#FeelFree: ಚೆಂದುಳ್ಳಿ ಹೆಂಡ್ತಿ ಇದ್ರೂ ಗಂಡ ಹಸ್ತ ಮೈಥುನ ಮಾಡ್ಕೋತಾನಲ್ಲ!

By Suvarna News  |  First Published May 19, 2020, 8:03 PM IST

ಗಂಡ ಕೆಲವೊಮ್ಮೆ ಬಾತ್‌ರೂಮಿನಲ್ಲಿ ಒಬ್ಬನೇ ಹಸ್ತಮೈಥುನ ಮಾಡಿಕೊಳ್ಳುವುದನ್ನು ನಾನು ಗಮನಿಸಿದ್ದೇನೆ. ಆತ ಯಾಕೆ ಹೀಗೆ ಮಾಡ್ತಿರಬಹುದು? ನನ್ನ ಜೊತೆಗೆ ಸೆಕ್ಸ್‌ ಮಾಡುವಾಗ ಸಿಗುವುದಕ್ಕಿಂತಲೂ ಹೆಚ್ಚಿನ ಸುಖ ಅವನಿಗೆ ಹಸ್ತಮೈಥುನ ಮಾಡುವುದರಿಂದ ಸಿಗ್ತಿರಬಹುದಾ? ಅಥವಾ ಹಾಗೆ ಮಾಡುವಾಗ ನಾನಲ್ಲದೆ ಇನ್ಯಾರನ್ನೋ ಕಲ್ಪಿಸಿಕೊಳ್ತಾ ಇರಬಹುದಾ? ಗಂಡನ ಈ ಅಭ್ಯಾಸ ಬಿಡಿಸೋದು ಹೇಗೆ?


ಪ್ರಶ್ನೆ: ನನ್ನ ವಯಸ್ಸು 28. ಗಂಡನ ವಯಸ್ಸು ಮೂವತ್ತು. ಮದುವೆಯಾಗಿ ಮೂರು ವರ್ಷಗಳಾಗಿವೆ. ಇಬ್ಬರ ಸೆಕ್ಸ್ ಲೈಫ್‌ ಚೆನ್ನಾಗಿದೆ. ವಾರಕ್ಕೆ ಸುಮಾರು ಮೂರು ಸಲ ಸೇರುತ್ತೇವೆ. ನಂಗೆ ಕೆಲವು ಸಲ ತೃಪ್ತಿಯಾಗುತ್ತೆ, ಕೆಲವು ಸಲ ಆಗುವುದಿಲ್ಲ. ಆದರೆ ಗಂಡ ಕೆಲವೊಮ್ಮೆ ಬಾತ್‌ರೂಮಿನಲ್ಲಿ ಒಬ್ಬನೇ ಹಸ್ತಮೈಥುನ ಮಾಡಿಕೊಳ್ಳುವುದನ್ನು ನಾನು ಗಮನಿಸಿದ್ದೇನೆ. ಯಾಕೆ ಹೀಗೆ ಮಾಡ್ತೀಯಾ ಎಂದು ಕೇಳಿದ್ದಕ್ಕೆ, ಸಾರಿ, ಇನ್ಮುಂದೆ ಮಾಡಲ್ಲ ಎಂದಿದ್ದಾನೆ. ಆದರೂ ಆತ ಕದ್ದುಮುಚ್ಚಿ ಮಾಡ್ತಾನೆ ಅನ್ನುವ ಅನುಮಾನ ನಂಗಿದೆ. ಆತ ಯಾಕೆ ಹೀಗೆ ಮಾಡ್ತಿರಬಹುದು? ನನ್ನ ಜೊತೆಗೆ ಸೆಕ್ಸ್‌ ಮಾಡುವಾಗ ಸಿಗುವುದಕ್ಕಿಂತಲೂ ಹೆಚ್ಚಿನ ಸುಖ ಅವನಿಗೆ ಹಸ್ತಮೈಥುನ ಮಾಡುವುದರಿಂದ ಸಿಗ್ತಿರಬಹುದಾ? ಅಥವಾ ಹಾಗೆ ಮಾಡುವಾಗ ನಾನಲ್ಲದೆ ಇನ್ಯಾರನ್ನೋ ಕಲ್ಪಿಸಿಕೊಳ್ತಾ ಇರಬಹುದಾ? ಗಂಡನ ಈ ಅಭ್ಯಾಸ ಬಿಡಿಸೋದು ಹೇಗೆ?

ಕೊರೋನಾದಿಂದ ಚೇತರಿಸಿಕೊಂಡವ  'ಆ' ಕೆಲಸ ಮಾಡಲು ಎಷ್ಟು ದಿನ ಕಾಯಬೇಕು?

