
ಇತ್ತೀಚೆಗೆ(ಸೆಪ್ಟೆಂಬರ್ 14,2026) ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಪತಿ ವಿಕ್ಕಿ ಕೌಶಲ್, ಮಗ ವಿಯಾನ್ ಜೊತೆಗೆ ಮುಂಬೈನ ಆಂಟಿಲಿಯಯಾದಲ್ಲಿ ನಡೆದ ಗಣೇಶ ಚತುರ್ಥಿ ಆಚರಣೆಯಲ್ಲಿ ಭಾಗಿಯಾಗಿದ್ದರು. ಆದರೆ ಅಂದು ಕ್ಯಾಮೆರಾ ಕಣ್ಣಿಗೆ ಬಿದ್ದ ಕತ್ರಿನಾ ಕೈಫ್ ದೊಡ್ಡ ಸುದ್ದಿಯಾದರು. ಮದುವೆಗೆ ಮೊದಲು ಜೀರೋ ಸೈಜ್ ಕಾಪಾಡಿಕೊಂಡಿದ್ದ ನಟಿ, ಮದುವೆ ಬಳಿಕ ದಪ್ಪವಾಗಿರುವ ನಟಿ ಕೈಫ್ ಟ್ರೋಲಿಗರಿಗೆ ಬಾಯಿಗೆ ತುತ್ತಾದರು. ಹಿಂದಿನ ಫೋಟೊ, ಈಗಿನ ದಪ್ಪವಾಗಿರುವ ಫೋಟೊಗಳನ್ನು ಕೊಲಾಜ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾರಂಭಿಸಿದರು.
ನಟಿ ಕತ್ರಿನಾ ಕೈಫ್ ದೇಹದಲ್ಲಿನ ಬೆಳವಣಿಗೆ ಬಗ್ಗೆ ದೊಡ್ಡ ಚರ್ಚೆ ನಡೆಯಿತು. ಇದು ಕತ್ರಿನಾಳದಷ್ಟೇ ಅಲ್ಲ, ಈ ಹಿಂದೆ ನಟಿ ಐಶ್ವರ್ಯಾ ರೈ ಬಚ್ಚನ್ ಅವರನ್ನೂ ಕೇನ್ಸ್ 2026 ರಲ್ಲಿ ಟ್ರೋಲ್ ಮಾಡಲಾಯಿತು. ಜನರಿಗೆ ದಪ್ಪವಾಗುವುದು ಎಂದರೆ ಹೇಗೆ ಕೆಟ್ಟದ್ದಾಗಿ ಕಾಣುತ್ತದೆ? ಬೊಜ್ಜು ಇರುವವರನ್ನ ಟ್ರೋಲ್ ಮಾಡುವುದು, ಕೆಟ್ಟ ಅಭಿಪ್ರಾಯ ವ್ಯಕ್ತಪಡಿಸುವುದು ಏಕೆ? ಈ ಸಮಸ್ಯೆ ಕಾರಣವೇನು?
ನಟಿ ಕತ್ರಿನಾ ಕೈಫ್ ಈ ಹಿಂದೆ ತೆಳ್ಳಗೆ ಬಳುಕುವ ಬಳ್ಳಿಯಂತಿದ್ದಾಗ ಆಕೆಯ ಸೌಂದರ್ಯ ಹೊಗಳಿದವರೇ ಈಗ ಮದುವೆ ಬಳಿಕ ದಪ್ಪವಾಗಿದ್ದರಿಂದ ಕತ್ರಿನಾ ಕೈಫ್ ಬಗ್ಗೆ ಕೆಟ್ಟದಾಗಿ ಮಾತನಾಡಲಾರಂಭಿಸಿದರು, ಅಸಹ್ಯವಾಗಿ ಕಾಣಲಾರಂಭಿಸಿದರು. ಇದು ಏಕೆ ಹೀಗೆ? ಬೊಜ್ಜು ಇರುವವರನ್ನು ಸಮಾಜ ಯಾಕೆ ಕೆಟ್ಟದಾಗಿ ಕಾಣುತ್ತದೆ? ಅಪಹಾಸ್ಯ ಮಾಡಲಾರಂಭಿಸುತ್ತದೆ?
