ಕೈ ಲಟಿಕೆ ತೆಗೆದ್ರೆ ಹಿತವೆನ್ನಿಸುತ್ತೆ. ಕತ್ತಿನ ಲಟಿಕೆ ತೆಗೆದ್ರೆ ನೋವು ಕಡಿಮೆಯಾದಂತಾಗುತ್ತೆ. ಬೆರಳಿನ ಲಟಿಕೆ ತೆಗೆದಾಗ ಇಡೀ ದೇಹ ರಿಲ್ಯಾಕ್ಸ್ ಆದ ಅನುಭವವಾಗುತ್ತದೆ. ಹಾಗಾಗಿಯೇ ಜನರು ದಿನಕ್ಕೆ ಮೂರ್ನಾಲ್ಕು ಬಾರಿ ಲಟಿಕೆ ತೆಗೆಯೋ ಅಭ್ಯಾಸ ಮಾಡಿಕೊಳ್ತಾರೆ. ಆದ್ರೆ ಈ ನಿಮ್ಮ ಹವ್ಯಾಸ ಆರೋಗ್ಯಕ್ಕೆ ಹಾನಿ ಎಂಬುದು ನಿಮಗೆ ಗೊತ್ತಾ?
ನಾವು ದೃಷ್ಟಿ ತೆಗೆಯುವಾಗಲೋ ಅಥವಾ ಗಹನವಾದ ವಿಚಾರದಲ್ಲಿ ಮುಳುಗಿರುವಾಗಲೋ ಕೈಗಳ ಲಟಿಕೆಯನ್ನು ತೆಗೆಯುತ್ತೇವೆ. ಕೆಲವರಿಗೆ ಇದು ಒಂದು ರೀತಿಯ ಚಟವೇ ಆಗಿಬಿಡುತ್ತದೆ. ಕೈಗಳ ಹೊರತಾಗಿ ಬೆನ್ನು, ಕುತ್ತಿಗೆ ಮುಂತಾದ ಶರೀರದ ಭಾಗಗಳ ಲಟಿಕೆಗಳನ್ನು ಕೂಡ ತೆಗೆಯುವವರಿದ್ದಾರೆ. ಕೆಲವರು ಬೆಳಿಗ್ಗೆ ಎದ್ದೊಡನೆ ಲಟಿಕೆ ತೆಗೆಯುತ್ತಾರೆ. ಕಂಪ್ಯೂಟರ್ ಮುಂದೆ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುವ ಜನರಿಗೆ ಕೈ, ಕತ್ತಿನ ನೋವು ಕಾಣಿಸಿಕೊಳ್ಳೋದು ಸಾಮಾನ್ಯ. ಅದ್ರಿಂದ ಹೊರಗೆ ಬರಲು ಅವರು ಬ್ರೇಕ್ ಸಿಕ್ಕಾಗೆಲ್ಲ ಲಟಿಕೆ ಮೊರೆ ಹೋಗ್ತಾರೆ. ಇದು ಹಿತವಾದ ಅನುಭವ ನೀಡುತ್ತದೆ.
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಲಟಿಕೆ (Cracking) ತೆಗೆಯುತ್ತಾರೆ. ಹಾಗಾಗಿ ಲಟಿಕೆ ತೆಗೆಯುವ ಶೈಲಿ ಕೂಡ ಭಿನ್ನವಾಗಿಯೇ ಇರುತ್ತದೆ. ಅನೇಕರು ಲಟಿಕೆ ತೆಗೆಯುವುದನ್ನು ಅಪಶಕುನ ಎಂದೂ ಹೇಳುವುದುಂಟು.
