ಅನಾರೋಗ್ಯ ಕಾಡಿದಾಗ ಜನರು ಕಂಗಾಲಾಗ್ತಾರೆ. ಯಾರಿಂದ ಚಿಕಿತ್ಸೆ ಪಡೆಯಬೇಕೆಂಬುದು ಗೊತ್ತಾಗೋದಿಲ್ಲ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದೌಡಾಯಿಸುತ್ತಾರೆ. ಅಲ್ಲಿರುವ ಜನಜಂಗುಳಿ ಮತ್ತಷ್ಟು ಪ್ರಶ್ನೆ ಹುಟ್ಟುಹಾಕುತ್ತದೆ. ಅದೇ ಮನೆಗೊಂದು ಫ್ಯಾಮಿಲಿ ಡಾಕ್ಟರ್ ಇದ್ರೆ ಸಮಸ್ಯೆ ಸರಳವಾಗಿ ಬಗೆಹರಿಯುತ್ತದೆ.
ಪ್ರತಿಯೊಬ್ಬ ವ್ಯಕ್ತಿಯೂ ತಾನು ಮತ್ತು ತನ್ನ ಕುಟುಂಬ ಯಾವಾಗಲೂ ಸಂತೋಷದಿಂದ ಮತ್ತು ಆರೋಗ್ಯವಾಗಿರಬೇಕೆಂದು ಬಯಸುತ್ತಾರೆ. ಆದ್ರೆ ಬಿಡುವಿಲ್ಲದ ಸಮಯ, ಕೆಲಸದ ಒತ್ತದ, ಹದಗೆಟ್ಟ ಜೀವನಶೈಲಿ, ತಪ್ಪು ಆಹಾರ ಮತ್ತು ಅನಿಯಮಿತ ದಿನಚರಿಯಿಂದಾಗಿ ಅನೇಕ ರೋಗಕ್ಕೆ ನಮ್ಮ ಜೀವ ಬಲಿಯಾಗ್ತಿದೆ. ಅನಾರೋಗ್ಯ ಕಾಡ್ತಿದ್ದಂತೆ ನಾವೆಲ್ಲ ವೈದ್ಯರ ಬಳಿಗೆ ಹೋಗ್ತೇವೆ. ಬಹುತೇಕರು ಒಂದು ಬಾರಿ ಒಬ್ಬ ವೈದ್ಯರ ಬಳಿ ಹೋದ್ರೆ ಮತ್ತೊಂದು ಬಾರಿ ಮತ್ತೊಂದು ವೈದ್ಯರ ಬಳಿ ಹೋಗ್ತಾರೆ. ಹೀಗೆ ಮಾಡೋದ್ರಿಂದ ವೈದ್ಯರಿಗೆ ನಿಮ್ಮ ಸಮಸ್ಯೆ, ಕುಟುಂಬದ ಹಿನ್ನಲೆ ತಿಳಿದುಕೊಳ್ಳಲು ಬಹಳ ಸಮಯ ಹಿಡಿಯುತ್ತದೆ. ಖಾಯಿಲೆ ಬರಬಾರದು, ಬಂದ ಖಾಯಿಲೆಗೆ ಸರಿಯಾದ ಚಿಕಿತ್ಸೆ ಬೇಕು, ಸೂಕ್ತ ವೈದ್ಯರನ್ನು ನಾವು ಭೇಟಿಯಾಗಬೇಕು, ರೋಗಕ್ಕಿಂತ ಮೊದಲೇ ಎಚ್ಚರಿಕೆ ತೆಗೆದುಕೊಳ್ಳಬೇಕು ಎನ್ನುವವರು ಫ್ಯಾಮಿಲಿ ವೈದ್ಯರನ್ನು ಹೊಂದಿರುವುದು ಒಳ್ಳೆಯದು. ನಾವಿಂದು ಫ್ಯಾಮಿಲಿ ವೈದ್ಯರು ಏಕೆ ಮುಖ್ಯ ಎನ್ನುವ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೆವೆ.
