ಅಜ್ಜ-ಅಜ್ಜಿಯಂದಿರಿಗೆ ಮೊಮ್ಮಕ್ಕಳ ಮೇಲಿರುವ ಪ್ರೀತಿಯನ್ನು ನಾವೆಲ್ಲರೂ ನೋಡಿರುತ್ತೇವೆ. ಮೊಮ್ಮಕ್ಕಳಿಗಾಗಿ ಏನನ್ನೂ ಮಾಡಲು ಸಿದ್ಧವಾಗಿರುತ್ತಾರೆ. ಹಾಗೆಯೇ ಇಲ್ಲೊಬ್ಬ ಅಜ್ಜಿ, ತನ್ನ ಮೊಮ್ಮಗನಿಗೆ ಇಳಿವಯಸ್ಸಿನಲ್ಲೂ ಕಿಡ್ನಿ ನೀಡಿ ಮಾದರಿಯಾಗಿದ್ದಾರೆ.
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ: ತಾನು ಬಿದ್ದು ಹೋಗುವ ಮರ. ಆದರೆ ನನ್ನ ಮೊಮ್ಮಗ ಇನ್ನೂ ಬಾಳಿ ಬದುಕಬೇಕು ಎಂದು 73 ವರ್ಷದ ಅಜ್ಜಿಯೊಬ್ಬಳು ತನ್ನ 21 ವರ್ಷದ ಮೊಮ್ಮಗನಿಗೆ ಕಿಡ್ನಿ ದಾನ ಮಾಡಿದ ಅಪರೂಪ ಘಟನೆ ವಿಜಯಪುರದಲ್ಲಿ ನಡೆದಿದೆ. ಇಲ್ಲಿನ ಯಶೋದಾ ಆಸ್ಪತ್ರೆಯಲ್ಲಿ ಈ ಕಿಡ್ನಿ ಟ್ರಾನ್ಸಪ್ಲೆಂಟ್ ಮಾಡಲಾಗಿದೆ. ಇದು ವಿಜಯಪುರ ಜಿಲ್ಲೆಯಲ್ಲಿ ನಡೆದ ಮೊದಲ ಯಶಸ್ವಿ ಮೂತ್ರ ಪಿಂಡ ಕಸಿ ಎನ್ನುವುದು ಮತ್ತೊಂದು ಹೆಮ್ಮೆಗೆ ಕಾರಣವಾಗಿದೆ.
ಅಂಗಾಂಗ ದಾನದ ಅರಿವು ಕಡಿಮೆ ಇರುವ ವಿಜಯಪುರ ಜಿಲ್ಲೆಯಲ್ಲಿ ಅಜ್ಜಿ (Grandmother)ಯೊಬ್ಬರು ತನ್ನ ಮೊಮ್ಮಗನಿಗೆ (Grandson) ಕಿಡ್ನಿ ನೀಡಿರುವುದು ಅಪರೂಪದಲ್ಲಿ ಒಂದು ಅಪರೂಪವಾಗಿದೆ. ಬೆಳಗಾವಿ ಜಿಲ್ಲೆಯ ಹಾರೋಗರಿ ಯುವಕ ಸಚಿನ್ ಕಳೆದ 18 ವರ್ಷಗಳಿಂದ ಕಿಡ್ನಿ ಸಮಸ್ಯೆ ಯಿಂದ ಬಳಲುತ್ತಿದ್ದನು. ಇತ್ತೀಚಿಗೆ ಕೆಲ ವರ್ಷಗಳ ಹಿಂದೆ ಕಿಡ್ನಿ ವೈಫಲ್ಯವಾಗಿತ್ತು. ಈ ಕಾರಣಕ್ಕೆ ವಾರದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಡಯಾಲಿಸಿಸ್ ಮಾಡಿಕೊಳ್ಳುತ್ತಿದ್ದರು. ಈತನ ತಂದೆ ತಾಯಿ ಅನಾರೋಗ್ಯ ಪೀಡಿತವಾದ ಕಾರಣ ಅವರ ಒಂದು ಕಿಡ್ನಿ ಪಡೆದು ಯುವಕನಿಗೆ ವರ್ಗಾಯಿಸಲು ಆಗುತ್ತಿರಲಿಲ್ಲ. ಯುವಕ ಸಚಿನ್ ದಯನೀಯ ಸ್ಥಿತಿ ಕಂಡ ಅವರ ಮನೆಯ ಹಿರಿಯ ಜೀವಿ ಅವರ ಅಜ್ಜಿ ಉದ್ದವ್ವ ಸ್ವ ಇಚ್ಚೆಯಿಂದ ಕಿಡ್ನಿ ನೀಡಲು ಮುಂದಾಗಿದ್ದಾರೆ.
ಲಾಲೂ ಪ್ರಸಾದ್ ಯಾದವ್ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ, ಮಗಳಿಂದಲೇ ಕಿಡ್ನಿ ದಾನ!
