
ಗ್ಯಾಸ್ (Gas), ಅಜೀರ್ಣ, ಅಸಿಡಿಟಿ (Acidity) ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಹೇಳೋಕೆ ಸಣ್ಣ ರೋಗ (Disease) ಹೌದು, ಆದ್ರೆ ಅದನ್ನು ಅನುಭವಿಸೋದು ಕಷ್ಟ. ಒಂದು ತಿಂದ್ರೆ ಕಡಿಮೆ ಎರಡು ತಿಂದ್ರೆ ಹೆಚ್ಚು ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಗ್ಯಾಸ್, ಅಜೀರ್ಣ, ಅಸಿಡಿಟಿ ಸಮಸ್ಯೆಯಿಂದ ಹೊರಬರಲು ಜನರು ವಿವಿಧ ರೀತಿಯ ಔಷಧಗಳು ಮತ್ತು ಮನೆಮದ್ದುಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಆದರೆ ಗ್ಯಾಸ್ ಸಮಸ್ಯೆ ಸ್ವಲ್ಪವೂ ಕಡಿಮೆಯಾಗಿಲ್ಲ ಎನ್ನುವವರಿದ್ದಾರೆ. ಗ್ಯಾಸ್ ಸಮಸ್ಯೆಯಿರುವವರು ಕೆಲವು ಹಣ್ಣು (Fruit)ಗಳ ಸೇವನೆ ಮಾಡ್ಬಹುದು. ಆ ಹಣ್ಣುಗಳು ಗ್ಯಾಸ್‌ನಿಂದ ಮುಕ್ತಿ ನೀಡುವುದಲ್ಲದೆ, ಮಲಬದ್ಧತೆ ಮತ್ತು ಅಸಿಡಿಟಿಯಿಂದ ನಿಮ್ಮನ್ನು ನಿರಾಳಗೊಳಿಸುತ್ತದೆ. ಈ ಹಣ್ಣುಗಳು ಗ್ಯಾಸ್ ಸಮಸ್ಯೆ ಹೋಗಲಾಡಿಸುವುದು ಮಾತ್ರವಲ್ಲ ದೇಹಕ್ಕೆ ಹಲವಾರು ಪೋಷಕಾಂಶಗಳನ್ನು ನೀಡುತ್ತವೆ. ಗ್ಯಾಸ್ ಆಗಿದೆ, ಅಸಿಡಿಟಿಯಾಗಿದೆ ಎನ್ನುವ ನೀವು ಅದರಿಂದ ದೂರವಿರಲು ಯಾವ ಹಣ್ಣುಗಳನ್ನು ಸೇವನೆ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ. ಡಯಟ್ ನಲ್ಲಿ ಆ ಹಣ್ಣುಗಳನ್ನು ಸೇರಿಸಿಕೊಂಡು ನೀವು ಗ್ಯಾಸ್ ಎಂಬ ರೋಗದಿಂದ ಸ್ವಲ್ಪ ನೆಮ್ಮದಿ ಪಡೆಯಬಹುದು.
ಗ್ಯಾಸ್ ನಿಂದ ಮುಕ್ತಿ ಸಿಗಬೇಕೆಂದ್ರೆ ಸೇವಿಸಿ ಈ ಹಣ್ಣು :
ಬಾಳೆ ಹಣ್ಣು : ನಿಮ್ಮ ಡಯಟ್ ನಲ್ಲಿ ಬಾಳೆಹಣ್ಣನ್ನು ಸೇರಿಸಿ. ಪ್ರತಿ ದಿನ ಬಾಳೆ ಹಣ್ಣನ್ನು ತಿನ್ನುತ್ತ ಬನ್ನಿ. ಇದು ಗ್ಯಾಸ್ ಸಮಸ್ಯೆಯಿಂದ ಮುಕ್ತಿ ನೀಡಲು ಸಹಾಯ ಮಾಡುತ್ತದೆ. ಊಟದ ನಂತ್ರ ಅನೇಕರು ಬಾಳೆ ಹಣ್ಣು ಸೇವನೆ ಮಾಡ್ತಾರೆ. ಬಾಳೆ ಹಣ್ಣು ರುಚಿಯಾಗಿರುವ ಜೊತೆಗೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಬಾಳೆಹಣ್ಣಿನಲ್ಲಿ ನಾರಿನಂಶವಿದ್ದು, ಇದು ಗ್ಯಾಸ್ ನಿಯಂತ್ರಣದಲ್ಲಿ ಉತ್ತಮ ಪಾತ್ರ ವಹಿಸುತ್ತದೆ. ಬಾಳೆಹಣ್ಣು ತಿಂದರೆ ಅಸಿಡಿಟಿ ಕೂಡ ಬರುವುದಿಲ್ಲ. ಗ್ಯಾಸ್ ಸಮಸ್ಯೆಯಿರುವವರು ನಿಯಮಿತವಾಗಿ ಬಾಳೆ ಹಣ್ಣು ಸೇವಿಸುತ್ತ ಬನ್ನಿ.
