ಋತು ಬದಲಾದಂತೆ ಅನಾರೋಗ್ಯ ಕಾಡುತ್ತದೆ. ಅನೇಕರಿಗೆ ಚಳಿಗಾಲ ಬಂತೆಂದ್ರೆ ಅಲರ್ಜಿ, ನೆಗಡಿ ಸಮಸ್ಯೆ ಶುರುವಾಗುತ್ತದೆ. ರೋಗನಿರೋಧಕ ಶಕ್ತಿ ಕಡಿಮೆಯಿದ್ರೆ ಅನಾರೋಗ್ಯ ಕಾಡೋದು ಹೆಚ್ಚು. ಹಾಗಾಗಿ ದೇಹಕ್ಕೆ ಶಕ್ತಿ ನೀಡ್ಬೇಕಾಗಿದ್ದು ನಮ್ಮ ಕೆಲಸ.
ಚಳಿಗಾಲ ಶುರುವಾಗಿದೆ. ಋತು ಬದಲಾದಂತೆ ಆರೋಗ್ಯದಲ್ಲಿ ಏರುಪೇರಾಗೋದು ಸಹಜ. ಅದ್ರಲ್ಲೂ ಚಳಿಗಾಲದಲ್ಲಿ ಆರೋಗ್ಯ ಹದಗೆಡುವುದು ಹೆಚ್ಚು. ಚಳಿಗಾಲದಲ್ಲಿ ಹಾಸಿಗೆ ಹಿಡಿಯಬಾರದು ಎಂದಾದ್ರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನಮ್ಮ ಜೀವನ ಶೈಲಿ, ಆಹಾರ ಬಹಳ ಮುಖ್ಯ ಪಾತ್ರವಹಿಸುತ್ತದೆ. ಆಯುರ್ವೇದದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅನೇಕ ಔಷಧಿಗಳಿವೆ. ಹಾಗೆಯೇ ಮನೆ ಮದ್ದುಗಳ ಮೂಲಕವೂ ನೀವು ದೇಹವನ್ನು ರೋಗದಿಂದ ದೂರವಿಡಬಹುದು. ಇಂದು ನಾವು ಇಮ್ಯೂನಿಟಿ ಬೂಸ್ಟರ್ ಪಾನೀಯಗಳ ಬಗ್ಗೆ ಮಾಹಿತಿ ನೀಡ್ತೇವೆ. ಇವುಗಳನ್ನು ತಯಾರಿಸುವುದು ತುಂಬಾ ಸರಳ. ಕಡಿಮೆ ಸಮಯದಲ್ಲಿ ಮನೆಯಲ್ಲಿಯೇ ತಯಾರಿಸಿ ನೀವು ಸೇವನೆ ಮಾಡಬಹುದು. ಇವುಗಳನ್ನು ನೀವು ರಾತ್ರಿ ಮಲಗುವ ಮೊದಲು ಸೇವನೆ ಮಾಡಬೇಕಾಗುತ್ತದೆ.
ಇಮ್ಯೂನಿಟಿ (Immunity) ಬೂಸ್ಟರ್ ಪಾನೀಯ : ಇದಕ್ಕೆ ತಜ್ಞರು ಮಸಾಲೆ (Spice) ಹಾಲು ಎಂದು ಹೆಸರಿಟ್ಟಿದ್ದಾರೆ. ಮಸಾಲೆ ಹಾಲು (Milk) ತಯಾರಿಸುವ ಮೊದಲು ನೀವು ಮಸಾಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಒಟ್ಟು 5 ಪದಾರ್ಥಗಳು ಮಸಾಲೆ ಹಾಲಿಗೆ ಬೇಕಾಗುತ್ತವೆ. ಇದರಲ್ಲಿ 200 ಮಿಲಿ ತುಪ್ಪ, 300 ಗ್ರಾಂ ಅರಿಶಿನ ಪುಡಿ, 50 ಗ್ರಾಂ ಒಣ ಶುಂಠಿ ಪುಡಿ, 25 ಗ್ರಾಂ ಕರಿಮೆಣಸಿನ ಪುಡಿ, 15 ಗ್ರಾಂ ದಾಲ್ಚಿನ್ನಿ ಪುಡಿ ಅಗತ್ಯ. ಹಸುವಿನ ಹಾಲು ಅಥವಾ ಎಮ್ಮೆ ಹಾಲು ಇದ್ರಲ್ಲಿ ಯಾವುದನ್ನಾದ್ರೂ ನೀವು ಬಳಕೆ ಮಾಡಬಹುದು.