ಉತ್ತರ: ಈ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದು ಒಳ್ಳೆಯದು. ನೀವಿಬ್ಬರೂ ಸುಖ ಅನುಭವಿಸುತ್ತಿದ್ದೀರಿ ಎಂದಿದ್ದೀರಿ. ಇರಬಹುದು. ಆದರೆ ಕೆಲವು ಪುರುಷರು ಹಸ್ತಮೈಥುನದಿಂದಲೇ ಹೆಚ್ಚಿನ ಆನಂದ ಹೊಂದುತ್ತಾರೆ ಎಂದು ಅಧ್ಯಯನಗಳಿಂದ ಪ್ರೂವ್‌ ಆಗಿದೆ. ಹೀಗೇಕೆ ಮಾಡುತ್ತಾರೆ? ಕೆಲವೊಮ್ಮೆ ಹೆಂಡತಿಯ ಜೊತೆಗೆ ಸುಖ ಅನುಭವಿಸಲು ಪೂರಕವಾದ ವಾತಾವರಣ ಮನೆಯಲ್ಲಿ ಇಲ್ಲದಿರಬಹುದು. ಕೆಲವೊಮ್ಮೆ ಗಂಡನಿಗೆ ಉದ್ರೇಕವಾದಾಗ, ಮನೆಕೆಲಸಗಳ ಒತ್ತಡದಲ್ಲಿ ಹೆಂಡತಿ ಸಹಕರಿಸದೆ ಇರಬಹುದು. ಅಂಥ ವೇಳೆಯಲ್ಲಿ ಗಂಡನಿಗೆ ತನ್ನ ಉದ್ರೇಕವನ್ನು ಹೇಗಾದರೂ ತಣಿಸಿಕೊಳ್ಳಬೇಕಿರುತ್ತದೆ. ಹಸ್ತಮೈಥುನ ಅದಕ್ಕೆ ಸೂಕ್ತ. ಕೆಲವೊಮ್ಮೆ ಕೆಲವು ಪುರುಷರು ತಮ್ಮ ಲೈಂಗಿಕ ತೃಪ್ತಿಗೆ ಫ್ಯಾಂಟಸಿಯ ಮೊರೆ ಹೋಗುತ್ತಾರೆ. ಅಂದರೆ ವಿವಿಧ ಲೈಂಗಿಕ ಸಂಗಾತಿಗಳ ಜೊತೆಗೆ ಸೆಕ್ಸ್ ನಡೆಸಿದಂತೆ ಊಹಿಸಿಕೊಂಡು ಹಸ್ತಮೈಥುನ ಮಾಡಿಕೊಂಡಾಗ ಅವರ ಸುಖದ ಚರಮಸೀಮೆ ಮುಟ್ಟುತ್ತಾರೆ. ಇದೂ ಒಂದು ಮಿತಿಯನ್ನು ಮೀರಿ ಹೋಗದೆ ಇದ್ದರೆ ಒಳ್ಳೆಯದೇ. ನಿಮ್ಮ ಗಂಡ ವಾರಕ್ಕೆ ಎಷ್ಟು ಬಾರಿ, ಯಾವಾಗ ಹಸ್ತಮೈಥುನ ಮಾಡಿಕೊಳ್ಳುತ್ತಾರೆ ಎಂಬುದನ್ನು ಗಮನಿಸಿ.  ಆಗ ಅದರ ಕಾರಣ ಏನಿರಬಹುದು ಎಂಬುದೂ ನಿಮಗೆ ಹೊಳೆಯಬಹುದು.

Tap to resize

Latest Videos

#Feelfree: ನಂಗೆ ಹೆಂಡತಿ ಸಂಗವೂ ಬೇಕು, ಅವನ ಜೊತೆಗೂ ಸೆಕ್ಸ್ ಬೇಕು! 

