ಪಬ್ಲಿಕ್ ಟಾಯ್ಲೆಟ್ ಸೀಟ್ ಮೇಲೆ ಕುಳಿತುಕೊಳ್ಳೋಕೆ ಭಯ. ಸೋಂಕು ಶುರುವಾದ್ರೆ ಕಷ್ಟ ಅಂತ ನಾನು ಅದ್ರ ಮೇಲೆ ಕುಳಿತಕೊಳ್ಳೋದೇ ಇಲ್ಲ ಎನ್ನುವವರಿದ್ದಾರೆ. ಆದ್ರೆ ಬ್ಯಾಕ್ಟೀರಿಯಾ ಭಯಕ್ಕೆ ನೀವು ಕುಳಿತುಕೊಳ್ಳುವ ಭಂಗಿ ಬದಲಿಸಿದ್ರೆ ಮತ್ತೊಂದು ಸಮಸ್ಯೆ ಕಾಡುತ್ತೆ ಹುಷಾರ್.
ಸಾರ್ವಜನಿಕ ಶೌಚಾಲಯ (Public Toilet) ಹೆಸರು ಕೇಳಿದ್ರೆ ಅನೇಕರು ಮೂಗು ಮುರಿಯುತ್ತಾರೆ. ಕೆಲವರು ಅಪ್ಪಿತಪ್ಪಿಯೂ ಸಾರ್ವಜನಿಕ ಶೌಚಾಲಯಕ್ಕೆ ಹೋಗುವುದಿಲ್ಲ. ಪಬ್ಲಿಕ್ ಟಾಯ್ಲೆಟ್ ಅಂದ್ರೆ ಕೊಳಕು (Dirty) ಎಂಬುದು ಎಲ್ಲರ ಭಾವನೆ. ಅನಿವಾರ್ಯವಾಗಿ ಪಬ್ಲಿಕ್ ಟಾಯ್ಲೆಟ್ ಗೆ ಹೋಗುವ ಜನರು ಸೀಟ್ (Seat) ಮೇಲೆ ಸರಿಯಾಗಿ ಕುಳಿತುಕೊಳ್ಳುವುದಿಲ್ಲ. ಸೀಟ್ ಮೇಲೆ ಕುಳಿತರೆ ಬ್ಯಾಕ್ಟೀರಿಯಾ (Bacteria) ಸಮಸ್ಯೆ ಕಾಡ್ಬಹುದು. ಇದ್ರಿಂದ ಯುಟಿಐ (UTI ) ಮತ್ತು ಎಸ್ ಐಟಿ (SIT) ಅಪಾಯವಾಗ್ಬಹುದು ಎಂಬ ಕಾರಣಕ್ಕೆ ಸಾರ್ವಜನಿಕ ಶೌಚಾಲಯದ ಸೀಟ್ ಮೇಲೆ ಆರಾಮವಾಗಿ ಕುಳಿತುಕೊಳ್ಳಲು ಭಯ (Fear) ಪಡ್ತಾರೆ. ಅರ್ಧಮರ್ಧ ಕುಳಿತು ಮೂತ್ರ (Urine) ವಿಸರ್ಜನೆ ಮಾಡುವವರೇ ಹೆಚ್ಚು. ನೀವೂ ಸರಿಯಾಗಿ ಕುಳಿತುಕೊಳ್ಳದೆ ಮೂತ್ರ ವಿಸರ್ಜನೆ ಮಾಡ್ತಿದ್ದರೆ ಅದ್ರಿಂದಾಗುವ ಅಪಾಯದ ಬಗ್ಗೆ ತಿಳಿದುಕೊಳ್ಳಿ. ಡಾಕ್ಟರ್ (Doctor) ತಾನ್ಯಾ (Tanya), ಟಾಯ್ಲೆಟ್ ಸೀಟ್ ಮೇಲೆ ಕುಳಿತುಕೊಂಡ್ರೆ ಬ್ಯಾಕ್ಟೀರಿಯಾ ಸೋಂಕು (Infection) ಕಾಡುತ್ತೆ ಎಂಬುದು ಸುಳ್ಳು ಎಂದಿದ್ದಾರೆ. ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅವರು, ಸಾರ್ವಜನಿಕ ಶೌಚಾಲಯವಾಗಿದ್ದರೂ ಮೂತ್ರ ವಿಸರ್ಜನೆ ವೇಳೆ ಸರಿಯಾಗಿ ಕುಳಿತುಕೊಳ್ಳಬೇಕು ಎಂದು ಹೇಳಿದ್ದಾರೆ. ಪಬ್ಲಿಕ್ ಟಾಯ್ಲೆಟ್ ಬಳಸುವ ಸರಿಯಾದ ವಿಧಾನ ಯಾವುದು ಹಾಗೂ ಸರಿಯಾಗಿ ಕುಳಿತುಕೊಳ್ಳದೆ ಹೋದ್ರೆ ಏನೆಲ್ಲ ಸಮಸ್ಯೆ ಕಾಡುತ್ತದೆ ಎಂಬುದನ್ನು ಡಾ. ತಾನ್ಯಾ ಹೇಳಿದ್ದಾರೆ.
