ಆರಂಭಿಕ ಕೊರೋನಾ ಲಕ್ಷಣದವರಿಗೆ ಹೋಂ ಐಸೋಲೇಶನ್, ಹೀಗಂದ್ರೆ ಏನು?

Published : Apr 28, 2020, 08:31 PM ISTUpdated : Apr 30, 2020, 12:09 PM IST
ಆರಂಭಿಕ ಕೊರೋನಾ ಲಕ್ಷಣದವರಿಗೆ ಹೋಂ ಐಸೋಲೇಶನ್, ಹೀಗಂದ್ರೆ ಏನು?

ಸಾರಾಂಶ

ಕೊರೋನಾ ವಿರುದ್ಧ ಸಮರ/ ಹೋಂ ಐಸೋಲೇಶನ್ ಜಾರಿಗೆ/ ಹೋಂ ಐಸೋಲೇಶನ್ ಎಂದರೆ ಏನು? ಮನೆಯಲ್ಲೇ ವೈದ್ಯಕೀಯ ಸೇವೆ ಹೇಗೆ ಸಿಗುತ್ತದೆ? 

ಬೆಂಗಳೂರು(ಏ. 28)  ಮನೆಯಲ್ಲಿಯೇ ಐಸೋಲೇಶನ್ ನಲ್ಲಿರುವ ಜನರಿಗೆ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೆಲವು ನಿರ್ದೇಶನಗಳನ್ನು ನೀಡಿದೆ.  ಕೊರೋನಾದ ಆರಂಭಿಕ ಲಕ್ಷಣಗಳು ಅಥವಾ ಆ ಬಗೆಯ  ಸಿಮ್‌ ಟಮ್ಸ್ ಎದುರಿಸುತ್ತಿರುವವರು ಇದನ್ನು ಪಾಲಿಸಲೇಬೇಕು. ಹಾಗಾದರೆ ಮನೆಯಲ್ಲಿ ಇರುವವರು ಹೇಗಿರಬೇಕು?

ಸೆಲ್ಫ್ ಐಸೋಲೇಶನ್ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದ್ದು ಕೆಲ ನಿಯಮಾವಳಿಗಳನ್ನು ತಿಳಿಸಿದೆ.

ಕೊರೋನಾ ತಡೆಗೆ ಮನೆಯಲ್ಲೇ ಇದ್ದು ಮಾಹಬಹುದಾದ ಮುನ್ನೆಚ್ಚರಿಕಾ ಕ್ರಮಗಳು

ಹೋಮ್ ಐಸೋಲೇಶನ್ ಎಲಿಜಬಿಲಿಟಿ
* ಹೋಂ ಐಸೋಲೇಶನ್ ಪಡೆದುಕೊಳ್ಳುವ ವ್ಯಕ್ತಿ ವೈದ್ಯರಿಂದ ಅಥವಾ ಸಂಬಂಧಿಸಿದ ಮೆಡಿಕಲ್ ಆಫೀಸರ್  ರಿಂದ ಕೊರೋನಾದ ಆರಂಭಿಕ ಲಕ್ಷಣದಿಂದ ಬಳಲುತ್ತಿರುವ ಬಗ್ಗೆ ದೃಢೀಕರಣ ಬೇಕು.

* ಈ ಕೇಸುಗಳಲ್ಲಿ ಮನೆಯವರನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತದೆ.

* ಹೋಂ ಐಸೋಲೇಶನ್ ವ್ಯಕ್ತಿಗೆ ದಿನದ 24 ಗಂಟೆ ಸೇವೆ ನೀಡಲಾಗುತ್ತದೆ. ಒಬ್ಬ ಕೇರ್ ಗಿವರ್ ನನ್ನು ನೀಡಲಾಗುವುದು ಈತ ಆಸ್ಪತ್ರೆ ಮತ್ತು ಪೇಶಂಟ್ ನಡುವಿನ ಸೇತುವೆಯಾಗಿ ಕೆಲಸ ಮಾಡುತ್ತಾನೆ.

* ಕೇರ್ ಗೀವರ್ ಮತ್ತು ಕ್ಲೋಸ್ ಕಾಂಟಾಕ್ಟ್ ಹೊಂದಿರುವವರು ಸಹ Hydroxychloroquine ತೆಗೆದುಕೊಳ್ಳಬೇಕಾಗುತ್ತದೆ.

