Health
ಮಸಾಲೆ ಪದಾರ್ಥಗಳಲ್ಲಿ ಒಂದಾದ ಲವಂಗ ಸೇವನೆಯಿಂದ ನಮ್ಮ ಶರೀರಕ್ಕೆ ಹಲವು ಪ್ರಯೋಜನಗಳಿವೆ. ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ.
ಲವಂಗದಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿವಾರಕ ಗುಣಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತವೆ.
ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ಲವಂಗ ಸೇವಿಸಬಹುದು. ಇದರಲ್ಲಿರುವ ನಾರಿನಂಶವು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ಕ್ಯಾಲೊರಿಗಳನ್ನು ಕರಗಿಸಲು ಸಹಾಯ ಮಾಡುತ್ತದೆ.
ಹೊಟ್ಟೆ ಉಬ್ಬರ, ಗ್ಯಾಸ್, ಮಲಬದ್ಧತೆ ಮುಂತಾದ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಲು ಲವಂಗ ಸಹಾಯಕ. ಊಟದ ನಂತರ ಒಂದು ಲವಂಗ ಸೇವಿಸಿ.
ಬಾಯಿ ದುರ್ವಾಸನೆ ಸಮಸ್ಯೆ ಇರುವವರಿಗೆ ಲವಂಗ ಒಂದು ಉತ್ತಮ ಪರಿಹಾರ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಒಸಡಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಲವಂಗ ಸಹಾಯಕ. ಇನ್ಸುಲಿನ್ ಪ್ರತಿರೋಧವನ್ನು ಸುಧಾರಿಸುವ ಮೂಲಕ ಟೈಪ್ 2 ಮಧುಮೇಹವನ್ನು ನಿಯಂತ್ರಿಸುತ್ತದೆ.
ಲವಂಗದಲ್ಲಿರುವ ಖನಿಜಗಳು ಉತ್ತಮ ನಿರ್ವಿಷಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಇದರಿಂದ ಲಿವರ್ ಆರೋಗ್ಯವಾಗಿರುತ್ತದೆ.
ಎಲುಬುಗಳನ್ನು ಗಟ್ಟಿಗೊಳಿಸಲು ಲವಂಗ ಸಹಾಯಕ. ಇದರಲ್ಲಿರುವ ಮ್ಯಾಂಗನೀಸ್ ಎಲುಬುಗಳ ಆರೋಗ್ಯವನ್ನು ಕಾಪಾಡುತ್ತದೆ.
ಮೇಲಿನ ಮಾಹಿತಿಯು ಕೇವಲ ಪ್ರಾಥಮಿಕ ಮಾಹಿತಿ. ಆರೋಗ್ಯ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸಿ.