
ಗಣಿತ (Mathematics) ಅಂದ್ರೆ ಮಕ್ಕಳು ಬೆವರ್ತಾರೆ. ಯಾಕಾದ್ರೂ ಮ್ಯಾಥ್ಸ್ ಕ್ಲಾಸ್, ಪರೀಕ್ಷೆ (exam) ಬರುತ್ತೋ ಅಂತ ಚಿಂತಿಸುವ ಮಕ್ಕಳ ಸಂಖ್ಯೆ ನಮ್ಮಲ್ಲಿ ಸಾಕಷ್ಟಿದೆ. ಮಕ್ಕಳಿಗೆ ಗಣಿತ ಹೇಳಿಕೊಡೋದೇ ಪಾಲಕರಿಗೆ ದೊಡ್ಡ ತಲೆನೋವು. ಆದ್ರೆ ಕೆಲ ಮಕ್ಕಳು ಫಟಾ ಫಟ್ ಅಂತ ಲೆಕ್ಕ ಮಾಡ್ತಾರೆ. ಅದೆಷ್ಟೇ ಕಠಿಣ ಲೆಕ್ಕವನ್ನೂ ಮಾಡಿ ಮುಗಿಸ್ತಾರೆ. ಅವರಿಗೆ ಗಣಿತ ಕಬ್ಬಿಣದ ಕಡಲೆಯಾಗದೆ ಸಿಹಿ ಲಡ್ಡಾಗಿರುತ್ತದೆ. ನಮ್ಮ ಮಕ್ಕಳಿಗೆ ಏನೇ ಮಾಡಿದ್ರೂ ಲೆಕ್ಕಾಚಾರ ಬರಲ್ಲ, ಅವರ ಮಗು ನೋಡು, ಅರೆ ಕ್ಷಣದಲ್ಲಿ ಲೆಕ್ಕಾಚಾರ ಮುಗಿಸುತ್ತೆ. ಮಕ್ಕಳಿಗೆ ಹೇಗೆ ಕಲಿಸ್ತಾರೆ ಅವರು, ಏನು ತಿನ್ನಿಸ್ತಾರೆ ಅಂತ ಯೋಚನೆ ಮಾಡುವ ಪಾಲಕರಿದ್ದಾರೆ.
ಮಕ್ಕಳು (Children) ಏನು ತಿನ್ನುತ್ತಾರೆ, ಹೇಗೆ ಕಲಿಸಲಾಗುತ್ತೆ ಎನ್ನುವ ಜೊತೆಗೆ ಮಕ್ಕಳ ರಕ್ತ (Blood)ದ ಗುಂಪು ಯಾವುದು ಎಂಬುದು ಕೂಡ ಇಲ್ಲಿ ಮಹತ್ವದ್ದಾಗುತ್ತದೆ. ನಿಮ್ಮ ಮಗು ವಿದ್ಯಾಭ್ಯಾಸ ಅದ್ರಲ್ಲೂ ಗಣಿತದಲ್ಲಿ ಹೆಚ್ಚು ಚುರುಕಾಗಿದೆ ಅಂದ್ರೆ ಅದಕ್ಕೆ ಬ್ಲಡ್ ಗ್ರೂಪ್ ಕಾರಣವಾಗಿರುತ್ತದೆ ಎಂದು ತಜ್ಞರು ಹೇಳ್ತಾರೆ. ನಿಮ್ಮ ಮಕ್ಕಳ ರಕ್ತದ ಗುಂಪು, ಅವರು ಗಣಿತದಲ್ಲಿ ಹೇಗಿರ್ತಾರೆ ಎಂಬುದನ್ನು ಹೇಳುತ್ತದೆ. ಒಂದು ರಕ್ತದ ಗುಂಪಿನ ಮಕ್ಕಳು ಗಣಿತದಲ್ಲಿ ಅತೀ ಚುರುಕಾಗಿರ್ತಾರೆ. ಅದು ಯಾವುದು ಗೊತ್ತಾ?.
ರಾತ್ರಿ ಊಟಕ್ಕೆ ಸರಿಯಾದ ಸಮಯ ಯಾವುದು? ತಡವಾಗಿ ಊಟ ಮಾಡುವುದರಿಂದ ಸಮಸ್ಯೆಗಳೇನು?
ಸೈಂಟಿಫಿಕ್ ಅಮೇರಿಕನ್ ಮ್ಯಾಗಜೀನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಜಪಾನಿನ ಪ್ರೊಫೆಸರ್ ಟೋಕೆಜಿ ಫುರುಕಾವಾ ರಕ್ತದ ಗುಂಪಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಹೇಳುವ ರಕ್ತದ ಗುಂಪಿನ ಹೆಸರು AB+. ಈ ರಕ್ತದ ಗುಂಪನ್ನು ಹೊಂದಿರುವ ಜನರು ಲೆಕ್ಕಾಚಾರದಲ್ಲಿ ಎತ್ತಿದ ಕೈ. ಇತರ ಮಕ್ಕಳಿಗೆ ಹೋಲಿಸಿದರೆ ಗಣಿತದಲ್ಲಿ ಮೇಧಾವಿಗಳು. ಗಣಿತದಲ್ಲಿ ಅವರ ಮನಸ್ಸು ಕಂಪ್ಯೂಟರ್‌ನಂತೆ ವೇಗವಾಗಿ ಕೆಲಸ ಮಾಡುತ್ತದೆ. ಅವರು ಪ್ರತಿಯೊಂದು ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸುತ್ತಾರೆ.