ಸೋಷಿಯಲ್ ಸೈನ್ಸ್‌ನಲ್ಲಿ ಇದಕ್ಕೆ ಫ್ಯಾಟ್‌ಫೋಬಿಯಾ ಎಂದು ಕರೆಯಲಾಗುತ್ತೆ. ಇದು ಕೇವಲ ವೈಯಕ್ತಿಕ ದ್ವೇಷವಲ್ಲ. ಇದು ದೇಹದ ಗಾತ್ರದ ಆಧಾರದ ಮೇಲೆ ಜನರನ್ನು ಕೀಳಾಗಿ ಕಾಣುವ ಒಂದು ಕೆಟ್ಟ ವ್ಯವಸ್ಥೆಯಾಗಿದೆ. ಇದಕ್ಕೆ ಕಾರಣವೆಂದರೆ ಮುಖ್ಯವಾಗಿ ಭಾರತೀಯ ಸಿನಿಮಾ, ನಾಟಕಗಳಲ್ಲಿ ಬೊಜ್ಜು ಪಾತ್ರಗಳನ್ನು ಹಾಸ್ಯಕ್ಕೆ ಬಳಸಲಾಗಿದೆ. ಸಿನಿಮಾಗಳಲ್ಲಿ ಬೊಜ್ಜು ಇರುವವರನ್ನ ಹೆಚ್ಚು ಹಾಸ್ಯ ಮಾಡಲಾಗುತ್ತದೆ. 2025 ರಲ್ಲಿ ಮಲಯಾಳಂ ಸಿನಿಮಾದ ಕುರಿತು ರಿಪೋರ್ಟ್ ಒಂದರ ಪ್ರಕಾರ, ಬೊಜ್ಜು ಪಾತ್ರಗಳನ್ನು ಹಾಸ್ಯದ ಮೂಲವಾಗಿ ಚಿತ್ರಿಸುವುರಿಂದ ಮತ್ತು ಇಂಥ ಸಿನಿಮಾಗಳನ್ನು ನೋಡಿ ಬೆಳೆಯುವ ಜನರು ಬೊಜ್ಜು ಇರುವವರನ್ನ ಸಿನಿಮಾದಂತೆಯೇ ಅಪಹಾಸ್ಯ ಮಾಡುವ ಗುಣಗಳನ್ನೇ ಬೆಳೆಸಿಕೊಳ್ಳಲಾರಂಭಿಸುತ್ತಾರೆ ಎಂದು ಹೇಳಿದೆ.ಇದು ಭಾರತೀಯ ಸಮಾಜದಲ್ಲಿ ಬಾಡಿ ಶೇಮಿಂಗ್ ಹುಟ್ತಿಸಿದ್ದೇ ಸಿನಿಮಾ ಮತ್ತು ನಾಟಕಗಳಲ್ಲಿನ ಪಾತ್ರಗಳು. ಇದು ಬೊಜ್ಜುಗೆ ಮಾತ್ರ ಸೀಮಿತವಾಗಿಲ್ಲ. ಅಂಗವಿಕಲರನ್ನ ಹಾಸ್ಯವಾಗಿ ಬಳಸಿ ಬಾಡಿ ಶೇಮಿಂಗ್ ಮಾಡಿರುವುದಕ್ಕೆ ಬಹಳಷ್ಟು ಉದಾಹರಣೆ ಕೊಡಬಹುದು.
ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ ಬೊಜ್ಜುತನದ ಬಗ್ಗೆ ಶೇ.71 ಕ್ಕಿಂತ ಹೆಚ್ಚು ಜನರು ತಮ್ಮ ತೂಕ ಹೆಚ್ಚಳದ ಬಗ್ಗೆ ಅವರ ಬಗ್ಗೆ ಅವರಿಗೆ ದ್ವೇಷವಿದೆ, 74.6% ಜನರು ತಮ್ಮ ತೂಕದ ಬಗ್ಗೆ ಖಿನ್ನತೆಗೆ ಒಳಗಾಗಿದ್ದಾರೆ, ಅರ್ಧಕ್ಕಿಂತ ಹೆಚ್ಚು ಜನರು ತಮ್ಮನ್ನು ತಾವೇ ಅಸಹ್ಯಪಡುತ್ತಾರೆ, 50% ಜನರು ತೂಕ ಇಳಿಸಿಕೊಳ್ಳುವವರೆಗೂ ಉತ್ತಮ ಸಾಮಾಜಿಕ ಜೀವನ ನಡೆಸಲು ಸಾಧ್ಯವಿಲ್ಲ ಎಂದು ನಂಬಿದ್ದಾರೆ ಎಂದು ಹೇಳಿದೆ.
