ಟೂತ್ ಪೇಸ್ಟ್ ನಮ್ಮ ಹಲ್ಲು ಹಾಗೂ ಒಸಡುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ನೆರವಾಗುತ್ತದೆ. ಹಾಗಾಗಿಯೇ ಜನರು ಬೆಲೆ ಹೆಚ್ಚಾದ್ರೂ ಒಳ್ಳೆ ಗುಣಮಟ್ಟದ ಪೇಸ್ಟ್ ಖರೀದಿಗೆ ಮುಂದಾಗ್ತಾರೆ. ಈ ವೇಳೆ ಪೇಸ್ಟ್ ಟ್ಯೂಬ್ ಮೇಲಿರುವ ಬಣ್ಣ ನೋಡಿ ತಪ್ಪು ಮಾಡ್ತಾರೆ.
ಪ್ರತಿ ದಿನ ಬೆಳಿಗ್ಗೆ ಶುರುವಾಗೋದೆ ಹಲ್ಲು ಉಜ್ಜುವುದ್ರಿಂದ. ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜುವವರು ಸಾಕಷ್ಟು ಮಂದಿಯಿದ್ದಾರೆ. ನಾವೆಲ್ಲ ಬೇರೆ ಬೇರೆ ಟೂತ್ ಪೇಸ್ಟ್ ಗಳನ್ನು ಬಳಕೆ ಮಾಡ್ತೇವೆ. ಮಾರುಕಟ್ಟೆಯಲ್ಲಿ ನಾನಾ ರೀತಿಯ ಟೂತ್ ಪೇಸ್ಟ್ ಲಭ್ಯವಿದೆ. ಯಾವುದು ನಮಗೆ ಸೂಕ್ತ ಎಂಬುದನ್ನು ನೋಡಿ ನಾವು ಖರೀದಿಸುತ್ತೇವೆ.
ಪ್ರತಿ ದಿನ ಎಲ್ಲರೂ ಟೂತ್ ಪೇಸ್ಟ್ (Toothpaste) ಬಳಸ್ತೇವೆ. ನಮ್ಮ ಬ್ರ್ಯಾಂಡ್ (Brand) ನ ಟೂತ್ ಪೇಸ್ಟ್ ಖರೀದಿ ಮಾಡುವಾಗ ಅದ್ರ ಬೆಲೆ ನೋಡ್ತೇವೆ. ಮನೆಗೆ ಬಂದ್ಮೇಲೆ ಬ್ರೆಷ್ ಗೆ ಪೇಸ್ಟ್ ಹಾಕಿ ನಿದ್ರೆಗಣ್ಣಿನಲ್ಲಿ ಹಲ್ಲುಜ್ಜಿ ಬರ್ತೇವೆ. ಪೇಸ್ಟ್ ಖಾಲಿಯಾದ್ಮೇಲೆ ಟ್ಯೂಬ್ (Tube) ಎಸಿತೇವೆ. ಆದರೆ ಒಂದು ದಿನ ಕೂಡ ಟೂತ್ ಪೇಸ್ಟ್ ಮೇಲೆ ಏನೆಲ್ಲ ಬರೆದಿರುತ್ತದೆ ಎಂಬುದನ್ನು ಸರಿಯಾಗಿ ಗಮನಿಸೋದಿಲ್ಲ. ಗಮನಿಸಿದವರು ಕೂಡ ಅದಕ್ಕೆ ಕಾರಣ ತಿಳಿಯುವ ಪ್ರಯತ್ನ ನಡೆಸೋದಿಲ್ಲ. ಕೆಲವರು ಟೂತ್ ಪೇಸ್ಟ್ ಹಿಂಭಾಗದಲ್ಲಿ ಇರುವ ಬಣ್ಣ ಬಣ್ಣದ ಗೆರೆಗಳನ್ನು ನೋಡಿ ನಂತ್ರ ಪೇಸ್ಟ್ ಖರೀದಿ ಮಾಡ್ತಾರೆ. ಮತ್ತೆ ಕೆಲವರಿಗೆ ಅಲ್ಲಿ ಬಣ್ಣದ ಗೆರೆ ಇದೆ ಅನ್ನೋದೆ ತಿಳಿದಿರೋದಿಲ್ಲ. ಟೂತ್ ಪೇಸ್ಟ್ ಕೆಳಗೆ ಬಣ್ಣದ ಗೆರೆ ಏಕೆ ಇರುತ್ತೆ ಎಂಬುದು ನಿಮಗೆ ಗೊತ್ತಾ?
