ಯಾಕೋ ಬೇಜಾರು ಅಂತಾರಲ್ಲ.. ಆ ತರಾ ಆಗ್ತಿದೆ, ಏನಪ್ಪಾ ಮಾಡೋದು?

By Suvarna News  |  First Published Aug 31, 2023, 3:00 PM IST

ಈ ಮನಸ್ಸು ಇದೆಯಲ್ಲ? ಅಬ್ಬಾ ಹಿಡಿದಿಡೋದೇ ಕಷ್ಟ. ಒಂದಿನ ಫುಲ್ ಕಾನ್ಫಿಡೆಂಟ್ ಆಗಿ ಫೀಲ್ ಆದರೆ, ಮಾರನೇ ದಿನ ಫುಲ್ ಡೌನ್. ಅವೆಲ್ಲ ಮನಸ್ಸಿನ ಮರ್ಮ ಸಹಜ ಬಿಡಿ ಅಂದ್ರೂ, ಆ ಕ್ಷಣ ಓವರ್ ಕಮ್ ಮಾಡಿಕೊಳ್ಳೋ ನೋವು ಯಾರಿಗೂ ಬೇಡ.


- ಸುರೇಶ್

ಹಿಂಗಾದಾಗಾ ಏನ್  ಮಾಡಬೇಕು. ಇಂತಾ ಟೈಮಲ್ಲೇ ಅಲ್ವಾ.. ಏನೂ ಬೇಡ ಅನಿಸೋದು. ಯಾರೂ ನಂಗೋಸ್ಕರ ಇಲ್ಲ ಅನಿಸೋದು. ಛೇ.. ನಂಗೆ ಮಾತ್ರಾ ಯಾಕೆ ಹಿಂಗಾಗುತ್ತೋ ಅನಿಸೋದು. ಇಡೀ ಪ್ರಪಂಚದಲ್ಲಿ ಇರೋರೆಲ್ಲ ಸುಖವಾಗಿದಾರೆ, ನಂಗೊಬ್ಬನಿಗೆ ಮಾತ್ರಾ ಬರಬಾರದ ಕಷ್ಟಗಳೆಲ್ಲಾ ಬಂದು ವಕ್ಕರಿಸಿಕೊಂಡಿವೆ ಅನಿಸೋದು.

ಇಷ್ಟಕ್ಕೂ ಈ ಯಾಕೋ ಬೇಜಾರು ಯಾಕಾದ್ರೂ ಬರುತ್ತೆ. ಅದೊಂಥರಾ ಸನ್ಯಾಸತ್ವದ ಹಾಗೆ, ಜೀವನದ ಮೇಲಿನ ಜಿಗುಪ್ಸೆಯ ಹಾಗೆ. ಮೊಸರಿನಲ್ಲಿ ಕಲ್ಲು ಸಿಕ್ಕಿದ ಹಾಗೆ. ಕಾಲಿಗೆ ಹಾಕಿದ ಶೂ ಒಳಗೆ ಪುಟ್ಟ ಕಲ್ಲಿನ ಚೂರು ಸೇರಿಕೊಂಡ ಹಾಗೆ. ಅದಕ್ಕೆ ಬಡವ ಶ್ರೀಮಂತ ಅನ್ನೋ ಭೇದಭಾವ ಇಲ್ಲ, ಗಂಡು ಹೆಣ್ಣು ಅನ್ನೋ ಲಿಂಗಭೇದವೂ ಇಲ್ಲ, ಚಿಕ್ಕವ ದೊಡ್ಡವ ಎಂಬ ವಯಸ್ಸಿನ ಹಂಗೂ ಇಲ್ಲ. 

Tap to resize

Latest Videos

ಇಷ್ಟು ಹೊತ್ತೇ ಇರುತ್ತೆ ಅನ್ನೋ ಹಂಗೂ ಇಲ್ಲ, ಯಾವಾಗ ಬೇಕಾದ್ರೂ ಬರಬಹುದು, ಎಷ್ಟು ಹೊತ್ತು ಬೇಕಾದ್ರೂ ಇರಬಹುದು. ಒಂದೈದು ನಿಮಿಷ ಇದ್ದು ಹಂಗೇ ಹೋಗಿಬಿಡಬಹುದು. ಇಲ್ಲ ದಿನ ಪೂರ್ತಿ ಬೇಕಾದ್ರೂ ಇರಬಹುದು. ಯಾಕೋ ಬೇಜಾರು ಬಂದಾಗ ಅದು ಅಮ್ಮ, ಅಪ್ಪ, ಅಣ್ಣ,ತಮ್ಮ, ಅಕ್ಕ ತಂಗಿ, ಹೆಂಡತಿ, ಪ್ರೇಯಸಿ ಯಾರೇ ಸಮಾಧಾನ ಮಾಡಿದರೂ ಸರಿ ಹೋಗೋದೇ ಇಲ್ಲ, ಅದು ತಾನಾಗಿ ಹೆಂಗೆ ಬರುತ್ತೋ ಹಂಗೇ ತಾನಾಗೇ ಹೋಗಬೇಕು...

ನಾಳೆ ನನ್ನ ನಿಶ್ಚಿತಾರ್ಥವೆಂದು ಹೋದ ಹುಡುಗಿ ಅರಸಿ ಅದೇ ಜಾಗಕ್ಕೆ ವರ್ಷದ ನಂತರ ಹೋದಾಗ?