ಟಾಯ್ಲೆಟ್ ಸೀಟ್ ನಲ್ಲಿ ಸರಿಯಾಗಿ ಕುಳಿತುಕೊಳ್ಳದೆ ಹೋದ್ರೆ ಕಾಡುತ್ತೆ ಈ ಸಮಸ್ಯೆ : ಎಲ್ಲ ಸಾರ್ವಜನಿಕ ಶೌಚಾಲಯಗಳಲ್ಲೂ ಈಗ ವೆಸ್ಟರ್ನ್ ಟಾಯ್ಲೆಟ್ ಮಾಮೂಲಿಯಾಗಿದೆ. ಅನೇಕರಿಗೆ ಅದನ್ನು ಬಳಸಿ ಅಭ್ಯಾಸವಿರುವುದಿಲ್ಲ. ಮತ್ತೆ ಕೆಲವರು ಮನೆಯಲ್ಲಿ ಬಳಕೆ ಮಾಡಿದ್ರೂ ದ ಬಳಕೆ ವೇಳೆ ಹೆದರುತ್ತಾರೆ. ಟಾಯ್ಲೆಟ್ ಸೀಟ್ ಮೇಲೆ ಸರಿಯಾಗಿ ಕುಳಿತುಕೊಳ್ಳುವುದಿಲ್ಲ. ಇದ್ರಿಂದ ಶ್ರೋಣಿಯ ಅಂಗಗಳ ಹಿಗ್ಗುವಿಕೆಗೆ ಕಾರಣವಾಗಬಹುದು ಎಂದು ತಾನ್ಯಾ ಎಚ್ಚರಿಸಿದ್ದಾರೆ. ಅದನ್ನು ಹಣ್ಣುಗಳ ಬುಟ್ಟಿಗೆ ಅವರು ಹೋಲಿಸಿದ್ದಾರೆ. ಬುಟ್ಟಿಯ ಬುಡ ಗಟ್ಟಿಯಾಗಿರಬೇಕು. ಆಗ ಮಾತ್ರ ಎಲ್ಲಾ ಹಣ್ಣುಗಳನ್ನು ಅದರಲ್ಲಿ ಸರಿಯಾಗಿ ಇಡಬಹುದು. ಬುಡ ಗಟ್ಟಿಯಿಲ್ಲದೆ ಹೋದ್ರೆ ಅವು ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಅಂತೆಯೇ, ಶ್ರೋಣಿಯು ಸಹ ಬಲವಾಗಿರಬೇಕು. ಏಕೆಂದರೆ ಇದು ಮಹಿಳೆಯ ದೇಹದೊಳಗೆ ಮೂತ್ರಕೋಶ, ಗರ್ಭಾಶಯ ಮತ್ತು ಗುದನಾಳವನ್ನು ಬೆಂಬಲಿಸುತ್ತದೆ ಎಂದವರು ಹೇಳಿದ್ದಾರೆ.
ಇದನ್ನೂ ಓದಿ: ಯೂಟ್ಯೂಬ್ ನೋಡ್ಕೊಂಡು ಅಬಾರ್ಷನ್ ಮಾಡ್ಕೊಳ್ಳೋಕೆ ಹೊರಟ ಹುಡುಗಿ..ಮುಂದೆ ಆಗಿದ್ದೇನು?
