ಬೆಳಗ್ಗೆ 6 ರಿಂದ ಮಧ್ಯಾಹ್ನ 12 ನಡುವೆಯೇ ಹೃದಯಾಘಾತ ಏಕೆ ಸಂಭವಿಸುತ್ತೆ? ಇದರ ಹಿಂದಿನ ಕಾರಣ ತಿಳಿದರೆ ನೀವು ಪಾರು!

Published : Nov 10, 2026, 07:15 AM ISTUpdated : Nov 10, 2026, 07:29 AM IST
morning heart attack reasons

ಸಾರಾಂಶ

ಬೆಳಗಿನ ಜಾವ ದೇಹ ವಿಶ್ರಾಂತಿಯಿಂದ ಸಕ್ರಿಯಗೊಳ್ಳುವಾಗ ಹಾರ್ಮೋನ್‌ಗಳ ಮಟ್ಟ, ರಕ್ತದೊತ್ತಡ ಮತ್ತು ಹೃದಯ ಬಡಿತ ಹೆಚ್ಚುತ್ತವೆ. ರಕ್ತವು ದಪ್ಪಗಾಗಿ ಹೆಪ್ಪುಗಟ್ಟುವ ಸಾಧ್ಯತೆ. ಅಪಧಮನಿಗಳಲ್ಲಿ ಬ್ಲಾಕ್ ಇರುವವರಿಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರೊಳಗೆ ಹೃದಯಾಘಾತದ ಅಪಾಯ ಹೆಚ್ಚು ಎನ್ನುತ್ತಾರೆ ತಜ್ಞರು.

ಹಲವು ವ್ಯಕ್ತಿಗಳ ಸಾವು ನೆನಪಿಸಿಕೊಂಡಾಗ ಬೆಳಗ್ಗೆಯೇ ಏಕೆ ಹೃದಯಾಘಾತ ಸಂಭವಿಸಿತು ಎಂಬ ಪ್ರಶ್ನೆ ಕಾಡುತ್ತದೆ. ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವರಿಗೆ ಬೆಳಗಿನ ಹೃದಯಾಘಾತವೇ ಸಾವಿಗೆ ಕಾರಣವಾಯ್ತು. ಹೃದಯಾಘಾತವನ್ನು ಕೆಲವರು ದುರಾದೃಷ್ಟಕ್ಕೆ ಹೋಲಿಸುತ್ತಾರೆ. ಇದು ಅದೃಷ್ಟ ದುರಾದೃಷ್ಟದ ವಿಷಯವಲ್ಲ. ದೇಹಕ್ಕೆ ತನ್ನದೇ ಆದ ಲಯ ಇದೆ. ನಮ್ಮ ಹೃದಯ ಮತ್ತು ಇಡೀ ದೇಹ ಸಿಕಾರ್ಡಿಯನ್ ಲಯಕ್ಕೆ ಅನುಗುಣವಾಗಿ ನಿರಂತರ ಕೆಲಸ ಮಾಡುತ್ತಿರುತ್ತದೆ. ನಮ್ಮ ದೈನಂದಿನ ದಿನಚರಿ, ಹಾರ್ಮೋನುಗಳು, ರಕ್ತದೊತ್ತಡ, ರಕ್ತದ ಚಲನೆ ಎಲ್ಲವನ್ನೂ ನಿಯಂತ್ರಿಸುವುದು ಈ ಲಯವೇ. ಅದಕ್ಕಾಗಿಯೇ ಬೆಳಗಿನ ಜಾವವೇ ಹೃದಯಾಘಾತ ಸಂಭವಿಸುವುದು ಹೆಚ್ಚು. ಅದರಲ್ಲೂ ಚಳಿಗಾಲದಲ್ಲಿ ಇನ್ನಷ್ಟು ಅಪಾಯಕಾರಿ.

ಬೆಳಗ್ಗೆಯೇ ಏಕೆ ಹೃದಯಾಘಾತದ ಅಪಾಯ?

