
ಮಹಿಳೆಯರಿಗೆ ಮುಟ್ಟಿನ ಅವಧಿಯಲ್ಲಿ ಹಾಗೂ ಮೆನೊಪಾಸ್ ಅವಧಿಯಲ್ಲಿ ಹಾರ್ಮೋನ್ ಬದಲಾವಣೆಗಳಾಗುತ್ತವೆ. ಹಾರ್ಮೋನ್ ವ್ಯತ್ಯಾಸವಾದಂತೆ ಅನೇಕ ರೀತಿಯ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಮಹಿಳೆಯರನ್ನು ಕಾಡುವ ಸಾಮಾನ್ಯ ಖಾಯಿಲೆಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಕೂಡ ಒಂದು. ಇತ್ತೀಚೆಗೆ ಸರ್ವೈಕಲ್ ಕ್ಯಾನ್ಸರ್ ಅಥವಾ ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಕ್ಯಾನ್ಸರ್ ಆಗಿದೆ. ಇದು ಮಾರಣಾಂತಿಕ ಖಾಯಿಲೆಯಾಗಿದ್ದು, ಮಹಿಳೆಯರ ಗರ್ಭಾಶಯದಲ್ಲಿರುವ ಗರ್ಭಕಂಠದ ಜೀವಕೋಶಗಳಲ್ಲಿ ವೇಗವಾಗಿ ಬೆಳೆಯುತ್ತದೆ.
ಹೆಚ್ಚುತ್ತಿದೆ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು : 34 ವರ್ಷದ ಅನೀಲಾ ಹೊಕ್ ಎಂಬ ಮಹಿಳೆಯೊಬ್ಬರು ಗರ್ಭಕಂಠದ ಕ್ಯಾನ್ಸರ್ ನಿಂದ ಸಾವನ್ನಪ್ಪಿದರು. ಇವರು ಡಿ ಹೈಡ್ರೇಷನ್ ಸಮಸ್ಯೆಯಿಂದ ಹೊರಬರಲು ಸಾಕಷ್ಟು ನೀರು ಕುಡಿಯುತ್ತಿದ್ದರು. ಇವರು ಗರ್ಭಕಂಠದ ಕ್ಯಾನ್ಸರ್ ನ ಎಲ್ಲಾ ಲಕ್ಷಣಗಳನ್ನು ಹೊಂದಿದ್ದರು ಎಂದು ಅವರ ಕುಟುಂಬದವರು ಹೇಳಿದ್ದಾರೆ.
Health Tips : ಈ ಲಕ್ಷಣ ಕಂಡು ಬಂದ್ರೆ ನಿರ್ಲಕ್ಷ್ಯಿಸಬೇಡಿ ಎನ್ನುತ್ತಾರೆ ಕ್ಯಾನ್ಸರ್ ರೋಗಿ
ವರದಿಯ ಪ್ರಕಾರ, ಅನೀಲಾ ಹೊಕ್ ಅವರು ಕ್ಯಾನ್ಸರ್ (Cancer) ನಾಲ್ಕನೇ ಹಂತವನ್ನು ತಲುಪಿತ್ತು. ಇದರಿಂದ ಅವರಿಗೆ ಹೆಚ್ಚಿನ ರಕ್ತಸ್ರಾವ (Bleeding), ಕೆಳಬೆನ್ನು ಹಾಗೂ ಹೊಟ್ಟೆ ನೋವು ಕಾಡುತ್ತಿತ್ತು. ಅನೀಲಾ ಅವರ ತಪಾಸಣೆ ಕೈಗೊಂಡ ವೈದ್ಯರು ಅನೀಲಾ ಅವರು ಮೂತ್ರನಾಳದ ಸೋಂಕು ಮತ್ತು ಡಿ ಹೈಡ್ರೇಷನ್ (Dehydration) ತೊಂದರೆ ಇರುವುದನ್ನು ಪತ್ತೆ ಹಚ್ಚಿದರು. ಅನೀಲಾ ಅವರಿಗೆ ಗರ್ಭಕಂಠದ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಅವರು ಕಿಮೋಥೆರಪಿ, ರೇಡಿಯೋಥೆರಪಿ ಮತ್ತು ಇಮ್ಯುನೊಥೆರಪಿಯನ್ನು ಪ್ರಾರಂಭಿಸಿದಳು. ಆದರೂ ಗರ್ಭಗಂಠದ ಕ್ಯಾನ್ಸರ್ ಆರಂಭವಾಗಿ 19 ತಿಂಗಳ ನಂತರ ಅನೀಲಾ ಅವರು ಮೃತರಾದರು. ಗರ್ಭಕಂಠದ ಕ್ಯಾನ್ಸರ್ ಪ್ರಪಂಚದಾದ್ಯಂತ ಮಹಿಳೆಯರಲ್ಲಿ ಕಾಡುವ ನಾಲ್ಕನೇ ಅತ್ಯಂತ ಸಾಮಾನ್ಯ ಖಾಯಿಲೆಯಾಗಿದೆ. ಗರ್ಭಕಂಠದ ಕ್ಯಾನ್ಸರ್ 6,60,000 ಹೊಸ ಪ್ರಕರಣಗಳು ದಾಖಲಾಗಿವೆ ಹಾಗೂ ಇದರಿಂದಾಗಿ 3,50,000 ಸಾವುಗಳು ಸಂಭವಿಸಿವೆ.