ಗಂಡನ ಈ ಅಭ್ಯಾಸ ಬಿಡಿಸುವ ಬಗ್ಗೆ ಕೇಳಿದ್ದೀರಿ. ಆದರೆ ಬೇರೊಂದು ರೀತಿಯಲ್ಲಿ ಯೋಚಿಸಿ. ಗಂಡನ ಈ ಅಭ್ಯಾಸವನ್ನೇ ನಿಮ್ಮ ಲೈಂಗಿಕ ತೃಪ್ತಿಗೆ ಹೇಗೆ ಬಳಸಿಕೊಳ್ಳಬಹುದು ಎಂದು ಯೋಚಿಸಿ. ಗಂಡನಿಗೆ ಹಸ್ತ ಮೈಥುನ ಬೇಕೆನ್ನಿಸಿದಾಗ ಅದಕ್ಕೆ ನೀವು ಸಹಕರಿಸುವಂತಿದ್ದರೆ ಹೇಗಿರುತ್ತದೆ? ಇದನ್ನು ನಿಮ್ಮ ಪರವಾಗಿಯೂ ಮಾಡಿಕೊಳ್ಳಬಹುದು. ಅಂದರೆ, ನೀವೂ ಕೂಡ ಹಸ್ತಮೈಥುನದಿಂದ ಆನಂದ ಹೊಂದಬಹುದು. ಇದೇನೂ ಅಸಹಜವಲ್ಲ, ಅಪಾಯಕಾರಿಯೂ ಅಲ್ಲ. ಹಸ್ತಮೈಥುನದಿಂದ ಗರ್ಭ ಧರಿಸುವ ಆತಂಕವಿಲ್ಲ, ನಿಮ್ಮ ದೇಹದ ಸುಖಕ್ಕೆ ಮೋಸವಿಲ್ಲ. ಸಂಗಾತಿಯಿಂದ ಹಸ್ತಮೈಥುನ ಮಾಡಿಸಿಕೊಳ್ಳುವುದು ಆನಂದದ ಅನುಭವ ಕೂಡ. ಸಾಕಷ್ಟು ಹೆಣ್ಣುಮಕ್ಕಳು ಹಸ್ತಮೈಥುನದಿಂದ ಆನಂದ ಹೊಂದುತ್ತಾರೆ. ಹೊಸ ತಲೆಮಾರಿನಲ್ಲಿ, ಪುರುಷರಷ್ಟೇ ಪ್ರಮಾಣದಲ್ಲಿ ಸ್ತ್ರೀಯರೂ ಹಸ್ತಮೈಥುನ ಮಾಡಿಕೊಳ್ಳುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ. ಹೆಚ್ಚಾಗಿ, ಗಂಡನಿಗೆ ಲೈಂಗಿಕಸುಖದ ಕ್ಲೈಮ್ಯಾಕ್ಸ್ ಪಡೆಯಲಾಗದ ಮಹಿಳೆಯರು ಅನಿವಾರ್ಯವಾಗಿಯೇ ಹಸ್ತಮೈಥುನದಿಂದ ಆನಂದ ಹೊಂದುವುದನ್ನೂ ಹೊರಗೆಡಹಿದ್ದಾರೆ. ಹೀಗಾಗಿ ಗಂಡನ ಈ ಅಭ್ಯಾಸವನ್ನು ನೀವು ನಿಮ್ಮಿಷ್ಟಕ್ಕೆ ತಕ್ಕಂತೆ ಪರಿವರ್ತಿಸಿಕೊಂಡರೆ, ನೀವೂ ಆನಂದ ಹೊಂದಬಹುದು, ಗಂಡನಿಗೂ ಸುಖ ಕೊಡಬಹುದು. ಈ ಬಗ್ಗೆ ಯಾವುದೇ ಮುಜುಗರ ಬೇಡ. ಗಂಡನ ಜೊತೆ ಮುಕ್ತವಾಗಿ ಮಾತನಾಡಿ. ಮುಕ್ತವಾಗಿ ಮಾತನಾಡುವುದರಿಂದಲೇ ಸೆಕ್ಸ್‌ ಬಗ್ಗೆ ಅನೇಕ ಅನುಮಾನಗಳು ಪರಿಹಾರವಾಗಿ, ಸಂಗಾತಿಯ ಬಗ್ಗೆ ಹೆಚ್ಚಿನಪ್ರೀತಿ ಮತ್ತು ಕಾಮಾಸಕ್ತಿಗಳು ಮೂಡುತ್ತವೆ.

undefined

#Feelfree: ಅವಳು ಸೆಕ್ಸ್ ವೇಳೆ ಹಿಂಸೆ ಕೊಡೋಕೆ ಹೇಳ್ತಾಳೆ, ಏನ್‌ ಮಾಡಲಿ?

ಹಸ್ತಮೈಥುನದ ಸಂದರ್ಭದಲ್ಲಿ ಬೇರೆ ಯಾರನ್ನೋ ಕಲ್ಪಿಸಿಕೊಳ್ಳುತ್ತಾರೆ ಎಂಬುದು ನಿಮ್ಮ ಚಿಂತೆಗೆ ಕಾರಣವಾಗಬೇಕಿಲ್ಲ. ಅವರು ಹಾಗೆ ಕಲ್ಪಿಸಿಕೊಳ್ಳುತ್ತಾರೆ ಎಂಬುದು ನಿಮ್ಮ ಊಹೆಯಷ್ಟೇ. ನಿಮ್ಮನ್ನೇ ಕಲ್ಪಿಸಿಕೊಳ್ಳುತ್ತಿರಬಹುದಲ್ಲವೇ? ಸೆಕ್ಸ್ ವಿಚಾರದಲ್ಲಿ ಯಾವುದೂ ಅಸಹಜವಲ್ಲ, ಇನ್ನೊಬ್ಬರಿಗೆ ಹಾನಿಯಾಗದೆ ಇದ್ದಾಗ.

click me!