ಸುಮ್ನೆ ಬೇಜಾರಾಗೋದಕ್ಕೂ,, ಯಾಕೋ ಬೇಜಾರಾಗೋದಕ್ಕೂ ವ್ಯತ್ಯಾಸ ಇದೆ. ಬೇಜಾರಾದಾಗ ಸಿಗರೇಟು, ಡ್ರಿಂಕ್ಸು, ಗುಟ್ಕಾ, ರೇಸು, ಇಸ್ಪೀಟು, ಹೀಗೇ ಯಾವುದರ ಕಡೆ ಬೇಕಾದ್ರೂ ಹೋಗಿ ಸರಿ ಮಾಡಿಕೊಳ್ಳಬಹುದು, ಆದ್ರೆ ಯಾಕೋ ಬೇಜಾರಾದಾಗಾ ಮಾತ್ರಾ ಇದ್ಯಾವುದ್ರಿಂದ ಕೂಡಾ ಸರಿ ಮಾಡ್ಕೊಳೋಕೆ ಆಗೋದೇ ಇಲ್ಲ..

ಎಲ್ಲವೂ ಇದೆ, ಆದ್ರೂ ಏನೋ ಇಲ್ಲ ಅನ್ಸುತ್ತೆ,,  ಎಲ್ಲರೂ ಇದ್ದಾರೆ ಆದ್ರೂ ಯಾರೂ ಬೇಡ ಅನ್ಸುತ್ತೆ. ಪ್ಲೀಸ್ ಒಂದ್ ಸ್ವಲ್ಪ ಹೊತ್ತು ನನ್ನ ಒಂಟಿಯಾಗಿ ಬಿಡ್ತೀಯಾ ಅಂತಾ ಕೂಗಬೇಕು ಅನ್ಸುತ್ತೆ. ಸಾವಿರ ಜನರ ಮದ್ಯೆ ಇದ್ದರೂ ಒಬ್ಬಂಟಿ ಅನ್ಸೋದು, ಎಲ್ಲ ಬಿಟ್ಟು ಎಲ್ಲಾದ್ರೂ ದೂರ ಊರು ಬಿಟ್ಟು ಕಾಡಿನೊಳಗೆ ಕಳೆದು ಹೋಗೋಣ ಅನ್ಸೋದು, ಇನ್ನೆಲ್ಲೋ ಬೆಟ್ಟ ಗುಡ್ಡ ಹತ್ತಿ, ಸುತ್ತಾಡಿ ಬರೋಣ ಅನ್ಸೋದು... ಎಲ್ಲವೂ ಈ ಯಾಕೋ ಬೇಜಾರಿನ ಕೂಸುಗಳೇ. 

ಇವತ್ತಿನ ಬ್ಯುಸಿ ಲೈಫಿನಲ್ಲಿ ಒಂದೆರಡು ದಿನ ಬ್ರೇಕ್ ತಗೊಂಡು ಎಲ್ಲಾದ್ರೂ ಟ್ರಿಪ್ ಅಂತಾ ಹೋಗೋದು, ಟ್ರಕಿಂಗ್ ಹೋಗೋದು, ಎಲ್ಲಾ ಬಿಟ್ಟು ಯಾವುದೋ ಆಶ್ರಮದಲ್ಲಿ ಯಾರೋ ಗುರುಗಳ ಅಣತಿಯಂತೆ ಧ್ಯಾನಕ್ಕೆ ಕೂತು ದೇವರನ್ನು ಕಂಡುಕೊಳ್ಳುವ ಪ್ರಯತ್ನ ಮಾಡೋದು ಕೂಡಾ ಯಾಕೋ ಬೇಜಾರಾದಾಗಲೇ. 

ಓ ದೇವರೇ ಅವಳು ನನ್ನ ಪ್ರೀತಿ ಒಪ್ಪಲಿ, ಮಗಳು ಹುಟ್ಟಿದರೆ ಹನುಮಂತಿ ಅಂತ ಹೆಸರಿಡುತ್ತೇನೆ!

ಯಾಕೋ ಬೇಜಾರಾದಾಗ ಏನೇ ಮಾಡಬೇಕು ಅಂದುಕೊಂಡರೂ ಮನಸಾಗೋದೇ ಇಲ್ಲ, ಏನಾದರೂ ಬರಿಯೋಕೂ ಮೂಡು ಇರಲ್ಲ, ವಾಕಿಂಗ್ ಹೋಗೋಕೆ ಮನಸಾಗಲ್ಲ, ಸಿನಿಮಾ ನೋಡೋಣ ಅಂದ್ರೆ ಇಷ್ಟ ಆಗಲ್ಲ, ಯಾರಿಗಾದ್ರೂ ಫೋನ್ ಮಾಡಿ ಮಾತಾಡೋಣ ಅಂದ್ರೂ ಆಗೋದೇ ಇಲ್ಲ, ಮಲಗೋಣ ಅಂದ್ರೆ ನಿದ್ದೆ ಬರಲ್ಲ.. ಯಾರ ಹತ್ರನಾದ್ರೂ ಹೇಳ್ಕೋಳೋಕಂತೂ ಆಗೋದೇ ಇಲ್ಲ.

ಥತ್ತೇರಿಕೆ .... ಹೋಗತ್ಲಾಗೆ ಅಂದುಕೊಳ್ಳೋಕೂ ಆಗೋದೇ ಇಲ್ಲ..

ಆದ್ರೂ ... ಯಾಕೋ ಬೇಜಾರು.. ಏನ್ಮಾಡೋಣ?     

click me!