AB+ ರಕ್ತದ ಗುಂಪು ಹೊಂದಿರುವ ಮಕ್ಕಳು ಅಂತರ್ಮುಖಿಗಳಾಗಿರುತ್ತಾರೆ. ಸ್ನೇಹಮಯಿ ವ್ಯಕ್ತಿತ್ವವನ್ನೂ ಅವರು ಹೊಂದಿರುತ್ತಾರೆ. ಎಲ್ಲವನ್ನೂ ಅವರು ತಾರ್ಕಿಕವಾಗಿ ನೋಡ್ತಾರೆ. ಹಾಗೆಯೇ AB+ ರಕ್ತದ ಗುಂಪಿನ ಜನರು ಪ್ರತಿಭಾವಂತರು. ಮಕ್ಕಳು ಪ್ರತಿ ದಿನ ಗಣಿತ ಅಭ್ಯಾಸ ಮಾಡಿದ್ರೆ ಅದು ಬಹಳ ಒಳ್ಳೆಯದು. ಅದು ನಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ. ಅದೇ ಗಣಿತದಲ್ಲಿ ಚುರುಕಿರುವ ಮಕ್ಕಳು, ಇದನ್ನು ಮಾಡ್ತಾ ಮಾಡ್ತಾ ಮತ್ತಷ್ಟು ಚುರುಕಾಗ್ತಾರೆ. AB+ ರಕ್ತದ ಗುಂಪಿನ ಜನರು ತಮ್ಮ ಮನಸ್ಸಿನಲ್ಲಿ ವಿಷಯಗಳನ್ನು ತ್ವರಿತವಾಗಿ ಲೆಕ್ಕ ಹಾಕುತ್ತಾರೆ. AB+ ರಕ್ತದ ಗುಂಪಿನ ಮಕ್ಕಳು ತುಂಬಾ ತಮಾಷೆಯ ಸ್ವಭಾವವನ್ನು ಹೊಂದಿರುತ್ತಾರೆ. ತಮಾಷೆ ಮಾಡುವಾಗ ಅವರು ಬೇರೆಯವರಿಗೆ ನೋವಾಗದಂತೆ ನೋಡಿಕೊಳ್ತಾರೆ. ಮುಂದಿರುವವರ ಮನಸ್ಸಿಗೆ ನೋವಾಗದಂತೆ ತಮಾಷೆ ಮಾಡ್ತಾರೆ. ಮುಂದಿರುವವರ ನಡವಳಿಕೆ ಗಮನಿಸಿಯೇ ತಮಾಷೆ ಮಾಡ್ಬೇಕಾ ಬೇಡ್ವಾ ಎಂಬ ನಿರ್ಧಾರಕ್ಕೆ ಅವರು ಬರ್ತಾರೆ.ವರದಿ ಪ್ರಕಾರ, AB+ ರಕ್ತದ ಗುಂಪಿನ ಜೊತೆಗೆ O+ ರಕ್ತದ ಗುಂಪಿನವರೂ ಗಣಿತದಲ್ಲಿ ಮೇಧಾವಿಗಳು.ಅವರು ಎಲ್ಲದರಲ್ಲೂ ಚುರುಕಾಗಿರುತ್ತಾರೆ. ಜನರ ಗೌರವ ಗಳಿಸೋದ್ರಲ್ಲಿ ಇವರು ಮುಂದಿರ್ತಾರೆ.
ಚಳಿಗಾಲದಲ್ಲಿ ದಿನಕ್ಕೆರಡು ಲವಂಗ ತಿಂದರೆ ಏನಾಗುತ್ತೆ? ಪ್ರಯೋಜನ ತಿಳಿದರೆ ಅಚ್ಚರಿ!
ಹೆಚ್ಚು ಬುದ್ಧಿವಂತರು ಯಾರು? : ಬ್ಲಡ್ ಗ್ರೂಪ್ ಹಾಗೂ ಜನರ ವ್ಯಕ್ತಿತ್ವ, ಬುದ್ಧಿಶಕ್ತಿ ಬಗ್ಗೆ ಅನೇಕ ಸಂಶೋಧನೆ ನಡೆದಿದೆ. ಯಾವ ಬ್ಲಡ್ ಗ್ರೂಪ್ ಜನರು ಹೆಚ್ಚು ಬುದ್ದಿಶಾಲಿಗಳು ಎಂಬ ಬಗ್ಗೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಅಧ್ಯಯನ ನಡೆಸಿದೆ. ಅದ್ರ ಪ್ರಕಾರ, B+ ರಕ್ತದ ಗುಂಪಿನ ಜನರು ಹೆಚ್ಚು ಬುದ್ಧಿವಂತರು. ಅವರ ಆಲೋಚನೆ, ತಿಳುವಳಿಕೆ ಮತ್ತು ನೆನಪಿನ ಸಾಮರ್ಥ್ಯಗಳು ತೀಕ್ಷ್ಣವಾಗಿರುತ್ತವೆ ಎಂಬುದು ಪತ್ತೆಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.