ನಾವು ನಮ್ಮ ಅಭ್ಯಾಸಬಲದಿಂದಲೋ ಅಥವಾ ಹಿತಕ್ಕಾಗಿಯೋ ತೆಗೆಯುವ ಇಂತಹ ಲಟಿಕೆ ಬಹಳ ಅಪಾಯಕಾರಿ ಎಂದು ವೈದ್ಯಲೋಕ (Medical World) ಹೇಳುತ್ತೆ. ಇದರಿಂದ ನಮ್ಮ ಶರೀರದ ಮೇಲೆ ಅನೇಕ ರೀತಿಯ ಪ್ರತಿಕೂಲ ಪರಿಣಾಮ ಬೀರುತ್ತದೆ. ಕುತ್ತಿಗೆ ಮತ್ತು ಬೆನ್ನಿನ ಲಟಿಕೆಗಳನ್ನು ತೆಗೆಯುವುದರಿಂದ ಕೀಲುಗಳು ಸಡಿಲಗೊಳ್ಳುತ್ತವೆ. ಇದನ್ನು ಹೈಪರ್ ಮೊಬಿಲಿಟಿ (Hypermobility) ಎನ್ನಲಾಗುತ್ತದೆ. ಇದರಿಂದ ನಿಮ್ಮ ಕೀಲುಗಳು ದುರ್ಬಲಗೊಳ್ಳುತ್ತದೆ.
ಕೆಲವು ಹಣ್ಣು ತಿಂದ ಮೇಲೆ ನೀರು ಕುಡೀಬಾರದು ಅನ್ನೋದು ಗೊತ್ತಾ?
ಬೆರಳಿನ ಲಟಿಕೆ ತೆಗೆಯುವುದರಿಂದ ಏನಾಗುತ್ತೆ? : ಕೀಲುಗಳ ನಡುವಲ್ಲಿ ಸೈನೋವೈಲ್ ಫ್ಲೂಡ್ ಎಂಬ ಲಿಕ್ವಿಡ್ ಇರುತ್ತದೆ. ಈ ಲಿಕ್ವಿಡ್ ಮೂಳೆಗಳು ಘರ್ಷಣೆ ಆಗದಂತೆ ನೋಡಿಕೊಳ್ಳುತ್ತವೆ. ಇದರ ನಡುವೆ ಸಂಗ್ರಹವಾಗು ಕಾರ್ಬನ್ ಡೈ ಆಕ್ಸೈಡ್ ನಾವು ಲಟಿಕೆ ತೆಗೆದಾಗ ಒಡೆದು ಸಪ್ಪಳವಾಗುತ್ತೆ. ನಾವು ಪದೇ ಪದೇ ಲಟಿಕೆ ತೆಗೆದಾಗ ಸೈನೋವೈಲ್ ಫ್ಲೂಡ್ ಖಾಲಿಯಾಗುತ್ತೆ. ಇದು ಶರೀರದಲ್ಲಿ ಕಡಿಮೆಯಾದಾಗಲೇ ಮೂಳೆಗಳ ನೋವು ಆರಂಭವಾಗುತ್ತೆ. ಸೈನೋವೋಲ್ ಲಿಕ್ವಿಡ್ ನ ಕೊರತೆಯಿಂದ ಮೂಳೆಗಳ ನಡುವೆ ಘರ್ಷಣೆ ಉಂಟಾಗಿ ಅವುಗಳು ಸವೆಯುತ್ತದೆ. ಕೈಗಳ ಹಿಡಿತ ಕೂಡ ದುರ್ಬಲವಾಗುತ್ತೆ.
ಕೆಲಸವಿಲ್ಲದೇ ಖಾಲಿ ಕುಳಿತಾದ ಅಥವಾ ಎದುರಿನಲ್ಲಿ ನಿಂತಿರುವವರ ಜೊತೆ ಮಾತನಾಡುವಾಗ ಕೆಲವರು ಕೈ ಬೆರಳುಗಳ ಲಟಿಕೆ ತೆಗೆಯುತ್ತಿರುತ್ತಾರೆ. ಅವರಿಗೆ ತಿಳಿಯದೇ ಆ ಕ್ರಿಯೆ ನಡೆಯುತ್ತದೆ. ಆದರೆ ನಾವು ಹೀಗೆ ಪದೇ ಪದೇ ಬೆರಳುಗಳ ಲಟಿಕೆ ತೆಗೆಯುವುದರಿಂದ ಕೈಗಳ ಶಕ್ತಿ ದುರ್ಬಲಗೊಳ್ಳುತ್ತೆ. ಲಟಿಕೆಯಿಂದ ಕೈಗಳು ಊದಿಕೊಳ್ಳಬಹುದು. ಕೀಲುಗಳ ನಡುವೆ ಸವಕಳಿ ಉಂಟಾಗಿ ಕೈ, ಬೆರಳುಗಳ ನೋವು ಕಾಣಿಸಿಕೊಳ್ಳಬಹುದು. ಹಾಗಾಗಿಯೇ ಮತ್ತೆ ಮತ್ತೆ ಲಟಿಕೆ ತೆಗೆಯದೇ ಇರುವುದು ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ.
