ಸ್ತನ ಕ್ಯಾನ್ಸರ್ ವಿಷ್ಯ ಬಂದಾಗ ಮಹಿಳೆಯರಿಗೆ ಎಚ್ಚರಿಕೆಯಿಂದ ಇರುವಂತೆ ಹೇಳ್ತೇವೆ. ಆದ್ರೆ ಪುರುಷರಿಗೂ ಸ್ತನ ಕ್ಯಾನ್ಸರ್ ಕಾಡುವ ಸಂಬಂಭವಿದೆ ಎಂಬುದು ಅನೇಕರಿಗೆ ತಿಳಿದೇ ಇರೋದಿಲ್ಲ. ಸಣ್ಣ ನೋವನ್ನು ನಿರ್ಲಕ್ಷ್ಯ ಮಾಡುವ ಪುರುಷರು, ಸಮಸ್ಯೆ ಗಂಭೀರವಾದಾಗ ವೈದ್ಯರ ಬಳಿ ಹೋಗ್ತಾರೆ.
ಸ್ತನ ಕ್ಯಾನ್ಸರ್ ಮಹಿಳೆಯರಿಗೆ ಮಾತ್ರ ಕಾಡುತ್ತದೆ ಎಂದು ಬಹುತೇಕರು ಅಂದುಕೊಂಡಿದ್ದಾರೆ. ಆದ್ರೆ ಇದು ಸಂಪೂರ್ಣ ತಪ್ಪು. ಹಿಂದಿನ ವರ್ಷ ದೆಹಲಿಯ 70 ವರ್ಷದ ವ್ಯಕ್ತಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಅವರಿಗೆ ಕೀಮೊಥೆರಪಿ ಮಾಡಲಾಗುತ್ತಿದೆ. ಇದ್ರಿಂದ ಸ್ಪಷ್ಟವಾಗುವುದು ಏನಂದ್ರೆ ಸ್ತನ ಕ್ಯಾನ್ಸರ್ ಮಹಿಳೆಯರು ಮತ್ತು ಪುರುಷರಿಬ್ಬರಿಗೂ ಕಾಡುತ್ತದೆ. ಶೇಕಡಾ 1ರಷ್ಟು ಪುರುಷರಿಗೆ ಸ್ತನ ಕ್ಯಾನ್ಸರ್ ಆಗುವ ಸಾಧ್ಯತೆಯಿದೆ. ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಕಾಡುವ ಪ್ರಮಾಣ ಹೆಚ್ಚು.
ಪುರುಷರು ಮೊಲೆತೊಟ್ಟು (Nipple) ಗಳ ಹಿಂದೆ ಕೆಲವು ಸ್ತನ (Breast ) ಕೋಶಗಳನ್ನು ಹೊಂದಿದ್ದಾರೆ. ಈ ಕೋಶಗಳಲ್ಲಿ ಕ್ಯಾನ್ಸರ್ (Cancer) ಕೋಶಗಳು ಬೆಳವಣಿಗೆಯಾದಾಗ ಪುರುಷರು ಸಹ ಸ್ತನ ಕ್ಯಾನ್ಸರ್ಗೆ ಬಲಿಯಾಗುತ್ತಾರೆ. ಯುಕೆಯಲ್ಲಿ ಮಾತ್ರ, ಪ್ರತಿ ವರ್ಷ ಸುಮಾರು 250 ಪುರುಷರು ಈ ಕಾಯಿಲೆಗೆ ಬಲಿಯಾಗುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಪುರುಷರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಹೆಚ್ಚು ಮಾಹಿತಿ ಇರೋದಿಲ್ಲ. ಹಾಗಾಗಿ ಸ್ತನ ಕ್ಯಾನ್ಸರ್ ನಿಂದ ಬಳಲುವ ಪುರುಷರು ಸಾವನ್ನಪ್ಪುವ ಸಂಖ್ಯೆ ಮಹಿಳೆಯರಿಗಿಂತ ಹೆಚ್ಚು. ಸೂಕ್ತ ಸಮಯದಲ್ಲಿ ಪುರುಷರಿಗೆ ಚಿಕಿತ್ಸೆ ದೊರೆತರೆ ಅವರು ಬದುಕುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಜ್ಞರು ಹೇಳ್ತಾರೆ.