undefined
Knowledge: ಆನೆ ಲದ್ದಿ, ಮನುಷ್ಯನ ಮೂತ್ರದಿಂದ ಸಿದ್ಧವಾಗಿದೆ ಬಿಯರ್..!
ಟೂತ್ ಪೇಸ್ಟ್ ಕಳೆಭಾಗದಲ್ಲಿ ಬಣ್ಣ ಬಣ್ಣದ ಗೆರೆ ಇರಲು ಕಾರಣವೇನು ? : ಟೂತ್ ಪೇಸ್ಟ್ ಕೆಳಗಿರುವ ಬಣ್ಣ ಬಣ್ಣದ ಗೆರೆ ಪೇಸ್ಟ್ ಕ್ವಾಲಿಟಿ ಬಗ್ಗೆ ಹೇಳೋದಿಲ್ಲ. ಇದು ಕಂಪನಿಯವರ ಅನುಕೂಲಕ್ಕಾಗಿ ಮಾತ್ರ ಮಾಡಿರಲಾಗುತ್ತದೆ. ಎಲ್ಲಿ ಟ್ಯೂಬ್ ಕತ್ತರಿಸಬೇಕು ಹಾಗೆ ಎಲ್ಲಿ ಸೀಲ್ ಮಾಡಬೇಕು ಎಂಬುದನ್ನು ಅರಿಯಲು ಟೂತ್ ಪೇಸ್ಟ್ ಕೆಳಗೆ ಬಣ್ಣ ಬಣ್ಣದ ಗೆರೆ ಮಾಡಿರಲಾಗುತ್ತದೆ. ಈ ಗೆರೆಗೆ ಒಂದೇ ಬಣ್ಣವನ್ನು ಹಾಕ್ಬಹುದಿತ್ತಲ್ಲ ಎಂದು ನೀವು ಪ್ರಶ್ನೆ ಮಾಡಬಹುದು. ಬೇರೆ ಬೇರೆ ಬಣ್ಣವನ್ನು ಹಾಕಲು ಮತ್ತೊಂದು ಕಾರಣವಿದೆ. ಮಷಿನ್ ಈ ಬಣ್ಣವನ್ನು ಸೆನ್ಸರ್ (Sensor) ಮಾಡುತ್ತದೆ. ಪ್ಯಾಕೇಜಿಂಗ್ ಸಮಯದಲ್ಲಿ ಯಂತ್ರದ ಲೈಟ್ ನ ಸೆನ್ಸರ್, ಈ ಬಣ್ಣದ ಗೆರೆಯನ್ನು ಸೆನ್ಸ್ ಮಾಡುತ್ತದೆ. ಅದರ ಪ್ರಕಾರ ಅದು ಟ್ಯೂಬ್ ಕತ್ತರಿಸಿ ಸೀಲ್ ಮಾಡುತ್ತದೆ.