ಫ್ಯಾಮಿಲಿ (Family) ಡಾಕ್ಟರ್ (Doctor) ಏಕೆ ಬೇಕು ?: ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಕಾಯಿಲೆಗಳಿಂದ ದೂರವಿಡಲು ಮತ್ತು ನಿಮ್ಮ ಆರೋಗ್ಯವನ್ನು ಸುಧಾರಿಸಲು ಕುಟುಂಬ ವೈದ್ಯರನ್ನು ಹೊಂದುವುದು ಬಹಳ ಮುಖ್ಯ. ಸಮಯಕ್ಕೆ ಸರಿಯಾದ ಚಿಕಿತ್ಸೆ (Treatment) ಪಡೆಯಲು ಅವರು ನೆರವಾಗುತ್ತಾರೆ. ಕುಟುಂಬ ವೈದ್ಯರು ನಿಮ್ಮ ಮತ್ತು ನಿಮ್ಮ ಕುಟುಂಬದ ಸದಸ್ಯರ ವಯಸ್ಸು, ಸಮಸ್ಯೆಗಳು ಇತ್ಯಾದಿಗಳನ್ನು ಕ್ರಮೇಣ ತಿಳಿದುಕೊಳ್ಳುತ್ತಾರೆ. ಆದ್ದರಿಂದ ಅವರು ಎಲ್ಲರಿಗೂ ಸರಿಯಾಗಿ ಚಿಕಿತ್ಸೆ ನೀಡುತ್ತಾರೆ. ಒಂದ್ವೇಳೆ ನಿಮಗೆ ಹೃದಯ, ಶ್ವಾಸಕೋಶ ಅಥವಾ ಮೂಳೆಯಂತಹ ಯಾವುದೇ ಗಂಭೀರ ಸಮಸ್ಯೆ ಇದ್ದರೆ ಫ್ಯಾಮಿಲಿ ವೈದ್ಯರು ಸೂಕ್ತ ಹೃದ್ರೋಗ ತಜ್ಞ ಅಥವಾ ಮೂಳೆ ಶಸ್ತ್ರ ಚಿಕಿತ್ಸಕನ ಬಳಿ ನಿಮ್ಮನ್ನ ಕಳುಹಿಸುತ್ತಾರೆ.
undefined
ನಿಮ್ಮ ಆರೋಗ್ಯ (Health) ಮತ್ತು ಅನಾರೋಗ್ಯದ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿರುವ ಕುಟುಂಬ ವೈದ್ಯರನ್ನು ಫಿಟ್ನೆಸ್ ಸ್ನೇಹಿತ ಎಂದು ಹೇಳಿದ್ರೆ ತಪ್ಪಾಗುವುದಿಲ್ಲ. ನಿಮ್ಮ ವೈಯಕ್ತಿಕ ಇತಿಹಾಸ ತಿಳಿದಿದ್ರೆ ಯಾವ ಔಷಧವು ನಿಮಗೆ ಸರಿಹೊಂದುತ್ತದೆ ಮತ್ತು ಯಾವುದು ಅಡ್ಡ ಪರಿಣಾಮಗಳನ್ನು ಬೀರುತ್ತದೆ ಎಂಬುದು ಮೊದಲಿನಿಂದಲೂ ತಿಳಿದಿರುತ್ತದೆ. ನಿಮ್ಮ ಸಮಸ್ಯೆಗೆ ಅನುಗುಣವಾಗಿ ಅವರು ನಿಮ್ಮನ್ನು ಮತ್ತು ನಿಮ್ಮ ಇಡೀ ಕುಟುಂಬಕ್ಕೆ ಚಿಕಿತ್ಸೆ ನೀಡ್ತಾರೆ.
ಮನುಷ್ಯರ ಆಯಸ್ಸು ತಿನ್ನುತ್ತಿದೆ ಒಂಟಿತನ!