ಮಸಾಲೆ ಹಾಲು ತಯಾರಿಸುವ ವಿಧಾನ : ಮೊದಲು ಒಂದು ದಪ್ಪ ತಳವಿರುವ ಪಾತ್ರೆಯನ್ನು ತೆಗೆದುಕೊಳ್ಳಬೇಕು. ಅದಕ್ಕೆ ತುಪ್ಪವನ್ನು ಹಾಕಬೇಕು. ತುಪ್ಪ (Ghee) ಬಿಸಿಯಾಗ್ತಿದ್ದಂತೆ ಅದಕ್ಕೆ ಅರಿಶಿನ ಪುಡಿ ಹಾಕಬೇಕು. ಇದನ್ನು ನೀವು ಮೂರು ನಿಮಿಷ ಕೈ ಆಡಿಸಬೇಕು. ನಂತ್ರ ಎಲ್ಲ ಮಸಾಲೆಯನ್ನು ಹಾಕಬೇಕು. ಒಲೆ ಉರಿ ಕಡಿಮೆ ಇರುವಂತೆ ನೋಡಿಕೊಳ್ಳಿ. ಎಲ್ಲ ಮಸಾಲೆ ಚೆನ್ನಾಗಿ ಹುರಿಯಬೇಕು. ತಳ ಹಿಡಿಯಬಾರದು ಅಥವಾ ಕಪ್ಪಗಾಗಬಾರದು. ಈ ಮಸಾಲೆಗಳ ಮಿಶ್ರಣ ದಪ್ಪಗಾಗಬೇಕು. ನಂತ್ರ ಗ್ಯಾಸ್ (Gas) ಆಫ್ ಮಾಡಿ ಮಿಶ್ರಣವನ್ನು ತಣ್ಣಗಾಗಲು ಬಿಡಿ.
ಮುಟ್ಟಿನ ಸಮಯದಲ್ಲಿ Feminine wash ಬಳಸ್ಬೋದಾ ? ತಜ್ಞರು ಏನಂತಾರೆ ?
ಈ ಮಿಶ್ರಣವನ್ನು ನೀವು ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿಡಬಹುದು. ಪ್ರತಿ ದಿನ ರಾತ್ರಿ ಒಂದು ಚಮಚ ಮಸಾಲೆ ಮಿಶ್ರಣಕ್ಕೆ ಬಿಸಿ ಹಾಲನ್ನು ಸೇರಿಸಿ ಕುಡಿಯಬೇಕು. ಇದನ್ನು ನೀವು ನೀರಿನ ಜೊತೆ ಸೇವನೆ ಮಾಡುವಂತಿಲ್ಲ. ನೀವು ಹಾಲಿನ ಜೊತೆಯೇ ಈ ಮಸಾಲೆಯನ್ನು ಸೇವನೆ ಮಾಡ್ಬೇಕು. ಪ್ರತಿ ದಿನ ರಾತ್ರಿ (Night) ಮಲಗುವ ಮೊದಲು ಮಸಾಲೆ ಹಾಲು ಸೇವನೆ ಮಾಡುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.
ಒಂದು ದಿನ ಸೇವನೆ ಮಾಡಿದ್ರೆ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಸಾಧ್ಯವಿಲ್ಲ. ನೀವು ಪ್ರತಿ ದಿನ ಸುಮಾರು ಒಂದು ತಿಂಗಳ ಕಾಲ ಇದನ್ನು ಸೇವನೆ ಮಾಡಬೇಕು. ಪ್ರತಿದಿನ ಈ ಮಸಾಲೆ ಹಾಲನ್ನು ಕುಡಿಯುವುದ್ರಿಂದ ಶೀತ (Cold), ಅಲರ್ಜಿ ಮತ್ತು ಉಸಿರಾಟದ ಸೋಂಕಿನಿಂದ ಪರಿಹಾರ ಸಿಗುತ್ತದೆ ಎಂದು ತಜ್ಞರು ಹೇಳ್ತಾರೆ. ಚಳಿಗಾಲದಲ್ಲಿ ಬಹುತೇಕರಿಗೆ ಶೀತ, ಅಲರ್ಜಿ ಹಾಗೂ ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ರೆ ರೋಗ ಹೆಚ್ಚು. ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾದ್ರೆ ನೀವು ಈ ಎಲ್ಲ ರೋಗದಿಂದ ದೂರವಿರಬಹುದು. ಈಗಾಗಲೇ ಶೀತ, ಅಲರ್ಜಿ ಸಮಸ್ಯೆ ನಿಮಗಿದ್ದು, ಈ ಮಸಾಲೆ ಹಾಲು ಸೇವನೆ ಮಾಡಿದ ನಂತ್ರವೂ ಪರಿಣಾಮವಾಗಿಲ್ಲವೆಂದ್ರೆ ನೀವು ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು.
ಹುಷಾರ್ ! ಮಕ್ಕಳಲ್ಲಿ ಹೃದಯಾಘಾತಕ್ಕೂ ಕಾರಣವಾಗ್ತಿದೆ ವೀಡಿಯೋ ಗೇಮ್ಸ್