ಯಕೃತ್ತು ಆರೋಗ್ಯವಾಗಿರಬೇಕಾದ್ರೆ ಈ ಅಭ್ಯಾಸಗಳನ್ನು ಬಿಟ್ಟುಬಿಡಿ
ಕಲ್ಲಂಗಡಿ ಹಣ್ಣು : ಬೇಸಿಗೆಯಲ್ಲಿ ಎಲ್ಲರೂ ತಿನ್ನಲು ಇಷ್ಟಪಡುವ ಹಣ್ಣುಗಳಲ್ಲಿ ಕಲ್ಲಂಗಡಿ ಒಂದು. ಕಲ್ಲಂಗಡಿ ಹಣ್ಣಿನಲ್ಲಿ ನೀರಿನಾಂಶ ಹೆಚ್ಚಿರುತ್ತದೆ. ಇದು ದೇಹವನ್ನು ಹೈಡ್ರೀಕರಿಸುತ್ತದೆ. ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಕಲ್ಲಂಗಡಿ ಹಣ್ಣು ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ. ಕಲ್ಲಂಗಡಿಯಲ್ಲಿರುವ ನಾರಿನಂಶವು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಗ್ಯಾಸ್ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ. ಗ್ಯಾಸ್ ಸಮಸ್ಯೆಯಿಂದ ಬಳಲುವ ಜನರು ಕಲ್ಲಂಗಡಿ ಹಣ್ಣು ಸೇವಿಸದಿರಲು ಮರೆಯಬೇಡಿ. ಕಲ್ಲಂಗಡಿ ಹಣ್ಣು ಎಲ್ಲ ಋತುವಿನಲ್ಲೂ ಸಿಗುವ ಕಾರಣ ಅದನ್ನು ನಿಮ್ಮ ಡಯಟ್ ನಲ್ಲಿ ಸೇರಿಸಬಹುದು.
ಸೌತೆಕಾಯಿ : ಸೌತೆಕಾಯಿಯಲ್ಲೂ ನೀರಿನಾಂಶ ಹೆಚ್ಚಿರುತ್ತದೆ. ಇದು ಗ್ಯಾಸ್ ಸಮಸ್ಯೆ ನಿವಾರಿಸುತ್ತದೆ. ಅಷ್ಟೇ ಅಲ್ಲ ಸೌತೆಕಾಯಿ ತಿಂದರೆ ಹೊಟ್ಟೆ ತಂಪಾಗಿರುತ್ತದೆ. ಜೊತೆಗೆ ಹೊಟ್ಟೆ ಉರಿಯೂ ಶಮನವಾಗುತ್ತದೆ. ಇದರೊಂದಿಗೆ ದೇಹವು ಹೈಡ್ರೇಟ್ ಆಗಿ ಉಳಿಯುತ್ತದೆ. ಹಾಗಾಗಿ ಗ್ಯಾಸ್ ಸಮಸ್ಯೆಯಿರುವವರು ಸೌತೆಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡಲು ಮರೆಯದಿರಿ.
ಅಂಜೂರ : ಗ್ಯಾಸ್ ಸಮಸ್ಯೆ ನಿವಾರಿಸುವುದ್ರಲ್ಲಿ ಅಂಜೂರವೂ ಉತ್ತಮ ಪಾತ್ರವನ್ನು ವಹಿಸುತ್ತದೆ. ಇದು ವಿಟಮಿನ್ ಬಿ, ಸಿ, ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬಿನಿಂದ ಸಮೃದ್ಧವಾಗಿದೆ. ಇದು ಮಲಬದ್ಧತೆ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ.
Kidney Failure : ಮೂತ್ರಪಿಂಡದ ವೈಫಲ್ಯವನ್ನು ಮೂತ್ರದ ಬಣ್ಣದಿಂದ ಗುರುತಿಸಿ
ಕಿವಿ ಹಣ್ಣು : ಗ್ಯಾಸ್ ಸಮಸ್ಯೆಯನ್ನು ಹೋಗಲಾಡಿಸಲು ಕಿವಿ ಹಣ್ಣು ಸಹ ಸಹಕಾರಿ. ಕಿವಿ ಹಣ್ಣನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕಿವಿ ಹಣ್ಣಿನಲ್ಲಿ ಅನೇಕ ಆರೋಗ್ಯ ಗುಣವಿದೆ. ಹಾಗೆ ಹೊಟ್ಟೆ ಉರಿ, ಅಜೀರ್ಣ, ಗ್ಯಾಸ್ ನಂತಹ ಸಮಸ್ಯೆಯನ್ನು ಕಿವಿ ಹಣ್ಣು ಕಡಿಮೆ ಮಾಡುತ್ತದೆ. ಹಾಗಾಗಿ ಕಿವಿ ಹಣ್ಣು ಸೇವನೆ ಮಾಡಲು ಮರೆಯದಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.