ಸಮಯಕ್ಕೆ ಸಿಗುತ್ತೆ ಚಿಕಿತ್ಸೆ : ತುರ್ತು ಸಂದರ್ಭದಲ್ಲಿ ತಕ್ಷಣ ಚಿಕಿತ್ಸೆ ಸಿಗುವುದಿಲ್ಲ. ರಾತ್ರಿ ವೇಳೆ ನಾಲ್ಕೈದು ಆಸ್ಪತ್ರೆ ಅಲೆಯುವ ಪರಿಸ್ಥಿತಿ ಬರುತ್ತದೆ. ಅದೇ ಫ್ಯಾಮಿಲಿ ಡಾಕ್ಟರ್ ಇದ್ರೆ ಚಿಂತೆಯಿಲ್ಲ. ಯಾವುದೇ ಸಮಯದಲ್ಲಿಯಾದ್ರೂ ನಿಮ್ಮ ಕುಟುಂಬ ವೈದ್ಯರಿಂದ ಚಿಕಿತ್ಸೆ ಪಡೆಯಬಹುದು. ಯಾವುದೇ ಗಂಭೀರ ಅನಾರೋಗ್ಯದ ಸಂದರ್ಭದಲ್ಲಿ ಈ ವೈದ್ಯರು ತಕ್ಷಣವೇ ಪ್ರಥಮ ಚಿಕಿತ್ಸೆ ನೀಡುತ್ತಾರೆ. ಇಲ್ಲವೆ ಬೇರೆ ವೈದ್ಯ ಅಥವಾ ಆಸ್ಪತ್ರೆ ವ್ಯವಸ್ಥೆ ಮಾಡುತ್ತಾರೆ.
ಖರ್ಚು ಕಡಿಮೆ (Less Expenses) : ಒಂದೇ ಖಾಯಿಲೆಗೆ ಒಂದು ವಾರದಲ್ಲಿ ನಾಲ್ಕೈದು ವೈದ್ಯರನ್ನು ಭೇಟಿಯಾಗುವ ಪರಿಸ್ಥಿತಿ ಬಂದ್ರೆ ಪ್ರತಿ ವೈದ್ಯರ ಭೇಟಿಗೆ ನಾವು 500 -700 ರೂಪಾಯಿ ನೀಡಬೇಕು. ಆದ್ರೆ ಫ್ಯಾಮಿಲಿ ಡಾಕ್ಟರ್ ಈ ಖರ್ಚನ್ನು ಕಡಿಮೆ ಮಾಡ್ತಾರೆ. ಅವರಿಂದ ಸಾಧ್ಯವಿಲ್ಲವೆಂದಾದ್ರೆ ಇನ್ನೊಬ್ಬ ವೈದ್ಯರನ್ನು ಮಾತ್ರ ಸೂಚಿಸ್ತಾರೆ. ಫ್ಯಾಮಿಲಿ ವೈದ್ಯರ ಬಳಿ ನೀವು ಒಂದೇ ಚೀಟಿಯಲ್ಲಿ ಎರಡು ಬಾರಿ ಹೋಗಬಹುದು. ಮಧ್ಯೆ ಸಮಸ್ಯೆಯಾದ್ರೆ ಅವರನ್ನು ಸಂಪರ್ಕಿಸಬಹುದು.
Healthy Habit: ಮಖಾನಾ ರುಚಿ ಅಂತಾ ಯರ್ರಾಬಿರ್ರಿ ತಿನ್ಬೇಡಿ
ಫ್ಯಾಮಿಲಿ ವೈದ್ಯರ (Family doctors) ಆಯ್ಕೆ ಹೇಗೆ? : ಮೊದಲು ನಿಮ್ಮ ಮನೆ ಸುತ್ತಮುತ್ತ ಎಷ್ಟು ವೈದ್ಯರಿದ್ದಾರೆ ಎಂಬುದನ್ನು ನೋಡಿ. ಅವರು ಕನಿಷ್ಠ ಎಂಬಿಬಿಎಸ್ ಮುಗಿಸಿರಬೇಕು. ವೈದ್ಯರ ನಡವಳಿಕೆ, ವಿಶ್ವಾಸಾರ್ಹತೆ, ರೋಗಿಯ ಮಾತನ್ನು ಎಚ್ಚರಿಕೆಯಿಂದ ಆಲಿಸುವುದು, ಸಭ್ಯ ಪ್ರಶ್ನೆಗಳನ್ನು ಕೇಳುವುದು, ನ್ಯಾಯಯುತ ಸಲಹೆಯನ್ನು ನೀಡುವುದು, ಎಲ್ಲವನ್ನೂ ನೀವು ಗಮನಿಸಿ ನಿರ್ಧಾರ ತೆಗೆದುಕೊಳ್ಳಿ.