ಬಣ್ಣಕ್ಕೂ ಆರೋಗ್ಯಕ್ಕೂ (Health) ಸಂಬಂಧವಿದೆಯೇ? : ಟೂತ್‌ಪೇಸ್ಟ್ ನ ಗುಣಮಟ್ಟವನ್ನು ಈ ಬಣ್ಣಗಳಿಂದ ತಿಳಿಯಬಹುದು ಎಂದು ಅನೇಕರು ನಂಬಿದ್ದಾರೆ. ಆದ್ರೆ ಇದು ಸತ್ಯವಲ್ಲ ಎಂಬುದನ್ನು ಎಲ್ಲರೂ ತಿಳಿಯಬೇಕು. ಕೆಲ ವರದಿಗಳಲ್ಲಿ ಬಣ್ಣವನ್ನು ಕೆಲ ರಾಸಾಯನಕ್ಕೆ ಹೋಲಿಕೆ ಮಾಡಲಾಗಿದೆ. ಕೆಂಪು ಬಣ್ಣದ ಗೆರೆಯಿದ್ದರೆ ಅದು ಸಂಪೂರ್ಣವಾಗಿ ರಾಸಾಯನಿಕದಿಂದ ಮಾಡಲ್ಪಟ್ಟಿದೆ ಎಂದು ಅನೇಕ ವರದಿಯಲ್ಲಿ ಹೇಳಲಾಗಿದೆ. ಹಸಿರು ಗುರುತು ಇರುವ ಟೂತ್ ಪೇಸ್ಟ್ ಸಂಪೂರ್ಣವಾಗಿ ನೈಸರ್ಗಿಕ ಟೂತ್ಪೇಸ್ಟ್ ಆಗಿದೆ ಎಂದು ವರದಿ ಮಾಡಲಾಗುತ್ತದೆ. ನೀಲಿ ಬಣ್ಣದ ಗುರುತು ಹೊಂದಿರುವ ಟೂತ್ ಪೇಸ್ಟ್ ಗಳು ನೈಸರ್ಗಿಕ ಮತ್ತು ಔಷಧದಿಂದ ತಯಾರಿಸಲಾಗಿದೆ ಎನ್ನಲಾಗುತ್ತದೆ. ಈ ವರದಿಯನ್ನು ನಂಬಿರುವ ಅನೇಕರು ಕೆಂಪು ಬಣ್ಣದ ಗೆರೆ ಇರುವ ಟೂತ್ ಪೇಸ್ಟ್ ಖರೀದಿಗೆ ಹೋಗೋದಿಲ್ಲ. ಅದ್ರಲ್ಲಿ ಹೆಚ್ಚು ರಾಸಾಯನಿಕವಿದ್ದು ಹಲ್ಲು ಹಾಳಾಗುತ್ತದೆ ಎಂಬ ಭಯದಲ್ಲಿರುತ್ತಾರೆ. ನೈಸರ್ಗಿಕ ವಸ್ತುಗಳನ್ನು ಇಷ್ಟಪಡುವ ಜನರು ಗ್ರೀನ್ ಕಲರ್ ಗೆರೆ ಇರುವ ಪೇಸ್ಟ್ ಖರೀದಿಗೆ ಮುಂದಾಗ್ತಾರೆ.
ಸೊಳ್ಳೆ ನಿಮಗೆ ಮಾತ್ರ ಕಚ್ಚುತ್ತಾ? ಪಕ್ಕದಲ್ಲಿ ಕೂತವರ ಹತ್ತಿರವೂ ಸುಳಿಯೋಲ್ವಾ?
ಟೂತ್ ಪೇಸ್ಟ್ ಹಿಂದೆ ಯಾವುದೇ ಬಣ್ಣವಿರಲಿ ಅದು ನಿಮ್ಮ ಹಲ್ಲು ಹಾಗೂ ಒಸಡಿನ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಈ ಸತ್ಯವನ್ನು ನೀವು ಅರಿತಿರಬೇಕು. ಇದನ್ನು ಕೇವಲ ಪ್ಯಾಕೇಜಿಂಗ್ ದೃಷ್ಟಿಯಿಂದ ಮಾಡಿರಲಾಗುತ್ತದೆ. ಇನ್ಮುಂದೆ ಟೂತ್ ಪೇಸ್ಟ್ ಖರೀದಿ ವೇಳೆ ಗೆರೆಯ ಬಣ್ಣದ ಬಗ್ಗೆ ಗಮನ ನೀಡ್ಬೇಡಿ.