World Homeopathy Day : ಮಾತ್ರೆ ಒಂದೇ ರೀತಿ ಕಂಡ್ರೂ ಹೋಮಿಯೋಪತಿಯಲ್ಲಿ ನೀಡಲಾಗುತ್ತೆ ಬೇರೆ ಬೇರೆ ಔಷಧಿ

By Suvarna News  |  First Published Apr 6, 2023, 2:48 PM IST

ಏಪ್ರಿಲ್ 10ರಂದು ವಿಶ್ವ ಹೋಮಿಯೋಪತಿ ದಿನವನ್ನು ಆಚರಿಸಲಾಗುತ್ತದೆ. ಈ ಹೋಮಿಯೋಪತಿಯಲ್ಲಿ ಎಲ್ಲ ಮಾತ್ರೆಗಳು ಚಿಕ್ಕದಾಗಿ, ಬೆಳ್ಳಗೆ ಕಾಣ್ತವೆ. ಆದ್ರೆ ಇದ್ರ ಶಕ್ತಿ ಬೇರೆಯಾಗಿರುತ್ತದೆ. ಒಂದೊಂದು ಮಾತ್ರೆಯೂ ಒಂದೊಂದು ರೋಗ ಗುಣಪಡಿಸುವ ಶಕ್ತಿ ಹೊಂದಿರುತ್ತದೆ.
 


ಕಲುಷಿತ ವಾತಾವರಣದ ಜೊತೆಗೆ ಕೆಟ್ಟ ವೈರಸ್ ಗಳು, ಅಶುದ್ಧ ಗಾಳಿ, ನೀರು ಮುಂತಾದವುಗಳ ಮಧ್ಯೆ ಸಿಲುಕಿ ಮನುಷ್ಯ ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಜರ್ಜರಿತನಾಗುತ್ತಿದ್ದಾನೆ. ಒತ್ತಡದ ಜೀವನ, ಆಹಾರ ಪದ್ಧತಿಗಳಿಂದ ಎಡಬಿಡದೆ ಆವರಿಸುವ ಖಾಯಿಲೆ, ಅನಾರೋಗ್ಯದಿಂದ ಬೇಸತ್ತಿದ್ದಾನೆ. ಯಾರನ್ನು ನೋಡಿದರೂ ಒಬ್ಬೊಬ್ಬರು ಒಂದೊಂದು ರೀತಿಯ ಸಮಸ್ಯೆಯಿಂದ, ಖಾಯಿಲೆಯಿಂದ ಕಂಗೆಟ್ಟಿದ್ದಾರೆ. ಅನಾರೋಗ್ಯ ಕಾಡಿದರೆ ಯಾವ ರೀತಿಯ ಚಿಕಿತ್ಸೆ ಪಡೆಯಬೇಕು. ಯಾವುದು ಸೂಕ್ತ, ಯಾವುದರಿಂದ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ ಎಂಬ ಗೊಂದಲಗಳು ಅವರನ್ನು ಕಾಡುತ್ತಿವೆ.

ಹೋಮಿಯೋಪತಿ(Homeopathy), ಆಯುರ್ವೇದಿಕ್ ಮತ್ತು ಅಲೋಪಥಿ ಈ ಮೂರು ವಿಧಗಳ ಪೈಕಿ ಯಾವುದಾದರೂ ಒಂದು ಪದ್ಧತಿಯ ಔಷಧಿ (Medicine) ಯನ್ನು ವೈದ್ಯರು ನೀಡುತ್ತಾರೆ. ಎಲ್ಲ ಪದ್ಧತಿಗಳೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ವೈದ್ಯಕೀಯ ಚಿಕಿತ್ಸಾ (Treatment)  ಪದ್ಧತಿಗಳ ಪೈಕಿ ಒಂದಾದ ಹೋಮಿಯೋಪತಿ ಚಿಕಿತ್ಸೆಯ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿವೆ.

Tap to resize

Latest Videos

Health Tips : ಏನೋ ಆತಂಕ, ಪದೆ ಪದೇ ಲಟಿಕೆ ತೆಗೀತಾನೇ ಇರ್ತೀರಾ? ಇದು ಒಳ್ಳೇಯದಲ್ಲ!