* ಆರೋಗ್ಯ ಸೇತು ಅಪ್ಲಿಕೇಶನ್  ಬಳಸಿಕೊಳ್ಳಬೇಕು.

8 ಜಿಲ್ಲೆಗಳಲ್ಲಿ ಮತ್ತಷ್ಟು ಬಿಗಿಯಾದ ಲಾಕ್ ಡೌನ್


* ಜಿಲ್ಲಾ ಮಟ್ಟದ ಆರೋಗ್ಯ ಅಧಿಕಾರಿಗೆ ಕಾಲಕಾಲಕ್ಕೆ ಪೇಶೆಂಟ್ ವರದಿ ನೀಡಲು ಬದ್ಧರಾಗಿರಬೇಕು .

*ಹೋಂ ಕ್ವಾರಂಟೈನ್ ನ ಇತರ ನಿಯಮಾವಳಿಗಳಿಗೂ ಬದ್ಧರಾಗಿರಬೇಕು 

* ಉಸಿರಾಟದಲ್ಲಿ ತೀವ್ರ ಸಮಸ್ಯೆ, ಎದೆ ನೋವು, ಮಾನಸಿಕ ಅಸಮತೋಲನ, ತುಟಿ ಮತ್ತು ಮುಖದ ಮೇಲೆ ಒಡೆದ ಗುರುತು, ಮೆಡಿಕಲ್ ಆಫಿಸರ್ ಸಲಹೆ ನೀಡಿದರೆ ತಕ್ಷಣ ರೋಗಿಯನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಬೇಕು .

* ನಿರ್ದಿಷ್ಟ ಪಡಿಸಿದ ಅಧಿಕಾರಿ ಹೋಂ ಐಸೋಲೇಶನ್ ಮುಕ್ತಾಯ ಎಂದು ಘೋಷಣೆ ಮಾಡಿದ ಮೇಲೆ ವ್ಯಕ್ತಿ ಪ್ರೀ ಆಗುತ್ತಾನೆ.

* ಕೇರ್ ಗೀವರ್ ಗಳಿಗೂ ಕೆಲಸ ಸೂಚನೆ ನೀಡಲಾಗಿದೆ. ಮೂರು ಲೇಯರ್ ಮಾಸ್ಕ್ ಧರಿಸಬೇಕು, ಸಾನಿಟೈಸರ್ ಬಳಕೆ, ಗ್ಲೌಸ್ ಬಳಕೆ, ಪೆಶಂಟ್ ಗೆ ನೇರ ಸಂಪರ್ಕಕ್ಕೆ ಬಾರದಿರುವುದು ಮತ್ತು ಆಗಾಗ ತನ್ನ ಟೆಂಪರೇಶರ್ ಸೆಲ್ಫ್ ಮಾನಿಟರ್ ಮಾಡಿಕೋಳ್ಳಬೇಕು ಎಂದು ತಿಳಿಸಲಾಗಿದೆ.

* ಇನ್ನು ಪೇಶಂಟ್ ಸಹ ಸೂಚನೆಗಳನ್ನು ಪಾಲಿಸಬೇಕು, ತನ್ನ ವೈಯಕ್ತಿಕ ವಸ್ತುಗಳನ್ನು ಯಾರೊಂದಿಗೂ ಶೇರ್ ಮಾಡಿಕೊಳ್ಳಬಾರದು. ಮಾಸ್ಕ್ ಧರಿಸುವುದು ಕಡ್ಡಾಯ .


 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Jamun for Diabetes: ನೇರಳೆ ಹಣ್ಣು ತಿಂದರೆ ನಿಜವಾಗಲೂ ಡಯಾಬಿಟಿಸ್ ಕಡಿಮೆ ಆಗುತ್ತಾ?
Bad Cholesterol ಅಂದ್ರೇನು? ನಿಮ್ಮ ದೇಹ ಈ ಸೂಚನೆಗಳನ್ನು ಕೊಡ್ತಿದ್ರೆ ಅಪ್ಪಿತಪ್ಪಿಯೂ ನಿರ್ಲಕ್ಷ್ಯ ಮಾಡ್ಬೇಡಿ!