ಗುಮ್ಮಟನಗರಿಯಲ್ಲಿ ಯಶಸ್ವಿ ಕಿಡ್ನಿ ಕಸಿ
ಕಿಡ್ನಿ ಟ್ರಾನ್ಸ್ ಪ್ಲಾಂಟೇಷನ್ ಮಾಡುವ ಆಸ್ಪತ್ರೆಗಳು (Hospital) ಬೇರೆ ಕೆಲ ಬೃಹತ್ ಜಿಲ್ಲೆಯಲ್ಲಿ ಮಾತ್ರ ಇದ್ದವು. ಇತ್ತೀಚಿಗಷ್ಟೇ ವಿಜಯಪುರದ ಯಶೋಧಾ ಎನ್ನುವ ಖಾಸಗಿ ಆಸ್ಪತ್ರೆ ಕಿಡ್ನಿ ಕಸಿಗೆ ಮಾನ್ಯತೆ ಪಡೆದುಕೊಂಡಿತ್ತು. ಯುವಕ ಸಚಿನ್ ಹಾಗೂ ಆತನ ಅಜ್ಜಿ ಉದ್ದವ್ವ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಇಬ್ಬರದ್ದು ಕಿಡ್ನಿ ಹೊಂದಾಣಿಕೆಯಾಗುತ್ತಿತ್ತು. ಹೀಗಾಗಿ ಆಸ್ಪತ್ರೆಯ ಮುಖ್ಯಸ್ಥ ಡಾ.ರವೀಂದ್ರ ಮದ್ರಕಿ ನೇತ್ವತೃದ ತಂಡ ಮೂತ್ರಪಿಂಡ ಕಸಿಯನ್ನು ಯಶಸ್ವಿಯಾಗಿ ಮಾಡಿದೆ. ಸದ್ಯ ಕಿಡ್ನಿ ಪಡೆದ ಸಚಿನ್ ಹಾಗೂ ಕಿಡ್ನಿ ದಾನ ಮಾಡಿದ ಅಜ್ಜಿ ಉದ್ದವ್ವ ಆರೋಗ್ಯವಾಗಿದ್ದಾರೆ. ಈ ಮೂಲಕ ವಿಜಯಪುರ ಜಿಲ್ಲೆಯಲ್ಲಿ ಮೊದಲ ಕಿಡ್ನಿ ಕಸಿ ನಡೆಸಿದ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಯಶೋಧಾ ಆಸ್ಪತ್ರೆ ಪಾತ್ರವಾಗಿದೆ.
ಬಿಪಿ, ಶುಗರ್ ಇರುವವರಲ್ಲಿ ಕಿಡ್ನಿ ವೈಫಲ್ಯ ಜಾಸ್ತಿ
ಕಿಡ್ನಿ ಕಸಿ ಮಾಡಿದ ವೈದ್ಯ ರವೀಂದ್ರ ಮುದ್ರಕಿ ತಮ್ಮ ಅನುಭವ ಹಂಚಿಕೊಂಡು. ಮೂತ್ರ ಪಿಂಡ ವೈಫಲ್ಯ ದಿಂದ ಇತ್ತೀಚಿಗೆ ಹೆಚ್ಚು ಜನ ಬಳಲುತ್ತಿದ್ದಾರೆ. ಬಿಪಿ, ಶುಗರ್ ಇರುವವರಲ್ಲಿ ಕಿಡ್ನಿ ವೈಫಲ್ಯ ಹೆಚ್ಚಾಗುತ್ತಿದೆ. ಕಿಡ್ನಿ ಟ್ರಾನ್ಸಪ್ಲಾಂಟೇಶನ್ ಮಾಡಬೇಕಾದರೆ ರೋಗಿಯ ಸಂಬಂಧಿಕರು ಇಲ್ಲ ಯಾರಾದರೂ ಸಾಯುವ ಹಂತ ತಲುಪಿದವರು ಮಾಡಬೇಕು. ಅದು ಮಹಾನಗರದಲ್ಲಿನ ಕೆಲ ಆಸ್ಪತ್ರೆಯಲ್ಲಿ ಈ ಸೌಲಭ್ಯ ಇದೆ. ಇದೇ ಮೊದಲು ಬಾರಿ ನಮ್ಮ ಆಸ್ಪತ್ರೆ ಯಶಸ್ವಿ ಕಿಡ್ನಿ ಕಸಿ ಮಾಡಿ ಯಶಸ್ವಿಯಾಗಿದೆ ಎಂದರು.
ಕಿಡ್ನಿ ಕಸಿ ನಂತ್ರ ಡ್ಯಾಮೇಜ್ ಅದ ಕಿಡ್ನಿಯನ್ನು ಏನು ಮಾಡುತ್ತಾರೆ?
ಅಜ್ಜಿಯಿಂದ ಮೊಮ್ಮಗನಿಗೆ ಪುನರ್ಜನ್ಮ
ಕಿಡ್ನಿ ಕಸಿ ಮಾಡಿಸಿಕೊಂಡ ಯುವಕ ಸಚಿನ ತನ್ಬ ಅಜ್ಜಿ ತನಗೆ ಪುರ್ನಜನ್ಮ ನೀಡಿದ್ದಾರೆ. ಇಂದು ಅವಳು ನೀಡಿದ ಕಿಡ್ನಿ ದಾನದಿಂದ ಬದುಕುವ ಹುಮ್ಮಸ್ಸು ಹೆಚ್ಚಾಗಿದೆ ಎಂದು ಅಜ್ಜಿಯ ತ್ಯಾಗವನ್ನು ಹೊಗಳಿದರು. ಅಂಗಾಂಗ ದಾನ (Organ donate) ಸಿಗದೇ ರಾಜ್ಯದಲ್ಲಿ ನಿತ್ಯ ಸಾವಿರಾರು ಜನ ಸಾಯುತ್ತಿದ್ದಾರೆ. ಸರ್ಕಾರಗಳು ಅಂಗಾಂಗ ದಾನದ ಬಗ್ಗೆ ಹೆಚ್ಚು ಜಾಗೃತಿ (Awareness) ಮೂಡಿಸಿದಾಗ ಅಂಗಾಂಗ ವೈಫಲ್ಯ ದಿಂದ ಸಾಯುವವರ ಸಂಖ್ಯೆ ಕಡಿಮೆಯಾಗಬಹುದು. ಇದಕ್ಕೆ 73ವರ್ಷದ ಅಜ್ಜಿ ಉದ್ದವ್ವ ಉತ್ತಮ ಉದಾಹರಣೆಯಾಗಿದ್ದಾರೆ.