ತಜ್ಞರು ಹೇಳುವ ಪ್ರಕಾರ, ರಾತ್ರಿಯಿಡೀ ಮಲಗಿ ವಿಶ್ರಾಂತಿ ಪಡೆದ ದೇಹವು ಆ ಸ್ಥಿತಿಯಿಂದ ಮತ್ತೆ ಎಚ್ಚರಗೊಳ್ಳುವ ಸಮಯ, ಅಂದರೆ ಆಕ್ಟಿವ್ ಆಗಲು ಸಜ್ಜಾಗುತ್ತೆ. ಈ ಸಂದರ್ಭ ನಮ್ಮ ಮೆದುಳು ಮುಂದಿನ ಕೆಲಸಗಳಿಗೆ ದೇಹವನ್ನು ಸಜ್ಜುಗೊಳಿಸುತ್ತದೆ. ಇದರಿಂದಾಗಿ ಬೆಳಗಿನ ಹಾರ್ಮೋನ್ ಮಟ್ಟ ಹೆಚ್ಚಾಗುತ್ತವೆ, ಹೃದಯ ಬಡಿತ ಹೆಚ್ಚಾಗುತ್ತದೆ, ರಕ್ತಪರಿಚಲನೆ ತುಸು ಹೆಚ್ಚುತ್ತದೆ. ಇದು ಸಾಮಾನ್ಯ ಪ್ರಕ್ರಿಯೆ. ಆದರೆ ಈಗಾಗಲೇ ಅಪಧಮನಿಗಳು ಕಿರಿದಾಗಿರುವ ಜನರಿಗೆ ಈ ಬದಲಾವಣೆಯೇ ಅಪಾಯ ಹೆಚ್ಚಿಸುವುದು.

ಬೆಳಗಿನ ಹೃದಯಾಘಾತದ ಬಗ್ಗೆ ತಜ್ಞರು ಹೇಳೋದೇನು?

ಬೆಳಗಿನ ಜಾವ 6 ರಿಂದ ಮಧ್ಯಾಹ್ನ 12 ಗಂಟೆಯ ನಡುವೆ ಹೃದಯಾಘಾತ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ಡಾ. ಉದ್ಗೀತ್ ಧೀರ್ ಹೇಳುತ್ತಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ಬೆಳಗಿನ ಜಾವ ದೇಹವು ಎಚ್ಚರಗೊಳ್ಳುವ, ಮುಂದಿನ ಕೆಲಸಗಳಿಗೆ ಸಜ್ಜಾಗುವ ಹಂತದಲ್ಲಿರುತ್ತದೆ ಇದರ ಪರಿಣಾಮವಾಗಿ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ನಂತಹ ಹಾರ್ಮೋನುಗಳು ಹೆಚ್ಚಾಗುತ್ತವೆ. ಇದು ರಕ್ತದೊತ್ತಡ ಮತ್ತು ಹೃದಯ ಬಡಿತದಲ್ಲಿ ಹಠಾತ್ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಲ್ಲದೆ ರಕ್ತವು ಸ್ವಲ್ಪ ದಪ್ಪವಾಗುತ್ತದೆ. ಇದು ಹೆಪ್ಪುಗಟ್ಟುವಿಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಒಬ್ಬ ವ್ಯಕ್ತಿಯ Coronary artery ಗಳಲ್ಲಿ ಈಗಾಗಲೇ ಪ್ಲೇಕ್ ಇದ್ದಾಗ ಇಂದು ಬೆಳಗಿನ ಒತ್ತಡವು ಅದನ್ನು ಛಿದ್ರಗೊಳಿಸಬಹುದು. ಪ್ಲೇಕ್ ಒಡೆದ ನಂತರ ತಕ್ಷಣವೇ ರಕ್ತ ಹೆಪ್ಪುಗಟ್ಟುವಿಕೆಯಾಗಲು ಶುರುವಾಗುತ್ತದೆ. ಇದು ಕೆಲವೇ ನಿಮಿಷಗಳಲ್ಲಿ ರಕ್ತದ ಹರಿವನ್ನು ನಿಲ್ಲಿಸುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯು ಬೆಳಗಿನ ಸಮಯದಲ್ಲಿ ದೇಹದಲ್ಲಿನ ಈ ಜೈವಿಕ ಬದಲಾವಣೆಗಳು ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು ಎಂದು ಸೂಚಿಸುತ್ತದೆ.

ಮುನ್ನೆಚ್ಚರಿಕೆ ಕ್ರಮಗಳೇನು?

ಬೆಳಗ್ಗೆ ಹೆಚ್ಚಾಗುವ ಹಾರ್ಮೋನ್ ಮಟ್ಟಗಳು ಕ್ರಮೇಣ ಸಹಜ ಸ್ಥಿತಿಗೆ ಬರುತ್ತದೆ. ಹೆಚ್ಚಾದ ರಕ್ತದೊತ್ತಡವು ಸರಿಗೊಳ್ಳುತ್ತದೆ. ಡಾ. ಧೀರ್ ಅವರು ಹೇಳುವ ಪ್ರಕಾರ, ಸಂಜೆ ವೇಳೆಗೆ ದೇಹ ಹೆಚ್ಚು ವಿಶ್ರಾಂತಿ ಪಡೆಯುತ್ತದೆ. ಹಠಾತ್ ಹಠಾತ್ ಅಪಧಮನಿ ತೊಂದರೆಯಾಗುವುದು ಕಡಿಮೆ ಮಾಡುತ್ತದೆ. ಇದರರ್ಥ ಸಂಜೆ ವೇಳೆ ಹೃದಯಾಘಾತ ಸಂಭವಿಸಲ್ಲ ಅಂತಲ್ಲ, ಸಿಕ್ಕಾಪಟ್ಟೆ ತಿಂದುಂಡುರೆ, ಸಂಜೆ ವೇಳೆ ಮದ್ಯಪಾನ, ಮಾನಸಿಕ ಒತ್ತಡ, ಕೆಲಸದ ಒತ್ತಡ ನಿರಂತರವಾಗಿದ್ದರೆ ಹಠಾತ್ ಸಂಭವಿಸಬಹುದು. ಹೀಗಾಗಿ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳುವುದರಿಂದ ಸಂಜೆಯ ಹೃದಯಾಘಾತವೂ ತಪ್ಪಿಸಬಹುದು.

ಹೃದಯಾಘಾತಕ್ಕೆ ಹೆಚ್ಚಿನ ಕಾರಣಗಳು

ಹೃದಯಾಘಾತದಲ್ಲಿ ನಮ್ಮ ಜೀವನಶೈಲಿ ಮಹತ್ವದ ಪಾತ್ರವಹಿಸುತ್ತೆ. ಸರಿಯಾಗಿ ನಿದ್ದೆ ಮಾಡದಿರುವುದು, ತಡರಾತ್ರಿವರೆಗೆ ಎಚ್ಚರವಾಗಿರುವ ಅಭ್ಯಾಸ. ಮಧ್ಯರಾತ್ರಿ ಆರ್ಡರ್ ಮಾಡಿ ತಿನ್ನುವುದು, ಅತಿ ಹೆಚ್ಚು ತಿನ್ನುವುದು, ಕೆಲಸದ ನಿರಂತರ ಒತ್ತಡವು ದೇಹದಲ್ಲಿನ ಜೈವಿಕ ಗಡಿಯಾರಕ್ಕೆ ಅಡ್ಡಿಯಾಗುತ್ತೆ. ಅದರಲ್ಲೂ ಸರಿಯಾಗಿ ನಿದ್ದೆ ಮಾಡದಿರುವುದು ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ ಎಂದು ಸಂಶೋಧನೆಯಿಂದ ದೃಢಪಟ್ಟಿದೆ. ಹೀಗಾಗಿ ಪ್ರತಿದಿನ ಒಂದೇ ಸಮಯದಲ್ಲಿ ಎಚ್ಚರಗೊಳ್ಳುವುದು, ಅತಿ ಹೆಚ್ಚು ಅಥವಾ ಅತಿ ಕಡಿಮೆ ಆಗದ ಆಹಾರ ಸೇವನೆ, ಬೆಳಗಿನ ವೇಳೆ ಖಿನ್ನತೆಯಿಂದಿರುವುದು ತಪ್ಪಿಸುವುದರಿಂದ, ಬೆಳಗಿನ ವೇಳೆ ಯಾವುದೇ ಅವಸರ ಇಲ್ಲದಂತೆ ನಿಧಾನವಾಗಿ ಪ್ರಾರಂಭಿಸುವ ಅಭ್ಯಾಸ ರೂಢಿಸಿಕೊಂಡರೆ ಹೃದಯಾಘಾತದ ಆತಂಕವನ್ನು ದೂರ ಮಾಡಬಹುದು. ದಿನನಿತ್ಯದ ಈ ಸಣ್ಣ ಬದಲಾವಣೆಗಳು ದೇಹದೊಂದಿಗೆ ಹೊಂದಿಕೊಂಡು ಹೃದಯವನ್ನು ರಕ್ಷಿಸುತ್ತೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2 ಖರ್ಜೂರವನ್ನು 2 ತಿಂಗಳು ತಿನ್ನಿ, ನಂತರ ನೋಡಿ ಅದರ ಮ್ಯಾಜಿಕ್! ದೇಹದಲ್ಲಿ ಅದ್ಭುತ ಪರಿಣಾಮ
ಮಾಲಿನ್ಯ ಗಾಳಿ ಮೆದುಳಿನ ಮೇಲೂ ಪರಿಣಾಮ? ನೆನಪಿನ ಶಕ್ತಿ, ಆಲೋಚನಾ ಸಾಮರ್ಥ್ಯಕ್ಕೆ ಕಾದಿದೆ ಅಪಾಯ!