ಮುಂಬೈನ ಬೇರಿಯಾಟ್ರಿಕ್ ಸರ್ಜನ್ ಡಾ. ಅಪರ್ಣಾ ಗೋವಿಲ್ ಭಾಸ್ಕರ್, ತೂಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬಾಲ್ಯದಲ್ಲಿ ಪ್ರಾರಂಭವಾಗುತ್ತದೆ ಅದು ಪ್ರೌಢಾವಸ್ಥೆಯಲ್ಲಿಯೂ ಮುಂದುವರಿಯುತ್ತದೆ ಎಂದು ಹೇಳುತ್ತಾರೆ. ಬೊಜ್ಜು ಹೊಂದಿರುವ ಜನರನ್ನು ಹೆಚ್ಚಾಗಿ ಸೋಮಾರಿಗಳು ಅಥವಾ ದುರ್ಬಲರು, ಇಚ್ಛಾಶಕ್ತಿ ಕೊರತೆಯುಳ್ಳವರು ಎಂದು ಸಮಾಜ ನೋಡುತ್ತದೆ. ಈ ಸಮಸ್ಯೆ ಹೊರಗಡೆಯಷ್ಟೇ ಅಲ್ಲದೆ ಆಫೀಸ್ ಕಚೇರಿಯಲ್ಲೂ ಬೊಜ್ಜು ಹೊಂದಿರುವ ವ್ಯಕ್ತಿಗಳ ಬಗ್ಗೆ ಸಹೋದ್ಯೋಗಿಗಳ ಮನಸ್ಥಿತಿಯಯೂ ಇದೇ ರೀತಿ ಇರುತ್ತದೆ ಎಂದಿದೆ. ದೆಹಲಿ-ಎನ್‌ಸಿಆರ್‌ನಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳ ಅಧ್ಯಯನವು ದೇಹದ ತೂಕದ ಬಗ್ಗೆ ಕೀಟಲೆ ಮಾಡುವುದು, ಮಾನಸಿಕ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೇಳಿದೆ. ಈ ಕಾರಣಕ್ಕೆ ಬೊಜ್ಜು ಇರುವ ವ್ಯಕ್ತಿ ಇತರರೊಂದಿಗೆ ಬೆರೆಯಲು ಹಿಂಜರಿಯುತ್ತಾನೆ. ಬಾಡಿ ಶೇಮ್‌ಗೆ ಒಳಗಾಗುವ ಬಗ್ಗೆ ಆತಂಕಗೊಂಡಿರುತ್ತಾರೆ ಎಂದಿದೆ.
1967 ರಲ್ಲಿ ನ್ಯೂಯಾರ್ಕ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಸುಮಾರು 500 ಜನರು 'ಫ್ಯಾಟ್-ಇನ್' ಪ್ರತಿಭಟನೆ ನಡೆಸಿದರು. ಅವರು ಆಹಾರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸುಟ್ಟುಹಾಕಿದರು, ಫ್ಯಾಟ್‌ಫೋಬಿಯಾ ವಿರುದ್ಧ ಘೋಷಣೆಗಳನ್ನು ಕೂಗಿದರು. 1973 ರಲ್ಲಿ ಫ್ಯಾಟ್ ಅಂಡರ್‌ಗ್ರೌಂಡ್ ಎಂಬ ಗುಂಪು 'ಫ್ಯಾಟ್ ಲಿಬರೇಶನ್ ಮ್ಯಾನಿಫೆಸ್ಟೋ'ವನ್ನು ಪ್ರಕಟಿಸಿತು. ಅದು 'ಬೊಜ್ಜು ಹೊಂದಿರುವ ಜನರಿಗೆ ಪೂರ್ಣ ಮಾನವ ಘನತೆ ಮತ್ತು ಗುರುತಿನ ಹಕ್ಕಿದೆ' ಹೇಳಿತು.
