್ಡ ತಪ್ಪು. ಟೀ ಕಾಫಿಯಲ್ಲಿ ಅಡಕವಾಗುವ ಕೆಫೀನ್ ಅಂಶ ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಟೆನ್ಶನ್ (Tension)ನಲ್ಲಿದ್ದಾಗ ಟೀ, ಕಾಫಿ ಕುಡಿಯುವುದರಿಂದ ಇದು ಮೂತ್ರಜನಕಾಂಗದ ಗ್ರಂಥಿಗಳ ಮೇಲೆ ಹಾನಿ ಉಂಟು ಮಾಡುವ ಸಾಧ್ಯತೆಗಳಿವೆ. ಎರಡು ಕಪ್‌ಗಳಿಗಿಂತ ಹೆಚ್ಚು ಟೀ, ಕಾಫಿ ಸೇವಿಸಿದರೆ ಇದು ಉರಿಯೂತಕ್ಕೆ ಕಾರಣವಾಗಬಹುದು.
ಮಾಂಸಾಹಾರ ಸೇವಿಸಬೇಡಿ
ಮೊಟ್ಟೆ (Egg), ಮಾಂಸ, ಮೀನು ಹೀಗೆ ಯಾವುದೇ ಮಾಂಸಾಹಾರವನ್ನು ಒತ್ತಡದಲ್ಲಿದ್ದಾಗ ತಿನ್ನಬಾರದು. ಇಂಥಹಾ ಆಹಾರಗಳಲ್ಲಿ ನೈಟ್ರೇಟ್, ಸಲ್ಫೆಟ್‌ಗಳಂತಹಾ ಅಂಶಗಳು ಹೆಚ್ಚಿರುತ್ತವೆ. ಈ ಅಂಶಗಳು ಹೊಟ್ಟೆನೋವಿಗೆ ಕಾರಣವಾಗುತ್ತದೆ. ನೈಟ್ರೇಟ್, ಸಲ್ಫೆಟ್ ಅಂಶದಿಂದ ಕರುಳಿಗೂ ಹಾನಿಯಾಗುತ್ತದೆ.
ಚಾಕೋಲೇಟ್, ಕುಕ್ಕೀ ತಿನ್ನಬೇಡಿ
ಒತ್ತಡದಲ್ಲಿದ್ದಾಗ ಕುಕ್ಕೀ ತಿನ್ನುವುದು ಉತ್ತಮ ಆಯ್ಕೆಯಲ್ಲ. ಕುಕ್ಕೀಯಲ್ಲಿ ಕೊಬ್ಬಿನಾಮ್ಲವನ್ನು ಹೈಡ್ರೋಜನೀಕರಿಸಿ ಇಡಲಾಗುತ್ತದೆ. ಇವುಗಳನ್ನು ಘನವಾಗಿಡಲು ವಸ್ತುವಿನಲ್ಲಿರುವ ಕೊಬ್ಬಿನಾಮ್ಲಗಳನ್ನು ಬದಲಾಯಿಸಲಾಗಿದೆ. ಹೀಗಾಗಿ ಒತ್ತಡದಲ್ಲಿ ಇದರ ಸೇವನೆ ಆರೋಗ್ಯ (Health)ಕ್ಕೆ ಹಾನಿಕಾರವಾಗಿದೆ. ಚಾಕೋಲೇಟ್, ಕುಕ್ಕೀ, ಕೇಕ್ ಮೊದಲಾದವುಗಳನ್ನು ಹಸಿವಾದಾಗ ಕುಕ್ಕೀ, ಚಾಕೋಲೇಟ್, ಕೇಕ್ ತಿಂದರೆ ಇದು ಇನ್ನಷ್ಟು ತಿನ್ನುವಂತೆ ಪ್ರೇರೇಪಿಸುತ್ತದೆ. ಇದರಿಂದ ದೇಹದ ತೂಕ ಹೆಚ್ಚಾಗಬಹುದು.
Health Tips: ಹಾಲಿನ ಜತೆ ಈ ಆಹಾರಗಳನ್ನು ಸೇವಿಸಿದರೆ ಜೀವಕ್ಕೇ ಅಪಾಯ..!
ಓಟ್ಸ್ ಸೇವಿಸಬೇಡಿ
ಓಟ್ಸ್ ಯಾವಾಗಲೂ ಸಕ್ಕರೆ ಮತ್ತು ಸಂಸ್ಕರಿಸಿದ ಕಾರ್ಬ್ಸ್‌ಗಳಿಂದ ತುಂಬಿರುತ್ತದೆ. ಹೀಗಾಗಿ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಒತ್ತಡದಲ್ಲಿದ್ದಾಗ ಓಟ್ಸ್‌ನ್ನು ಸೇವಿಸುವುದರಿಂದ ನೀವು ಇಡೀ ದಿನ ಭಾವನಾತ್ಮಕವಾಗಿ ಕುಗ್ಗಿರುತ್ತೀರಿ. ಇದು ಹಸಿವನ್ನು ಒಂದು ಕ್ಷಣಕ್ಕೆ ಮಾತ್ರ ತಗ್ಗಿಸುವುದರಿಂದ ಒತ್ತಡ ಕಡಿಮೆಯಾಗದೇ ಹಾಗೆಯೇ ಮುಂದುವರೆಯುತ್ತದೆ. ಹೀಗಾಗಿ ಮನಸ್ಸಿಗೆ ಸಿಟ್ಟು, ಗಾಬರಿ, ಒತ್ತಡ ಅನಿಸಿದಾಗ ಓಟ್ಸ್ ಸೇವನೆ ಸೂಕ್ತವಲ್ಲ.