ಎರಡು ರೀತಿಯಲ್ಲಿ ಸ್ತನ ಕ್ಯಾನ್ಸರ್ ಕಂಡು ಬರುತ್ತದೆ.
1. ಡಕ್ಟಲ್ ಕಾರ್ಸಿನೋಮ (Ductal Carcinoma ) : ಹಾಲಿನ ನಾಳಗಳಲ್ಲಿ ಕ್ಯಾನ್ಸರ್ ಕೋಶ ಬೆಳವಣಿಗೆಯಾದಾಗ ಅದನ್ನು ಡಕ್ಟಲ್ ಕಾರ್ಸಿನೋಮ ಎಂದು ಕರೆಯುತ್ತಾರೆ. ಪುರುಷರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
2. ಲೋಬ್ಯುಲರ್ ಕಾರ್ಸಿನೋಮ ( Lobular Carcinoma ) : ಹಾಲು ಉತ್ಪಾದಿಸುವ ಗ್ರಂಥಿಗಳಲ್ಲಿ ಕ್ಯಾನ್ಸರ್ ಕೋಶ ಬೆಳೆಯುತ್ತದೆ. ಆದ್ರೆ ಇದು ಪುರುಷರಲ್ಲಿ ಕಾಣಿಸಿಕೊಳ್ಳುವುದು ಅಪರೂಪ.
ಮಹಿಳೆಯರಿಗೆ ಹೋಲಿಕೆ ಮಾಡಿದ್ರೆ ಪುರುಷರಲ್ಲಿ ಕ್ಯಾನ್ಸರ್ ನೋವು ಹೆಚ್ಚು. ನೋವಿನ ಗಡ್ಡೆ, ಬ್ರೆಸ್ಟ್ ಟಿಶ್ಯೂ ದೊಡ್ಡದಾಗುವುದು, ಸ್ತನದ ಚರ್ಮ ಕೆಂಪಾಗುವುದು, ಮೊಲೆತೊಟ್ಟಿನಿಂದ ವಿಸರ್ಜನೆ, ಮೊಲೆ ತೊಟ್ಟು ಕೆಂಪಾಗುವುದು ಇದರ ಲಕ್ಷಣವಾಗಿದೆ.
Health Tips: ಖಾಸಗಿ ಅಂಗದ ಕೂದಲು ಬಿಳಿಯಾಗಲು ಕಾರಣವೇನು?
ಪುರುಷರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಗೆ ಮೂಲ ಕಾರಣ : ತಜ್ಞರ ಪ್ರಕಾರ ಕ್ಯಾನ್ಸರ್ ಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ. 60 ವರ್ಷ ದಾಟಿದ ಪುರುಷರಲ್ಲಿ ಈ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ. ರಕ್ತ ಸಂಬಂಧಿಗೆ ಕ್ಯಾನ್ಸರ್ ಇದ್ದರೆ ಅಥವಾ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರೆ ಅಥವಾ ಸ್ತನ ಕ್ಯಾನ್ಸರ್ ಹೊಂದಿರುವ ಮಹಿಳೆ ರಕ್ತ ಸಂಬಂಧಿಯಾಗಿದ್ದರೆ ಅಥವಾ 40 ವರ್ಷಕ್ಕಿಂತ ಮೊದಲೇ ಕ್ಯಾನ್ಸರ್ ನಿಂದ ಸಾವನ್ನಪ್ಪಿರುವ ವ್ಯಕ್ತಿ ರಕ್ತ ಸಂಬಂಧಿಯಾಗಿದ್ದರೆ ಅಂತವರಿಗೆ ಸ್ತನ ಕ್ಯಾನ್ಸರ್ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ.