‘ಉಷ್ಣಂ ಉಷ್ಣೇನ ಶಮ್ಯತಿ’, ‘ವಿಷಸ್ಯ ವಿಷಮೌಷಧಂ’ ಎಂಬುದು ಹೋಮಿಯೋಪಥಿಯ ಮೂಲತತ್ವ. ಹೋಮಿಯೋಪಥಿಯ ಬೀಜ ಮಂತ್ರ ಲಾ ಆಫ್ ಸಿಮಿಲರ್ಸ್ ಅನ್ನೇ ಆಧಾರವಾಗಿಟ್ಟುಕೊಂಡು ಡಾ. ಸಿ ಎಫ್ ಸ್ಯಾಮುಯಲಲ್ ಹ್ಯಾನಿಮನ್ ಅವರು 170 ವರ್ಷಗಳ ಹಿಂದೆಯೇ ಈ ಔಷಧ ಪದ್ಧತಿಯನ್ನು ಜಾರಿಗೆ ತಂದಿದ್ದರು. 1755 ಏಪ್ರಿಲ್ 10 ರಂದು ಜನ್ಮತಳೆದ ಇವರು ತಮ್ಮ ಕೌಶಲ್ಯ ಹಾಗೂ ವೈಚಾರಿಕ ಮನೋಭಾವದಿಂದ ಅತ್ಯಂತ ಉತ್ತಮವಾದ ಈ ವೈದ್ಯಪದ್ಧತಿಯನ್ನು ಜಾರಿಗೆ ತಂದರು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವಂತೆ ಯಾವ ವಸ್ತುವು ರೋಗವನ್ನುಂಟುಮಾಡುತ್ತದೆಯೋ ಅದೇ ವಸ್ತುವಿಗೆ ರೋಗವನ್ನು ಗುಣಪಡಿಸುವ ಶಕ್ತಿ ಕೂಡ ಇದೆ ಎಂಬುದನ್ನು ಜಗತ್ತಿಗೆ ಸಾರಿದ ಮಹಾನುಭಾವ ಈತ.

ವಿಶ್ವ ಹೋಮಿಯೋಪತಿ ಡೇ : ಏಪ್ರಿಲ್ 10 ಅನ್ನು ವಿಶ್ವ ಹೋಮಿಯೋಪತಿ ದಿನವನ್ನು ಆಚರಿಸಲಾಗುತ್ತದೆ. ಹ್ಯಾನಿಮಲ್ ಅವರ ನೆನಪಿಗಾಗಿ ಅವರು ಹುಟ್ಟಿದ ದಿನವನ್ನೇ ಹೋಮಿಯೋಪಥಿ ದಿನವನ್ನಾಗಿ ಆಚರಿಸಲಾಗ್ತಿದೆ. ಪ್ರಸ್ತುತ ಈ ಪದ್ಧತಿ ಹೆಚ್ಚು ಪ್ರಚಲಿತದಲ್ಲಿದೆ. ಯಾವುದೇ ರೋಗವಾದರೂ ತ್ವರಿತವಾಗಿ ಕಾರ್ಯನಿರ್ವಹಿಸುವುದರಿಂದ ಹೆಚ್ಚಿನ ಜನರು ಈ ಪದ್ಧತಿಗೆ ಮೊರೆ ಹೋಗುತ್ತಾರೆ. ಭಾರತೀಯ ಮಾರುಕಟ್ಟೆಯ ಔಷಧೀಯ ಕೇಂದ್ರಗಳಲ್ಲಿ ಕೂಡ ಹೋಮಿಯೋಪಥಿ ಔಷಧಗಳು ಹೆಚ್ಚು ಮಾರಾಟವಾಗುತ್ತವೆ.  ಜರ್ಮನ್ ಚಿಕಿತ್ಸಕ ಹ್ಯಾನಿಮನ್ ಅವರ ನೆನಪಿನಲ್ಲಿ ವಿಶ್ವ ಹೋಮಿಯೋಪಥಿ ದಿನವನ್ನು ಆಚರಿಸಲಾಗುತ್ತದೆ.

Health Tips: ಸಸ್ಯಗಳಿಂದ ಮನುಷ್ಯನಿಗೆ ಬರುವ ಈ ರೋಗ ಯಾವುದು ಗೊತ್ತಾ?