ಮೂತ್ರ ವಿಸರ್ಜಿಸುವಾಗ ಕಮೋಡ್ ಮೇಲೆ ಸರಿಯಾಗಿ ಕುಳಿತುಕೊಳ್ಳದಿದ್ದರೆ, ಅದು ನಿಮ್ಮ ಪೆಲ್ವಿಕ್ ಫ್ಲೋರ್ ಅನ್ನು ದುರ್ಬಲಗೊಳಿಸುತ್ತದೆ. ಹಾಗಾಗಿ ಸೊಂಟವು ಬಲವಾಗಿರಬೇಕು. ಇಲ್ಲವಾದ್ರೆ ಪೆಲ್ವಿಕ್ ಆರ್ಗನ್ ಪ್ರೋಲ್ಯಾಪ್ಸ್ ಕಾಡಬಹುದು ಎನ್ನುತ್ತಾರೆ ತಾನ್ಯಾ.
ಟಾಯ್ಲೆಟ್ ಸೀಟ್ ನಿಂದ ಬರಲ್ಲ ಯುಟಿಐ : ಟಾಯ್ಲೆಟ್ ಸೀಟ್ ಬಳಸುವ ಬಗ್ಗೆ ಭಯ ಬೇಡ. ಇದ್ರಿಂದ ಯುಟಿಐ ಸಮಸ್ಯೆ ಕಾಡುವುದಿಲ್ಲ. ನೀವು ಸೀಟ್ ಮೇಲೆ ಆರಾಮವಾಗಿ ಕುಳಿತು ಮೂತ್ರ ವಿಸರ್ಜನೆ ಮಾಡಿ ಎಂದು ತಾನ್ಯಾ ಹೇಳಿದ್ದಾರೆ.
ಇದನ್ನೂ ಓದಿ: ಸೊಂಪಾದ ಕೂದಲಿಗಾಗಿ ಕಾಸ್ಟ್ಲೀ ಪ್ರಾಡಕ್ಟ್ ಖರೀದಿಸಬೇಕಿಲ್ಲ, ಸರಳ ಯೋಗಾಸನ ಮಾಡಿ ಸಾಕು
ಟಾಯ್ಲೆಟ್ ಸೀಟ್ ನಲ್ಲಿರಲ್ಲ ಬ್ಯಾಕ್ಟೀರಿಯಾ : ಸಾರ್ವಜನಿಕ ಶೌಚಾಲಯ ಕೊಳಕಾಗಿ ಕಾಣ್ಬಹುದು. ಆದ್ರೆ ಅದ್ರ ಸೀಟಿನ ಮೇಲೆ ಬ್ಯಾಕ್ಟೀರಿಯಾ ಇರುವುದಿಲ್ಲ. ಮನೆಗೆ ಹೋಲಿಕೆ ಮಾಡಿದ್ರೆ ಸಾರ್ವಜನಿಕ ಟಾಯ್ಲೆಟ್ ಸೀಟನ್ನು ಅನೇಕ ಬಾರಿ ಸ್ವಚ್ಛಗೊಳಿಸಲಾಗುತ್ತದೆ. ಹಾಗಾಗಿ ಅದ್ರ ಮೇಲೆ ಆರಾಮವಾಗಿ ಕುಳಿತುಕೊಳ್ಬಹುದು ಎನ್ನುತ್ತಾರೆ ತಾನ್ಯಾ. ನಿಮ್ಮ ಆರೋಗ್ಯ ರಕ್ಷಣೆಗೆ ನೀವು ಟಾಯ್ಲೆಟ್ ಸೀಟ್ ಮೇಲೆ ಸರಿಯಾದ ವಿಧಾನದಲ್ಲಿ ಕುಳಿತುಕೊಳ್ಳುವುದು ಬಹಳ ಮುಖ್ಯ. ಸರಿಯಾದ ವಿಧಾನ ಬಳಸದೆ ಹೋದ್ರೆ ನೀವು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರು ಇಂದಿನಿಂದಲೇ ಈ ಅಭ್ಯಾಸ ಬಿಡಿ.