ರಿವರ್ಸ್ ಡಯಟಿಂಗ್ ಎಂದರೇನು? ಈ ಟೆಕ್ನಿಕ್ ಆರೋಗ್ಯಕ್ಕೇಕೆ ಬೇಕು?
ಸಂಧಿವಾತದ ತೊಂದರೆ : ದಿನವಿಡೀ ಲಟಿಕೆ ತೆಗೆಯುತ್ತ ಇರುವುದರಿಂದ ಸಂಧಿವಾತದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸಂಧಿವಾತ ಸಮಸ್ಯೆ ಶುರುವಾದರೆ ಕೈಗಳಲ್ಲಿ ತೀವ್ರವಾದ ನೋವು, ಬೆರಳುಗಳನ್ನು ಸುಲಭವಾಗಿ ತೆರೆಯಲು ಮತ್ತು ಮುಚ್ಚಲು ಕಷ್ಟವಾಗುವುದು ಅಥವಾ ಹಾಗೆ ಮಾಡುವಾಗ ಶಬ್ದ ಬರುವುದು ಮುಂತಾದ ಸಮಸ್ಯೆಗಳು ಎದುರಾಗುತ್ತದೆ. ಅನೇಕ ಮಂದಿ ಚಿಕ್ಕ ಮಕ್ಕಳಿಗೆ ಕೂಡ ಬೆರಳು, ಕಿವಿಯ ಭಾಗ ಮುಂತಾದ ಕಡೆಗಳಲ್ಲಿ ಲಟಿಕೆ ತೆಗೆಯುವ ರೂಢಿ ಇಟ್ಟುಕೊಂಡಿರುತ್ತಾರೆ. ಮಕ್ಕಳು ಕೂಡ ಕಾಲು, ಕೈಗಳ ಲಟಿಕೆ ತೆಗೆಯುವುದನ್ನು ಎಂಜಾಯ್ ಮಾಡುತ್ತಾರೆ. ಅವರಿಗೆ ಕೂಡ ಅದು ಹಿತ ಕೊಡುತ್ತೆ. ಹಾಗಾಗಿ ಮತ್ತೆ ಮತ್ತೆ ಹಾಗೆ ಮಾಡಲು ಕೈ ಕಾಲುಗಳನ್ನು ಮುಂದೆ ಚಾಚುತ್ತಾರೆ. ನವಜಾತ ಶಿಶುಗಳಿಗೆ ಎಣ್ಣೆ ಹಚ್ಚಿ ಲಟಿಕೆ ತೆಗೆಯುವ ಜನರು ಮಗುವಿನ ಶರೀರಕ್ಕೆ ಸರಿಯಾದ ವ್ಯಾಯಮ ಸಿಗುತ್ತೆ ಎಂದುಕೊಳ್ತಾರೆ. ಆದರೆ ಹೀಗೆ ನವಜಾತ ಶಿಶುಗಳಿಗೆ ಲಟಿಕೆ ತೆಗೆಯುವುದು ಕೂಡ ಒಳ್ಳೆಯದಲ್ಲ. ಮಕ್ಕಳ ಶರೀರ ಬಹಳ ಸೂಕ್ಷ್ಮವಾಗಿರುವುದರಿಂದ ನಾವು ಬಹಳ ಜಾಗರೂಕರಾಗಿರಬೇಕು. ಇಲ್ಲವಾದಲ್ಲಿ ಮಕ್ಕಳು ಮುಂದೆ ಕೀಲುನೋವು, ಸಂಧಿವಾತದಂತಹ ಸಮಸ್ಯೆಗಳು ಎದುರಿಸಬೇಕಾಗುತ್ತದೆ.