ಅಂಡಾಶಯ ಅಥವಾ ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ಕುಟುಂಬದಲ್ಲಿ ಜನಿಸಿದ ವ್ಯಕ್ತಿಗೆ ಸ್ತನ ಕ್ಯಾನ್ಸರ್ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹೆಚ್ಚಿನ ಮಟ್ಟದ ಈಸ್ಟ್ರೊಜೆನ್ ಹೊಂದಿರುವ ಅಥವಾ ಚಿಕ್ಕ ವಯಸ್ಸಿನಲ್ಲೇ ವಿಕಿರಣಕ್ಕೆ ಒಡ್ಡಿಕೊಳ್ಳುವ ಪುರುಷರು ಸಹ ಈ ರೋಗಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಪುರುಷರಿಗೆ ಕ್ಯಾನ್ಸರ್ ತಡವಾಗಿ ಪತ್ತೆಯಾಗೋದು ಏಕೆ ? : ಇದಕ್ಕೆ ಮುಖ್ಯ ಕಾರಣ ನಾಚಿಕೆ. ಹಾಗೆ ಇದ್ರ ಬಗ್ಗೆ ಕಡಿಮೆ ಜ್ಞಾನ. ಸ್ತನದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಅಥವಾ ಬದಲಾವಣೆಯಾಗ್ತಿದ್ದರೆ ಪುರುಷರು ವೈದ್ಯರ ಬಳಿ ಹೋಗಲು ನಾಚಿಕೊಳ್ತಾರೆ. ನೋವು ತಡೆಯಲು ಸಾಧ್ಯವಿಲ್ಲ ಎನ್ನುವ ಸಂದರ್ಭದಲ್ಲಿ ಅವರು ವೈದ್ಯರ ಬಳಿ ಹೋಗ್ತಾರೆ. ಆಗ ಸಮಯ ಮೀರಿರುತ್ತದೆ.
ಕುಟುಂಬದಲ್ಲಿ ಮೊದಲೇ ಕ್ಯಾನ್ಸರ್ ನಿಂದ ಬಲಿಯಾದ ವ್ಯಕ್ತಿಗಳಿದ್ದರೆ ಜನರು ಜಾಗೃತರಾಗುವುದು ಮುಖ್ಯ. ಜೆನೆಟಿಕ್ ಮೆಡಿಸಿನ್ ಸೆಂಟರ್ ಗಳಿಗೆ ಹೋಗಿ ಮಾಹಿತಿ ಪಡೆದಲ್ಲಿ ಇದ್ರಿಂದ ರಕ್ಷಣೆ ಪಡೆಯಬಹುದು.
ಸ್ತನ ಕ್ಯಾನ್ಸರ್ ನಿಂದ ಬಳಲುವ ಪುರುಷರಿಗೆ ಮೊದಲು ಕೀಮೊಥೆರಪಿ ಮಾಡಿ ನಂತ್ರ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಮ್ಯಾಮೊಗ್ರಫಿ ಮೂಲಕ ಪರೀಕ್ಷೆ ಮಾಡುವುದು ಪುರುಷರಿಗೆ ಕಷ್ಟ. ಸೋನೋಗ್ರಫಿ ಮತ್ತು ಬಯಾಪ್ಸಿ ನಡೆಸಬೇಕಾಗುತ್ತದೆ.
ನಾಲ್ಕು ಕಪ್ ಚಹಾ ಕುಡಿಯೋದ್ರಿಂದ ಡಯಾಬಿಟೀಸ್ ಬರೋದಿಲ್ವಾ?
ಸ್ತನ ಕ್ಯಾನ್ಸರ್ ನಿಂದ ಬಳಲುವ ಪುರುಷ ರೋಗಿಗೆ ಕ್ಯಾನ್ಸರ್ ಯಕೃತ್ತು, ಶ್ವಾಸಕೋಶ, ಮೆದುಳಿನ ಮೇಲೆ ಪರಿಣಾಮ ಬೀರುವುದಿಲ್ಲ.ಸ್ನಾಯುಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ.