Insulin Pill: ಇನ್ಜೆಕ್ಷನ್ ನೋವಿಗೆ ಗುಡ್‌ಬೈ? ಮಧುಮೇಹಿಗಳಿಗೆ ಜಪಾನ್ ವಿಜ್ಞಾನಿಗಳಿಂದ ಸಿಹಿ ಸುದ್ದಿ!

Published : Mar 25, 2026, 12:41 PM IST
Japanese Scientists Develop Breakthrough Insulin Pill That Could Replace Injections

ಸಾರಾಂಶ

Japanese Scientists Develop Breakthrough Insulin Pill ಪ್ರತಿದಿನ ಇನ್ಜೆಕ್ಷನ್ ಹಾಕಿಕೊಂಡು ಸಾಕಾಗಿದೆಯಾ? ಇನ್ಸುಲಿನ್ ಮಾತ್ರೆ ಕಂಡುಹಿಡಿಯುವಲ್ಲಿ ಜಪಾನ್ ವಿಜ್ಞಾನಿಗಳು ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಹೊಸ ಸಂಶೋಧನೆಯು ಮಧುಮೇಹ ಚಿಕಿತ್ಸೆಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದೆ.

ಮಧುಮೇಹಿಗಳ ಜೀವನ ಸುಲಭವಾಗಿಸಲು ಇನ್ಸುಲಿನ್ ಮಾತ್ರೆ ಕಂಡುಹಿಡಿಯಬೇಕು ಅನ್ನೋದು ವಿಜ್ಞಾನಿಗಳ ನೂರಾರು ವರ್ಷಗಳ ಕನಸಾಗಿತ್ತು. ಅದಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದರು. ಆದರೆ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯೇ ಇದಕ್ಕೆ ದೊಡ್ಡ ಅಡ್ಡಿಯಾಗಿತ್ತು. ನಾವು ಸೇವಿಸುವ ಇನ್ಸುಲಿನ್, ರಕ್ತ ಸೇರುವ ಮೊದಲೇ ಹೊಟ್ಟೆಯಲ್ಲಿರುವ ಎಂಜೈಮ್‌ಗಳಿಂದ ನಾಶವಾಗುತ್ತಿತ್ತು. ಜೊತೆಗೆ, ಕರುಳು ಇನ್ಸುಲಿನ್ ಅನ್ನು ಸುಲಭವಾಗಿ ರಕ್ತಕ್ಕೆ ಬಿಟ್ಟುಕೊಡುವುದಿಲ್ಲ. ಇದೇ ಕಾರಣಕ್ಕೆ ಇವತ್ತಿಗೂ ಕೋಟ್ಯಂತರ ಮಧುಮೇಹಿಗಳು ಪ್ರತಿದಿನ ಇನ್ಜೆಕ್ಷನ್ ಮೇಲೆ ಅವಲಂಬಿತರಾಗಿದ್ದಾರೆ.

ಸಂಶೋಧನೆಯಲ್ಲಿ ಮಹತ್ವದ ಹೆಜ್ಜೆ

ಜಪಾನ್‌ನ ಕುಮಾಮೊಟೊ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶಿಂಗೊ ಇಟೊ ನೇತೃತ್ವದ ಸಂಶೋಧನಾ ತಂಡ ಈ ಸಮಸ್ಯೆಗೆ ಒಂದು ಭರವಸೆಯ ಪರಿಹಾರವನ್ನು ಮುಂದಿಟ್ಟಿದೆ. ಈ ತಂಡವು 'ಡಿಎನ್‌ಪಿ ಪೆಪ್ಟೈಡ್' ಎಂಬ ಒಂದು ವಿಶಿಷ್ಟವಾದ ಸೈಕ್ಲಿಕ್ ಪೆಪ್ಟೈಡ್ ಅಣುವನ್ನು ಅಭಿವೃದ್ಧಿಪಡಿಸಿದೆ. ಇದು ಸಣ್ಣ ಕರುಳಿನ ಮೂಲಕ ಸುಲಭವಾಗಿ ಹಾದುಹೋಗುವ ಸಾಮರ್ಥ್ಯ ಹೊಂದಿದೆ.

ಈ ಅಣುವಿನ ಸಹಾಯದಿಂದ ಇನ್ಸುಲಿನ್ ಅನ್ನು ಮಾತ್ರೆ ರೂಪದಲ್ಲಿ ತೆಗೆದುಕೊಳ್ಳಲು ಸಾಧ್ಯವಾಗಿದೆ. ಈ ಮಹತ್ವದ ಸಂಶೋಧನೆಯ ಫಲಿತಾಂಶಗಳು ಮಾಲಿಕ್ಯುಲರ್ ಫಾರ್ಮಾಸ್ಯುಟಿಕ್ಸ್ ಎಂಬ ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟವಾಗಿವೆ.

ಎರಡು ವಿಧಾನಗಳ ಪರೀಕ್ಷೆ

ಸಂಶೋಧಕರು ಇನ್ಸುಲಿನ್ ಅನ್ನು ರಕ್ತಕ್ಕೆ ಸೇರಿಸಲು ಎರಡು ವಿಭಿನ್ನ ವಿಧಾನಗಳನ್ನು ಪರೀಕ್ಷಿಸಿದರು. ಮೊದಲ ವಿಧಾನದಲ್ಲಿ, ಜಿಂಕ್ ಬಳಸಿ ಸ್ಥಿರಗೊಳಿಸಿದ ಇನ್ಸುಲಿನ್ ಜೊತೆಗೆ ಈ ಹೊಸ ಪೆಪ್ಟೈಡ್ ಅನ್ನು ಸೇರಿಸಿ ನೀಡಲಾಯಿತು. ಮಧುಮೇಹವಿದ್ದ ಇಲಿಗಳಿಗೆ ಇದನ್ನು ನೀಡಿದಾಗ, ರಕ್ತದಲ್ಲಿನ ಸಕ್ಕರೆ ಮಟ್ಟ ವೇಗವಾಗಿ ಇಳಿಯಿತು. ದಿನಕ್ಕೆ ಒಂದೇ ಡೋಸ್‌ನಿಂದ ಸಕ್ಕರೆ ಮಟ್ಟ ಸ್ಥಿರವಾಗಿತ್ತು.

ಎರಡನೇ ವಿಧಾನದಲ್ಲಿ, ಪೆಪ್ಟೈಡ್ ಅನ್ನು ನೇರವಾಗಿ ಇನ್ಸುಲಿನ್‌ಗೆ ರಾಸಾಯನಿಕವಾಗಿ ಜೋಡಿಸಲಾಯಿತು. ಈ ವಿಧಾನವೂ ಅಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡಿತು. ಕರುಳಿನಿಂದ ಇನ್ಸುಲಿನ್ ಅನ್ನು ರಕ್ತಕ್ಕೆ ಸಾಗಿಸಲು ಈ ಪೆಪ್ಟೈಡ್ ಸಕ್ರಿಯವಾಗಿ ಸಹಾಯ ಮಾಡುತ್ತದೆ ಎಂಬುದು ಇದರಿಂದ ಸಾಬೀತಾಯಿತು.

ಕಡಿಮೆ ಡೋಸ್‌ನಲ್ಲೇ ಹೆಚ್ಚು ಪರಿಣಾಮ

ಈ ಹಿಂದೆ ನಡೆದ ಇನ್ಸುಲಿನ್ ಮಾತ್ರೆ ಸಂಶೋಧನೆಗಳಲ್ಲಿದ್ದ ದೊಡ್ಡ ಸವಾಲೆಂದರೆ, ಇನ್ಜೆಕ್ಷನ್‌ಗಿಂತಲೂ ಹೆಚ್ಚು ಡೋಸ್ ನೀಡಬೇಕಾಗಿತ್ತು. ಆದರೆ, ಈ ಹೊಸ ವಿಧಾನ ಆ ಸಮಸ್ಯೆಯನ್ನು ಬಗೆಹರಿಸಿದೆ. ಇನ್ಜೆಕ್ಷನ್‌ಗೆ ಹೋಲಿಸಿದರೆ ಈ ಮಾತ್ರೆ ಶೇ. 33 ರಿಂದ 41ರಷ್ಟು ಪರಿಣಾಮಕಾರಿ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಇದು ದೈನಂದಿನ ಬಳಕೆಗೆ ಹೆಚ್ಚು ಸೂಕ್ತವಾಗಿದೆ.

ಭವಿಷ್ಯದ ದಾರಿ

ಇವತ್ತಿಗೂ ಅನೇಕ ರೋಗಿಗಳಿಗೆ ಪ್ರತಿದಿನ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವುದು ಒಂದು ಸವಾಲಾಗಿದೆ. ನಮ್ಮ ಈ ಹೊಸ ಪೆಪ್ಟೈಡ್ ಆಧಾರಿತ ವ್ಯವಸ್ಥೆಯು ಅವರಿಗೆ ಸುಲಭವಾದ ಪರ್ಯಾಯವನ್ನು ನೀಡಬಹುದು. ಅಷ್ಟೇ ಅಲ್ಲ, ಇಂಜೆಕ್ಷನ್ ಮೂಲಕ ನೀಡಲಾಗುವ ಇತರ ಔಷಧಿಗಳಿಗೂ ಇದನ್ನು ಬಳಸಬಹುದು ಎನ್ನುತ್ತಾರೆ ಡಾ. ಇಟೊ.

ಸಂಶೋಧನಾ ತಂಡವು ಈಗ ದೊಡ್ಡ ಪ್ರಾಣಿಗಳ ಮೇಲೆ ಮತ್ತು ಮಾನವನ ಕರುಳನ್ನು ಹೋಲುವ ಮಾಡೆಲ್‌ಗಳಲ್ಲಿ ಪರೀಕ್ಷೆಗಳನ್ನು ಮುಂದುವರಿಸಲು ಯೋಜಿಸಿದೆ. ಇದರ ನಂತರವೇ ಮನುಷ್ಯರ ಮೇಲಿನ ಕ್ಲಿನಿಕಲ್ ಪ್ರಯೋಗಗಳು ಆರಂಭವಾಗಲಿವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂಜೆಕ್ಷನ್ ಭಯಕ್ಕೆ ಜೀವವೇ ಹೋಯ್ತು: 9 ವರ್ಷದ ಪುಟಾಣಿ ಸಾವು
ಪದೇ ಪದೇ ಚಾಕೊಲೇಟ್ ತಿನ್ನಬೇಕು ಅನಿಸುತ್ತಾ? ಇದರ ಹಿಂದಿನ ಕಾರಣಗಳು ಹೀಗಿವೆ