2001 ರಲ್ಲಿ, ಯೇಲ್ ವಿಶ್ವವಿದ್ಯಾಲಯದ ಸಂಶೋಧಕರಾದ ರೆಬೆಕ್ಕಾ ಪುಹ್ಲ್ ಮತ್ತು ಕೆಲ್ಲಿ ಬ್ರೌನೆಲ್ ಅವರು, ಬೊಜ್ಜು ಹೊಂದಿರುವ ಜನರು ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ತಾರತಮ್ಯವನ್ನು ಎದುರಿಸುತ್ತಾರೆ ಎಂದು ಬಹಿರಂಗಪಡಿಸಿದರು. 28% ಶಿಕ್ಷಕರು ಅಧಿಕ ತೂಕ ಹೊಂದಿರುವುದು ಒಬ್ಬ ವ್ಯಕ್ತಿಗೆ ಸಂಭವಿಸಬಹುದಾದ ಕೆಟ್ಟ ವಿಷಯ ಎಂದು ನಂಬಿದ್ದಾರೆ, 24% ದಾದಿಯರು ಬೊಜ್ಜು ರೋಗಿಗಳಿಂದ ಅಸಹ್ಯ ಪಡುತ್ತಾರೆ ಎಂದರು.
ಇನ್ನೂ ಹೆಚ್ಚು ಆಘಾತಕಾರಿ ಸಂಗತಿಯೆಂದರೆ, ವೈದ್ಯರ ಬಳಿಗೆ ಹೋಗಲು ಕೂಡ ಬೊಜ್ಜು ಹೊಂದಿರುವ ವ್ಯಕ್ತಿಗಳು ಹಿಂಜರಿಯುತ್ತಾರೆ. ಇದಕ್ಕೆ ಕಾರಣ ವೈದ್ಯರು ತಮ್ಮನ್ನ ಹೀಯಾಳಿಸುತ್ತಾರೆ ಎಂಬ ಭಯದಿಂದ ಅನೇಕರು ಚಿಕಿತ್ಸೆಯನ್ನೇ ಪಡೆಯುವುದಿಲ್ಲ. ಹೀಗಾಗಿ ಈ ಸಮಸ್ಯೆಯಿಂದ ಖಿನ್ನತೆ ಅನುಭವಿಸುತ್ತಾರೆ.
ಹೆರಿಗೆಯ ನಂತರ ಯಾವುದೇ ಮಹಿಳೆ ದಪ್ಪಗಾಗುವುದು ಸಾಮಾನ್ಯ. ತಾನು ದಪ್ಪವಾಗಿದ್ದಕ್ಕಾಗಿ ಟ್ರೋಲ್ ಮಾಡುವುದಾಗಲಿ, ಅದಕ್ಕಾಗಿ ಮಹಿಳೆ ಕ್ಷಮೆ ಕೇಳುವಂತ ಪರಿಸ್ಥಿತಿ ನಿರ್ಮಿಸುವುದಾಗಲಿ ಮಾಡಬಾರದು. ವೈದ್ಯರ ಬಳಿಗೆ ಹೋಗುವಾಗ ಯಾವುದೇ ಹಿಂಜರಿಕೆಯಿಲ್ಲದೆ ಹೋಗುವ ವಾತಾವರಣ ನಿರ್ಮಾಣವಾಗಬೇಕು. ಆಫೀಸ್ ಅಥವಾ ಕೆಲಸದಲ್ಲಿ ಯಾರೊಬ್ಬರ ಆಹಾರ ತಟ್ಟೆ, ಅವರ ದೇಹದ ಗಾತ್ರದ ಬಗ್ಗೆ ಯಾರೂ ಕಾಮೆಂಟ್ ಮಾಡದಂತಹ, ಬೆನ್ನ ಹಿಂದೆ ಅಗಲಿ, ಆ ವ್ಯಕ್ತಿಯ ಮುಂದೆಯಾಗಲಿ ಅಪಹಾಸ್ಯ, ಗಾಸಿಪ್ ಮಾಡದಂತಹ ವಾತಾವರಣವಿರಬೇು. ಶಾಲೆಯಲ್ಲಿ ಬಾಡಿ ಶೇಮಿಂಗ್‌ಗೆ ಹೆದರಿ ಮಕ್ಕಳು ಅಳುವುದಿರುವಂತಹ ವಾತಾವರಣ ನಿರ್ಮಿಸಬೇಕು.
ರಾಷ್ಟ್ರೀಯ ಆಹಾರ ಅಸ್ವಸ್ಥತೆಗಳ ಸಂಘ (NEDA) 'ಬೊಜ್ಬು ದ್ವೇಷವಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಿ' ಎಂಬ ಸಂಪೂರ್ಣ ಅಭಿಯಾನವನ್ನು ನಡೆಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.