ಈ ಎಲ್ಲ ರೋಗಗಳಿಗೆ ಹೋಮಿಯೋಪತಿ ಚಿಕಿತ್ಸೆ :  ಮಕ್ಕಳಿಗಾಗಲೀ ದೊಡ್ಡವರಿಗಾಗಲೀ ಎಲ್ಲ ರೀತಿಯ ಚಿಕಿತ್ಸೆ ಔಷಧಗಳು ಫಲಕಾರಿಯಾಗುವುದಿಲ್ಲ. ಅವರವರ ದೇಹ ಪ್ರಕೃತಿಗೆ ಅನುಗುಣವಾಗಿ ಔಷಧವನ್ನು ನೀಡಬೇಕಾಗುತ್ತದೆ. ಹೋಮಿಯೋಪಥಿಯಲ್ಲಿ ಅತೀ ಕಡಿಮೆ ಪ್ರಮಾಣದ ಔಷಧವನ್ನು ಕೊಟ್ಟು ಹೆಚ್ಚಿನ ಪ್ರಯೋಜನ ಸಿಗುವಂತೆ ಮಾಡಲಾಗುತ್ತದೆ. ಈ ಪದ್ಧತಿಯಲ್ಲಿ ಹೆಚ್ಚಿನ ಸಾಮಗ್ರಿಗಳ ಮಿಶ್ರಣವಿಲ್ಲದೆ ಶುದ್ಧವಾದ ಔಷಧವನ್ನು ತಯಾರಿಸಲಾಗುತ್ತದೆ. ಹೀಗೆ ತಯಾರಿಸಿದ ಔಷಧವನ್ನು ಮನುಷ್ಯನ ಶರೀರ, ಮನಸ್ಸು ಮತ್ತು ವಿಚಾರಗಳನ್ನು ಆಧಾರವಾಗಿಟ್ಟುಕೊಂಡು ಅದರ ಪ್ರಕಾರ ನೀಡಲಾಗುತ್ತದೆ. ಮಕ್ಕಳಿಗೆ ಬರುವಂತ ಖಾಯಿಲೆಗಳು, ಹೆರಿಗೆ, ಸ್ತ್ರೀ ರೋಗ, ಗಂಟುಗಳ ನೋವು, ಮಾನಸಿಕ ತೊಂದರೆಗಳು, ಲಿವರ್ ತೊಂದರೆ, ಎಸಿಡಿಟಿ ಸಮಸ್ಯೆ, ಸಾಂಕ್ರಾಮಿಕ ರೋಗಗಳಿಗೆ ಹೋಮಿಯೋಪಥಿ ಔಷಧವನ್ನು ನೀಡಲಾಗುತ್ತದೆ. ಕೋವಿಡ್ ಸಮಯದಲ್ಲಿಯೂ ಆರ್ಸೆನಿಕ್ ಆಲ್ಬಮ್ ಎಂಬ ಹೋಮಿಯೋಪತಿ ಮೆಡಿಸಿನ್ ಅನ್ನು ನೀಡಲಾಗಿತ್ತು.

ಹೋಮಿಯೋಪತಿಯ ಪ್ರಯೋಜನ : ಹೋಮಿಯೋಪಥಿ ಔಷಧಗಳು ಹೆಚ್ಚು ಸುರಕ್ಷಿತ. ಇದರಿಂದ ಯಾವುದೇ ಅಡ್ಡಪರಿಣಾವಗಳು ಆಗುವುದಿಲ್ಲ. ಬೇರೆ ಔಷಧಗಳನ್ನು ಸೇವಿಸುತ್ತಿರುವಾಗಲೂ ಇದನ್ನು ಸೇವಿಸಬಹುದು. ಏಕೆಂದರೆ ಇದು ಯಾವುದೇ ಔಷಧದ ಜೊತೆ ಬೆರೆಯುವುದಿಲ್ಲ. ಇದು ವ್ಯಕ್ತಿಯ ಶರೀರದ ಪ್ರತಿರೋಧಕ ವ್ಯವಸ್ಥೆಯನ್ನು ನಿಗ್ರಹಿಸದೇ ಇರುವುದರಿಂದ ಇದನ್ನು ದೀರ್ಘಕಾಲದ ತನಕ ಸೇವಿಸಬಹುದು. ರೋಗ ಒಂದೇ ಆಗಿದ್ದರೂ ವ್ಯಕ್ತಿಯಿಂದ ವ್ಯಕ್ತಿಗೆ ಔಷಧ ಬದಲಾಗುತ್ತದೆ ಎನ್ನುತ್ತೆ ಹೋಮಿಯೋಪತಿ.
 

click me!