ಗರ್ಭಕಂಠದ ಕ್ಯಾನ್ಸರ್ ಗೆ ಕಾರಣಗಳೇನು? : ಗರ್ಭಕಂಠದಲ್ಲಿ ಬೆಳೆಯುವ ಅಸಹಜ ಜೀವಕೋಶಗಳು ನಾಶವಾಗದಿದ್ದರೆ ಅಥವಾ ಅದನ್ನು ತೆಗೆದು ಹಾಕದಿದ್ದರೆ ಅವು ಕ್ಯಾನ್ಸರ್ ಆಗಿ ಬದಲಾಗುತ್ತವೆ. ಶುಚಿತ್ವವನ್ನು ಕಾಯ್ದುಕೊಳ್ಳದೇ ಇರುವುದರಿಂದ ಹಾಗೂ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದಲೂ ಕ್ಯಾನ್ಸರ್ ಸೋಂಕು ಹರಡಬಹುದು. ಇದರ ಹೊರತಾಗಿ ಚಿಕ್ಕ ವಯಸ್ಸಿನಲ್ಲಿ ಹೆರಿಗೆಯಾಗುವುದರಿಂದಲೂ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ಗೆ ತುತ್ತಾಗುತ್ತಾರೆ. ತಜ್ಞರ ಪ್ರಕಾರ, ಹೆಚ್ಚಿನ ಗರ್ಭಕಂಠದ ಕ್ಯಾನ್ಸರ್ ಮಾನವ ಪ್ಯಾಪಿಲೋಮವೈರಸ್ ನಿಂದ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಲೈಂಗಿಕವಾಗಿ ಹರಡುವ ಸೋಂಕಾಗಿದೆ. ಎಚ್ ಪಿ ವಿ ಸೋಂಕು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಮತ್ತೆ ಮತ್ತೆ ಎಚ್ ಪಿ ವಿ ಸೋಂಕಿಗೆ ಒಳಗಾದಾಗ ಅದುಗರ್ಭಕಂಠದ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಅತಿಯಾದ ಗರ್ಭನಿರೋಧಕ ಮಾತ್ರೆಯನ್ನು ಸೇವಿಸುವುದು ಕೂಡ ಈ ಕ್ಯಾನ್ಸರ್ ಗೆ ಕಾರಣವಾಗಬಹುದು.
ನಿಮ್ದು ಪಾಪ್‌ಕಾರ್ನ್ ಮಿದುಳಾ? ಹೀಗಂದ್ರೇನು ಗೊತ್ತಾ? ಟೆಸ್ಟ್ ಮಾಡಿಕೊಳ್ಳೋದು ಹೇಗೆ?
ಗರ್ಭಕಂಠದ ಕ್ಯಾನ್ಸರ್ ನಲ್ಲಿ ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಮತ್ತು ಅಡೆನೊಕಾರ್ಸಿನೋಮ ಎಂಬ ಎರಡು ವಿಧಗಳಿವೆ. ಅಂಕಿಅಂಶಗಳ ಪ್ರಕಾರ, ಶೇಕಡಾ 80 ರಿಂದ 90 ಗರ್ಭಕಂಠದ ಕ್ಯಾನ್ಸರ್ ಸ್ಕ್ವಾಮಸ್ ಸೆಲ್ ಕಾರ್ಸೊನೋಮಗಳೇ ಆಗಿವೆ. ಪ್ರತಿಶತ 10 ರಿಂದ 20 ರಷ್ಟು ಅಡೆನೋಕಾರ್ಸಿನೋಮಗಳಾಗಿವೆ.
ಗರ್ಭಕಂಠದ ಕ್ಯಾನ್ಸರ್ ಲಕ್ಷಣಗಳೇನು? : ಯೋನಿಯಲ್ಲಿ ರಕ್ತಸ್ರಾವವಾಗುವುದು ಮತ್ತು ದುರ್ವಾಸನೆಯಿಂದ ಕೂಡಿರುವುದು. ಸಂಭೋಗದ ಸಮಯದಲ್ಲಿ ಅಥವಾ ಮುಟ್ಟಿನ ನಂತರ ರಕ್ತಸ್ರಾವವಾಗುವುದು, ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು, ಅತಿಸಾರ, ಹಸಿವಿನ ನಷ್ಟ, ಕರುಳಿನ ಚಲನೆಯಲ್ಲಿ ನೋವು, ತೂಕ ನಷ್ಟ, ಬೆನ್ನು ನೋವು, ಕಾಲುಗಳಲ್ಲಿ ಊತ, ಕಿಬ್ಬೊಟ್ಟೆ ನೋವು ಮುಂತಾದವು ಗರ್ಭಕಂಠದ ಕ್ಯಾನ್ಸರ್ ನ ಲಕ್ಷಣಗಳಾಗಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.